Latest Updates
-
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ!
18-12-2018: ಮಂಗಳವಾರದ ದಿನ ಭವಿಷ್ಯ
ವೈಕುಂಠ ಏಕಾದಶಿಯಂದು ಶ್ರೀನಿವಾಸ, ಎಂದರೆ ವೆಂಕಟರಮಣನ ಆಲಯದಲ್ಲಿ ವಿಶೇಷ ಪೂಜೆಗಳು ನಡೆಯುವುದುಂಟು. ಅಂದು ಅಲ್ಲಿ ವೈಕುಂಠದ ಬಾಗಿಲನ್ನು ತೆಗೆಯಲಾಗುತ್ತದೆ ಎನ್ನುವುದನ್ನೂ ಕೇಳಿದ್ದೇವೆ. ವೆಂಕಟರಮಣ(ಅಥವಾ ವೆಂಕಟೇಶ)ನ ಆಲಯಕ್ಕೂ ವೈಕುಂಠಕ್ಕೂ ಏನು ಸಂಬಂಧ? ಈಗ ನಡೆಯುತ್ತಿರುವುದು ಕಲಿಯುಗ. ಈ ಯುಗದ ದೇವರು ಎಂದರೆ ವೆಂಕಟೇಶ. ಅವನು ವಿಷ್ಣುವಿನ ಅವತಾರ. ಹೀಗಾಗಿ ವೈಕುಂಠ ಏಕಾದಶಿಯಂದು ವೆಂಕಟರಮಣನ ಆಲಯಕ್ಕೆ ಹೋಗಿ ಬಂದವರಿಗೆ ಸಾಕ್ಷಾತ್ ವೈಕುಂಠಕ್ಕೆ ಹೋಗಿ ಬಂದಷ್ಟು ಪುಣ್ಯವೂ ಆನಂದವೂ ಲಭಿಸುತ್ತದೆ ಎನ್ನುವುದು ಈ ಆಚರಣೆಯ ಹಿಂದಿರುವ ನಿಲುವು.
ವೆಂಕಟೇಶನ ನಿಲಯ ಎಂದರೆ ತಿರುಮಲ ತಿರುಪತಿ ತಾನೆ? ಅವನು ತಿರುಪತಿ ತಿಮ್ಮಪ್ಪ. ಅವನು ನೆಲೆನಿಂತ ಬೆಟ್ಟವನ್ನು ವೆಂಕಟಾದ್ರಿ ಎಂದೂ ಕರೆಯುತ್ತಾರೆ. ಈ ಬೆಟ್ಟವನ್ನು ಪ್ರದಕ್ಷಿಣೆ ಮಾಡಿದವರಿಗೆ ಇಡಿಯ ಭೂಮಿಯನ್ನು ಪ್ರದಕ್ಷಿಣೆ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎನ್ನುವ ಪುರಾಣವಾಕ್ಯಗಳಿವೆ. 'ವೇಂ'ಎಂದರೆ ಎಲ್ಲ ಪಾಪಗಳು ಎಂದೂ, 'ಕಟ' ಎಂದರೆ ಆ ಪಾಪಗಳನ್ನು ಸುಡುವುದು ಎಂದೂ ಪುರಾಣಗಳು ಅರ್ಥಮಾಡಿವೆ. ಹೀಗಾಗಿ ಎಲ್ಲರ ಎಲ್ಲ ಪಾಪಗಳನ್ನೂ ಸುಡುವ ಬೆಟ್ಟವೇ 'ವೆಂಕಟಾಚಲ';ಆ ಪಾಪಗಳನ್ನು ಸುಡುವ ದೇವರು ವೆಂಕಟೇಶ ಎಂಬ ಶ್ರದ್ಧೆ ಸಾವಿರಾರು ವರ್ಷಗಳಿಂದ ಬೇರುಬಿಟ್ಟಿದೆ...

ವೈಕುಂಠ ಏಕಾದಶಿ
ಈ ಕಾರಣದಿಂಲದೇ ವೈಕುಂಠ ಏಕಾದಶಿ ಆಚರಣೆಯು ವೆಂಕಟಾಚಲ, ಎಂದರೆ ತಿರುಪತಿಯಲ್ಲಿ ವಿಶೇಷವಾಗಿ ನಡೆದು ಬಂದಿದೆ. ಅಂದು ಅಲ್ಲಿ ವೈಕುಂಠಕ್ಕೆ ಎಲ್ಲರಿಗೂ ಮುಕ್ತವಾದ ಪ್ರವೇಶಾವಕಾಶ ಒದಗುತ್ತದೆ; ಏಕೆಂದರೆ ಅದರ ಬಾಗಿಲು ಇರುವುದು ತಿರುಪತಿಯ ಆಲಯದಲ್ಲಿಯೇ ಎಂಬುದು ನಂಬಿಕೆ. ವೆಂಕಟೇಶನ ಗರ್ಭಗುಡಿಯ ಶಿಖರವನ್ನು ‘ಆನಂದನಿಲಯ' ಎಂದಿರುವುದು ಕೂಡ ಗಮನಾರ್ಹ. ಎಲ್ಲ ವೆಂಕಟೇಶನ ಆಲಯಗಳೂ ತಿರುಪತಿ ತಿಮ್ಮಪ್ಪನ ಆಲಯದ ಪ್ರತಿರೂಪಗಳೇ ಆದುದರಿಂದ ಅಂದು ಎಲ್ಲ ಶ್ರೀನಿವಾಸನ ಆಲಯಗಳಲ್ಲೂ ವೈಕುಂಠ ದ್ವಾರಗಳಿರುತ್ತವೆ ‘ವಿಷ್ಣು'ಎಂದರೆ ಯಾರು? ಎಲ್ಲೆಲ್ಲೂ ಎಲ್ಲರಲ್ಲಿಯೂ ಹರಡಿರುವ ಮಹಾತತ್ತ್ವವೇ ‘ವಿಷ್ಣು.ಅವನ ಆಲಯ ಯಾವುದೆಂದರೆ ಆನಂದನಿಲಯ. ನಮ್ಮ ಒಳಗೂ ಹೊರಗೂ ಇರುವ ಆನಂದವನ್ನು ಕಂಡುಕೊಳ್ಳುವ ಎಲ್ಲ ಆರಾಧಾನೆಗಳೂ ವಿಷ್ಣುಲೋಕಕ್ಕೆ ಸಮ. ವಿಷ್ಣು ಎಂದರೆ ನಮ್ಮ ಸ್ಥಿತಿಯನ್ನು ಕಾಪಾಡುವ ದೈವ. ನಮ್ಮ ಬದುಕಿನಲ್ಲಿ ಸಂತೋಷವನ್ನು ಪಡೆಯಬೇಕೆಂಬ ಅದಮ್ಯ ಉತ್ಸಾಹ-ಶ್ರದ್ಧೆಗಳೇ ವೈಕುಂಠ ಏಕಾದಶಿ ಎಂಬ ಧಾರ್ಮಿಕ ಆಚರಣೆಯ ಮೂಲಸ್ವರೂಪ. ಅದನ್ನು ಸಾಧಿಸುವ ಸಂಕಲ್ಪವನ್ನು ಅಂದು ವೆಂಕಟೇಶನ ದರ್ಶನದ ಸಮಯದಲ್ಲಿ ಅವನ ಆಲಯದಲ್ಲಿಯಾದರೂ ಮಾಡಲಿ ಎಂದು ನಮ್ಮ ಹಿರಿಯರು ಈ ದಿನಕ್ಕೆ ವಿಶೇಷ ಮನ್ನಣೆಯನ್ನು ಕೊಟ್ಟಿರುವುದು.ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ
ನಿಮ್ಮ ಅನೇಕ ರೀತಿಯ ತಾಂತ್ರಿಕ ಪರಿಜ್ಞಾನ ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅದನ್ನು ನಿಭಾಯಿಸಲು ಹಣದ ಅಡಚಣೆ ಆಗುವುದು. ನಿಮ್ಮ ಆಪ್ತ ಗೆಳೆಯರೇ ನಿಮಗೆ ಸಹಾಯ ಮಾಡಲು ಹಿಂಜರಿಯುವರು.ಆಳು ಮಾಡಿದ್ದು ಹಾಳು ಎನ್ನುವ ಗಾದೆ ಮಾತನ್ನು ನೆನಪಿಗೆ ತರುವ ಘಟನೆ ಜರುಗುವುದು. ಹಾಗಾಗುವ ಮುನ್ನ ನೀವೇ ಆ ಕೆಲಸವನ್ನು ಮಾಡಲು ತೊಡಗಿದಲ್ಲಿ ಯಶಸ್ಸು ದೊರೆಯುವುದು. ಕಾರ್ಯ ಒತ್ತಡದಲ್ಲಿ ಪರರಿಗೆ ವಹಿಸಿದ ಕೆಲಸ ಪೂರ್ಣಗೊಳ್ಳುವುದಿಲ್ಲ.9845743807
ಅದೃಷ್ಟ ಸಂಖ್ಯೆ:2

ವೃಷಭ
ಒಂದನ್ನು ಪಡೆಯಲು ಮತ್ತೊಂದರ ತ್ಯಾಗದ ಅನಿವಾರ್ಯತೆ ಇರುತ್ತದೆ. ಹಾಗಾಗಿ ಮುಷ್ಟಿಕಾಳು ಚೆಲ್ಲಿ ಮೂಟೆ ಕಾಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣ ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ. ಬಂಧು ಬಾಂಧವರೊಂದಿಗೆ ಸೌಹಾರ್ದದಿಂದ ವರ್ತಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಬರಹಗಾರರಿಗೆ ಸರ್ಕಾರದಿಂದ ಸನ್ಮಾನ ಹಾಗೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ವಹಿಸಿ.9845743807. ಅದೃಷ್ಟ ಸಂಖ್ಯೆ:1

ಮಿಥುನ
ಒಂಟಿತನ ನಿಮ್ಮನ್ನು ಕಾಡುವುದು. ಕೆಲಸ ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ಮನೆಯಿಂದ ಹೊರಗೆ ಹೋಗಲಾರದೆ ಗೃಹಬಂಧನಕ್ಕೆ ಒಳಪಟ್ಟಂತೆ ಆಗುವುದು. ನಿಮ್ಮ ಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವುದು ಉತ್ತಮ.ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.9845743807 ಅದೃಷ್ಟ ಸಂಖ್ಯೆ:2

ಕಟಕ
ನಿಮ್ಮ ದ್ವಂದ್ವ ನಿಲುವಿನ ವಿಚಾರಧಾರೆಯಿಂದ ನಿಮ್ಮನ್ನು ಇತರರು ತಪ್ಪಾಗಿ ಅಥೈರ್‍ಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಮಶಿವನ ಧ್ಯಾನ ಮಾಡಿ. ಯಾರೊಟ್ಟಿಗೂ ಅನವಶ್ಯಕ ಮಾತುಗಳನ್ನು ಆಡದಿರಿ. ಕಾಲಚಕ್ರದ ಉರುಳುವಿಕೆಯ ದೆಸೆಯಿಂದ ಕೆಲವು ಕಾರ್ಯಗಳು ದಿಢೀರನೆ ಯಶಸ್ಸನ್ನು ಮತ್ತು ಬದಲಾವಣೆಯನ್ನು ತಂದುಕೊಡುವವು. ಇದರಿಂದ ಮಾನಸಿಕ ನೆಮ್ಮದಿ, ಸಂತೋಷ ಉಂಟಾಗುವವು. ಮಡದಿ ಮಕ್ಕಳ ಸಂಭ್ರಮಕ್ಕೆ ಕಾರಣವಾಗುವುದು.9845743807. ಅದೃಷ್ಟ ಸಂಖ್ಯೆ:4

ಸಿಂಹ
ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದು ಅನಿವಾರ್ಯ. ಗ್ರಹಗಳು ನಿಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸಲು ಕಾದಿವೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ. ನಿಮ್ಮ ಸುತ್ತಮುತ್ತಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳುವಿರಿ ಮತ್ತು ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.9845743807 ಅದೃಷ್ಟ ಸಂಖ್ಯೆ:5

ಕನ್ಯಾ
ಭಗವಂತನ ಕೃಪೆ ನಿಮ್ಮ ಮೇಲಿರುವುದರಿಂದ ನಿಮಗೆ ಬರುವ ಅಪವಾದಗಳಿಂದ ಮುಕ್ತರಾಗುವಿರಿ ಮತ್ತು ನಿಮ್ಮ ಸಹಪಾಠಿಗಳು ಮತ್ತು ಸಹೋದ್ಯೋಗಿಗಳ ನಡುವೆ ಗೌರವ ಸಂಪಾದಿಸುವಿರಿ. ಪದೇ ಪದೆ ನಿಮ್ಮ ವಿರುದ್ಧದ ಮಾತುಗಳು ಕೇಳಿಸುವವು. ಅದನ್ನು ಕೇಳಿ ನಕ್ಕುಬಿಡಿ. ನೀವು ಬದಲಾಗಿರುವ ವಿಚಾರ ಅವರಿಗೆ ತಿಳಿದಿಲ್ಲ ಅಥವಾ ಹಿಂದಿನ ದಿನಗಳ ಸ್ವಭಾವವನ್ನು ಮೆಲುಕು ಹಾಕಿದರೆ ನಿಮಗೇ ನಗು ಬರುವ ಸಂಭವವಿದೆ.9845743807. ಅದೃಷ್ಟ ಸಂಖ್ಯೆ:6

ತುಲಾ
ಕಷ್ಟಪಡುವ ಮನಸ್ಸಿದೆ. ಆದರೆ ಬೆಂಬಲಿಸಬೇಕಾದ ಗೆಳೆಯರು ಕೈಕೊಡುವ ಸಾಧ್ಯತೆ ಇದೆ. ಆದರೆ ನಿಮ್ಮ ಆತ್ಮಬಲ ಮತ್ತು ನಿಮಗಿರುವ ದೈವಬಲದ ಮೇಲೆ ಎಲ್ಲಾ ಕಾರ್ಯವೂ ಸುಲಲಿತವಾಗುವುದು. ನೀರಿನಂತೆ ಹಣ ಖರ್ಚಾಗುವುದು. ಆದಾಗ್ಯೂ ಅದರಿಂದ ಹೆಚ್ಚಿನ ಲಾಭ ಪಡೆಯುವಿರಿ. ಚಿತ್ತ ಚಾಂಚಲ್ಯವುಂಟಾಗುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಒಳಿತಾಗುವುದು.9845743807. ಅದೃಷ್ಟ ಸಂಖ್ಯೆ:4

ವೃಶ್ಚಿಕ
ತಾಯಿ ವರ್ಗದವರಿಂದ ಅಲ್ಪ ಕಿರಿಕಿರಿ ಆಗುವುದು. ಮಾತಿನ ಜಾಣ್ಮೆ ಹಾಗೂ ಹಿರಿತನದಿಂದಾಗಿ ಕುಟುಂಬದಲ್ಲಿನ ಬಿಗುವಿನ ವಾತಾವರಣ ದೂರ ಮಾಡಬಲ್ಲಿರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು.ಮಕ್ಕಳು ನಿಮ್ಮ ಮಾತನ್ನು ಕೇಳುತ್ತಿಲ್ಲ. ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದು ನೊಂದುಕೊಳ್ಳದಿರಿ. ಕೆಲವರಿಗೆ ತಮ್ಮ ಪ್ರೀತಿ ವಿಶ್ವಾಸವನ್ನು ಅಭಿವ್ಯಕ್ತಗೊಳಿಸುವ ಕ್ರಿಯೆ ಗೊತ್ತಿರುವುದಿಲ್ಲ. ಅಂತಹವರು ನಿಮ್ಮನ್ನು ಅಂತರಂಗದಿಂದ ಪ್ರೀತಿಸುವರು.9845743807. ಅದೃಷ್ಟ ಸಂಖ್ಯೆ:2

ಧನುಸ್ಸು
ಫಲಿತಾಂಶದ ಕಡೆಗೆ ತಲೆ ಕೆಡಿಸಿಕೊಳ್ಳದಿರಿ. ನಿಮ್ಮದು ಪರಿಶ್ರಮದ ಕೆಲಸವಾಗಿದ್ದರೆ ನಿಶ್ಚಿತವಾದ ಯಶಸ್ಸು ದೊರೆಯುವುದು. ದೈವಕೃಪೆ ನಿಮ್ಮ ಮೇಲೆ ಇರುವುದರಿಂದ ಫಲಿತಾಂಶದ ಕಡೆಗೆ ಅನುಮಾನ ಬೇಡ.ಕಷ್ಟಕಾಲದಲ್ಲಿಯೇ ನಿಜವಾದ ಗೆಳೆಯರ ಸ್ವಭಾವ ಗೊತ್ತಾಗುವುದು. ಹಾಗಾಗಿ ನಿಮ್ಮನ್ನು ಓಲೈಸಿ ನಿಮ್ಮಿಂದ ಸಹಾಯ ಪಡೆಯುವ ಗೆಳೆಯರು ನಿಮ್ಮಿಂದ ದೂರವಾಗುವರು. ನಿಮ್ಮ ಕಾರ್ಯದಲ್ಲಿ ತಪ್ಪನ್ನು ತಿಳಿಸುವ ಸ್ನೇಹಿತರೇ ನಿಮಗೆ ಸಹಾಯ ಮಾಡುವರು.9845743807
ಅದೃಷ್ಟ ಸಂಖ್ಯೆ:6

ಮಕರ
ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ. ಪರಿಶ್ರಮವಿರದ ಸರಳ ಪ್ರಯತ್ನದಿಂದ ಲಕ್ಷ್ಮೀ ಪ್ರಸನ್ನಳಾಗಬಹುದೆಂಬ ಭ್ರಮೆಯನ್ನು ಬಿಟ್ಟುಬಿಡಿ. ಸದ್ಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಿಭಾಯಿಸಲು ಹೆಚ್ಚು ಶ್ರಮ ಪಡಬೇಕಾಗುವುದು.ಸಮಯ ಸಾಧಕರನ್ನು ಎಷ್ಟೆಂದು ದೂರ ಇಡುತ್ತೀರಿ? ಆದರೂ ನಿಮ್ಮ ತಾರ್ಕಿಕ ಹೆಜ್ಜೆಗಳು ಅವರಿಗೆ ಪಾಠ ಕಲಿಸುವುದು ಮತ್ತು ಅವರು ನಿಮ್ಮಿಂದ ದೂರ ಸರಿಯಲು ಸಹಕಾರಿಯಾಗುವುದು.9845743807. ಅದೃಷ್ಟ ಸಂಖ್ಯೆ:4

ಕುಂಭ
ತಣ್ಣೀರನ್ನು ಆರಿಸಿ ಕುಡಿಯುವ ಕಾಲ. ಹಾಗಾಗಿ ನಿಮ್ಮ ಎದುರಾಳಿ ಆಡಿದ ಮಾತಿಗೆ ತಕ್ಷ ಣವೇ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಇದು ನಿಮ್ಮ ಸೋಲಲ್ಲ. ಸೋತಂತೆ ನಟಿಸಿ ಗೆಲ್ಲುವ ಪ್ರಯತ್ನ.ದೂರದ ಊರಿಗೆ ಕ್ಷಿಪ್ರವಾದ ಪ್ರವಾಸ ಕೈಗೊಳ್ಳುವ ನಿರ್ಧಾರ ಮಾಡುವಿರಿ. ಇದರಿಂದ ಮಡದಿ ಮಕ್ಕಳು ಸಂತೋಷ ಹೊಂದುವರು. ನಿಮಗೂ ಯಾಂತ್ರಿಕ ಜೀವನದಿಂದ ಕೆಲಕಾಲ ವಿಶ್ರಾಂತಿ ದೊರೆಯುವುದು.9845743807.ಅದೃಷ್ಟ ಸಂಖ್ಯೆ:2

ಮೀನ
ವೈದ್ಯರ ಸಲಹೆ ಸೂಚನೆಗಳನ್ನು ಶಿಸ್ತಿನಿಂದ ಪರಿಪಾಲಿಸಿ. ಇದರಿಂದ ವಿಮುಖರಾದರೆ ಕಷ್ಟವೇ ಎದುರಾಗುವುದು. ಹಣ ನೀರಿನಂತೆ ಖರ್ಚಾಗುವುದು. ಅನವಶ್ಯಕ ವಾದ ವಿವಾದಗಳಿಂದ ದೂರವಿರಿ. ಯುದ್ಧದ ಮೊದಲೇ ಸೋಲುವ ಕುರಿತು ಚಿಂತಿಸದಿರಿ. ಮಾಡು ಇಲ್ಲವೆ ಮಡಿ ಎನ್ನುವ ಧ್ಯೇಯೋದ್ದೇಶದಿಂದ ಹೋರಾಟ ಮಾಡಿ. ಯಶಸ್ಸು ದೊರೆತರೆ ಜನರು ಹರ್ಷಿಸುವರು. ಸೋತರೆ ಜೀವನಕ್ಕೊಂದು ಪಾಠ ಆಗುವುದು.9845743807. ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು. ಮದುವೆ,ಸಂತಾನಕೊರತೆ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿ ಯೋಗ,ಅನಾರೋಗ್ಯ, ಮನೆಕಟ್ಟುವಯೋಗ, ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











