16-10-2018: ಮಂಗಳವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು

https://www.dailymotion.com/video/x6vhvmw

ಜ್ಯೋತಿಷದಲ್ಲಿ ಬರುವ 12 ರಾಶಿಗಳು ತಮ್ಮದೇ ಆದ ಗುಣ, ಸ್ವಭಾವ, ಲಕ್ಷಣ ಹೊಂದಿದ್ದು, ಪ್ರತಿಯೊಬ್ಬನ ಜಾತಕನ ಮೇಲೂ ಪ್ರತ್ಯೇಕ ಪರಿಣಾಮ ಬೀರುತ್ತದೆ. ಆ ರಾಶಿಗಳ ಬಗ್ಗೆ ಒಂದು ಅವಲೋಕನ.ಅದನ್ನು ತಿಳಿಯಲು ಮಂಗಳವಾರದ ದಿನ ಭವಿಷ್ಯ ತಿಳಿಯಿರಿ.

ಮೇಷರಾಶಿ

ಮೇಷರಾಶಿ

ಆನೆ ನಡೆದದ್ದೇ ದಾರಿ ಎನ್ನುವಂತೆ ನೀವು ಯಾವುದೇ ಕೆಲಸಕ್ಕೆ ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ದಾರಿ ಮುಖ್ಯವಾಗಿ ವಿಶಿಷ್ಟವಾಗಿರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಇಚ್ಛಾಶಕ್ತಿಯು ಅಭಿವೃದ್ಧಿಯಾಗುವುದು ಹಾಗೂ ಪರರಿಗೆ ಅಸೂಯೆಯನ್ನುಂಟು ಮಾಡುಬಹುದು.

ಆರ್ಥಿಕದ ಹಣದಗಳಿಕೆಯಲ್ಲಿ ಆಧಾರವಾಗುವಂತಹ ಹೊಸ ರೀತಿಯಯೋಜನೆಗಳಿಗೆ ಸಿದ್ಧತೆ ನಡೆಸುವಿರಿ. ಇದರಿಂದ ನಿಮ್ಮಗೆ ಕ್ರಿಯಾಶೀಲತೆಗೊಂದು ಬೆಲೆ ಬರಲಿದೆ. ಬಂಧು ಬಾಂಧವರು ನಿಮಗೆ ನೆರವು ನೀಡುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣದ ವಿಚಾರವಾಗಿ ಖಂಡಿತವಾಗಿಯೂ ಅಲಕ್ಷ್ಯ ಮಾಡದಿರಿ. ಬರಲಿರುವ ಸದಾವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಿ. ಇದರಿಂದ ನೀವು ಮಾಡಬೇಕೆಂದಿರುವ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದು.

ಅದೃಷ್ಟ ಸಂಖ್ಯೆ: 3

ವೃಷಭ

ವೃಷಭ

ಮಕ್ಕಳರವರ ಪ್ರತಿಬೆ ಪ್ರಗತಿ ಕಂಡು ಅವರ ಬೆನ್ನು ತಟ್ಟಿ ಹುರಿದುಂಬಿಸುವಿರಿ. ಅವರು ನಿಮ್ಮ ಮನೋಭಾವನೆಗಳನ್ನು ಗುರುತಿಸಿ ಗೌರವಿಸುವರು. ಇದರಿಂದ ನಿಮಗೂ ಆನಂದ ಮತ್ತು ಕುಟುಂಬದಲ್ಲಿ ನೆಮ್ಮದಿ ಮೂಡುವುದು.

ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಆಹಾರ ವಿಹಾರದಲ್ಲಿ ಎಚ್ಚರದಿಂದ ಇರಿ. ಸೇವಿಸಿದ ಆಹಾರದಿಂದಲೇ ಅನಾರೋಗ್ಯ ಕಾಡುವ ಸಾಧ್ಯತೆ ಇದೆ.ಒಂದೇ ಒಂದು ಕುಂಟು ನೆಪ ಮುಂದಿಟ್ಟುಕೊಂಡು ವೈರ ಸಾಧನೆ ಮಾಡದಿರಿ. ವಿಶಾಲ ಹೃದಯದಿಂದ ವಿರಸ ಮರೆತು ಸ್ನೇಹ ಹಸ್ತ ಚಾಚಿ. ಇದರಿಂದ ನಿಮ್ಮ ಎಣಿಕೆಗೂ ಮೀರಿದ ಲಾಭವಾಗುವುದು.

ಅದೃಷ್ಟ ಸಂಖ್ಯೆ: 2

ಮಿಥುನ

ಮಿಥುನ

ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಗುರು ಹಿರಿಯರ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.ಕೆಲವು ಸಂದರ್ಭದಲ್ಲಿ ಮಾತನಾಡಲೇ ಬೇಕಾಗುತ್ತದೆ. ಅಂತಹ ಸಮಯದಲ್ಲೂ ಮೌನ ವಹಿಸಿದಲ್ಲಿ ಅದರಿಂದ ವೈಯಕ್ತಿಕ ತೊಂದರೆ ಎದುರಾಗುವುದು. ಆದ್ದರಿಂದ ಸಮಯಕ್ಕೆ ಸೂಕ್ತ ಮಾತಿನ ವರಸೆ ಬಳಸುವುದು ಒಳ್ಳೆಯದು.ಬರಿ ಮಾತಿನಿಂದ ಮನೆ ಕಟ್ಟಲು ಆಗುವುದಿಲ್ಲ. ಅದಕ್ಕೆ ಪೂರಕವಾದ ಸಾಮಗ್ರಿಗಳನ್ನು ಸಂಗ್ರಹಿಸುವುದೂ ಅಷ್ಟೇ ಪ್ರಾಮುಖ್ಯವಾಗಿರುತ್ತದೆ. ನಿಮ್ಮ ವಿಚಾರಧಾರೆಗಳನ್ನು ಕೃತಿಯಲ್ಲಿ ತರುವ ಪ್ರಯತ್ನ ಮಾಡಿ.

ಅದೃಷ್ಟ ಸಂಖ್ಯೆ: 9

ಕಟಕ

ಕಟಕ

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎನ್ನುವ ಗಾದೆ ಮಾತನ್ನು ನೀವು ನೆನಪಿಸಿಕೊಳ್ಳಿ. ನೀವು ನೋಡುವ ಅಥವಾ ಕೇಳುವ ವಿಚಾರಗಳು ಮನಸ್ಸಿಗೆ ಘಾಸಿ ಉಂಟು ಮಾಡುವವು. ಆದಾಗ್ಯೂ ಅವನ್ನು ತಾಳ್ಮೆಯಿಂದ ಪರೀಕ್ಷಿಸಿ.

ನಿಮ್ಮಲ್ಲಿ ಎಲ್ಲಾ ಬುದ್ಧಿವಂತಿಕೆ ಇದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ ಎಂಬುದೇ ನಿಮ್ಮ ಸಮಸ್ಯೆ. ಕತ್ತಲು ಕಳೆದು ಬೆಳಕಾಗಲೇಬೇಕು. ಸ್ವಲ್ಪ ತಾಳ್ಮೆಯಿಂದಿರಿ. ಕುಲದೇವತಾ ಸ್ಮರಣೆ ಮಾಡಿ. ಬಾಳಸಂಗಾತಿಯ ಜೊತೆ ಕದನಕ್ಕೆ ಹೋಗಬೇಡಿ. ಇಲ್ಲದಿದ್ದಲ್ಲಿ ವಾರಾಂತ್ಯ ರಜೆಯನ್ನು ಸವಿಯಲು ಆಗುವುದಿಲ್ಲ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮನೆ ಸದಸ್ಯರ ಒಲುಮೆ ಪಡೆದುಕೊಳ್ಳಿ.

ಅದೃಷ್ಟ ಸಂಖ್ಯೆ: 3

ಸಿಂಹ

ಸಿಂಹ

ಹೊಸಬರ ಸಂಗಡ ಚಾಣಾಕ್ಷ ತನದಿಂದ ಮಾತುಗಳನ್ನು ಆಡುವಿರಿ. ಅವರು ನೀವೆಷ್ಟು ವಿವೇಚನಾಶಾಲಿಗಳು ಎಂದು ಕೊಂಡಾಡುವರು. ಆದರೆ ನಿಮ್ಮ ಆಂತರ್ಯವನ್ನು ಅವರ ಎದುರು ಬಹಿರಂಗ ಪಡಿಸದಿರಿ. ಮನೆಯಲ್ಲಿ ಸಂಗಾತಿ ಮತ್ತು ಮಕ್ಕಳ ಜತೆಯಲ್ಲಿ ಹೊಂದಾಣಿಕೆ ಮನೋಭಾವ ಇರಲಿ. ಇಲ್ಲದೆ ಇದ್ದಲ್ಲಿ ಎತ್ತು ಏರಿಗೆ ಎಮ್ಮೆ ನೀರಿಗೆ ಎಂದು ಹಗ್ಗ ಜಗ್ಗಾಟವಾಗುವುದು. ಕೆಲವು ವಿಚಾರಗಳಲ್ಲಿ ಸೋತು ಗೆಲ್ಲುವುದು ಒಳ್ಳೆಯದು. ನಿಮ್ಮ ಹಿಂದಿನ ಅನುಭವಗಳೇ ಇಂದಿನ ಸುಖ ಸಾಧನೆಗೆ ಸಹಾಯ ಮಾಡುವವು. ನಿಮ್ಮ ಹಳೆ ಗೆಳೆಯರು ಭೇಟಿಯಾಗುವರು. ಬಾಲ್ಯದ ನೆನಪುಗಳಲ್ಲಿ ತೇಲಿ ಹೋಗುವಿರಿ.

ಅದೃಷ್ಟ ಸಂಖ್ಯೆ: 2

ಕನ್ಯಾ

ಕನ್ಯಾ

ಈಗಾಗಲೆ ಮಾಡಿರುವ ಸಾಲ ಬೆಟ್ಟದಷ್ಟಿದೆ. ಸಾಲದಲ್ಲಿ ಸಾಲ ಎಂದು ಪುನಃ ಭಂಡ ಧೈರ್ಯದಿಂದ ಸಾಲ ಮಾಡದಿರಿ. ನಿಮ್ಮ ಮೇಲಿನ ಅಭಿಮಾನಕ್ಕೆ ಯಾರಾದರೂ ಸಾಲ ಕೊಡಲು ತಯಾರಿರುತ್ತಾರೆ. ಆದರೆ ಸಾಲ ತೀರುಸುವ ದಾರಿ ತಿಳಿದುಕೊಳ್ಳಿ. ನಿಮ್ಮ ದಾರಿಯಲ್ಲಿ ನೀವು ಬಯಸಿದ ರೀತಿಯಲ್ಲಿ ನೇರವಾದ ಮಾರ್ಗ ದೊರೆಯದೆ ಹೋಗುವ ಸಾಧ್ಯತೆ ಇದೆ. ಕೂತು ಮಲಗುವವನಿಗೆ ಹೆಚ್ಚು ಪೆಟ್ಟಾಗುವುದಿಲ್ಲ. ಸಾವಧಾನದಿಂದ ಇರಿ.

ಕಾಲ ನಿಮ್ಮನ್ನು ಮೌನವಾಗಿರುವಂತೆ ಪ್ರೇರೇಪಿಸಿದೆ. ಅದಕ್ಕೆ ಹಲವಾರು ಕಾರಣಗಳಿವೆ. ಆದಾಗ್ಯೂ ನೀವು ಮೌನ ಮುರಿದು ಮಾತನಾಡುವ ಸಂದರ್ಭ ಇರುತ್ತದೆ. ನಿಮ್ಮ ಬೆಂಬಲಿಗರು ಮತ್ತು ಅನುಯಾಯಿಗಳು ಇದರಿಂದ ಖುಷಿಯಾಗುವರು.

ಅದೃಷ್ಟ ಸಂಖ್ಯೆ: 9

ತುಲಾ

ತುಲಾ

ಒಂದೇ ಸಲಕ್ಕೆ ದೊಡ್ಡ ಬಂಡವಾಳದ ಕಾರ್ಯ ಯೋಜನೆಗೆ ಕೈಹಾಕದಿರಿ. ನೀವು ಮಾಡುತ್ತಿರುವ ಕಾರ್ಯದ ಮೇಲೆ ನಿಗಾ ಇರಲಿ. ಹಣಕಾಸಿನ ವಿಷಯದಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ. ಹಣ ಖರ್ಚು ಮಾಡುವುದು ಸುಲಭ ಗಳಿಸುವುದು ಕಠಿಣ. ತಿಳಿಯದೆ ತಪ್ಪು ಮಾಡಿದರೆ ಕ್ಷ ಮೆ ಮಾಡಬಹುದು. ಆದರೆ ತಿಳಿದೂ ತಿಳಿದು ತಪ್ಪು ಮಾಡಿದಲ್ಲಿ ಯಾರೂ ಕ್ಷ ಮಿಸುವುದಿಲ್ಲ. ಹಿಂದೆ ಮಾಡಿದ ತಪ್ಪನ್ನೇ ಮಾಡಿದರೆ ಜನರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುವುದು. ಈ ಬಗ್ಗೆ ಎಚ್ಚರಿಕೆ ಇರಲಿ. ಪಾಲುದಾರಿಕೆ ವ್ಯವಹಾರದಲ್ಲಿ ನಿಮ್ಮ ನಿಜವಾದ ಚಾತುರ್ಯವನ್ನು ವ್ಯಕ್ತಗೊಳಿಸುವಿರಿ. ಇದು ನಿಮ್ಮ ಮುಂದಿನ ಜೀವನಕ್ಕೆ ಭದ್ರ ಬುನಾದಿ ಆಗುವುದು. ಹಣಕಾಸಿನ ಸ್ಥಿತಿಯಲ್ಲಿ ಸ್ವಲ್ಪ ಬಿಕ್ಕಟ್ಟು ಎದುರಿಸುವಿರಿ.

ಅದೃಷ್ಟ ಸಂಖ್ಯೆ: 3

ವೃಶ್ಚಿಕ

ವೃಶ್ಚಿಕ

ಸದ್ಯದ ಪರಿಸ್ಥಿತಿಯಲ್ಲಿ ಹಗ್ಗ ಕೂಡ ಹಾವೆಂದು ಭ್ರಮಿಸಿ ಭಯ ಪಡುವ ಕ್ಷ ಣಗಳಾಗಿವೆ. ಅದಕ್ಕೆ ಈಗಿರುವ ಆರ್ಥಿಕ ಸಂಕಷ್ಟದ ದಿನಗಳೇ ಕಾರಣ. ಯಾವುದೇ ಬೃಹತ್‌ ಪ್ರಮಾಣದ ಯೋಜನೆಗಳನ್ನು ಹಾಕಿಕೊಳ್ಳುವುದು ಸೂಕ್ತವಲ್ಲ. ನಿಮ್ಮ ಮಾತಿನಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ಇಲ್ಲದಿದ್ದರೆ ನಿಮಗೆ ಬರಬೇಕಾದ ಹಣಕಾಸಿನ ವಿಷಯದಲ್ಲಿ ತೊಂದರೆ ಎದುರಾಗುವುದು.ರಾಜಕಾರಣಿಗಳಿಗೆ ಮಿಶ್ರಫಲವಿದೆ. ಕೆಳಗೆ ಬಿದ್ದರೂ ಪುಟಿದೇಳುವ ಚೆಂಡಿನ ಗುಂಡಿನಂತೆ ನಿಮ್ಮ ನಾಯಕನ ದೂರ ದೃಷ್ಟಿಯಿಂದ ಅಧಿಕಾರ ಗದ್ದುಗೆ ಹಿಡಿಯಲಿದ್ದೀರಿ.

ಅದೃಷ್ಟ ಸಂಖ್ಯೆ: 4

ಧನಸ್ಸು

ಧನಸ್ಸು

ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿಯುವ ದಡ್ಡತನ ತೋರದಿದ್ದರೇ ಕ್ಷೇಮ. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಬಡವರಿಗೆ ಆಹಾರ ನೀಡಿ. ಯಾವಾಗಲು ಕೆಟ್ಟದೇ ಅಗುವುದಿಲ್ಲ. ಹಾಗಾಗಿ ಸದಾ ಋುಣಾತ್ಮಕ ಚಿಂತನೆ ಬಿಟ್ಟು ಧನಾತ್ಮಕ ಚಿಂತನೆ ರೂಢಿಸಿಕೊಳ್ಳಿ. ಇಂದಿನ ಕಾರ್ಯವು ದೈವದ ಸಹಾಯದಿಂದ ಪೂರ್ಣಗೊಳ್ಳುವುದು.

ನಿಮ್ಮನ್ನು ಟೀಕಿಸುವ ಜನರನ್ನು ನೀವು ನಿಯಂತ್ರಿಸಲು ಮುಂದಾಗುವಿರಿ. ಇದರಲ್ಲಿ ನಿಮ್ಮ ತಾಯಿಯ ಪಾತ್ರ ಹಿರಿದಾದುದು. ಅವರ ಸಲಹೆ ಸಹಕಾರಗಳನ್ನು ತಪ್ಪದೆ ಪಾಲಿಸಿ.

ಅದೃಷ್ಟ ಸಂಖ್ಯೆ: 1

ಮಕರ

ಮಕರ

ಮನೆ ಕಟ್ಟುವ ವಿಚಾರದಲ್ಲಿ ಅತಿಯಾದ ಅವಸರ ಬೇಡ. ಒಂದಿಷ್ಟು ವಿಚಾರಗಳನ್ನು ಯೋಚಿಸಿ ಮುಂದಡಿ ಇಡುವುದು ಒಳ್ಳೆಯದು. ಕಚೇರಿ ಕೆಲಸ ಕಾರ್ಯದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಇರುತ್ತದೆ. ನೀವು ನಿರೀಕ್ಷೆ ಮಾಡುತ್ತಿರುವುದು ಒಂದು. ಆದರೆ ಕಾರ್ಯ ಸಾಧುವಾಗುವುದು ಮತ್ತೊಂದು. ಆದಾಗ್ಯೂ ಈ ಬಗ್ಗೆ ಚಿಂತಿಸದಿರುವುದೇ ಒಳ್ಳೆಯದು. ಯಾವ ಕಾಲಕ್ಕೆ ಏನು ಕೊಡಬೇಕು ಎಂಬುದು ಭಗವಂತನಿಗೆ ಚೆನ್ನಾಗಿ ಅರಿವಿದೆ.

ಮನಸ್ಸಿನ ಸಮತೋಲನ ಕಾಯ್ದುಕೊಳ್ಳಿ. ವಾದ ಪ್ರತಿವಾದಗಳಿಂದ ದೂರ ಉಳಿಯುವುದು ಒಳ್ಳೆಯದು. ಮಗನ ವಿವಾಹ ನಿಮಗೆ ಕಗ್ಗಂಟಾಗಿ ಪರಿಣಮಿಸುವುದು. ಈ ವಿಚಾರವಾಗಿ ನೆಂಟರಿಷ್ಟರಿಂದ ಟೀಕೆಗೆ ಗುರಿಯಾಗುವಿರಿ.

ಅದೃಷ್ಟ ಸಂಖ್ಯೆ: 1

ಕುಂಭ

ಕುಂಭ

ಸಕಲ ಅಭಯಗಳನ್ನು ಒದಗಿಸಿ ಚೈತನ್ಯಕ್ಕೆ ಕಾರಣವಾಗುವಂತಹ ಮಾತಾ ದುರ್ಗಾದೇವಿ ಪ್ರಾರ್ಥನೆ ಮಾಡಿ. ಸಾಧ್ಯವಾದರೆ ದೇವಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ. ನೆರೆಹೊರೆಯವರು ಹೊರೆಯಾಗುವಂತಹ ಸನ್ನಿವೇಶದ ಸಾಧ್ಯತೆಗಳು ಅಧಿಕವಾಗಿದೆ. ಆದರೆ ನೀವು ನಿಮ್ಮತನ ಕಾಪಾಡಿಕೊಳ್ಳುವುದು ಒಳಿತು. ಮನೋಬಯಕೆಗಳು ಪೂರ್ಣಗೊಳ್ಳುವವು. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನ ನಾಮಸ್ಮರಣೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು. ಎಲ್ಲವನ್ನು ನಾನೇ ಮಾಡುತ್ತೇನೆ ಎನ್ನುವುದಕ್ಕಿಂತ ಕೆಲಸವನ್ನು ಪರರಿಗೆ ಹಂಚಿ ನಿಶ್ಚಿಂತರಾಗಿ.

ಅದೃಷ್ಟ ಸಂಖ್ಯೆ: 8

ಮೀನ

ಮೀನ

ನಿಮ್ಮದೇ ಆದ ಉತ್ತಮ ಕಾರ್ಯತಂತ್ರಗಳನ್ನು ಮೇಲಧಿಕಾರಿಗಳು ಶ್ಲಾಘಿಸಲಿದ್ದಾರೆ. ಅದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಿರುವುದು. ಮನೆಯಲ್ಲೂ ಮಡದಿ ಮಕ್ಕಳು ಸಂತಸವನ್ನುಂಟು ಮಾಡುವರು. ಮಹತ್ತರ ಕಾರ್ಯ ಮುಂದೂಡುವುದು ಒಳಿತು. ಆರ್ಥಿಕ ಸ್ಥಿತಿಯಲ್ಲಿ ಏರು ಪೇರು ಸಹಜ. ಖಾಸಗಿ ಉದ್ಯೋಗಿಗಳಿಗೆ ಹೊಸ ಯೋಜನೆಗಳು ಎದುರಾಗುತ್ತವೆ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.

ಹಳೆ ಸ್ನೇಹಿತರೊಬ್ಬರು ಹೊಸ ವಿಚಾರವನ್ನು ನಿಮಗೆ ತಿಳಿಸುವರು. ಇದನ್ನು ಕಾರ್ಯರೂಪಕ್ಕೆ ತರುವ ಮೂಲಕ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುವಿರಿ.

ಅದೃಷ್ಟ ಸಂಖ್ಯೆ:

English summary

your daily horoscope-16-october-2018

Know what astrology and the planets have in store for you today. Choose your zodiac sign and read the details...
X
Desktop Bottom Promotion