Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂಗೈಯಲ್ಲಿ ತ್ರಿಕೋನವಿದ್ದರೆ ಅವರ ಅದೃಷ್ಟವೇ ಬದಲಾಗಲಿದೆ!
ಅಂಗೈಯನ್ನು ನೋಡಿದರೆ ಆಗ ನಿಮಗೆ ಅಲ್ಲೊಂದು ಗೆರೆಗಳ ದೊಡ್ಡ ಲೋಕವೇ ಕಾಣಿಸುವುದು. ಇದರಲ್ಲಿ ಕೆಲವೊಂದು ದೊಡ್ಡದು ಹಾಗೂ ಇನ್ನು ಕೆಲವು ಸಣ್ಣಸಣ್ಣದಾಗಿರುವುದು. ಆದರೆ ಇದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಆಗ ಅಂಗೈಯಲ್ಲಿ ಕೆಲವೊಂದು ವಿನ್ಯಾಸ, ಗಾತ್ರಗಳು ಕಂಡುಬರುವುದು. ನಿಮ್ಮ ಅಂಗೈಯಲ್ಲಿ ತ್ರಿಕೋನಾಕೃತಿಯು ಕಂಡುಬರಬಹುದು. ಅಂಗೈಯಲ್ಲಿ ಇರುವಂತಹ ತ್ರಿಕೋನಾಕೃತಿಗೆ ಕೆಲವೊಂದು ಅರ್ಥಗಳಿವೆ ಎಂದು ಹೇಳಲಾಗುತ್ತದೆ. ತ್ರಿಕೋನಾಕೃತಿಗೆ ಯಾವ ಅರ್ಥವಿದೆ ಎಂದು ನೀವು ತಿಳಿಯಿರಿ...

ಕೇಂದ್ರ ಭಾಗದಲ್ಲಿ ತ್ರಿಕೋನವಿದ್ದರೆ…

ಮದುವೆ ಗೆರೆ ಮೇಲೆ ತ್ರಿಕೋನಾಕೃತಿ
ಮದುವೆ ಗೆರೆ ಮೇಲೆ ತ್ರಿಕೋನಾಕೃತಿಯಿದ್ದರೆ ಆಗ ಇದು ನೀವು ಸಂಪತ್ತಿಗೆ ಸಂಬಂಧಿಸಿದಂತೆ ತುಂಬಾ ಅದೃಷ್ಟವಂತರು ಎಂದು ತೋರಿಸುತ್ತದೆ. ನಿಮ್ಮ ಕೈ ಹಿಡಿಯುವಾಕೆ ಅದೃಷ್ಟ ತಂದುಕೊಡುವಳು ಮತ್ತು ವಿವಾಹದ ಬಳಿಕ ನಿಮಗೆ ಅದೃಷ್ಟ ಬರುವುದು. ಬ್ರಹ್ಮಚಾರಿಗಳು ಇದರ ಬಗ್ಗೆ ಚಿಂತಿಸಬೇಕಿಲ್ಲ. ಯಾಕೆಂದರೆ ನಿಮಗೆ ಯಾವುದೇ ಆರ್ಥಿಕ ಸಂಕಷ್ಟ ಎದುರಾಗದು.
Most Read: ಈ ಮೂರು ರಾಶಿಯವರು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸಬಲ್ಲರು
ತಲೆ ರೇಖೆ ಮೇಲೆ ತ್ರಿಕೋನ
ತಲೆ ರೇಖೆ ಮೇಲೆ ತ್ರಿಕೋನವಿದ್ದರೆ ಆಗ ನೀವು ವೃತ್ತಿಯಲ್ಲಿ ಹಾಗೂ ಶೈಕ್ಷಣಿಕವಾಗಿ ಹೆಚ್ಚು ಯಶಸ್ಸು ಪಡೆಯುತ್ತೀರಿ ಎಂದು ಹೇಳಬಹುದು. ನೀವು ತುಂಬಾ ನಂಬಿಕಸ್ಥರಾಗಿರುವ ಕಾರಣದಿಂದಾಗಿ ನಿಮ್ಮ ಕೆಲಸಗಳು ಬೇಗನೆ ಕೈಗೂಡುವುದು.

ಜೀವನ ರೇಖೆ ಮೇಲೆ ತ್ರಿಕೋನ
ಜೀವನ ರೇಖೆ ಮೇಲೆ ತ್ರಿಕೋನಾಕೃತಿಯಿದ್ದರೆ ಆಗ ಇದು ತುಂಬಾ ಕ್ರಿಯಾತ್ಮಕ ವ್ಯಕ್ತಿತ್ವದ ಸೂಚನೆಯಾಗಿದೆ. ನೀವು ತುಂಬಾ ನೆರವು ನೀಡುವ ವ್ಯಕ್ತಿಯಾಗಿದ್ದು, ನಿಮ್ಮ ಬಾಸ್ ಹಾಗೂ ಸಹೋದ್ಯೋಗಿಗಳು ಪ್ರಶಂಸೆ ಮಾಡುವರು. ನಿಮ್ಮ ವೃತ್ತಿಯಲ್ಲಿ ಸಂಪೂರ್ಣವಾಗಿ ನಿಮಗೆ ಯಶಸ್ಸು ಸಿಗಲಿದೆ.

ಮಣಿಕಟ್ಟಿನ ರೇಖೆ ಮೇಲೆ ತ್ರಿಕೋನ
ಮಣಿಕಟ್ಟಿನ ರೇಖೆ ಮೇಲೆ ತ್ರಿಕೋನವಿದ್ದರೆ ಆಗ ಇದನ್ನು ತುಂಬಾ ಭರವಸೆಯ ಚಿಹ್ನೆಯೆಂದು ಕರೆಯಲಾಗುವುದು. ಮಣಿಕಟ್ಟಿನ ರೇಖೆಯ ಕೇಂದ್ರದಲ್ಲಿ ಈ ತ್ರಿಕೋನವಿದ್ದರೆ ಆಗ ನಿಮಗೆ ಜನ್ಮತಃ ಆಶೀರ್ವಾದವಿದೆ ಮತ್ತು ಜೀವನಪೂರ್ತಿ ನಿಮಗೆ ಒಳ್ಳೆಯ ಅದೃಷ್ಟವಿರುವುದು. ಅಂಗೈಶಾಸ್ತ್ರದ ಬಗ್ಗೆ ನಿಮಗೆ ಇನ್ನಷ್ಟು ಓದಲಿಕ್ಕಿದೆಯಾ? ಹಾಗಾದರೆ ಇದೇ ಸೆಕ್ಷನ್ ನಲ್ಲಿ ನೀವು ಓದುತ್ತಲಿರಿ.



Click it and Unblock the Notifications
