Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ 5 ರಾಶಿಚಕ್ರದವರ ನಿರ್ಧಾರ ಯಾವತ್ತೂ ಕಡ್ಡಿ ಮುರಿದಂತೆ ದೃಢವಾಗಿರುತ್ತದೆ!
ಭಾವನೆ ಎಂದರೆ ಹಾಗೆ... ಸಂತೋಷ ಹಾಗೂ ದುಃಖ ವ್ಯಕ್ತವಾಗುವುದು ನಮ್ಮ ಭಾವನೆಗಳ ಆಧಾರದ ಮೇಲೆಯೇ. ಒಬ್ಬ ವ್ಯಕ್ತಿ ನಮಗೆ ಹತ್ತಿರವಾಗುವುದು ಹಾಗೂ ನಮ್ಮಿಂದ ದೂರವಾಗುವುದೆಲ್ಲವೂ ನಮ್ಮ ಭಾವನೆಯ ಆಧಾರದ ಮೇಲೆಯೇ. ಕೆಲವರು ಅದೆಷ್ಟೇ ಆತ್ಮಿಯರಾಗಿದ್ದರೂ ಅವರ ಕೆಲವು ವರ್ತನೆಗಳಿಂದ ಮನಸ್ಸಿಗೆ ನೋವಾಯಿತು ಅಥವಾ ಬೇಸರವಾಯಿತು ಎಂದರೆ ಯಾವುದೇ ಭಾವನಾತ್ಮಕ ಸುಳಿಗೆ ಒಳಗಾಗದೆಯೇ ಅವರಿಂದ ದೂರ ಸರಿಯುತ್ತಾರೆ. ಇಂತಹ ಒಂದು ದೃಢ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಕೆ ಉಂಟಾಗಬಹುದು.
ವ್ಯಕ್ತಿಯು ಗಟ್ಟಿ ಮನಸ್ಸನ್ನು ಹೊಂದಲು ಅಥವಾ ಅತಿಯಾದ ಭಾವನಾತ್ಮಕ ಗುಣವನ್ನು ತಳೆಯಲು ರಾಶಿ ಚಕ್ರಗಳೇ ಕಾರಣವಾಗಿರುತ್ತವೆ. ರಾಶಿ ಚಕ್ರಗಳ ಅನ್ವಯದಂತೆಯೇ ಅಂತಹ ಭಾವನೆಯನ್ನು ತಳೆಯಲು ಸನ್ನಿವೇಶಗಳು ಸಹ ಹಾಗೆಯೇ ಸೃಷ್ಟಿಯಾಗಿರುತ್ತವೆ ಎಂದು ಸಹ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ರಾಶಿಯವರು ಎಲ್ಲಾ ರಾಶಿಚಕ್ರದವರಿಗಿಂತ ಹೆಚ್ಚು ಬಲವಾದ ಮಾನಸಿಕ ಸ್ಥಿತಿಯನ್ನು ಹೊಂದಿರುತ್ತಾರೆ. ಅವರಿಗೆ ಬೇಡ ಎಂದ ವ್ಯಕ್ತಿಗಳ ಕಡೆಗೆ ಯಾವುದೇ ಭಾವನಾತ್ಮಕ ಸೆಳೆತ ಇಲ್ಲದೆಯೇ ಬಹುಬೇಗ ದೂರವಾಗುತ್ತಾರೆ. ಹಾಗಾದರೆ ಆ ರಾಶಿ ಚಕ್ರಗಳು ಯಾವವು? ಎನ್ನುವ ವಿವರಣೆ ಮುಂದಿದೆ ನೋಡಿ...

ಮೇಷ: 28 ಮಾರ್ಚ್ -20 ಏಪ್ರಿಲ್
ಈ ರಾಶಿಯವರು ವೈಯಕ್ತಿಕವಾಗಿ ಸಮಯವನ್ನು ಹಾಳುಮಾಡಲು ಇಷ್ಟಪಡುವುದಿಲ್ಲ. ಅವರು ನಿಷ್ಠಾವಂತರಾಗಿರುವ ವ್ಯಕ್ತಿಗಳ ಗುಂಪಲ್ಲಿ ಬೆರೆಯಲು ಇಷ್ಟ ಪಡುವರು. ಹಾಗೊಮ್ಮೆ ಅವರಿಗೆ ಆತ್ಮೀಯರಿಂದ ಅಥವಾ ನಂಬಿರುವ ವ್ಯಕ್ತಿಗಳಿಂದ ಮೋಸವಾಯಿತು ಎಂದರೆ ಅವರು ಬಹುಬೇಗ ಆ ವ್ಯಕ್ತಿಗಳಿಂದ ಯಾವುದೇ ಹಿಂಜರಿಕೆ ತೋರದೆ ದೂರವಾಗುತ್ತಾರೆ.

ವೃಷಭ: 21 ಏಪ್ರಿಲ್ -21 ಮೇ
ಇವರು ಒಬ್ಬ ವ್ಯಕ್ತಿಯ ಜೀವನದಿಂದ ಹೊರ ಬರಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಮನಸ್ಸಿಗೆ ಬೇಡ ಅಥವಾ ನೋವುಂಟಾದಾಗ ಬಹುಬೇಗ ಅವರಿಂದ ದೂರವಾಗುತ್ತಾರೆ. ಏಕೆಂದರೆ ಇವರು ಯಾವುದೇ ಕೆಲಸವನ್ನು ನಿರ್ವಹಿಸುವ ಮುನ್ನ ಹೆಚ್ಚು ಚಿಂತನೆ ನಡೆಸುತ್ತಾರೆ. ಹಾಗೊಮ್ಮೆ ಅವರು ಮೆಚ್ಚಿಕೊಂಡವರಿಂದ ದೂರವಾದರು ಅಥವಾ ನೋವನ್ನು ಅನುಸರಿಸುತ್ತಿದ್ದಾರೆ ಎಂದರೆ ಬಹುಬೇಗ ಯಾವುದೇ ಭಾವನಾತ್ಮಕ ಸೆಳೆತಕ್ಕೆ ಒಳಗಾಗದೆ ದೂರ ಬರುತ್ತಾರೆ.

ಸಿಂಹ: ಜುಲೈ 23-ಆಗಸ್ಟ್ 23
ಇವರು ತಮ್ಮನ್ನು ಕೆಳಗೆ ನೂಕುವ ಜನರ ಸುತ್ತ ಇರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸುತ್ತಾರೆ. ಕೆಟ್ಟ ಪ್ರಭಾವಕ್ಕೆ ಒಳಗಾಗುವುದು ಅಥವಾ ಅನಪೇಕ್ಷಿತ ಸ್ನೇಹಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶಕ್ಕಾಗಿ ಇವರು ಆ ವ್ಯಕ್ತಿಗಳ ಸೆಳೆತಗಳಿಂದ ಬಹುಬೇಗ ದೂರವಾಗುತ್ತಾರೆ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಇವರು ತಮ್ಮ ಆಂತರಿಕ ವಿಚಾರಗಳನ್ನು ಅಷ್ಟು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹಾಗೊಮ್ಮೆ ಅವರಿಗೆ ಆತ್ಮೀಯ ವ್ಯಕ್ತಿಯಾಗಿದ್ದಾರೆ ಎಂದರೆ ಅವರು ಅದೃಷ್ಟವಂತರು ಎಂದೇ ಹೇಳಬಹುದು. ಈ ರಾಶಿಯವರು ನಂಬಿಕೆ ಮತ್ತು ಸ್ನೇಹದ ಬಗ್ಗೆ ಬಹಳ ನಂಬಿಕೆ ಇಡುತ್ತಾರೆ. ಇವರ ಈ ಭಾವನೆಗಳು ಸುಳ್ಳಾಗುತ್ತಿದೆ ಎಂದಾದರೆ ಅಂತಹ ವ್ಯಕ್ತಿಗಳಿಂದ ಬಹುಬೇಗ ದೂರ ಸರಿಯುತ್ತಾರೆ. ಜೊತೆಗೆ ಅವರ ಬಗ್ಗೆ ಯಾವುದೇ ಭಾವನೆಗಳನ್ನು ಒಳಗೊಂಡಿರುವುದಿಲ್ಲ.

ಕುಂಭ: ಜನವರಿ 20-ಫೆಬ್ರವರಿ 18
ಈ ರಾಶಿಯ ವ್ಯಕ್ತಿಗಳು ತಮ್ಮ ಜೀವನದಲ್ಲಿ ಎರಡು ಬಗೆಯ ವ್ಯಕ್ತಿಗಳನ್ನು ಇಷ್ಟಪಡುವುದಿಲ್ಲ. ಅಂದರೆ ಯಾರು ಅಸಭ್ಯ ವರ್ತನೆ ತೋರುತ್ತಾರೆ ಮತ್ತು ನೀರಸ ಭಾವನೆ ಹಾಗೂ ಜೀವನ ನಡೆಸುತ್ತಾರೆ ಅಂತಹವರಿಂದ ಇವರು ದೂರ ನಿಲ್ಲುತ್ತಾರೆ. ಇಂತಹ ಎರಡು ಸ್ವಭಾವದ ವ್ಯಕ್ತಿಗಳ ನಡುವೆ ಇವರು ಇರಲು ಇಷ್ಟ ಪಡುವುದಿಲ್ಲ. ಯಾವುದೇ ಅಂಜಿಕೆ ಬೇಸರ ಇಲ್ಲದೆ ಅವರಿಂದ ದೂರವಾಗುತ್ತಾರೆ.



Click it and Unblock the Notifications
