ಈ ಆರು ರಾಶಿಯವರು ನಂಬಿಕೆಗೆ ಅರ್ಹರಾಗಿರುವುದಿಲ್ಲ

By Deepu

ಒಬ್ಬ ವ್ಯಕ್ತಿಯ ಬಗ್ಗೆ ಬರವಸೆ ಅಥವಾ ನಂಬಿಕೆ ಎನ್ನುವುದು ಹುಟ್ಟಿತು ಎಂದಾದರೆ ನಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವುದು. ಕಷ್ಟದ ಸ್ಥಿತಿಯನ್ನು ಸಹ ಹೇಳಿಕೊಳ್ಳುತ್ತೇವೆ. ಕೆಲವೊಮ್ಮೆ ನಮ್ಮ ಭಾವನೆಗೆ ಸ್ಪಂದಿಸಿದವರ ಮೇಲೆ ಇನ್ನಷ್ಟು ವಿಚಾರಗಳನ್ನು ಬಹು ಸುಲಭವಾಗಿ ಹೇಳಿಕೊಳ್ಳುತ್ತೇವೆ. ಆದರೆ ವಾಸ್ತವಿಕವಾಗಿ ಎಲ್ಲರೂ ನಮ್ಮ ನಂಬಿಕೆಗೆ ಅರ್ಹ ವ್ಯಕ್ತಿಗಳಾಗಿರುವುದಿಲ್ಲ.

ನಮ್ಮ ವಿಚಾರವನ್ನು ತಿಳಿದುಕೊಳ್ಳಲು ಕೆಲವು ಅಭಿನಯ ಮಾಡುವ ವ್ಯಕ್ತಿಗಳು ಇರುತ್ತಾರೆ. ಹಾಗಾಗಿ ನಾವು ಸದಾ ನಮ್ಮ ಎಚ್ಚರಿಕೆಯಲ್ಲಿ ಇರಬೇಕಾಗುವುದು. ಭರವಸೆ ಹಾಗೂ ನಂಬಿಕೆ ಎನ್ನುವುದು ನಮ್ಮ ವೈಕ್ತಿಕ ಜೀವನ ಹಾಗೂ ವೃತ್ತಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನಾವು ನಮ್ಮ ವಿಚಾರವನ್ನು ಇತರರಲ್ಲಿ ಹೇಳಿಕೊಳ್ಳುವಾಗ ವ್ಯಕ್ತಿಯ ಆಯ್ಕೆ ಬಹಳ ಮುಖ್ಯವಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದವರು ಎಷ್ಟೇ ನಂಬಿಕಸ್ತ ವ್ಯಕ್ತಿಗಳು ಎನಿಸಿದರು ಅವರು ರಾಶಿಚಕ್ರದ ಪ್ರಭಾವದಿಂದ ಸುಳ್ಳು ಹೇಳುವ ಸಾಧ್ಯತೆಗಳಿವೆ, ಅಲ್ಲದೆ ನಂಬಿಕೆಗೆ ಅರ್ಹರಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಹನ್ನೆರಡು ರಾಶಿಚಕ್ರದಲ್ಲಿ ಕೆಲವು ರಾಶಿಚಕ್ರದವರು ನಮ್ಮ ನಂಬಿಕೆಗೆ ಅರ್ಹರಾಗಿರುವುದಿಲ್ಲ! ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರು ಯಾವ ಬಗೆಯ ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....

ದಯವಿಟ್ಟು ಗಮನಿಸಿ: ಈ ಲೇಖನವನ್ನು ಯಾರ ಕುರಿತಾಗಿಯೂ, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುವ ಯಾವುದೇ ಉದ್ದೇಶದಿಂದ ಬರೆಯಲಾಗಿಲ್ಲ. ಜ್ಯೋತಿಷ್ಯಾಸ್ತ್ರದ ಪ್ರಕಾರ ಕೆಲವೊಂದು ರಾಶಿಯ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಮಾತ್ರ ಇದ್ದುದನ್ನು ಇದ್ದ ಹಾಗೇ ಹೇಳುವ ಪ್ರಯತ್ನ...

ಮೇಷ: (ಮಾರ್ಚ್21-ಏಪ್ರಿಲ್19)

ಮೇಷ: (ಮಾರ್ಚ್21-ಏಪ್ರಿಲ್19)

ಈ ರಾಶಿಯ ಜನರು ಕೊಂಚ ಸೋಮಾರಿಗಳಾಗಿದ್ದು ತಮ್ಮ ಕಾರ್ಯಗಳಿಗೆ ಎಲ್ಲಿಯವರೆಗೆ ಅಂತಿಮ ಕರೆ ಬರುವುದಿಲ್ಲವೋ ಅಲ್ಲಿಯವರೆಗೆ ಮುಂದೂಡುವ ಅಭ್ಯಾಸದವರಾಗಿರುತ್ತಾರೆ. ಸುಳ್ಳು ಹೇಳುವ ಸಂದರ್ಭ ಬಂದರೆ ಸಮಯಕ್ಕೊಂದು ಸುಳ್ಳು ಹೇಳಲು ಸಾಧ್ಯವಾದರೂ ಇದರ ಪರಿಣಾಮಗಳನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆ ಇವರಿಗಿರುವುದಿಲ್ಲ.

ಮೇಷ: (ಮಾರ್ಚ್21-ಏಪ್ರಿಲ್19)

ಮೇಷ: (ಮಾರ್ಚ್21-ಏಪ್ರಿಲ್19)

ಆದ್ದರಿಂದ ಇನ್ನೊಂದು ಸುಳ್ಳು ಹೇಳಿ ಗೋಜಲಾಗಿಸಿ ಒಟ್ಟಾರೆ ತಮ್ಮ ಕೆಲಸವಾಗುವಂತೆ ನೋಡಿಕೊಳ್ಳುತ್ತಾರೆ. ಆದರೆ ತಮ್ಮ ಕೆಲವನ್ನು ಮಾತ್ರ ಅರ್ಧಂಬರ್ಧ ಮಾಡದೇ ಪೂರ್ಣಗೊಳಿಸುವ ಜಾಯಾಮಾನ ಇವರದ್ದು. ಪ್ರಾಮಾಣಿಕತೆಯ ವಿಷಯ ಬಂದರೆ ಇವರು ಅತ್ಯಂತ ಪ್ರಾಮಾಣಿಕರಾಗಿದ್ದು ಸದಾ ಸಹಾಯ ಮಾಡುವವರೂ ಆಗಿರುತ್ತಾರೆ.

ವೃಶ್ಚಿಕ ರಾಶಿ (23 ಅಕ್ಟೋಬರ್ - 21 ನವೆಂಬರ್)

ವೃಶ್ಚಿಕ ರಾಶಿ (23 ಅಕ್ಟೋಬರ್ - 21 ನವೆಂಬರ್)

ಈ ರಾಶಿಯ ಜನರು ಅತಿ ತೀಕ್ಷ್ಣಮತಿಗಳಾಗಿದ್ದಾರೆ. ಇವರನ್ನು ಬೇರೆಯವರು ನಿಯಂತ್ರಿಸುವುದು ಇವರಿಗೆ ಇಷ್ಟವಿಲ್ಲ. ಬಲ ಮತ್ತು ಪ್ರಾಬಲ್ಯತೆಯನ್ನು ಹೊಂದಲು ಇಷ್ಟಪಡುವ ಇವರು ಇದಕ್ಕಾಗಿ ಯಾವ ಬಗೆಯಲ್ಲಿ ತಮ್ಮ ಮಾತುಗಳಲ್ಲಿ ಸುಳ್ಳುಗಳನ್ನು ಪೋಣಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ.

ವೃಶ್ಚಿಕ ರಾಶಿ (23 ಅಕ್ಟೋಬರ್ - 21 ನವೆಂಬರ್)

ವೃಶ್ಚಿಕ ರಾಶಿ (23 ಅಕ್ಟೋಬರ್ - 21 ನವೆಂಬರ್)

ಈ ಸುಳ್ಳುಗಳ ಸರಮಾಲೆಯಲ್ಲಿ ಸಿಲುಕಿದವರು ಈ ಗೋಜಲನ್ನು ಅರ್ಥ ಮಾಡುವಷ್ಟರಲ್ಲಿ ಆಗಲೇ ಬಲೆಗೆ ಬಿದ್ದಾಗಿರುತ್ತದೆ. ಸುಳ್ಳು ಎಂದು ಗೊತ್ತಿರುವ ಜಾಹೀರಾತುಗಳನ್ನು ನೋಡಿ ನಾವು ಉತ್ಪನ್ನಗಳನ್ನು ಕೊಳ್ಳುವುದಿಲ್ಲವೇ ಹಾಗೇ. ಅಂತೆಯ ಇವರ ನಿರ್ಯಣಗಳು ಚಂಚಲವಾಗಿದ್ದು ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತವೆ.

ಮಿಥುನ 22 ಮೇ -21 ಜೂನ್

ಮಿಥುನ 22 ಮೇ -21 ಜೂನ್

ಈ ವರ್ಗದ ಜನರು ದ್ವಂದ್ವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಇದೇ ಇವರನ್ನು ಅತಿ ದೊಡ್ಡ ಸುಳ್ಳುಗಾರನಾಗಿಸಿದೆ. ಈ ಅಭ್ಯಾಸದಿಂದ ಇವರು ಸಂದರ್ಭಕ್ಕನುಸಾರವಾಗಿ ಸುಳ್ಳು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಸುಳ್ಳು ಹೇಳುವ ಪ್ರಮಾಣ ಇವರಲ್ಲಿ ಹೆಚ್ಚು.

ಕಟಕ (22 ಜೂನ್–22 ಜುಲೈ)

ಕಟಕ (22 ಜೂನ್–22 ಜುಲೈ)

ಏಡಿಯ ಶರೀರ ಹೇಗೆ ಹೊರಗೆ ದೃಢವಾಗಿದ್ದು ಒಳಗಡೆಯಿಂದ ಮೆತ್ತರಿಗುತ್ತದೆಯೋ, ಅಂತೆಯೇ ಈ ರಾಶಿಯ ಜನರು ಇತರರು ತಿಳಿದಿರುವುದಕ್ಕಿಂತಲೂ ಹೆಚ್ಚು ಮೃದುವಾಗಿರುತ್ತಾರೆ. ಸ್ವಭಾವತಃ ಇವರು ಒಳ್ಳೆಯವರಾಗಿದ್ದು ಇತರರ ಏಳ್ಗೆಯಲ್ಲಿಯೇ ತಮ್ಮ ಏಳ್ಗೆಯನ್ನು ಕಾಣುತ್ತಾರೆ.

ಕಟಕ ಜೂನ್ 21-ಜುಲೈ 22

ಕಟಕ ಜೂನ್ 21-ಜುಲೈ 22

ಆದ್ದರಿಂದ ಕೇವಲ ಇತರರಿಗೆ ಒಳ್ಳೆಯದಾಗುವುದಿದ್ದರೆ ಮಾತ್ರ ಇವರು ಸುಳ್ಳು ಹೇಳುತ್ತಾರೆ. ಸಮಯ ಮತ್ತು ಸಂದರ್ಭ ನೋಡಿ ಇವರು ಸುಳ್ಳುಗಳನ್ನು ಹೇಳುತ್ತಾರಾದರೂ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲದೇ ಕೇವಲ ಪರಿಸ್ಥಿತಿ ನಿಭಾಯಿಸುವುದಾಗಿರುತ್ತದೆ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಈ ರಾಶಿಯ ಜನರು ಸಾಮಾನ್ಯವಾಗಿ ಸಂತೋಷ ಸ್ವಭಾವದವರಾಗಿದ್ದು ಈ ಕ್ಷಣವನ್ನು ಈಗಲೇ ಅನುಭವಿಸುವ ಆತುರದಲ್ಲಿರುತ್ತಾರೆ. ಇವರಿಗೆ ಸಾಹಸವೆಂದರೆ ಅಚ್ಚುಮೆಚ್ಚಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಸುಳ್ಳು ಹೇಳಬೇಕಾಗಿ ಬಂದಲ್ಲಿ ಯಾವ ಹಿಂಜರಿಕೆಯನ್ನೂ ತೋರದೇ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುವ ಮೂಲಕ ತಮ್ಮ ದಾರಿಯನ್ನು ಸುಗಮವಾಗಿಸಿಕೊಳ್ಳುತ್ತಾರೆ.

ಸಿಂಹ (23 ಜುಲೈ–22 ಆಗಸ್ಟ್)

ಸಿಂಹ (23 ಜುಲೈ–22 ಆಗಸ್ಟ್)

ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುವ ಇವರು ಧೈರ್ಯವಂತರೂ ನೇರ ನಡವಳಿಕೆಯ ಸ್ವಭಾವದವರೂ ಆಗಿರುತ್ತಾರೆ. ಸ್ಪರ್ಧೆಗೆ ಸದಾ ಸಿದ್ಧರಿರುವ ಇವರು ಸ್ಪರ್ಧೆಯಲ್ಲಿ ಗೆಲ್ಲಲು ಸತ್ಯದ ಭಂಡಾರ ಖಾಲಿಯಾದರೆ ಸುಳ್ಳುಗಳನ್ನು ಬಳಸಲು ಹಿಂಜರಿಯುವುದಿಲ್ಲ.

ಸಿಂಹ (23 ಜುಲೈ–22 ಆಗಸ್ಟ್)

ಸಿಂಹ (23 ಜುಲೈ–22 ಆಗಸ್ಟ್)

ಇತರರು ತಮ್ಮ ಜೀವನದಲ್ಲಿ ನಾಟಕವಾಡುವುದನ್ನು, ಸುಳ್ಳು ಹೇಳುವುದನ್ನು ಸಹಿಸದ ಇವರು ಆ ವ್ಯಕ್ತಿಗಳ ಸಂಗವನ್ನೇ ಬಿಟ್ಟುಬಿಡುತ್ತಾರೆ. ವ್ಯಂಗ್ಯವೆಂದರೆ ಇದೇ ಸುಳ್ಳುಗಳನ್ನು ಇವರೇ ಹೇಳಿ ಎದುರಿನವರು ತಮ್ಮೊಂದಿಗೆ ಸ್ನೇಹದಿಂದಿರಬೇಕೆಂದು ಬಯಸುತ್ತಾರೆ.

English summary

These Zodiac Signs Are the Most Dishonest

Find out about the most dishonest sun signs. These are the sun signs that are said to be the most dishonest. Find out more about these ...
X
Desktop Bottom Promotion