Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
ಈ ಮೂರು ರಾಶಿಚಕ್ರದವರು ತಮ್ಮ ನೋವು ಅಥವಾ ದುಃಖವನ್ನು ಪರರಿಗೆ ತಿಳಿಸಲು ಬಯಸುವುದಿಲ್ಲ!
ಸಾಮಾನ್ಯವಾಗಿ ಬಹುತೇಕ ಜನರು ಸಂತೋಷದಲ್ಲಿ ಭಾಗಿಯಾಗಲು ಬಯಸುತ್ತಾರೆ. ದುಃಖದಿಂದ ದೂರ ಇರಲು ಬಯಸುತ್ತಾರೆ. ಕಷ್ಟ ನೋವು ಎಂದರೆ ದೂರ ಸರಿಯುತ್ತಾರೆ. ಯಾರಾದರೂ ಕಷ್ಟ ನೋವು ಎಂದರೆ ಅವರನ್ನು ಆದಷ್ಟು ಅವರನ್ನು ದೂರ ಇರಿಸಲು ಪ್ರಯತ್ನಿಸುತ್ತಾರೆ. ಅವರಿಂದ ನಮ್ಮ ಸಂತೋಷವನ್ನು ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ. ಹಾಗೊಮ್ಮೆ ಕಷ್ಟದಲ್ಲಿ ಇರುವವವರಿಗೆ ಸಹಾಯ ಮಾಡುವುದರಿಂದ ತಮಗೆಲ್ಲಿ ತೊಂದರೆಯಾದರೆ ಎಂದು ಯೋಚಿಸುವರು. ಹಾಗಾಗಿ ಕಷ್ಟ ಅಥವಾ ನೋವು ಎಂದರೆ ವ್ಯಕ್ತಿಯ ಮನಸ್ಸಿನಲ್ಲಿ ಬಹುಬೇಗ ಆತಂಕ ಸೃಷ್ಟಿಯಾಗುತ್ತದೆ.
ಜಗತ್ತಿನಲ್ಲಿ ನಾವು ವಿವಿಧ ಬಗೆಯ ಜನರನ್ನು ಕಾಣಬಹುದು. ಕೆಲವರು ಕಷ್ಟ-ನೋವು ಎನ್ನುವುದನ್ನು ಬಳಸಿಕೊಂಡು ಇತರರಿಗೆ ದ್ರೋಹ ಮಾಡಲು ಮುಂದಾಗುತ್ತಾರೆ. ಕಷ್ಟ-ನೋವು ಎನ್ನುವ ವಿಚಾರದಿಂದಲೇ ಅನುಕಂಪವನ್ನು ಪಡೆದುಕೊಳ್ಳಲು ಬಯಸುವರು. ಕೆಲವರು ತಮ್ಮ ನೋವುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ತಮ್ಮ ದೌರ್ಬಲ್ಯ ಅಥವಾ ಅಸಾಹಯಕತೆಯನ್ನು ಇತರರ ಮುಂದೆ ಹೇಳಲು ಅಥವಾ ಹಂಚಿಕೊಳ್ಳಲು ಬಯಸುವುದಿಲ್ಲ. ಇದು ಅವರ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟುಮಾಡುತ್ತದೆ ಎಂದು ತಿಳಿದುಕೊಳ್ಳುತ್ತಾರೆ.

ಹೌದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿಚಕ್ರದ ವ್ಯಕ್ತಿಗಳು ತಮ್ಮ ನೋವುಗಳನ್ನು ಇತರರ ಮುಂದೆ ಹೇಳಿಕೊಳ್ಳಲು ಬಯಸುವುದಿಲ್ಲ. ತಮ್ಮ ದುಃಖವನ್ನು ತಾವೊಬ್ಬರೆ ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಮೂರು ರಾಶಿಚಕ್ರಗಳು ಯಾವವು? ಆ ರಾಶಿಚಕ್ರದವರ ಸಾಲಿನಲ್ಲಿ ನೀವು ಅಥವಾ ನಿಮ್ಮವರು ಇದ್ದೀರಾ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಕರ್ಕ
ತಮ್ಮ ನೋವನ್ನು ತಾವೇ ಅಡಗಿಸಿಟ್ಟಿಕೊಳ್ಳುವ ಜನರ ಸಾಲಿನಲ್ಲಿ ಈ ರಾಶಿಚಕ್ರದ ವ್ಯಕ್ತಿಗಳು ಇರುತ್ತಾರೆ. ಇವರು ಎಂತಹದ್ದೇ ಕಷ್ಟ ಅಥವಾ ನೋವನ್ನು ಹೊಂದಿದ್ದರೂ ಅದನ್ನು ಬೇರೆಯವರ ಮುಂದೆ ಹೇಳಿಕೊಳ್ಳುವುದು ಅಥವಾ ಅನುಕಂಪ ಹುಟ್ಟುವಂತೆ ಮಾಡುವ ಕೆಲಸವನ್ನು ಮಾಡುವುದಿಲ್ಲ. ತಮ್ಮ ನೋವು ತಮಗೆ ಎನ್ನುವ ಸಿದ್ಧಾಂತದವರು ಎನ್ನಬಹುದು. ನೈಸರ್ಗಿಕವಾಗಿ ಕರ್ಕ ರಾಶಿಯ ವ್ಯಕ್ತಿಗಳು ಬಹಳ ಭಾವನಾತ್ಮಕ ಮತ್ತು ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿಗಳಾಗಿರುತ್ತಾರೆ.

ಕರ್ಕ
ಬಹಳ ನಾಚಿಕೆ ಸ್ವಭಾವದವರಾದ ಇವರು ತಮ್ಮನ್ನು ಪ್ರೀತಿಸುವವರನ್ನು ನೋಯಿಸಲು ಬಯಸುವುದಿಲ್ಲ. ತಮ್ಮ ನೋವುಗಳನ್ನು ಅವರ ಮುಂದೆ ಇಡುವುದಿಲ್ಲ. ಪ್ರಪಂಚ ನೋವನ್ನು ಬಯಸುವುದಿಲ್ಲ ಎನ್ನುವುದನ್ನು ಇವರು ಅರಿತಿರುತ್ತಾರೆ. ಹಾಗಾಗಿ ಎಂತಹದ್ದೇ ಕಷ್ಟದ ಸ್ಥಿತಿ ಎದುರಾದರೂ ನಗುನಗುತ್ತಲೇ ಎದುರಿಸುತ್ತಾರೆ. ಇವರ ಮನಸ್ಸಿನಲ್ಲಿ ಏನಿದೆ ಎಂದು ಅಂದಾಜಿಸುವುದು ಕಷ್ಟ ಎಂದು ಹೇಳಲಾಗುವುದು.

ಕನ್ಯಾ
ತಮ್ಮ ನೋವನ್ನು ಇತರರಿಗೆ ತಿಳಿಸಲು ಇಷ್ಟಪಡದ ವ್ಯಕ್ತಿಗಳ ಸಾಲಿನಲ್ಲಿ ಈ ರಾಶಿಚಕ್ರದವರು ಎರಡನೆಯವರು ಎನ್ನಬಹುದು. ಎಲ್ಲಾ ವಿಚಾರದಲ್ಲೂ ಅತ್ಯಂತ ನಿರ್ಣಾಯಕ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತಮ್ಮ ಸಾಧಕ ಮತ್ತು ಭಾದಕಗಳನ್ನು ಚೆನ್ನಾಗಿ ಅರಿತಿರುತ್ತಾರೆ. ಇವರು ತಮ್ಮ ಮನಸ್ಸಿನ ನೋವುಗಳನ್ನು ತಾವೇ ಸಹಿಸಿಕೊಂಡು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅಷ್ಟಾದರೂ ತಮ್ಮ ಆಂತರಿಕ ಭಾವನೆಗಳನ್ನು ಬಹಿರಂಗಪಡಿಸಲು ಇಷ್ಟಪಡದ ವ್ಯಕ್ತಿಗಳು.

ಕನ್ಯಾ
ಇತರರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಶಕ್ತಿ ಇವರಿಗಿದೆ. ಇವರು ಎಷ್ಟು ಅರ್ಥೈಸಿಕೊಂಡಿದ್ದಾರೋ ಅಷ್ಟರಲ್ಲಿಯೇ ಖುಷಿಯಾಗಿ ಇರುತ್ತಾರೆ. ಕೊರತೆಯನ್ನು ಅನುಭವಿಸುವುದಿಲ್ಲ. ಹಾಗಾಗಿಯೇ ಇತರರು ಇವರನ್ನು ಭಾವನಾತ್ಮಕ ಜೀವಿಗಳು ಹಾಗೂ ಧೃಢ ಚಿತ್ತದವರು ಎಂದು ನಿರ್ಣಯಿಸುತ್ತಾರೆ.

ವೃಶ್ಚಿಕ
ಇವರು ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು ಎಂದು ಹೇಳಲಾಗುವುದು. ಆದರೆ ಇವರು ತಮ್ಮ ಸುತ್ತಲಿನ ಜನರಿಂದ ನಂಬಿಕೆ ಅಥವಾ ವಿಶ್ವಾಸವನ್ನು ಪಡೆದುಕೊಳ್ಳಲು ಸಾಕಷ್ಟು ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಇವರು ಇತರರ ಉದ್ದೇಶವನ್ನು ಪ್ರಶ್ನಿಸುವ ಕಾರಣದಿಂದ ತಮ್ಮ ಸ್ವಯಂ ವಿಚಾರಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಇವರು ತಮ್ಮ ಭಾವನೆ ಹಾಗೂ ನೋವುಗಳನ್ನು ಬಹಳ ರಹಸ್ಯವಾಗಿ ಇಡಲು ಬಯಸುತ್ತಾರೆ.

ವೃಶ್ಚಿಕ
ಯಾರೊಂದಿಗೂ ತಮ್ಮ ಸಂತೋಷವನ್ನು ಹಾಗೂ ದುಃಖವನ್ನು ಅಷ್ಟು ಸುಲಭವಾಗಿ ಹಂಚಿಕೊಳ್ಳುವುದಿಲ್ಲ.
ಇವರು ತಮ್ಮ ನೋವಿನಿಂದ ಖಿನ್ನತೆ ಮತ್ತು ಆತಂಕವನ್ನು ಹೊಂದಿದ್ದರೂ ಸಹ ಇತರರ ಸಹಾಯ ಪಡೆಯಲು ಬಯಸುವುದಿಲ್ಲ. ಎಂತಹ ಸಮಸ್ಯೆ ಎದುರಾದರೂ ಅವುಗಳನ್ನು ಸ್ವಯಂ ತಾವೇ ನಿರ್ವಹಿಸಲು ಮುಂದಾಗುತ್ತಾರೆ. ಅದಕ್ಕೆ ಇತರರ ಸಹಾಯ ಹಸ್ತವನ್ನು ಅಪೇಕ್ಷಿಸುವುದಿಲ್ಲ.



Click it and Unblock the Notifications











