ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇಂತಹ ಹಕ್ಕಿಗಳು ಮತ್ತು ಪ್ರಾಣಿಗಳು ಮನೆಯ ಒಳಗೆ ಪ್ರವೇಶಿಸಬಾರದಂತೆ

ಪ್ರತಿಯೊಂದು ಜೀವಿಯಲ್ಲೂ ಪರಿಶುದ್ಧವಾದ ಆತ್ಮ ಎನ್ನುವ ದೇವರಿರುತ್ತಾನೆ. ಹಾಗಾಗಿಯೇ ವ್ಯಕ್ತಿ ಯಾರಿಗೆ ಮೋಸ ಅಥವಾ ಸುಳ್ಳು ಹೇಳಿದರೂ ಆತ್ಮ ಎನ್ನುವ ದೇವರಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ನಮ್ಮ ಎಲ್ಲಾ ಸತ್ಯಾ-ಸತ್ಯಗಳು ಆತ್ಮಕ್ಕೆ ತಿಳಿದಿರುತ್ತದೆ. ವ್ಯಕ್ತಿಯು ಎಸಗುವ ಧನಾತ್ಮಕ ಹಾಗೂ ಋಣಾತ್ಮಕ ಕೆಲಸದಿಂದಲೇ ಆತ್ಮಕ್ಕೆ ಹೆಚ್ಚಿನ ಶಕ್ತಿ ಹಾಗೂ ಉತ್ತಮ ಪ್ರಭಾವಳಿಯನ್ನು ಪಡೆದುಕೊಳ್ಳುವುದು ಎನ್ನಲಾಗುವುದು. ಯಾರಲ್ಲಿ ಪರಿಶುದ್ಧವಾದ ಆತ್ಮವಿರುತ್ತದೆಯೋ ಅಂತಹವರು ದೇವರಿಗೆ ಸಮಾನರಾಗಿರುತ್ತಾರೆ. ಅವರು ಎಂದಿಗೂ ಬೇರೆಯವರಿಗೆ ಕೆಟ್ಟದ್ದನ್ನು ಎಸಗುವುದಿಲ್ಲ ಎನ್ನಲಾಗುವುದು.

ಹಿಂದೂ ಧರ್ಮ ಹಾಗೂ ಕೆಲವು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಕೃತಿಯನ್ನು ಹಾಗೂ ಅದರಲ್ಲಿರುವ ಪ್ರಾಣಿ-ಪಕ್ಷಿಗಳು ಮತ್ತು ಪಂಚ ಭೂತಗಳನ್ನು ದೇವತೆಗಳಿಗೆ ಹೋಲಿಸಲಾಗುವುದು. ಅಲ್ಲದೆ ದೇವತೆಗಳು ಎಂದು ಪೂಜೆಯನ್ನು ಸಹ ಗೈಯುವರು. ಅದರಲ್ಲೂ ಕೆಲವು ಪ್ರಾಣಿ-ಪಕ್ಷಿಗಳು ಅತ್ಯಂತ ಶ್ರೇಷ್ಠ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವು ದೇವತೆಗಳ ವಾಹನಗಳು. ಹಾಗಾಗಿ ಅವರನ್ನು ಪೂಜೆ ಮಾಡುವುದು ಹಾಗೂ ಸಂತೋಷಪಡುವಂತೆ ಮಾಡಿದರೆ ದೇವರು ಆಶೀರ್ವಾದ ಮಾಡುತ್ತಾನೆ ಎನ್ನುವ ನಂಬಿಕೆಯೂ ಇದೆ.

ಧನಾತ್ಮಕ ಹಾಗೂ ಋಣಾತ್ಮಕ ಎನ್ನುವುದು ಹೇಗೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇರುತ್ತದೆಯೋ ಹಾಗೆಯೇ ಕೆಲವು ಪ್ರಾಣಿ ಪಕ್ಷಿಗಳು ಧನಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸಿದರೆ, ಇನ್ನೂ ಕೆಲವು ಪ್ರಾಣಿ ಪಕ್ಷಿಗಳನ್ನು ನಕಾರಾತ್ಮಕ ಶಕ್ತಿ ಹಾಗೂ ಅಪಶಕುನ ಎಂದು ಸಹ ಅಭಿಪ್ರಾಯಿಸುತ್ತಾರೆ. ಇವುಗಳ ಆಗಮನ ಹಾಗೂ ಉಪಸ್ಥಿತಿಯು ಕೆಲವು ವಿಶೇಷ ಸಂದೇಶಗಳನ್ನು ನೀಡುತ್ತವೆ. ಅವು ಭವಿಷ್ಯದ ವಿಚಾರದ ಕುರಿತು ಸಹ ಸ್ಪಷ್ಟ ವಿಷಯನ್ನು ತೆರೆದಿಡುತ್ತವೆ ಎನ್ನಲಾಗುವದು.

ಮನೆ ಎನ್ನುವುದು ಮೇಲ್ನೋಟಕ್ಕೆ ವ್ಯಕ್ತಿ ಉಳಿಯಲು ಇರುವ ಸ್ಥಳ ಅಥವಾ ಮನೆ ಎಂದು ಪರಿಗಣಿಸಲಾಗುವುದು. ಆದರೆ ಆ ಮನೆಯ ನಿರ್ಮಾಣದ ವಿಚಾರದಲ್ಲಿ ವಿಶೇಷವಾದ ದೈವಶಕ್ತಿಗಳ ಪ್ರಭಾವ ಇರುತ್ತವೆ ಎನ್ನಲಾಗುವುದು. ಮನೆಯ ವಾಸ್ತು, ಅಲ್ಲಿ ವಾಸ ಮಾಡುವ ವ್ಯಕ್ತಿಯ ಉಪಸ್ಥಿತಿ ಹಾಗೂ ಸುತ್ತಲಿನ ಪರಿಸರವು ವಿಶೇಷ ಶಕ್ತಿಗಳನ್ನು ಪ್ರತಿಬಿಂಬಿಸುತ್ತವೆ ಎನ್ನಲಾಗುವುದು. ಅದರಲ್ಲೂ ಕೆಲವು ನಕಾರಾತ್ಮಕ ಶಕ್ತಿಯನ್ನು ಬಿಂಬಿಸುವ ಪ್ರಾಣಿ ಪಕ್ಷಿಗಳು ಮನೆಯ ಒಳಗೆ ಪ್ರವೇಶವನ್ನು ಪಡೆಯ ಬಾರದು. ಅದು ಅಪಶಕುನದ ಸಂಕೇತವಾಗಿರುತ್ತವೆ. ಅಲ್ಲದೆ ಕೆಲವು ನಕಾರಾತ್ಮಕ ಭವಿಷ್ಯದ ಸಂದೇಶವನ್ನು ಸಾರುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ನಿಮಗೂ ನಿಮ್ಮ ಮನೆಯಲ್ಲಿ ನಕಾರಾತ್ಮಕ ಪ್ರಾಣಿ-ಪಕ್ಷಿಗಳ ಪ್ರವೇಶ ಪಡೆದರೆ ಯಾವ ಅರ್ಥ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ಪಾರಿವಾಳ

ಪಾರಿವಾಳ

ಪಾರಿವಾಳಗಳು ಸಾಮಾನ್ಯವಾಗಿ ಮನೆಯ ಮನೆಯ ಮೇಲ್ಛಾವಣಿಯಲ್ಲಿ ವಾಸಿಸುತ್ತವೆ. ಕೆಲವೊಮ್ಮೆ ಮಳೆ, ಗಾಳಿ, ಗುಡುಗು ಸೇರಿದಂತೆ ಇನ್ನಿತರ ಪ್ರಕೃತಿಯ ರಕ್ಷಣೆಗೆ ಅಥವಾ ಮೊಟ್ಟೆಯನ್ನು ಇಡುವ ಉದ್ದೇಶದಿಂದ ಮನೆಯ ಒಳಗೆ ಪ್ರವೇಶ ಪಡೆದುಕೊಳ್ಳಬಹುದು. ಅಂತಹ ಸಂದರ್ಭದಲ್ಲಿ ದೀರ್ಘ ಸಮಯಗಳ ಕಾಲ ಮನೆಯ ಒಳಗೆ ಪ್ರವೇಶವನ್ನು ನೀಡದಿರಿ. ಅದು ಕೆಲವು ಋಣಾತ್ಮಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಪಾರಿವಾಳಗಳು ಮನೆಯ ಒಳಗೆ ಗೂಡು ಕಟ್ಟಿದರೆ ವಿವಿಧ ಸಮಸ್ಯೆಗಳು ಎದುರಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.

ಜೇನುನೊಣ/ಕಣಜ:

ಜೇನುನೊಣ/ಕಣಜ:

ಬೇಸಿಗೆಯ ಅಂತ್ಯದ ವೇಳೆಯಲ್ಲಿ ಅಥವಾ ಶರತ್ಕಾಲದಲ್ಲಿ ಸಾಮಾನ್ಯವಾಗಿ ಜೇನುನೊಣಗಳು ಮನೆಯ ಒಳಗೆ ಪ್ರವೇಶ ಪಡೆಯಲು ಅಥವಾ ಗೂಡನ್ನು ಕಟ್ಟುವ ಉದ್ದೇಶಕ್ಕೆ ಹುಡುಕಾಟವನ್ನು ನಡೆಸುತ್ತವೆ. ಕೆಲವೊಮ್ಮೆ ಮನೆಯ ಮೇಲ್ಭಾಗದಲ್ಲಿ ಗೂಡನ್ನು ನಿರ್ಮಿಸುತ್ತವೆ. ಮನೆಯ ಒಳಗೆ ಸ್ವಲ್ಪ ತಂಪಾದ ವಾತಾವರಣ ದೊರೆಯುವುದರಿಂದ ಜೇನು ನೊಣಗಳು ಅಥವಾ ಕಣಜಗಳು ಮನೆಯೊಳಗೆ ಪ್ರವೇಶ ಪಡೆದು ಆಶ್ರಯವನ್ನು ತೆಗೆದುಕೊಳ್ಳುವರು. ಹಾಗೊಮ್ಮೆ ನಿಮ್ಮ ಗಮನಕ್ಕೆ ಗೂಡುಗಳು ಕಂಡು ಬಂದರೆ ಮೊದಲು ಅದನ್ನು ತೆಗೆದು ಹಾಕುವುದು ಉತ್ತಮ. ಅವು ಕೆಟ್ಟ ಶಕುನವನ್ನು ತರುತ್ತವೆ. ಮನೆಯ ಮಂದಿಗೆ ಅಪಘಾತಗಳನ್ನು ತರುವ ಸಂದೇಶವನ್ನು ಆಹ್ವಾನಿಸುತ್ತದೆ ಎನ್ನಲಾಗುವುದು.

ಬಾವಲಿ

ಬಾವಲಿ

ಬಾವಲಿಗಳು ಮನೆಯ ಒಳಗೆ ಪ್ರವೇಶ ಪಡೆಯುವುದು ಒಂದು ಕೆಟ್ಟ ಅಪಶಕುನ ಎಂದು ಹೇಳಲಾಗುವುದು. ಬಾವಲಿಗಳು ನಕಾರಾತ್ಮಕ ಶಕ್ತಿಯನ್ನು ತರುತ್ತದೆ ಎನ್ನಲಾಗುವುದು. ಹಗಲಿನ ವೇಳೆಯಲ್ಲಿ ಚಲನೆಯನ್ನು ಪಡೆದುಕೊಳ್ಳುವುದು ದುರುದ್ದೇಶಪೂರಿತವಾಗಿರುತ್ತದೆ. ಬಾವಲಿಯು ಸಾಮಾನ್ಯವಾಗಿ ಸಾವು ಹಾಗೂ ನಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧವನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು. ಆರ್ಥಿಕ ನಷ್ಟದ ಜೊತೆಗೆ ಮನೆಯಲ್ಲಿ ಘರ್ಷಣೆಗಳು ಆರಂಭವಾಗುವುದು.

ಗೂಬೆಗಳು

ಗೂಬೆಗಳು

ಗೂಬೆಗಳು ಸಾಮಾನ್ಯವಾಗಿ ಮನೆಯೊಳಗೆ ಪ್ರವೇಶ ಪಡೆಯುವುದಿಲ್ಲ ಎಂದು ಹೇಳಲಾಗುವುದು. ಗೂಬೆಗಳು ರಾತ್ರಿ ವೇಳೆಯಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ ರಾತ್ರಿ ವೇಳೆಯಲ್ಲಿ ಮನೆಯ ಪ್ರವೇಶ ಪಡೆಯುವ ಸಾದ್ಯತೆಗಳು ಇರುತ್ತವೆ ಎಂದು ಹೇಳಲಾಗುವುದು. ಮನೆಯ ಮುಖ್ಯ ಬಾಗಿಲು ತೆರೆದಿದ್ದರೆ ಮಾತ್ರ ಪ್ರವೇಶ ಪಡೆಯುವುದು. ಗೂಬೆ ಮನೆಯ ಒಳಗೆ ಅಥವಾ ಇನ್ನಿತರ ಸ್ಥಳದಲ್ಲಿ ಕಾಣಿಸಿಕೊಳ್ಳುವುದು ಸಹ ದುರ್ಬಲ ಶಕುನ ಎಂದು ಪರಿಗಣಿಸಲಾಗುವುದು.

ಕಪ್ಪು ಬೆಕ್ಕು:

ಕಪ್ಪು ಬೆಕ್ಕು:

ಕಪ್ಪು ಬೆಕ್ಕು ಅಪಶಕುನ ಎಂದು ಪರಿಗಣಿಸಲಾಗುವುದು. ಕಪ್ಪು ಬಣ್ಣದ ಬೆಕ್ಕು ಮನೆಯ ಒಳಗೆ ಪ್ರವೇಶಿಸಿದರೆ ಅದನ್ನು ಅಸಭ್ಯ ಎಂದು ಪರಿಗಣಿಸಲಾಗುವುದು. ಆದಾಗ್ಯೂ ಬೆಕ್ಕು ಈಗಾಗಲೇ ಮನೆಯಲ್ಲಿ ಅಥವಾ ಸಮೀಪದಲ್ಲಿ ವಾಸಿಸುತ್ತಿದ್ದರೆ ಅಥವಾ ಆಗಾಗ ಮನೆಗೆ ಬರುತ್ತಿದ್ದರೆ ಅದನ್ನು ದುಃಖಕರವಾದ ಸಂಗತಿ ಅಥವಾ ದುಃಖಕರವಾದ ಶಕುನ ಎಂದು ಪರಿಗಣಿಸಲಾಗುವುದು.

English summary

These Birds-Animals Should Not Enter Your House As Per Astrology

Astrology says that there are some birds and animals that should not be let to enter the house. While they might be in a need for shelter, we should not let them enter the house because they are considered inauspicious. This might invite bad luck and poverty for the housemates.The list consists of mainly five creatures.
X
Desktop Bottom Promotion