For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ಇದು ಜಗತ್ತಿನ ಅತೀ ಚಿಕ್ಕ ಮಹಿಳೆಯ ಕಥೆ!

By Arshad
|

ಕೆಲ ವ್ಯಕ್ತಿಗಳಿಗೆ ದೇವರು ನೀಡಿದ ವೈಕಲ್ಯವನ್ನು ಅಂಗೀಕರಿಸುವ ಮೂಲಕ ಇನ್ನಷ್ಟು ಶಕ್ತಿಶಾಲಿ ವ್ಯಕ್ತಿಗಳಾಗಿ ಹೊರ ಹೊಮ್ಮುತ್ತಾರೆ. ನಮ್ಮ ಕರ್ನಾಟಕದವರಾದ ಮಾಲತಿ ಹೊಳ್ಳ ಇದಕ್ಕೊಂದು ಜ್ವಲಂತ ಉದಾಹರಣೆ. ನಮ್ಮ ನೆರೆಯ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಜ್ಯೋತಿ ಆಮ್ಗೆ ಎಂಬ ಮಹಿಳೆಗೆ ಈಗ ಇಪ್ಪತ್ತೈದು ವರ್ಷ ವಯಸ್ಸು (ಜನನ: ಡಿಸೆಂಬರ್ 16, 1993). ಆದರೆ ಇವರನ್ನು ನೋಡಿದ ಯಾರೂ ಇವರಿಗೆ ಇಪ್ಪತ್ತೈದು ವರ್ಷ ವಯಸ್ಸು ಎಂದು ಹೇಳುವಿದಿಲ್ಲ ಬದಲಿಗೆ ಪುಟ್ಟ ಮಗುವಿರಬಹುದು ಎಂದೇ ತಿಳಿದುಕೊಳ್ಳುತ್ತಾರೆ.

ಏಕೆಂದರೆ ಇವರ ಎತ್ತರ ಕೇವಲ 2.06 ಅಡಿ ಹಾಗೂ ತೂಕ ಕೇವಲ ಐದೂವರೆ ಕೇಜಿ! ದೇವರು ನೀಡಿದ ಈ ಕೊರತೆಯೇ ಈಕೆಯನ್ನು ಜಗತ್ತಿನ ಜೀವಂತ ಅತ್ಯಂತ ಚಿಕ್ಕ ಮಹಿಳೆ (world's smallest living woman) ಎಂಬ ಗಿನ್ನಿಸ್ ದಾಖಲೆಯನ್ನು ಪಡೆದಿದ್ದಾರೆ. ಬನ್ನಿ, ಈ ಪುಟ್ಟ ಮಹಿಳೆಯ ದೊಡ್ಡ ಸಾಧನೆಗಳ ಬಗ್ಗೆ ಅರಿಯೋಣ....

ಈಕೆ ಬೆಳವಣಿಗೆಯನ್ನೇ ಪಡೆಯಲಿಲ್ಲ

ಈಕೆ ಬೆಳವಣಿಗೆಯನ್ನೇ ಪಡೆಯಲಿಲ್ಲ

ಜ್ಯೋತಿಯವರ ಎತ್ತರ 62.8 ಅಥವಾ 2.06 ಅಡಿ ಯಾಗಿದೆ ಹಾಗೂ ಕೇವಲು ಐದೂವರೆ ಕೇಜಿ ಮಾತ್ರ ತೂಗುತ್ತಾರೆ. ಹುಟ್ಟಿದ ಬಳಿಕ ಈಕೆಯ ತೂಕ ಕೇವಲ ಒಂಬತ್ತು ಪೌಂಡುಗಳಷ್ಟು ಮಾತ್ರವೇ ಏರಿಕೆಯಾಗಿದೆ. ಇವರ ಈ ಸ್ಥಿತಿಗೆ ಕುಬ್ಜತನದ ಒಂದು ಬಗೆಯ ಕಾಯಿಲೆಯಾದ 'achondroplasia' ಎಂದು ಕರೆಯುತ್ತಾರೆ. ಈ ಕಾಯಿಲೆಯಿಂದಾಗಿ ಈಕೆಗೆ ಒಂದು ವರ್ಷವಾಗುತ್ತಲೇ ಈಕೆಯ ಶರೀರ ಬೆಳವಣಿಗೆಯನ್ನು ಕಳೆದುಕೊಂಡಿತು.

ಈಕೆಯ ಕಾಯಿಲೆ ಐದು ವರ್ಷದವರೆಗೂ ಗುರುತಿಸಲ್ಪಡದೇ ಹೋಯಿತು

ಈಕೆಯ ಕಾಯಿಲೆ ಐದು ವರ್ಷದವರೆಗೂ ಗುರುತಿಸಲ್ಪಡದೇ ಹೋಯಿತು

ಈಕೆಯ ಮನೆಯವರು ಮಗುವಿನ ಬೆಳವಣಿಗೆಯಾಗದಿದ್ದುದನ್ನು ಗಮನಿಸಿದರೂ ನಾಳೆ ನಾಡಿದ್ದು ಸರಿಹೋಗಬಹುದು ಎಂದು ಉಪೇಕ್ಷಿಸಿದ್ದರು. ಆದರೆ ಐದುವರ್ಷವಾದರೂ ಬೆಳವಣಿಗೆ ಕಾಣದೇ ಹೋದ ಬಳಿಕ ತಜ್ಞರಿಗೆ ತೋರಿಸಿದ ಬಳಿಕವೇ ತಜ್ಞರು ಈ ಕಾಯಿಲೆ ಇರುವುದನ್ನು ಗಮನಿಸಿದರು. ಆ ಪ್ರಕಾರ ಈಕೆ ಜೀವಮಾನ ಪೂರ್ತಿ ಯಾವುದೇ ಬೆಳವಣಿಗೆಯನ್ನು ಪಡೆಯದೇ ಈಗಿರುವ ಕಾಯವನ್ನೇ ಹೊಂದಲಿದ್ದಾಳೆ.

ಕಾಯ ಚಿಕ್ಕದಿದ್ದರೂ ತನ್ನನ್ನು ಇತರರಂತೇ ಪರಿಗಣಿಸಬೇಕು ಎಂಬ ಸಂಕಲ್ಪ

ಕಾಯ ಚಿಕ್ಕದಿದ್ದರೂ ತನ್ನನ್ನು ಇತರರಂತೇ ಪರಿಗಣಿಸಬೇಕು ಎಂಬ ಸಂಕಲ್ಪ

ಹದಿಹರೆಯಕ್ಕೆ ಬಂದ ಬಳಿಕ ಆಕೆಯ ಇತರ ಸಹಪಾಠಿಗಳೆಲ್ಲರೂ ಸಾಮಾನ್ಯ ಬೆಳವಣಿಗೆಯನ್ನು ಪಡೆದಿದ್ದರೂ ಜ್ಯೋತಿ ಯಾವುದೇ ಅಳುಕು ತೋರದೇ ಅವರಿಗೆ ಸರಿಸಮಾನವಾಗಿ ಪಾಠಗಳನ್ನು ಕಲಿಯುತ್ತಿದ್ದಳು ಹಾಗೂ ಆಕೆಗೆಂದೇ ನಾಗ್ಪುರದ ಶಾಲೆಯಲ್ಲಿ ಎತ್ತರದ ಪೀಠೋಪಕರಣವನ್ನು ನಿರ್ಮಿಸಲಾಗಿತ್ತು. ತನ್ನನ್ನು ವಿಶೇಷವಾಗಿ ಪರಿಗಣಿಸದಿರಿ, ಎಲ್ಲರಂತೆಯೇ ಪರಿಗಣಿಸಿ ಎಂದು ಆಕೆ ಕೋರಿಕೊಂಡಿದ್ದಳು.

ಸಾಮಾನ್ಯ ಜೀವನಕ್ಕೆ ಆಕೆಗಾಗಿ ಎಲ್ಲವನ್ನೂ ಬದಲಿಸಲಾಯಿತು

ಸಾಮಾನ್ಯ ಜೀವನಕ್ಕೆ ಆಕೆಗಾಗಿ ಎಲ್ಲವನ್ನೂ ಬದಲಿಸಲಾಯಿತು

ಕೇವಲ ಶಾಲೆಯ ಪೀಠೋಪಕರಣ ಮಾತ್ರವಲ್ಲ, ಆಕೆಯ ಬಟ್ಟೆ ಬರೆ, ಅಭರಣಗಳು, ಪಾದರಕ್ಷೆ, ಊಟದ ತಟ್ಟೆ, ಲೋಟ, ಚಮಚ, ನಿತ್ಯದ ಮೂಲಭೂತ ಅವಶ್ಯಕತೆಯ ಎಲ್ಲಾ ವಸ್ತುಗಳನ್ನು ಆಕೆಯ ಗಾತ್ರಕ್ಕೆ ಸೂಕ್ತವಾಗುವಂತೆ ವಿಶೇಷವಾಗಿ ನಿರ್ಮಿಸಲಾಯಿತು.

ಈಕೆಯನ್ನು ವಿಶ್ವದ ಅತಿ ಚಿಕ್ಕ ಜೀವಂತ ಮಹಿಳೆ ಎಂದು ಖಚಿತಪಡಿಸಲಾಯಿತು

ಈಕೆಯನ್ನು ವಿಶ್ವದ ಅತಿ ಚಿಕ್ಕ ಜೀವಂತ ಮಹಿಳೆ ಎಂದು ಖಚಿತಪಡಿಸಲಾಯಿತು

ಈಕೆಯ ಹದಿನೆಂಟನೆಯ ಹುಟ್ಟುಹಬ್ಬದ ದಿನದಂದೇ 2011ರ ಗಿನ್ನೆಸ್ ದಾಖಲೆಗಳಲ್ಲಿ ಈಕೆಯ ಹೆಸರನ್ನು ದಾಖಲಿಸಲಾಯಿತು. ಈ ದಾಖಲೆಯ ಪ್ರಕಾರ ಈಕೆ ಜಗತ್ತಿನ ಜೀವಂತ ಅತ್ಯಂತ ಚಿಕ್ಕ ಮಹಿಳೆ ಯಾಗಿದ್ದಾಳೆ. ಈ ದಾಖಲೆ ಇದಕ್ಕೂ ಹಿಂದೆ ಅಮೇರಿಕಾದ ಬ್ರಿಗೆಟ್ ಜೋರ್ಡಾನ್ ಎಂಬ 6.7 ಸೆ.ಮೀ ಎತ್ತರದ ಮಹಿಳೆಯದ್ದಾಗಿತ್ತು.

ತಾನು ಒಂದು ದಿನ ಬಾಲಿವುಟ್ ತಾರೆಯಾಗಬೇಕೆಂದು ಜ್ಯೋತಿ ಬಯಸುತ್ತಾಳೆ

ತಾನು ಒಂದು ದಿನ ಬಾಲಿವುಟ್ ತಾರೆಯಾಗಬೇಕೆಂದು ಜ್ಯೋತಿ ಬಯಸುತ್ತಾಳೆ

ಈ ದಾಖಲೆಯನ್ನು ಪಡೆದ ಬಳಿಕ ಈಕೆ ಇಂದು ವಿಶ್ವವಿಖ್ಯಾತಳಾಗಿದ್ದರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನ ಗುರಿಯತ್ತ ಈಕೆ ಗಮನ ಹರಿಸಿದ್ದಾಳೆ. ಬಾಲಿವುಡ್‪ನಲ್ಲಿ ನಟನೆಯ ವೃತ್ತಿ ಹೊಂದುವುದು ಈಕೆಯ ಬಯಕೆಯಾಗಿದೆ. ಈಕೆಯ ನೆಚ್ಚಿನ ಬಾಲಿವುಡ್ ನಟರೆಂದರೆ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಹಾಗೂ ಅಮಿತಾಭ್ ಬಚ್ಚನ್. ಈಕೆಯ ಕನಸು ಶೀಘ್ರವೇ ನನಸಾಗಲಿ ಎಂದು ನಾವೆಲ್ಲಾ ಹಾರೈಸೋಣ.

English summary

The Story Of The World's Shortest Woman

There are a few people in this world who make us realise that accepting our flaws and weaknesses can actually become our biggest strength. Jyoti Amge is such an inspirational example in the world. She is the shortest woman in the world and she has made her weakness her strength. According to sources, she is just 2.06 feet tall and weighs approximately 5.5 kg ONLY! Check out on some more details about the world's shortest woman, which are as mentioned below.
Story first published: Saturday, January 20, 2018, 19:46 [IST]
X
Desktop Bottom Promotion