ಈ ಖತರ್ನಾಕ್ ಬಾಲಕನ ಕಥೆ ಕೇಳಿದರೆ, ನೀವು ಬೆಚ್ಚಿಬೀಳುವಿರಿ!

Posted By: Lekhaka
Subscribe to Boldsky

ಪ್ರತಿನಿತ್ಯ ಯಾವುದಾದರೂ ದಿನಪತ್ರಿಕೆ ಅಥವಾ ನ್ಯೂಸ್ ಚಾನೆಲ್ ಹಾಕಿ ನೋಡಿದರೆ ಆಗ ನಮಗೆ ಒಂದು ಹತ್ತಕ್ಕಿಂದ ಹೆಚ್ಚು ಅಪರಾಧ ಸುದ್ದಿಗಳು ಕಾಣಿಸಿಕೊಳ್ಳುತ್ತವೆ. ಯಾಕೆ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಜನರಿಗೆ ಸರಿಯಾಗಿ ಸಿಗದೆ ಇರುವ ಶಿಕ್ಷಣವೇ ಎಂದು ನಮಗನಿಸಬಹುದು. ಆದರೆ ಇನ್ನು ಕೆಲವು ಅಪರಾಧಗಳನ್ನು ನೋಡಿದಾಗ ನಾವೇ ಬೆಚ್ಚಿಬೀಳುತ್ತೇವೆ.

ಯಾಕೆಂದರೆ ಸಣ್ಣ ಮಕ್ಕಳೇ ಇದರಲ್ಲಿ ಭಾಗಿಯಾಗಿರುತ್ತಾರೆ. ಈ ಲೇಖನವನ್ನು ಓದಿದಾಗ ಖಂಡಿತವಾಗಿಯೂ ನೀವು ಬೆಚ್ಚಿ ಬೀಳುವುದು ಖಚಿತ. ಇಲ್ಲಿ 8ರ ಹರೆಯದ ಹುಡುಗನೊಬ್ಬ ಮೂರನೇ ಕೊಲೆ ಮಾಡಿದ್ದಾನೆ. ಅಮರ್ಜೀತ್ ಸಾಡಾ ಎನ್ನುವಾತ ಈ ಸರಣಿ ಹಂತಕ. ಸಣ್ಣ ಬಾಲಕಿಯೊಬ್ಬಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಈತನನ್ನು ಬಂಧಿಸಿದ್ದಾರೆ....

ಈತ ಬಿಹಾರದವ...

ಈತ ಬಿಹಾರದವ...

ಅಮರ್ಜೀತ್ ಸಾಡಾ ಬಿಹಾರದ ಬೆಗುಸರ್ಯದಲ್ಲಿ 1998ರಲ್ಲಿ ಜನಿಸಿದಾತ. ಆತನ ಕುಟುಂಬ ಮುಸಹ್ರಿ ಗ್ರಾಮದಲ್ಲಿ ವಾಸಿಸುತ್ತಾ ಇತ್ತು. ಬಾಲಕನ ತಂದೆ ಕೂಲಿ ಕಾರ್ಮಿಕ.

ಹೆಣ್ಣು ಮಕ್ಕಳನ್ನೇ ಕೊಲ್ಲುತ್ತಿದ್ದ

ಹೆಣ್ಣು ಮಕ್ಕಳನ್ನೇ ಕೊಲ್ಲುತ್ತಿದ್ದ

ಕೆಲವೇ ತಿಂಗಳ ಶಿಶುಗಳನ್ನು ಈ ಯುವ ಸರಣಿ ಹಂತಕ ಕೊಲ್ಲುತ್ತಿದ್ದ. ಆತ ತನ್ನದೇ ಸೋದರಿಯನ್ನು ಕೊಂದ. ಆದರೆ ಪೋಷಕರು ಆತನನ್ನು ರಕ್ಷಿಸಿದ ಪರಿಣಾಮ ಮೂರನೇ ಕೊಲೆ ಮಾಡಿದ.

 ನೆರೆಮನೆಯ ಹೆಣ್ಣು ಮಗು ಆತನ ಕೊನೆಯ ಶಿಕಾರಿ!

ನೆರೆಮನೆಯ ಹೆಣ್ಣು ಮಗು ಆತನ ಕೊನೆಯ ಶಿಕಾರಿ!

ತನ್ನ ನೆರೆಮನೆಯ ಆರು ತಿಂಗಳ ಹೆಣ್ಣು ಮಗು ಆತನ ಮೂರನೇ ಶಿಕಾರಿಯಾಗಿತ್ತು. ಆತ ಈ ಮಗುವಿನ ತಲೆಗೆ ಇಟ್ಟಿಗೆಯಿಂದ ಬಡಿದು ಕೊಂದ ಬಳಿಕ ಶವವನ್ನು ಪೊದೆಗಳ ಮಧ್ಯೆ ಎಸೆದ.

ನೆರೆಮನೆಯ ಹೆಣ್ಣು ಮಗು ಆತನ ಕೊನೆಯ ಶಿಕಾರಿ!

ನೆರೆಮನೆಯ ಹೆಣ್ಣು ಮಗು ಆತನ ಕೊನೆಯ ಶಿಕಾರಿ!

ತನ್ನ ನೆರೆಮನೆಯ ಆರು ತಿಂಗಳ ಹೆಣ್ಣು ಮಗು ಆತನ ಮೂರನೇ ಶಿಕಾರಿಯಾಗಿತ್ತು. ಆತ ಈ ಮಗುವಿನ ತಲೆಗೆ ಇಟ್ಟಿಗೆಯಿಂದ ಬಡಿದು ಕೊಂದ ಬಳಿಕ ಶವವನ್ನು ಪೊದೆಗಳ ಮಧ್ಯೆ ಎಸೆದ.

ಪೊಲೀಸರು ಪ್ರಶ್ನಿಸಿದಾಗ ಬಾಯ್ಬಿಟ್ಟ

ಪೊಲೀಸರು ಪ್ರಶ್ನಿಸಿದಾಗ ಬಾಯ್ಬಿಟ್ಟ

ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ನೆರೆಮನೆಯವರು ದೂರು ನೀಡಿ ಬಾಲಕನ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಬಾಲಕಿಯನ್ನು ಕೊಂದಿರುವುದಾಗಿ ಬಾಲಕ ಒಪ್ಪಿಕೊಂಡ ಮತ್ತು ತಾನು ಆ ಮಗುವನ್ನು ಯಾವ ರೀತಿಯಲ್ಲಿ ಕೊಂದೆ ಎನ್ನುವ ಸಂಪೂರ್ಣ ವಿವರ ಕೂಡ ನೀಡಿದ.

ಕೊಲ್ಲಲು ಕಾರಣ

ಕೊಲ್ಲಲು ಕಾರಣ

ಸಣ್ಣ ಮಗುವನ್ನು ಕೊಂದಿರುವುದು ಯಾಕೆ ಎಂದು ಕೇಳಿದಾಗ, ಆತ ನಗುತ್ತಾ ತನಗೆ ಬಿಸ್ಕಿಟ್ ಬೇಕೆಂದು ಕೇಳಿದ. ಬಾಲಕನಿಗೆ ಸರಿ ಯಾವುದು ಮತ್ತು ತಪ್ಪು ಯಾವುದು ಎಂದು ತಿಳಿದಿಲ್ಲವೆಂದು ಮನೆಯವರು ಹೇಳುತ್ತಾರೆ.

ಮನಶಾಸ್ತ್ರಜ್ಞರ ಪ್ರಕಾರ....

ಮನಶಾಸ್ತ್ರಜ್ಞರ ಪ್ರಕಾರ....

ವೈದ್ಯರು ಬಾಲಕನ ಪರೀಕ್ಷೆ ಮಾಡಿದಾಗ ಆತ ನಡವಳಿಕೆ ರೋಗದಿಂದ ಬಳಲುತ್ತಿದ್ದ ಎಂದು ಹೇಳಿದ್ದಾರೆ. ಇನ್ನೊಬ್ಬರು ಮನೋಶಾಸ್ತ್ರಜ್ಞರ ಪ್ರಕಾರ ಸಾಡಾನಿಗೆ ಇತರರನ್ನು ಗಾಯಗೊಳಿಸುವುದರಲ್ಲಿ ಖುಷಿ ಸಿಗುತ್ತಿತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು ವೈದ್ಯರು ಹೇಳುವ ಪ್ರಕಾರ, ಬಾಲಕನಿಗೆ ಸರಿ ಯಾವುದು ಮತ್ತು ತಪ್ಪು ಯಾವುದು ಎನ್ನುವುದರ ಅರಿವಿಲ್ಲ. ಆದರೆ ಈ ಪ್ರಕರಣದ ಅಂತ್ಯದಲ್ಲಿ ಸರಣಿ ಹಂತಕ ನಡವಳಿಕೆ ರೋಗದಿಂದ ಬಳಲುತ್ತಿದ್ದ ಎಂದು ಪತ್ತೆಯಾಗಿದೆ. ರಾಸಾಯನಿಕ ಅಸಮತೋಲನವನ್ನು ಔಷಧಿಯಿಂದ ಸರಿಪಡಿಸಬಹುದಾಗಿ ವೈದ್ಯರು ಹೇಳಿದ್ದಾರೆ.

ಭಾರತೀಯ ಕಾನೂನಿನ ಪ್ರಕಾರ

ಭಾರತೀಯ ಕಾನೂನಿನ ಪ್ರಕಾರ

ಭಾರತೀಯ ಕಾನೂನಿನ ಪ್ರಕಾರ ಬಾಲಾಪರಾಧ ಮಾಡಿದವರ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಈ ಕಥೆಯಲ್ಲಿ ಬಾಲಕನಿಗೆ ಬೇರೆ ಹೆಸರು ನೀಡಲಾಗಿದೆ. ಈ ಬಾಲಕನನ್ನು ಅಪರಾಧಿ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಆತ ತುಂಬಾ ಸಣ್ಣ ವಯಸ್ಸಿನ ವನಾಗಿರುವ ಕಾರಣ ಶಿಕ್ಷಿಸುವಂತಿಲ್ಲ. ಆತ ಮೂರು ವರ್ಷ ಬಾಲಾಪರಾಧ ಕೇಂದ್ರದಲ್ಲಿ ಕಳೆದಿದ್ದಾನೆ ಎನ್ನಲಾಗಿದೆ. ಆದರೆ ವರದಿಗಳ ಪ್ರಕಾರ ಆತನಿಗೆ ಮಾನೋರೋಗ ತಜ್ಞರು ಚಿಕಿತ್ಸೆ ನೀಡುತ್ತಲಿದ್ದರು.

ಭಾರತೀಯ ಕಾನೂನಿನ ಪ್ರಕಾರ

ಭಾರತೀಯ ಕಾನೂನಿನ ಪ್ರಕಾರ

ಆತನಿಗೆ ನೀಡಿರುವ ಶಿಕ್ಷೆ ಮತ್ತು ಈಗ ಎಲ್ಲಿದ್ದಾನೆ ಎನ್ನುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆತ ಈಗ ನಮ್ಮೆಲ್ಲರಂತೆ ವಾಸಿಸುತ್ತಿದ್ದಾನೆ ಎನ್ನಲಾಗಿದೆ. ಸಣ್ಣ ವಯಸ್ಸಿನಲ್ಲೇ ಬುದ್ಧಿ ಯಾವ ರೀತಿಯಾಗಿರುತ್ತದೆ ಎಂದು ಕೇಳಿದರೆ ತುಂಬಾ ಅಚ್ಚರಿಯಾಗುತ್ತದೆ. ಸರಣಿ ಹಂತಕನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.

Image Courtesy

English summary

The Story Behind The World's Youngest Serial Killer

With the crime rate increasing constantly, it makes us wonder what will happen to the world. If you are keen or are interested in learning about the crime rates and facts, then this article is a perfect choice for you! Here, we bring to you the shocking details of the world's youngest serial killer who was just 8 years old when he committed his third murder! This is the story of the Indian boy Amarjeet Sada who was all about 8 years when he was nabbed by the cops for the murder of a young baby girl.
Subscribe Newsletter