ಈತ ವೃತ್ತಿಯಲ್ಲಿ ಭಿಕ್ಷುಕ, ತಿಂಗಳ ಸಂಬಳ 30 ಸಾವಿರ!, ಜೊತೆಗೆ ಮೂವರು ಪತ್ನಿಯರು!

Posted By: Deepu
Subscribe to Boldsky

ಒಂದು ವೇಳೆ ನೀವು ಜೀವನದಲ್ಲಿ ಮುಂದುವರೆಯಲು ಯಾರದ್ದಾದರೂ ಪ್ರೇರಣೆ ಪಡೆಯಬೇಕೆಂದಿದ್ದರೆ ಇಂದಿನ ಲೇಖನ ಭಿನ್ನವಾದ ಮಾಹಿತಿ ಒದಗಿಸಬಹುದು. ಏಕೆಂದರೆ ಭಾರತದ ಜಾರ್ಖಂಡ್ ರಾಜ್ಯದಲ್ಲಿರುವ ಓರ್ವ ಭಿಕ್ಷುಕ ನಿಮ್ಮ ಗಮನವನ್ನು ಬೇರೆಯೇ ಕಾರಣಗಳಿಗಾಗಿ ಸೆಳೆಯುತ್ತಾನೆ.

ಹೆಸರೇ ಸೂಚಿಸುವಂತೆ ಭಿಕ್ಷಾಟನೆ ಈತನ ವೃತ್ತಿ. ಈತ ನಗುನಗುತ್ತಾ ರೈಲ್ವೇ ನಿಲ್ದಾಣಗಳಲ್ಲಿ ಓಡಾಡುತ್ತಾ ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಾನೆ. ಇಷ್ಟೇ ಆಗಿದ್ದರೆ ಆತನಿಗೆ ಈ ಲೇಖನದಲ್ಲಿ ಜಾಗ ಸಿಗುತ್ತಿರಲಿಲ್ಲ. ಏಕೆಂದರೆ ಭಿಕ್ಷೆಯ ಮೂಲಕ ಆತ ಸಂಪಾದಿಸುವ ಹಾಗೂ ಈತನ ಜೀವನ ನಡೆಯುತ್ತಿರುವ ಬಗ್ಗೆ ಅರಿತಾಗ ಮಾತ್ರ ಈತನ ಯೋಗ್ಯತೆಯ ಬಗ್ಗೆ ಅರಿವಾಗುತ್ತದೆ. ಬನ್ನಿ, ಜನರು ಅಕ್ಕರೆಯಿಂದಿಟ್ಟ "ಛೋಟು ಬಾರಾಯಿಕ್" ಎಂಬ ಈ ಭಿಕ್ಷುಕನ ಬಗ್ಗೆ ಅರಿಯೋಣ...

ಈಗ ಸೊಂಟದ ಕೆಳಗಿನಿಂದ ವಿಕಲಾಂಗ

ಈಗ ಸೊಂಟದ ಕೆಳಗಿನಿಂದ ವಿಕಲಾಂಗ

ಭಿಕ್ಷೆ ಬೇಡಲು ಭಿಕ್ಷುಕರಿಗೆ ಬೇಕಾದ ಅರ್ಹತೆ ಎಂದರೆ ತೋರಿಸಬಹುದಾದ ಅಂಗವೈಕಲ್ಯ. ಯಾರಲ್ಲಿ ಏನಿಲ್ಲವೋ ಅದನ್ನೇ ದೊಡ್ಡದಾಗಿ ತೋರಿಸಿಯೇ ಭಿಕ್ಷೆ ಬೇಡುವುದು ಭಿಕ್ಷೆ ಹೆಚ್ಚು ಬೀಳುವ ಯಶಸ್ಸಿನ ಮಂತ್ರ. ಈ ಛೋಟುವಿನ ಸೊಂಟದ ಕೆಳಗಿನಿಂದ ಅಂಗವಿಕಲನಾಗಿದ್ದು ಇದನ್ನೇ ತೋರಿಸಿ ಭಿಕ್ಷೆ ಬೇಡುತ್ತಾನೆ. ಆದರೆ ಭಿಕಾರಿ ಎಂಬ ಗುಣವಾಚಕ ಇವನಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಈತ ಸೌಂದರ್ಯ ಹಾಗೂ ಮಾರ್ಜಕ ವಸ್ತುಗಳ ವ್ಯಾಪಾರಿ ಸಂಘಟನೆಯ ಸದಸ್ಯ ಹಾಗೂ ಒಂದು ಚಿಕ್ಕ ಅಂಗಡಿಯ ಮಾಲೀಕನೂ ಆಗಿದ್ದಾನೆ. ಹಾಗೂ, ಎಲ್ಲರೂ ಅಸೂಯೆಗೊಳಗಾಗುವಂತೆ ಮೂವರು ಮಹಿಳೆಯರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾನೆ.

ಈತನ ಸಂಪಾದನೆ

ಈತನ ಸಂಪಾದನೆ

ಈತ ಎಷ್ಟು ಕಮಾಯಿ ಮಾಡುತ್ತಾನೆ ಎಂದು ಕೇಳಿದಾದ ತಾನು ತಿಂಗಳಿಗೆ ಏನಿಲ್ಲವೆಂದರೂ ಮೂವತ್ತು ಸಾವಿರದಿಂದ ನಾಲ್ಕು ಲಕ್ಷದವರೆಗೂ ಪ್ರತಿ ತಿಂಗಳಿಗೆ ಸಂಪಾದಿಸುತ್ತೇನೆ. ಮೂವರು ಪತ್ನಿಯರ ಖರ್ಚುಗಳನ್ನು ನಿಭಾಯಿಸಿಯೂ ಸಾಕಷ್ಟು ಉಳಿತಾಯ ಮಾಡಿರುವ ಕಾರಣ ಸಿಂಡೇಗಾ ಜಿಲ್ಲೆಯ ಬಾಂಡಿ ಎಂಬ ಗ್ರಾಮದಲ್ಲಿ ಪಾತ್ರೆ ಅಂಗಡಿಯೊಂದನ್ನೂ ತೆರೆದಿದ್ದಾನೆ. ಪ್ರಸ್ತುತ ಈತನ ಪತ್ನಿಯರಲ್ಲಿ ಒಬ್ಬಳು ಈ ಅಂಗಡಿಯನ್ನು ನಡೆಸುತ್ತಿದ್ದಾಳೆ.

ಈತನ ಜೀವನ ಸುಖಕರವಾಗಿದೆ

ಈತನ ಜೀವನ ಸುಖಕರವಾಗಿದೆ

ಭಿಕ್ಷಾಟನೆಯಿಂದ ಬರುವ ನಿಯಮಿತ ಆದಾಯದೊಂದಿಗೇ ನಿಯಮಿತವಾಗಿ ಬರುವ ಅಂಗಡಿಯ ಆದಾಯವನ್ನು ಸೇರಿಸಿ ಎಲ್ಲರೂ ಹೊಟ್ಟೆಕಿಚ್ಚು ಪಡುವಷ್ಟು ಉತ್ತಮವಾದ ಆದಾಯವನ್ನು ಹೊಂದಿರುವ ಕಾರಣ ಛೋಟುವಿಗೆ ಯಾವುದೇ ಚಿಂತೆಯಿಲ್ಲದೇ ಸುಖಕರ ಜೀವನ ನಡೆಸಲು ಸಾಧ್ಯವಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ವಸ್ತುಗಳನ್ನು ವಿಲೇವಾರಿ ಮಾಡುವ ವಿತರಕನೂ ಆಗಿದ್ದಾನೆ. ತಾನು ಸಾಚಾ ಎಂದು ತೋರಿಸಲು ಅಧಿಕೃತ ಗುರುತುಪತ್ರವನ್ನೂ ಬೇಕಿದ್ದರೆ ಈತ ತೋರಿಸುತ್ತಾನೆ.

ಈತನ ಜೀವನ ಹೇಗೆ ಪ್ರಾರಂಭವಾಯಿತು?

ಈತನ ಜೀವನ ಹೇಗೆ ಪ್ರಾರಂಭವಾಯಿತು?

ಛೋಟುವಿನ ಅಂಗವೈಕಲ್ಯ ಆತನ ಬಾಲ್ಯದಿಂದಲೇ ಪ್ರಾರಂಭವಾಗಿತ್ತು. ಮನೆಯ ಕಿತ್ತು ತಿನ್ನುವ ಬಡತನ ತನ್ನನ್ನು ಭಿಕ್ಷಾಟನೆಗೆ ಇಳಿಸಿತು ಎನ್ನುವ ಛೋಟು ರೈಲು ನಿಲ್ದಾಣದಲ್ಲಿ ಭಿಕ್ಷಾಟನೆಗೆ ಪ್ರಾರಂಭಿಸಿದ್ದ. ಸತತಗಳಿಕೆ ಮುಂದುವರೆಯುತ್ತಾ ಹೋದಂತೆ ದಿನಕ್ಕೆ ಸಾವಿರದಿಂದ ಸಾವಿರದಿನ್ನೂರು ರೂಪಾಯಿ ದಾಟತೊಡಗಿತೋ ಹಾಗೂ ಎಲ್ಲಾ ಗಳಿಕೆಯನ್ನು ಮನೆಯ ಖರ್ಚುಗಳಿಗೆ ಮೀಸಲಾಗಿರಿಸತೊಡಗಿದನೋ ಆಗ ಸಮಾಜವೂ ಈತನ ಬಗ್ಗೆ ಸಹಾನುಭೂತಿ ಹಾಗೂ ಸಹಕಾರ ನೀಡತೊಡಗಿದರು

ಈತನ ಜೀವನ ಹೇಗೆ ಪ್ರಾರಂಭವಾಯಿತು?

ಈತನ ಜೀವನ ಹೇಗೆ ಪ್ರಾರಂಭವಾಯಿತು?

ಈ ಗಳಿಕೆಯನ್ನು ತೋರಿಸಿಯೇ ಮೂರು ಮದುವೆಯೂ ಆಯಿತು. ಈಗ ಇವರದ್ದು ಒಂದು ಸುಖೀ ಸಂಸಾರ. ಈ ಬಗ್ಗೆ ನಿಮಗೇನೆನಿಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

English summary

the-indian-beggar-who-earns-30000-monthly-and-has-3-wives

If you are looking out for an inspiration or a motivation to go ahead and do something in life, then this article can surely put you in a fix.A beggar in Jharkhand, India, is a regular at his task of begging on the platform. He is mostly seen smiling at people and making a living by begging on all the platforms of the railway station. A little chat and revelation from his side about his person life can surely give complex to many youths out there. So, check out to know more about the lifestyle of the beggar named "Chhotu Baraik."