ಈ ಮಹಿಳೆ ಹೇಳುತ್ತಿರುವುದು ನಿಜವೇ? ಹೀಗೆಲ್ಲಾ ಆಗಲು ಸಾಧ್ಯವೇ?

Posted By: Arshad
Subscribe to Boldsky

ಭೂತ ಪ್ರೇತಗಳಲ್ಲಿ ನಿಮಗೆ ನಂಬಿಕೆ ಇದೆಯೇ? ಈ ಪ್ರಶ್ನೆಗೆ ಭಿನ್ನ ವ್ಯಕ್ತಿಗಳಿಂದ ಭಿನ್ನ ಉತ್ತರ ದೊರಕಬಹುದು. ಆದರೆ ವಿಜ್ಞಾನದ ಪ್ರಕಾರ ಭೂತ ಪ್ರೇತಗಳ ಇರುವಿಕೆಗೆ ಯಾವುದೇ ಆಧಾರವಿಲ್ಲ ಹಾಗೂ ಇವುಗಳ ಇರುವಿಕೆಯನ್ನು ಸಾಬೀತುಪಡಿಸಲು ವೈಜ್ಞಾನಿಕವಾಗಿ ಸಾಧ್ಯವೂ ಇಲ್ಲ.

ಆದರೆ ಓರ್ವ ಮಹಿಳೆ ಭೂತಗಳಿರುವುದು ನಿಜ ಎಂದು ಪ್ರತಿಪಾದಿಸುವುದು ಮಾತ್ರವಲ್ಲ, ರಾತ್ರಿ ತನ್ನೊಂದಿಗೆ ಕೂಡುತ್ತವೆ ಸಹಾ ಎಂದು ಹೇಳಿಕೊಂಡಿದ್ದಾಳೆ. ನಂಬಲಿಕ್ಕೆ ಕಷ್ಟವಾಗಿರುವ ಈ ಮಾಹಿತಿಯಲ್ಲಿ ಆಕೆ ತನ್ನೊಂದಿಗೆ ಒಂದಲ್ಲ, ಎರಡಲ್ಲ, ಸುಮಾರು ಇಪ್ಪತ್ತರಷ್ಟು ಭೂತಗಳು ಕೂಡುತ್ತವೆ, ತನಗೆ ಇದು ತುಂಬಾ ಇಷ್ಟವಾಗುತ್ತದೆ ಎಂದೂ ಹೇಳಿಕೊಂಡಿದ್ದಾಳೆ. ಬನ್ನಿ, ಈ ವಿಚಿತ್ರ ವಿದ್ಯಮಾನದ ಬಗ್ಗೆ ಅರಿಯೋಣ...

ಈಕೆ

ಈಕೆ "ಆಧ್ಯಾತ್ಮಿಕ ಮಾರ್ಗದರ್ಶನ ಸಲಹಾಕಾರ್ತಿ"ಯಾಗಿದ್ದಾಳೆ

ಇಂಗ್ಲೆಂಡಿನ ಬ್ರಿಸ್ಟಲ್ ರಾಜ್ಯದಲ್ಲಿರುವ ಅಮಿಥೈಸ್ಟ್ ರಿಯಾಲ್ಮ್ ಎಂಬ ಮಹಿಳೆಯೇ ಈ ವ್ಯಕ್ತಿಯಾಗಿದ್ದು ತನ್ನನ್ನು ತಾನು"ಆಧ್ಯಾತ್ಮಿಕ ಮಾರ್ಗದರ್ಶನ ಸಲಹಾಕಾರ್ತಿ" (spiritual guidance counselor) ಎಂದು ಹೇಳಿಕೊಳ್ಳುತ್ತಿದ್ದಾಳೆ. ಕಳೆದ ಹನ್ನೆರಡು ವರ್ಷಗಳಿಂದಲೂ ತನ್ನನ್ನು ಕೆಲವು ಭೂತಗಳು ಕೂಡುತ್ತವೆ ಹಾಗೂ ಈ ಅನುಭವ ಎಷ್ಟು ಸುಖಕರವಾಗಿರುತ್ತದೆಂದರೆ ಇನ್ನು ಮುಂದೆ ತನಗೆ ಪುರುಷನೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳುವುದೂ ಅಗತ್ಯವಿಲ್ಲದಾಗಿದೆ ಎಂದೂ ಹೇಳಿಕೊಳ್ಳುತ್ತಾಳೆ.

ಈಕೆಯ ಪ್ರಥಮ ಅನುಭವ ಹೀಗಿತ್ತು

ಈಕೆಯ ಪ್ರಥಮ ಅನುಭವ ಹೀಗಿತ್ತು

ಕೆಲ ವರ್ಷಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ವ್ಯಕ್ತಿಯೊಂದಿಗೆ ಒಂದು ಹೊಸ ಮನೆಗೆ ಆಗತಾನೇ ಬಂದು ನೆಲೆಸಿದ್ದಾಗ ಆಕೆ ತನ್ನ ಮೊದಲ ಅನುಭವವನ್ನು ಪಡೆದಳು. ಆ ಮನೆಯಲ್ಲಿ ಖಂಡಿತವಾಗಿಯೂ ಭೂತಗಳ ಇರುವಿಕೆ ಇದ್ದುದು ಆಕೆಗೆ ಖಚಿತವಾಗಿದ್ದು ಭೂತವೊಂದು ಆಕೆಯ ಬಗ್ಗೆ ತನ್ನ ಕುತೂಹಲವನ್ನು ವ್ಯಕ್ತಪಡಿಸಿತ್ತು ಎಂದು ಹೇಳುತ್ತಾಳೆ.

ಭೂತ ತನ್ನ ಶಕ್ತಿಯನ್ನು ಪ್ರದರ್ಶಿಸಲು ಹಾಗೂ ಕೂಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ

ಭೂತ ತನ್ನ ಶಕ್ತಿಯನ್ನು ಪ್ರದರ್ಶಿಸಲು ಹಾಗೂ ಕೂಡಲು ಹೆಚ್ಚು ಸಮಯ ಬೇಕಾಗಿರಲಿಲ್ಲ

ಇದು ಹೇಗೆ ಪ್ರಾರಂಭವಾಯಿತು ಎಂದು ಹೇಳುತ್ತಾಳೆ: "ಇದು ಒಂದು ಶಕ್ತಿಯ ರೂಪದಲ್ಲಿ ಪ್ರಾರಂಭವಾಯಿತು. ಬಳಿಕ ಕೂಡುವವರೆಗೂ ಈ ಶಕ್ತಿ ಮುಂದುವರೆಯಿತು. ನನ್ನ ತೊಡೆ, ಎದೆ ಹಾಗೂ ಕುತ್ತಿಗೆಯ ಮೇಲೆ ಒತ್ತಡ ಬೀಳುತ್ತಿತ್ತು" ಎಂದು ತನ್ನ ಮೊದಲ ಅನುಭವವನ್ನು ಹೇಳಿಕೊಳ್ಳುತ್ತಾಳೆ. "ಆದರೆ ಆ ಸಮಯದಲ್ಲಿ ನಾನು ಸುರಕ್ಷಿತಳಾಗಿದ್ದೆ ಹಾಗೂ ಭೂತದೊಂದಿಗೆ ಕೂಡಿದೆ" ಎಂದು ವಿವರಿಸುತ್ತಾಳೆ.

ಈಕೆ ಭೂತವನ್ನೇ ಕಾಮಕ್ಕೆ ಪ್ರಚೋದಿಸಿದ್ದಳು

ಈಕೆ ಭೂತವನ್ನೇ ಕಾಮಕ್ಕೆ ಪ್ರಚೋದಿಸಿದ್ದಳು

ಈ ಮಾಹಿತಿ ಕೊಂಚ ವಿಚಿತ್ರ ಎನಿಸಬಹುದು, ಆದರೆ ಈ ಮಹಿಳೆ ಹೇಳಿಕೊಳ್ಳುವ ಪ್ರಕಾರ ಈಕೆಯೇ ಭೂತವನ್ನು ಕೂಡಲು ಬರುವಂತೆ ಪ್ರಚೋದಿಸಿದ್ದಳು. ಹೇಗೆ ಗೊತ್ತೇ? ಆಕೆಯ ಪ್ರಿಯಕರ ಮನೆಯಲ್ಲಿಲ್ಲದ ಸಮಯದಲ್ಲಿ ಇನ್ನೊಂದು ಕೋಣೆಯಲ್ಲಿ ಆಕೆ ತೆಳ್ಳಗಿನ ಒಳ ಉಡುಪುಗಳನ್ನು ಧರಿಸಿ ಭೂತಕ್ಕೆ ಕಾಯತೊಡಗಿದಳು. ತುಂಬಾ ಹೊತ್ತು ಕಾದು ಇನ್ನೇನು ನಿದ್ದೆ ಹತ್ತುತ್ತಿದೆ ಎನ್ನುವ ಸಮಯದಲ್ಲಿ ಭೂತದ ಆಗಮನವಾಯಿತು.

ಈಕೆ ಭೂತದ ಕ್ರಿಯೆಯನ್ನು ಅನುಭವಿಸಬಲ್ಲವಳಾಗಿದ್ದಳು

ಈಕೆ ಭೂತದ ಕ್ರಿಯೆಯನ್ನು ಅನುಭವಿಸಬಲ್ಲವಳಾಗಿದ್ದಳು

ಭೂತದ ಕ್ರಿಯೆಯನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ. ಏಕೆಂದರೆ ಈಕೆಗೆ ಏನೂ ಕಾಣುತ್ತಿರಲಿಲ್ಲ ಆದರೆ ಭೂತದ ಇರುವಿಕೆಯನ್ನು ಮಾತ್ರ ಆಕೆ ಗ್ರಹಿಸಬಲ್ಲವಳಾಗಿದ್ದಳು. ಈ ಕೂಟ ಸುಮಾರು ಮೂರು ವರ್ಷಗಳವರೆಗೆ ಯಾರ ಕಣ್ಣಿಗೂ ಬೀಳದಂತೆ ಮುಂದುವರೆಯಿತು, ಬಳಿಕ ಈ ಕ್ರಿಯೆ ನಡೆಸುತ್ತಿದ್ದ ಸಮಯದಲ್ಲಿ ಆಕೆ ಒಂದು ಬಾರಿ ಸಿಕ್ಕಿ ಬಿದ್ದಳು.

ಆಕೆಯ ಪ್ರಿಯಕರ ಈ ಕಳ್ಳಕೂಟವನ್ನು ಕಂಡು ಹಿಡಿದ!

ಆಕೆಯ ಪ್ರಿಯಕರ ಈ ಕಳ್ಳಕೂಟವನ್ನು ಕಂಡು ಹಿಡಿದ!

ಒಂದು ದಿನ ಯಾವುದೋ ಕಾರಣಕ್ಕೆ ನಿಗದಿತ ಸಮಯಕ್ಕೂ ಮೊದಲೇ ಮನೆಗೆ ಹಿಂದಿರುಗಿದ ಆಕೆಯ ಪ್ರಿಯಕರ ಈಕೆ ಈ ಕ್ರಿಯೆಯಲ್ಲಿ ನಿರತಳಾಗಿದ್ದಾಗಲೇ ಕಂಡು ಹಿಡಿದ. ಈ ಕೋಣೆಯಲ್ಲಿ ಯಾವುದೋ ವ್ಯಕ್ತಿಯ ನೆರಳನ್ನು ಆಕೆಯ ಪ್ರಿಯಕರನಿಗೆ ಕಂಡಂತಾಯಿತಂತೆ. ನೆರಳು ಭೂತದ್ದೇ ಇರಲಿ, ವ್ಯಕ್ತಿಯದ್ದೇ ಇರಲಿ, ಅನುಮಾನ ಬರುವುದು ಸಹಜವಲ್ಲವೇ? ಇಲ್ಲೂ ಹೀಗೇ ಆಯಿತು. ಆದರೆ ಎಲ್ಲರ ನಂಬಿಕೆಗೆ ವ್ಯತಿರಿಕ್ತವಾಗಿ ಈ ಮಹಿಳೆ ತನ್ನ ಪ್ರಿಯಕರನನ್ನು ತ್ಯಜಿಸಿ ಭೂತದೊಂದಿಗೇ ಸಂಸಾರ ಮುಂದುವರೆಸಲು ನಿರ್ಧರಿಸಿದಳು.

ಬಳಿಕ, ಈಕೆ ಸುಮಾರು ಇಪ್ಪತ್ತು ಭೂತಗಳೊಂದಿಗೆ ಕೂಡಿದಳು

ಬಳಿಕ, ಈಕೆ ಸುಮಾರು ಇಪ್ಪತ್ತು ಭೂತಗಳೊಂದಿಗೆ ಕೂಡಿದಳು

ಅಂದಿನಿಂದ ಸುಮಾರು ಇಪ್ಪತ್ತು ಭೂತಗಳು ತನ್ನೊಂದಿಗೆ ಕೂಡಿವೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಅಲ್ಲದೇ ಭೂತದ ಮಗುವಿಗೆ ತಾಯಿಯಾಗುವ ಕನಸನ್ನೂ ಕಾಣುತ್ತಿದ್ದಾಳೆ. ಈ ಬಗ್ಗೆ ಆಕೆ ಕೊಂಚ ಸಂಶೋಧನೆಯನ್ನೂ ನಡೆಸಿದ್ದು ಭೂತದ ಕೂಡುವಿಕೆಯಿಂದ ಗರ್ಭ ಧರಿಸುವ ಸಾಧ್ಯತೆಯನ್ನೂ ಪರಿಗಣಿಸುತ್ತಿದ್ದಾಳೆ.

ಈಕೆ ಏನೋ ಹೇಳುತ್ತಿದ್ದಿರಬಹುದು, ಆದರೆ ವಾಸ್ತವವೇನು?

ಈಕೆ ಏನೋ ಹೇಳುತ್ತಿದ್ದಿರಬಹುದು, ಆದರೆ ವಾಸ್ತವವೇನು?

ಈ ಬಗ್ಗೆ ಸಂಶೋಧಕರು ಹೇಳುವ ಪ್ರಕಾರ ಇದೊಂದು ನಿದ್ದೆಯಲ್ಲಿ ಆಗುವ ಕೆಲವಾರು ಕ್ರಮಭಂಗಗಳ ಪರಿಣಾಮವಾಗಿದೆ. ಈ ಸ್ಥಿತಿಯಲ್ಲಿ ತಾತ್ಕಾಲಿಕ ಪಾರ್ಶ್ವವಾಯು ತಗಲುತ್ತದೆ ಹಾಗೂ ಕೆಲವಾರು ಭ್ರಮೆ ಹಾಗೂ ಭ್ರಾಂತಿಗಳು ಎದುರಾಗುತ್ತವೆ. ಮನದಾಳದಲ್ಲಿ ಹುದುಗಿದ್ದ ಅವ್ಯಕ್ತ ಭಾವನೆಗಳು ಕಲ್ಪನೆಯ ರೂಪದಲ್ಲಿ ಕಾಣತೊಡಗುತ್ತವೆ. ಇದನ್ನೇ ವೈದ್ಯವಿಜ್ಞಾನದಲ್ಲಿ sleep paralysis disorders ಎಂದು ಕರೆಯುತ್ತಾರೆ. ಆಕೆ ಪಡೆಯುತ್ತಿರುವ ಈ ಅನುಭವಗಳೆಲ್ಲವೂ ಈ ಕಲ್ಪನೆಗಳೇ ಆಗಿವೆ ಹೊರತು ಭೂತ ಬಂದು ಕೂಡುವುದು ಎಲ್ಲವೂ ಸುಳ್ಳು ಎಂದು ತಿಳಿಸುತ್ತಾರೆ.ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

Images Source

English summary

She Claims Ghosts Get Intimate With Her While She Sleeping

Do you believe in ghosts? Well, the answers according to science will confuse us and not get the actual facts about their existence. But a woman not only claims that the ghosts are present, she also claims that they make love to her! Well, yes, you read that right, the most shocking bit that she further revealed was that around 20 ghosts have got physical with her and she simply loves the experience! Check out this bizarre story of the woman who claims that ghosts make love to her.