For Quick Alerts
ALLOW NOTIFICATIONS  
For Daily Alerts

  ರಾಶಿಭವಿಷ್ಯ: ಈ ನಾಲ್ಕು ರಾಶಿಗಳ ವ್ಯಕ್ತಿಗಳು ಸಾಮಾನ್ಯರಲ್ಲ!!

  By Hemanth Amin
  |

  ಜೀವನದಲ್ಲಿ ಪ್ರತಿಯೊಬ್ಬರಿಗೂ ಯಶಸ್ಸು ಎನ್ನುವುದು ಸಿಗುವುದಿಲ್ಲ. ಕೆಲವರಿಗೆ ಯಶಸ್ಸು ಅದಾಗಿಯೇ ಹುಡುಕಿಕೊಂಡು ಬಂದರೆ ಇನ್ನು ಕೆಲವರು ತುಂಬಾ ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುವರು. ಕೆಲವರು ರಾಶಿಯ ಫಲವಾಗಿ ಯಶಸ್ಸು ಕೂಡ ಪಡೆಯುವರು. ಇಂತಹ ಕೆಲವೊಂದು ಶಕ್ತಿಶಾಲಿ ರಾಶಿಗಳ ಬಗ್ಗೆ ಈ ಲೇಖನದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.

  ಇವರ ಯಶಸ್ಸಿಗೆ ಕೆಲವೊಂದು ರಹಸ್ಯವಾದ ಶಕ್ತಿಗಳಿವೆ. ಅವು ಯಾವುದೆಂದು ನೀವು ತಿಳಿದುಕೊಂಡರೆ ನಿಮಗೂ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ರಾಶಿಯವನ್ನು ಶಕ್ತಿಯ ರಹಸ್ಯ ತಿಳಿದುಕೊಂಡು ಅದನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಚಿತ....

  ಮೇಷ: ಮಾ.21- ಎಪ್ರಿಲ್ 19

  ಮೇಷ: ಮಾ.21- ಎಪ್ರಿಲ್ 19

  ರಾಶಿಚಕ್ರಗಳಲ್ಲಿ ಮೇಷ ರಾಶಿಯು ತುಂಬಾ ಶಕ್ತಿಶಾಲಿ ರಾಶಿಯಾಗಿದೆ. ಇವರಲ್ಲಿ ಶಕ್ತಿ ಹಾಗೂ ಅತ್ಯುತ್ಸಾಹವು ಕುದಿಯುತ್ತಿರುವುದು. ಇವರು ತುಂಬಾ ತೀಕ್ಷ್ಣ ಹಾಗೂ ಅನ್ವೇಷಿಸುವವರು. ಇವರಲ್ಲಿ ಇರುವಂತಹ ಅದಮ್ಯ ಸ್ಫೂರ್ತಿಯು ಯಾವುದೇ ರೀತಿಯ ಅಡೆತಡೆಗಳನ್ನು ಪುಡಿ ಮಾಡಬಲ್ಲದು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಸ್ವಾವಲಂಬಿಗಳು ಮತ್ತು ಇದರಂದಾಗಿ ಅವರಿಗೆ ಸ್ವರಕ್ಷಣೆಯು ತಿಳಿದಿರುವುದು. ಮೇಷ ರಾಶಿಯವರು ಶಕ್ತಿಯು ಅವರ ನಾಯಕತ್ವದ ಗುಣಗಳು, ನಿರ್ಭೀತಿಯ ಸ್ವಭಾವ ಮತ್ತು ಕೆಲಸ ಮಾಡುವ ಶಕ್ತಿಯನ್ನು ಅವಲಂಬಿಸಿದೆ.

  ಮೇಷ: ಮಾ.21- ಎಪ್ರಿಲ್ 19

  ಮೇಷ: ಮಾ.21- ಎಪ್ರಿಲ್ 19

  ಇನ್ನು ರಾಶಿಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ರಾಶಿ ಮೇಷ. ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಚೈತನ್ಯವನ್ನು ಹೊಂದಿರುತ್ತಾರೆ. ಅವರ ನಾಯಕತ್ವ ಕೌಶಲ್ಯಗಳನ್ನು ಬಹಳ ಸುಂದರವಾಗಿ ನಿಭಾಯಿಸಬಲ್ಲರು. ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಬಹಳ ಸ್ವಾಭಿಮಾನಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಹಿರಿಯರು ಹಾಗೂ ದೈವ ಶಕ್ತಿಯಲ್ಲಿ ನಂಬಿಕೆ ಇಡುವ ಇವರು ಮುಂಗೋಪಿಗಳು ಹೌದು. ಅಷ್ಟೇ ಅಲ್ಲದೆ ಮೇಷ ರಾಶಿಯವರು ಹೆಚ್ಚು ಧೈರ್ಯಶಾಲಿಗಳಾಗಿದ್ದು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸದೆಯೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿದ್ದಾರೆ. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಸ್ವಭಾವವನ್ನು ಈ ರಾಶಿಯವರು ಹೊಂದಿಲ್ಲ. ಆ ತಿಂಗಳು ಅವರ ದಾರಿಗೆ ಯಾವ ವಿಷಯ ಬರುತ್ತದೆ ಎಂಬುದು ಮುಖ್ಯವಾಗಿರುತ್ತದೆ. ತಾವೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇವರು ಸಿದ್ಧಹಸ್ತರಾಗಿದ್ದು ಪ್ರತಿಯೊಂದು ಕೆಲಸವನ್ನು ಇವರು ಆರಂಭಿಸಿ ಅದನ್ನು ಮುಗಿಸುವಲ್ಲಿ ಪ್ರವೀಣರಾಗಿದ್ದಾರೆ.

  ಅದೃಷ್ಟ ದಿನಾಂಕಗಳು ಮತ್ತು ಬಣ್ಣಗಳು

  ಮೇಷ ರಾಶಿಗೆ ಅನುಗುಣವಾಗಿ ಅದೃಷ್ಟ ಸಂಖ್ಯೆಗಳೆಂದರೆ: 6, 18, 41, 77 and 83. ಅದೃಷ್ಟ ದಿನಾಂಕಗಳು: 2, 3, 11, 12, 13, 21, 22, 29, 30 ಮತ್ತು 31. ಅದೃಷ್ಟ ಬಣ್ಣಗಳು ಬಿಳಿ, ಲಿಂಬೆ ಹಸಿರು ಅಥವಾ ಎಮರಾಲ್ಡ್ ಹಸಿರು.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ವೃಶ್ಚಿಕ ರಾಶಿಯವರು ತುಂಬಾ ಪ್ರಬಲ ವ್ಯಕ್ತಿತ್ವದೊಂದಿಗೆ ಜನಿಸಿರುವರು. ಇವರಲ್ಲಿರುವಂತಹ ತೀವ್ರತೆಯು ಬೇರೆಯವರಿಗಿಂತ ಇವರನ್ನು ಭಿನ್ನವಾಗಿಡುವುದು. ಅದರಲ್ಲೂ ಭಾವನಾತ್ಮಕವಾಗಿ. ಇವರು ತಮ್ಮ ಇಚ್ಛಿಸಿದನ್ನು ಪಡೆದೇ ತೀರುವ ಜಾಯಮಾನದವರು. ವೃಶ್ಚಿಕ ರಾಶಿಯವರು ಬಲು ಬದ್ಧತೆ, ಸ್ಥಿರತೆ ಮತ್ತು ಗುರಿ ಸಾಧಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ.

  ವೃಶ್ಚಿಕ: ಅ.24-ನ.22

  ವೃಶ್ಚಿಕ: ಅ.24-ನ.22

  ಸಾಮಾನ್ಯವಾಗಿ ರಾಶಿಗಳಲ್ಲಿ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವಗಳು ಇರುತ್ತವೆ. ಇದರಲ್ಲಿ ಕೆಲವು ಒಳ್ಳೆಯದಾಗಿದ್ದರೆ, ಇನ್ನು ಕೆಲವು ಕೆಟ್ಟದ್ದು ಎನ್ನಬಹುದು. ಅದರಲ್ಲೂ ವೃಶ್ಚಿಕ ರಾಶಿಯವರ ಜತೆಗೆ ನೀವಿದ್ದರೆ ಆಗ ಶೀತ ಕಂಪನಗಳ ಅನುಭವ ನಿಮಗೆ ಆಗಿರಬಹುದು. ವೃಶ್ಚಿಕ ರಾಶಿಯವರು ತುಂಬಾ ಲೆಕ್ಕಾಚಾರದವರು ಮತ್ತು ತಾವು ಯಾರೊಂದಿಗೆ ಸ್ನೇಹ ಮಾಡಬೇಕೆಂದು ಕೂಡ ಅವರು ತುಂಬಾ ಯೋಚಿಸುವರು. ರಾಶಿಗಳಲ್ಲಿ ವೃಶ್ಚಿಕ ರಾಶಿಯವರು ತುಂಬಾ ಪ್ರಭಾವಶಾಲಿಗಳು ಎಂಧು ನಂಬಲಾಗಿದೆ. ಅವರ ನಡತೆಯು ಇದನ್ನು ತೋರಿಸಿಕೊಡುವುದು. ಅವರ ಒಳಮನಸ್ಸನ್ನು ತಿಳಿಯಬೇಕಾದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನು ಅವರು ನಂಬಿದರೆ ಸಂಪೂರ್ಣ ಹೃದಯದಿಂದ ನಂಬುವರು. ಇದರಿಂದಾಗಿ ಇತರ ರಾಶಿಯವರಿಗಿಂತ ಅವರು ತುಂಬಾ ಭಿನ್ನ. ವೃಶ್ಚಿಕ ರಾಶಿಯವರು ತುಂಬಾ ಬದ್ಧತೆ ಇರುವವರು ಮತ್ತು ಅವರಿಗೆ ತಮ್ಮ ಕೆಲಸದ ಬಗ್ಗೆ ಉತ್ಸಾಹ ಇರುವುದು. ಅವರು ಮಾಡುವಂತಹ ಯಾವುದೇ ಕೆಲಸದಲ್ಲಾದರೂ ಅವರು ಭಾವನಾತ್ಮಕವಾಗಿ ತೊಡಗಿಕೊಳ್ಳುವರು. ಇದರಿಂದಾಗಿ ಅವರು ಮಾಡುವಂತಹ ಪ್ರತಿಯೊಂದು ಕೆಲಸವು ಅದ್ಭುತವಾಗಿರುವುದು. ಅವರಲ್ಲಿ ಯಾವತ್ತೂ ಹೋರಾಡುವಂತಹ ಛಾತಿ ಇರುವುದು. ಸೋಲೊಪ್ಪಿಕೊಳ್ಳುವುದು ಅವರ ಜಾಯಮಾನದಲ್ಲೇ ಇಲ್ಲ. ತಮ್ಮ ಗುರಿ ಮುಟ್ಟಲು ಅವರಿಗೆ ವಿಳಂಬ ಅಥವಾ ಅಡೆತಡೆಯುಂಟಾದರೆ ಅವರು ಚಿಂತಿಸಲ್ಲ. ಅವರು ಯಾವಾಗಲೂ ತಮ್ಮ ಗುರಿ ತಲುಪಲು ಪ್ರಯತ್ನಿಸುತ್ತಲೇ ಇರುವರು. ಈ ರಾಶಿಯವರನ್ನು ಒಂದೇ ಪದದಲ್ಲಿ ಹೇಳುವುದಾದರೆ ಇವರು ತುಂಬಾ ಸ್ವಾವಲಂಬಿಗಳು. ಈ ರಾಶಿಯವರು ತಮ್ಮ ಕೆಲಸಕ್ಕಾಗಿ ಬೇರೆ ಯಾರನ್ನೂ ನಂಬಿ ಕೂರಲ್ಲ. ಅವರು ತಾವಾಗಿಯೇ ಕೆಲಸ ಮಾಡುವರು ಮತ್ತು ತಮಗೆ ಸಾಧ್ಯವಿರುವುದನ್ನು ಸಾಧಿಸಿಯೇ ತೀರುವರು.

  ಕರ್ಕಾಟಕ: ಜೂ.21- ಜುಲೈ 22

  ಕರ್ಕಾಟಕ: ಜೂ.21- ಜುಲೈ 22

  ಕರ್ಕಾಟಕ ರಾಶಿಯವರು ತುಂಬಾ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳೆಂದು ಪರಿಗಣಿಸಲಾಗಿದೆ. ಆದರೆ ಇದನ್ನು ಅವರ ದುರ್ಬಲತೆಯೆಂದು ಅಪಾರ್ಥ ಮಾಡಿಕೊಳ್ಳಬಾರದು. ಇವರು ತುಂಬಾ ಬಲ ಹಾಗೂ ಹಠ ಸ್ವಭಾವದ ವ್ಯಕ್ತಿಗಳು. ಇದರಿಂದಾಗಿ ಇವರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಮಹತ್ವಾಕಾಂಕ್ಷಿಯಾಗಿರುವರು.ಕರ್ಕಾಟಕ ರಾಶಿಯವರ ಬಲವು ಅವರ ಆತ್ಮವಿಶ್ವಾಸದ ಮೇಲೆ ಅವಲಂಬಿತವಾಗಿದೆ.

  ಕರ್ಕಾಟಕ: ಜೂ.21- ಜುಲೈ 22

  ಕರ್ಕಾಟಕ: ಜೂ.21- ಜುಲೈ 22

  ಕರ್ಕಾಟಕ ರಾಶಿಯವರು ತುಂಬಾ ಪ್ರೀತಿ ಮತ್ತು ಪ್ರಾಮಾಣಿಕ ಮನುಷ್ಯರೆಂದು ಕರೆಯಲಾಗುತ್ತದೆ. ಅವರಿಗೆ ಮೋಸ, ನಿರಾಶೆ ಮತ್ತು ಬೇಸರವಾದಾಗ ತುಂಬಾ ಕುಸಿಯುತ್ತಾರೆ. ಅವರ ಬಗ್ಗೆ ಬಳಸುವ ಪದಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಇನ್ನು ಈ ರಾಶಿಯವರು ಅವರು ಏನೇ ಮಾಡಿದರೂ ಪ್ಯಾಷನ್ ನಿಂದ ಮಾಡುತ್ತಾರೆ. ತಮ್ಮನ್ನು ಪ್ರೀತಿಸುವವರು ಕೂಡ ಇದೇ ರೀತಿಯಾಗಿರಬೇಕೆಂದು ಬಯಸುತ್ತಾರೆ. ಅವರು ಏನೇ ಮಾಡಿದರೂ ಅದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಕರ್ಕಾಟಕ ರಾಶಿಯವರೊಂದಿಗೆ ಸಂಬಂಧ ಬೆಳೆಸುವುದು ಉತ್ತಮ. ಕರ್ಕಾಟಕ ರಾಶಿಯವರಿಗೆ ನಿರಾಶೆಯಾದಾಗ ಅಥವಾ ಮನಸ್ಸಿಗೆ ನೋವಾದಾಗ ಅವರ ಸುತ್ತಲು ಇರುವವರು ಇದನ್ನು ಅನುಭವಿಸಬೇಕಾಗುತ್ತದೆ. ಅವರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ನೀವು ಗೊಂದಲಕ್ಕೆ ಒಳಗಾಗಬಹುದು. ಅವರನ್ನು ಏಕಾಂಗಿಯಾಗಿ ಸ್ವಲ್ಪ ಹೊತ್ತು ಬಿಟ್ಟರೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವರು. ಇನ್ನು ಕರ್ಕಾಟಕ ರಾಶಿಯವರೊಂದಿಗೆ ವಾದ ಮಾಡಲು ಹೋದಾಗ ನೀವು ಸೋಲುವುದು ಗ್ಯಾರಂಟಿ. ಅವರು ಸರಿಯಾ ಅಥವಾ ತಪ್ಪಾ ಎಂದು ಯೋಚಿಸುವುದಿಲ್ಲ. ಆದರೆ ವಾದವನ್ನು ಗೆಲ್ಲಲು ಅವರು ಬಯಸುತ್ತಾರೆ.

  ಸಿಂಹ: ಜುಲೈ 23-ಆ.23

  ಸಿಂಹ: ಜುಲೈ 23-ಆ.23

  ಗ್ಲ್ಯಾಮರ್ ನ್ನು ಇಷ್ಟಪಡುವಂತಹ ಸಿಂಹ ರಾಶಿಯವರು ತಮ್ಮನ್ನು ಕಾಡಿನ ರಾಜನೆಂದು ಭಾವಿಸಿಕೊಂಡಿರುವರು. ಇವರು ಕಠಿಣ ಪರಿಸ್ಥಿತಿ ಬಗ್ಗೆ ಭೀತಿ ಪಡುವುದಿಲ್ಲ ಮತ್ತು ಈ ಪರಿಸ್ಥಿತಿ ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಆಲೋಚಿಸುವರು. ಅದಾಗ್ಯೂ, ಇನ್ನೊಂದು ಬದಿಯಲ್ಲಿ ಕೆಲವೊಂದು ಸಲ ತುಂಬಾ ಹೆಮ್ಮೆ ಪಟ್ಟುಕೊಳ್ಳುವುದು ಮತ್ತು ಆಕ್ರಮಣಶೀಲ ಪ್ರವೃತ್ತಿಯಿಂದ ಅವರ ಬಲವು ಅವರಿಗೆ ಮುಳುವಾಗುವುದು. ಸಿಂಹ ರಾಶಿಯವರ ಶಕ್ತಿಯು ಅವರ ಚರಿಷ್ಮಾದಲ್ಲಿ ಅಡಗಿದೆ.

  ಸಿಂಹ: ಜುಲೈ 23-ಆ.23

  ಸಿಂಹ: ಜುಲೈ 23-ಆ.23

  ಇನ್ನು ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜನ್ಮತಃ ನಾಯಕರಾಗಿರುತ್ತಾರೆ. ಇವರು ವಿಶ್ವಾಸಿಗಳೂ, ಇತರರ ಮೇಲೆ ಪ್ರಭಾವ ಬೀರಬಲ್ಲವರೂ ಹಾಗೂ ಕ್ರಿಯಾತ್ಮಕರೂ ಆಗಿರುತ್ತಾರೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ತೊಡಕುಗಳನ್ನು ಎದುರಿಸಿ ಜಯಗಳಿಸಲು ಯತ್ನಿಸುವ ಮೂಲಕ ಸದಾ ಜಯಶೀಲರಾಗಿರುತ್ತಾರೆ. ಇವರ ನಿಷ್ಠೆ ಮತ್ತು ಔದಾರ್ಯ ಸ್ವಭಾವಗಳು ಅಲ್ಪಸಮಯದಲ್ಲಿಯೇ ಹೆಚ್ಚಿನ ಸ್ನೇಹಿತರನ್ನು ಪಡೆಯಲು ನೆರವಾಗುತ್ತದೆ. ವೈಯಕ್ತಿಕವಗಿ ಇವರು ಆಕರ್ಷಕ ಮತ್ತು ಭವ್ಯ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೂ ಇವರು ಇತರರ ಮೇಲೆ ಸುಲಭವಾಗಿ ಪ್ರಭಾವ ಬೀರಬಲ್ಲವರಾಗಿರುತ್ತಾರೆ. ಇನ್ನು ಈ ರಾಶಿಯವರು ತಮ್ಮ ಮಾತನ್ನು ಯಾರಾದರೂ ಕೇಳುತ್ತಿಲ್ಲ ಎಂದಾದರೆ ತಕ್ಷಣವೇ ಕೋಪಗೊಳ್ಳುತ್ತಾರೆ. ಇವರು ತಕ್ಷಣಕ್ಕೆ ನಿರಾಶೆಯ ಭಾವ ಮತ್ತು ಆಶ್ಚರ್ಯಕರ ಪ್ರವೃತ್ತಿಗೆ ಒಳಗಾಗುತ್ತಾರೆ. ಇವರು ಒಂದು ರೀತಿಯ ಕಿರಿಕಿರಿಗೆ ಒಳಗಾದರೆ ಬಹಳ ಬೇಸರ ಹಾಗೂ ಅಸಮಧಾನಕ್ಕೆ ಒಳಗಾಗುತ್ತಾರೆ. ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದನ್ನು ಅವರು ಭಾವಿಸಿದರೆ ಸಿಟ್ಟಿಗೆ ಒಳಗಾಗುವರು. ಕೆಲವು ವಿಚಾರಗಳನ್ನು ಇವರೇ ನಿರ್ಲಕ್ಷಿಸುತ್ತಿದ್ದರೆ ಮಾನಸಿಕವಾಗಿ ಸಮಾಧಾನದಲ್ಲಿ ಇರುತ್ತಾರೆ.

  ಸಿಂಹ: ಜುಲೈ 23-ಆ.23ಸಿಂಹ ರಾಶಿಯ ಅದೃಷ್ಟ ಸಂಖ್ಯೆಗಳು ಮತ್ತು ಬಣ್ಣಗಳು

  ಸಿಂಹ: ಜುಲೈ 23-ಆ.23ಸಿಂಹ ರಾಶಿಯ ಅದೃಷ್ಟ ಸಂಖ್ಯೆಗಳು ಮತ್ತು ಬಣ್ಣಗಳು

  ಈ ತಿಂಗಳಲ್ಲಿ ಸಿಂಹರಾಶಿಯವರಿ ಅದೃಷ್ಟ ತರಲಿರುವ ಸಂಖ್ಯೆಗಳೆಂದರೆ 6, 24, 39, 59, ಹಾಗೂ 83. ಅದೃಷ್ಟ ದಿನಾಂಕಗಳೆಂದರೆ: 2, 3, 12, 13, 21, 22, 29, 30.

  ಅದೃಷ್ಟ ಬಣ್ಣಗಳೆಂದರೆ:

  ಬಿಳಿ ಮತ್ತು ಚಿನ್ನದ ಬಣ್ಣ, ತಾಮ್ರದ ಬಣ್ಣ ಹಾಗೂ ತಿಳಿಹಸಿರು. ಇನ್ನು ಈ ರಾಶಿ ಚಕ್ರದ ಚಿಹ್ನೆಯನ್ನು ಸೂರ್ಯನ ರಾಜ ಎಂದು ಕರೆಯಲಾಗುತ್ತದೆ. ಈ ರಾಶಿಯ ಅದೃಷ್ಟ ಬಣ್ಣ

  ಚಿನ್ನ ಮತ್ತು ಕಿತ್ತಳೆ ಹಳದಿ. ಈ ಬಣ್ಣವು ಸಿಂಹ ರಾಶಿಯವರಿಗೆ ಉತ್ತಮ ಅದೃಷ್ಟ ತಂದು ಕೊಡುವುದು.

  English summary

  Secret Strength Of The Most Powerful Zodiac Signs

  What do you think defines each of the powerful zodiac signs? Is it their arrogance or the urge to make it big that differs from the rest of the zodiac signs? Well, each of the most powerful zodiac signs has its own secret strength and understanding about this strength gets important, if one wants to become successful. Here, in this article, we have listed the secret strengths of each of the 4 powerful zodiac signs.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more