Latest Updates
-
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ?
ಥಾಯ್ಲೆಂಡ್‌ನಲ್ಲಿ ಶಿಶ್ನ ಬಿಳಿಯಾಗಿಸುವ ಟ್ರೆಂಡ್ ಸಿಕ್ಕಾಪಟ್ಟೆ ಫೇಮಸ್ ಅಂತೆ!!
ತಂತ್ರಜ್ಞಾನವು ಬೆಳೆದಂತೆ ದೇಹದ ಕೆಲವೊಂದು ಭಾಗಗಳನ್ನು ಕೂಡ ಮತ್ತಷ್ಟು ಸುಂದರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇಂತಹ ಕೆಲವೊಂದು ಚಿಕಿತ್ಸೆಗಳ ಬಗ್ಗೆ ನಾವು ಈಗಾಗಲೇ ಕೇಳಿ ತಿಳಿದುಕೊಂಡಿದ್ದೇವೆ. 3ಡಿ ಯೋನಿಯಿಂದ ಹಿಡಿದು ಖಾಸಗಿ ಭಾಗಗಳನ್ನು ಬಿಳಿಯಾಗಿಸುವಂತಹ ತಂತ್ರಜ್ಞಾನವು ಇದರಲ್ಲಿ ಅಡಗಿದೆ.
ಶಿಶ್ನ ಬಿಳಿಯಾಗಿಸುವ ತಂತ್ರಜ್ಞಾನದ ಬಗ್ಗೆ ನೀವು ಕೇಳಿದ್ದೀರಾ? ಇಲ್ಲ ತಾನೇ? ಹಾಗಾದರೆ ಈ ಲೇಖನದಲ್ಲಿ ನೀವು ಇದರ ಸಂಪೂರ್ಣ ಮಾಹಿತಿ ಪಡೆಯಬಹುದು. ಇದು ಥಾಯ್ಲೆಂಡಿನಲ್ಲಿ ದೊಡ್ಡ ಟ್ರೆಂಡ್ ಆಗಿದೆ...

ಈ ಚಿಕಿತ್ಸೆಯು ಟ್ರೆಂಟ್ ಆಗಿದೆ
ದಿನದಲ್ಲಿ ಮೂರರಿಂದ ನಾಲ್ಕು ಜನರು ಶಿಶ್ನ ಬಿಳಿಯಾಗಿರುವ ಚಿಕಿತ್ಸೆಗೆ ಒಳಗಾಗುವವರು ಎಂದು ಆಸ್ಪತ್ರೆಯು ಹೇಳಿದೆ. 100ಕ್ಕೂ ಹೆಚ್ಚು ಪುರುಷರು ಥಾಯ್ಲೆಂಡ್ ನ ಆಸ್ಪತ್ರೆಯಲ್ಲಿ ಶಿಶ್ನ ಬಿಳಿಯಾಗಿಸುವ ಚಿಕಿತ್ಸೆಗೆ ಒಳಪಟ್ಟಿದ್ದಾರೆ ಎನ್ನಲಾಗುತ್ತಿದೆ.

ತೊಡೆಸಂಧುವಿಗೆ ನೀಡುವ ಲೇಸರ್ ಚಿಕಿತ್ಸೆ
ಶಿಶ್ನ ಬಿಳಿಗೊಳಿಸುವ ಚಿಕಿತ್ಸೆ ಬಗ್ಗೆ ಹೆಚ್ಚು ಪ್ರಚಾರ ನೀಡಲಾಗುತ್ತಿದೆ. ಇದು ತೊಡೆಸಂಧುವಿಗೆ ಮಾಡುವಂತಹ ಲೇಸರ್ ಚಿಕಿತ್ಸೆಯಾಗಿದೆ. ಪರಿಣಾಮಕಾರಿ ಫಲಿತಾಂಶ ಪಡೆಯಲು ಜನರು ಹಲವಾರು ಸಲ ಇಂತಹ ಚಿಕಿತ್ಸೆಗೆ ಒಳಪಡಬೇಕಾಯಿತು. ಪ್ರತೀ ಸಲ 10-15 ನಿಮಿಷ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಥಾಯ್ಲೆಂಡ್ ನ ಎಲ್ ಜಿಬಿಟಿಕ್ಯೂ ಸಮುದಾಯದವರೇ ಹೆಚ್ಚು
ಆಸ್ಪತ್ರೆಯ ಸಿಬ್ಬಂದಿ ಪ್ರಕಾರ 22-55 ವರ್ಷದ ವಯಸ್ಸಿನ ಪುರುಷರು ಈ ಚಿಕಿತ್ಸೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಲ್ಲಿ ಇರುವಂತಹ ಹೆಚ್ಚಿನವರು ಥಾಯ್ಲೆಂಡ್ ನ ಎಲ್ ಜಿಬಿಟಿಕ್ಯೂ ಸಮುದಾಯದವರು ಎಂದು ಹೇಳಲಾಗುತ್ತಿದೆ.

3ಡಿ ಯೋನಿ ಕೂಡ ಇದೇ ಆಸ್ಪತ್ರೆ ಕೊಡುಗೆ!
ವಿಚಿತ್ರ ಚಿಕಿತ್ಸೆಗೆ ಈ ಆಸ್ಪತ್ರೆಯು ಜನಪ್ರಿಯತೆಗೆ ಬರುವುದು ಇದೇ ಮೊದಲೇನಲ್ಲ. ಒಂದು ವರದಿಯ ಪ್ರಕಾರ ಈ ಆಸ್ಪತ್ರೆಯು 3ಡಿ ಯೋನಿ ಚಿಕಿತ್ಸೆ ಕೂಡ ಮಾಡಿದೆ. ಮಹಿಳೆಯರ ದೇಹದ ಕೊಬ್ಬನ್ನು ಯೋನಿಗೆ ಇಂಜೆಕ್ಷನ್ ಮೂಲಕ ಚುಚ್ಚಿ ಸುಂದರವಾಗಿ ಕಾಣುವಂತೆ ಮಾಡಲಾಗಿತ್ತು.

ವೈದ್ಯರು ಹೇಳುವಂತೆ…
ವೈದ್ಯರ ಪ್ರಕಾರ ರೋಗಿಯ ದೇಹವು ಮೆಲನಿನ್ ವರ್ಣದ್ರವ್ಯ ಬಿಡುಗಡೆ ಮಾಡಬಹುದು ಮತ್ತು ಫಲಿತಾಂಶವು ವಿರುದ್ಧವಾಗಬಹುದು. ಇದನ್ನು ಹೊರತುಪಡಿಸಿ, ಸೋಂಕು ಉಂಟಾಗಬಹುದು ಮತ್ತು ಇದರಿಂದಾಗಿ ಪುರುಷರಲ್ಲಿ ಬಂಜೆತನವು ಕಾಣಿಸಿಕೊಳ್ಳಬಹುದು. ಈ ಚಿಕಿತ್ಸೆ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.
Most Read: ಥಾಯ್ಲೆಂಡ್‌ನ ಈ ದೇವಾಲಯವನ್ನು ನೆನಪಿಸಿಕೊಂಡಾಗಲೇ ಚಳಿ-ಜ್ವರ ಶುರುವಾಗುತ್ತದೆ!!

ಶಿಶ್ನವಿಲ್ಲದೆ ಹುಟ್ಟಿದ ವ್ಯಕ್ತಿ 44ರ ಹರೆಯದಲ್ಲಿ ಬ್ರಹ್ಮಚಾರ್ಯ ಕಳಕೊಂಡವನ ಸ್ಟೋರಿ ಇದು!
ಹುಟ್ಟುವಾಗ ದೇಹದ ಕೆಲವೊಂದು ಭಾಗಗಳು ಇಲ್ಲದೆ ಹುಟ್ಟುವುದು ತುಂಬಾ ಕಿಷ್ಟಕರ ಪರಿಸ್ಥಿತಿ. ಇದರಿಂದ ಆ ವ್ಯಕ್ತಿಯ ಜೀವನ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಜನನೇಂದ್ರೀಯವೇ ಇಲ್ಲದೆ ಹುಟ್ಟಿದರೆ ಆಗ ಆ ವ್ಯಕ್ತಿಯ ಪಾಡು ಹೇಗಿರಬೇಕು? ನೀವೇ ಯೋಚಿಸಿ. ಇಂತಹ ವ್ಯಕ್ತಿಯೊಬ್ಬನ ಬಗ್ಗೆ ಈ ಲೇಖನ. ಹುಟ್ಟುತ್ತಲೇ ಈ ವ್ಯಕ್ತಿಗೆ ಜನನೇಂದ್ರಿಯವೇ ಇರಲಿಲ್ಲ. ನಾಲ್ಕು ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಈತನಿಗೆ ಬಯೋನಿಕ್ ಶಿಶ್ನ ಅಳವಿಡಿಸಿದ್ದಾರೆ. ಆಂಡ್ರೂ ವಾರ್ಡ್ಲೆ ಎನ್ನುವಾತ 44ರ ಹರೆಯದಲ್ಲಿ ಬ್ರಹ್ಮಚರ್ಯ ಕಳಕೊಂಡ ಕಥೆಯಿದು.

ಶಿಶ್ನವಿಲ್ಲದೆಯೇ ಆತ ಹುಟ್ಟಿದ್ದ!
ಆಂಡ್ರೂ ವಾರ್ಡ್ಲೆ ಪರಿಸ್ಥಿತಿಯು 20 ಮಿಲಿಯನ್ ಜನರಲ್ಲಿ ಒಬ್ಬರಿಗೆ ಬರುವಂತಹ ಜನನ ಸಂಬಂಧಿ ಅಸಾಮಾನ್ಯತೆ. ಆತ ಶಿಶ್ನವಿಲ್ಲದೆ ಹುಟ್ಟಿದ ಮತ್ತು ಬ್ಲೆಡರ್ ಎಸ್ಟ್ರೋಫಿ ಇತ್ತು. ಇದು ತುಂಬಾ ಅಪರೂಪದ ಜನ್ಮಜಾತ ಅಂಗವೈಕಲ್ಯ. ಇದು ಸಾಮಾನ್ಯವಾಗಿ ಸೊಂಟದೊಳಗಡೆ ಇರುವಂತಹ ಅಂಗ. ಆಂಡ್ರೂ ಪ್ರತಿನಿತ್ಯ ರಾತ್ರಿ ಮಲಗುವಾಗ ದೇವರಲ್ಲಿ ತನಗೆ ಶಿಶ್ನ ನೀಡು ಎಂದು ಪ್ರಾರ್ಥಿಸುತ್ತಿದ್ದ.

ಜನ್ಮವೈಕಲ್ಯದ ಬಗ್ಗೆ
ಆಂಡ್ರೂಗೆ ವೃಷಣಗಳು ಇದ್ದರೂ ಆತನಿಗೆ ಶಿಶ್ನವು ಇರಲಿಲ್ಲವೆಂದು ವರದಿಗಳು ಹೇಳಿವೆ. ಶಿಶ್ನ ಪಡೆಯುವ ಸಲುವಾಗಿ ಆತ ಕಳೆದ ನಾಲ್ಕು ವರ್ಷದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ.

ಬಯೋನಿಕ್ ಶಿಶ್ನ ರೂಪಿಸಿದರು
ಆತನ ಕೈಯ ಚರ್ಮವನ್ನು ಪಡೆದುಕೊಂಡು ವೈದ್ಯರು ಒಂದು ಬಯೋನಿಕ್ ಶಿಶ್ನ ರೂಪಿಸಿದರು. ಕೈಯ ಭಾಗದ ಚರ್ಮ ಮತ್ತು ಕಾಲಿನ ಭಾಗದ ನರಗಳನ್ನು ಬಳಸಿಕೊಂಡು ಇದನ್ನು ತಯಾರಿಸಲಾಯಿತು. ಇದನ್ನು ಅಳವಡಿಸುವ ಮೊದಲು ಹತ್ತು ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಹತ್ತು ದಿನ ನಿಮಿರುವಿಕೆ
ವೈದ್ಯರು ದುಬಾರಿಯಾದ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಸುಮಾರು ಹತ್ತು ದಿನಗಳ ಕಾಲ ಆಂಡ್ರೂಗೆ ತುಂಬಾ ನೋವಿನ ನಿಮಿರುವಿಕೆ ಇತ್ತು. ಆರು ವಾರಗಳ ಕಾಲ ಸೆಕ್ಸ್ ನಡೆಸದಂತೆ ವೈದ್ಯರು ಸೂಚಿಸಿದ್ದರು.

ಆತ ಬ್ರಹ್ಮಚರ್ಯ ಕಳಕೊಂಡ
ಮೊದಲ ಸಲ ಪುರುಷತ್ವದ ಸಂಕೇತವನ್ನು ಪಡೆದುಕೊಂಡಿದ್ದ ಆಂಡ್ರೂ 30 ನಿಮಿಷಗಳ ಕಾಲ ತನ್ನ ಗೆಳತಿ ಫೆಡ್ರಾ ಫಾಬಿಯಾನ ಜತೆಗೆ ಸೆಕ್ಸ್ ನಡೆಸಿದ. ಆತ ಈಗ ತಂದೆಯಾಗಬೇಕೆಂದು ಬಯಸಿದ್ದಾನೆ.ಆಂಡ್ರೂ ಈಗ ತನ್ನ ತೊಡೆಸಂಧಿನಲ್ಲಿ ಒಂದು ಗುಂಡಿ ಒತ್ತುವನು. ಈ ವೇಳೆ ಅಂಗವು ಉಬ್ಬಿಸುವಂತೆ ಸಲೈನ್ ಎನ್ನುವ ದ್ರವವು ನೆರವಾಗುವುದು. ಶಸ್ತ್ರಚಿಕಿತ್ಸೆಯು ತಯಶಸ್ವಿಯಾಗಿದೆ ಮತ್ತು ಇದು ಆಂಡ್ರೂಗೆ ತುಂಬಾ ಖುಷಿಯ ವಿಚಾರ. ವೃಷಣಕ್ಕೆ ಈ ಶಿಶ್ನವನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿರುವ ಕಾರಣದಿಂದಾಗಿ ಮಕ್ಕಳಾಗುವಂತಹ ಸಾಧ್ಯತೆಗಳು ಇವೆ ಎನ್ನುತ್ತಾರೆ ವೈದ್ಯರು.



Click it and Unblock the Notifications











