Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ನಾಗರ ಪಂಚಮಿ ವಿಶೇಷ: ಹಾವು ಕಚ್ಚಿದವರ ಅನುಭವದ ಕಥೆ
ನಾಗರ ಪಂಚಮಿ ನಾಡಿಗೆ ದೊಡ್ಡದು. ನಾಗರ ಹಾವು ಒಂದು ವನ್ಯ ಜೀವಿ ಹಾಗೂ ಸರಿಸ್ರಪಗಳ ಜಾತಿಗೆ ಸೇರಿದ್ದು. ಆದರೆ ಇದಕ್ಕೆ ಹಿಂದೂ ಸಂಪ್ರದಾಯದಲ್ಲಿ ದೇವತೆಯ ಸ್ಥಾನವನ್ನು ನೀಡಲಾಗಿದೆ. ವಿಷ ಪೂರಿತವಾದ ಈ ಜೀವಿಯ ಕಡಿತಕ್ಕೆ ಒಳಗಾದರೆ ವ್ಯಕ್ತಿ ಜೀವವನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಅದೇ ನಾಗ ದೇವನ ಕೃಪೆ ಇದ್ದರೆ ಜೀವನದಲ್ಲಿ ಅನೇಕ ಅದೃಷ್ಟಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ನಾಗರ ಪಂಚಮಿಯ ಪ್ರಯುಕ್ತ ಬೋಲ್ಡ್ ಸ್ಕೈ ಹಾವುಗಳ ಸಂರಕ್ಷಣೆಯ ಕಾರ್ಯದಲ್ಲಿ ಎದುರಿಸಿದ ಹಾವು ಸಂರಕ್ಷರ ಅನುಭವಗಳನ್ನು ಇಲ್ಲಿ ನೀಡಿದೆ ನೋಡಿ...
ಮುಂಬೈ ನಗರದ ಕಲ್ಯಾಣದ ಡೊಂಬಿವಾಲಿ ಪ್ರದೇಶದಲ್ಲಿ ಮನಿಶ್ ಪಿಂಪಲೇ ಎನ್ನುವವರು ಹಾವಿನ ಕಡಿತಕ್ಕೆ ಒಳಗಾಗಿದ್ದರು. ಹಾವನ್ನು ಹಿಡಿಯುವ ಕಲೆಯನ್ನು ಕಲಿತಿರುವ ಇವರು ತನ್ನ ಒಂದು ಅನುಭವವನ್ನು ಹೇಳಿಕೊಂಡಿದ್ದಾರೆ... ಪಿಂಪಲೇ ಅವರು ಹೇಳುವ ಪ್ರಕಾರ "ಎರಡು ವರ್ಷಗಳ ಹಿಂದೆ ಇವರು ತನ್ನ ಸ್ನೇಹಿತರೊಂದಿಗೆ ಮಹಾರಾಷ್ಟ್ರದ ಘೋಪರ್ ಎನ್ನುವ ಹಳ್ಳಿಗೆ ಕ್ಯಾಂಪಿಂಗ್‍ಗೆ ಹೋಗಿದ್ದರು. ಅದು ತೆರೆದ ಮೈದಾನದಲ್ಲಿ ಬೀಡನ್ನು ಬಿಟ್ಟಿದ್ದರು. ಅಲ್ಲಿ ರಾತ್ರಿ ತಂಗಿರುವಾಗ ನನ್ನ ಬಲಗೈಗೆ ಮಂಡಲದ ಹಾವು ಕಚ್ಚಿತು. ಅದು ಕಚ್ಚಿರುವುದು ಒಂದು ಬ್ಲೇಡಿನಲ್ಲಿ ಸೀಳಿದಂತಾಗಿತ್ತು....

ಮುಂಬೈಯಲ್ಲಿ ನಡೆದ ಘಟನೆ
ಮುಂಬೈಯ ಕಲ್ಯಾಣದ ಡೊಂಬಿವಾಲಿ ಪ್ರದೇಶದಲ್ಲಿ ಮನಿಶ್ ಪಿಂಪಲೇ ಎನ್ನುವವರು ಹಾವಿನ ಕಡಿತಕ್ಕೆ ಒಳಗಾಗಿದ್ದರು. ಹಾವನ್ನು ಹಿಡಿಯುವ ಕಲೆಯನ್ನು ಕಲಿತಿರುವ ಇವರು ತನ್ನ ಒಂದು ಅನುಭವವನ್ನು ಹೇಳಿಕೊಂಡಿದ್ದಾರೆ... ಪಿಂಪಲೇ ಅವರು ಹೇಳುವ ಪ್ರಕಾರ "ಎರಡು ವರ್ಷಗಳ ಹಿಂದೆ ಇವರು ತನ್ನ ಸ್ನೇಹಿತರೊಂದಿಗೆ ಮಹಾರಾಷ್ಟ್ರದ ಘೋಪರ್ ಎನ್ನುವ ಹಳ್ಳಿಗೆ ಕ್ಯಾಂಪಿಂಗ್‍ಗೆ ಹೋಗಿದ್ದರು. ಅದು ತೆರೆದ ಮೈದಾನದಲ್ಲಿ ಬೀಡನ್ನು ಬಿಟ್ಟಿದ್ದರು. ಅಲ್ಲಿ ರಾತ್ರಿ ತಂಗಿರುವಾಗ ನನ್ನ ಬಲಗೈಗೆ ಮಂಡಲದ ಹಾವು ಕಚ್ಚಿತು. ಅದು ಕಚ್ಚಿರುವುದು ಒಂದು ಬ್ಲೇಡಿನಲ್ಲಿ ಸೀಳಿದಂತಾಗಿತ್ತು.

ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ಸೇರಿಸಿದರು
ನಾನೊಬ್ಬ ಹಾವಿನ ರಕ್ಷಕ ಹಾಗೂ ಹಾವು ಹಿಡಿಯುವ ಕಲಾಕಾರ ಆಗಿರುವುದರಿಂದ, ಸ್ಥಳೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಬಯಸಿದೆ. ಏಕೆಂದರೆ ನನಗೆ ನನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿರುವ ಸಮಯವನ್ನು ಹಾಳುಮಾಡಿಕೊಳ್ಳಲು ಮನಸ್ಸಿರಲಿಲ್ಲ. ಆದರೆ ನನ್ನ ಸ್ನೇಹಿತರು ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಲು ಒತ್ತಾಯಿಸಿದರು. ಆದರೆ ಅದು ಹಳ್ಳಿಯಾಗಿದ್ದರಿಂದ ಅಲ್ಲಿ ಕೇವಲ ಸ್ಥಳೀಯ ವೈದ್ಯರು ಸಿಗುತ್ತಿದ್ದರೇ ಹೊರತು ವಿಶೇಷ ತಜ್ಞರು ಇರಲಿಲ್ಲ. ಅದರಲ್ಲೂ ಆಗ ರಾತ್ರಿ 9 ಗಂಟೆ. ನನ್ನ ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ಸೇರಿಸಿದರು.

ಹಾವುಗಳನ್ನು ರಕ್ಷಿಸುವ ಉದ್ದೇಶವಾಗಿತ್ತು ಆದರೆ...
ನಾವು ಬಂದಿರುವುದು ಹಾವುಗಳನ್ನು ರಕ್ಷಿಸುವ ಉದ್ದೇಶವಾಗಿತ್ತು. ಅಲ್ಲದೆ ನನಗೆ ಯಾವ ಹಾವು ಕಚ್ಚಿದೆ ಎನ್ನುವುದನ್ನು ಕಂಡುಹಿಡಿಯಬೇಕು ಎನ್ನುವ ಆಸೆಯನ್ನು ಹೊಂದಿದ್ದೆ. ಆಸ್ಪತ್ರೆಯಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ಹಾಗೂ ಆರೈಕೆಯನ್ನು ಮಾಡಿದರು ಎಂದು ಪಿಂಪಲೇ ಹೇಳಿದರು.

ಶಾಲಾ ದಿನಗಳಲ್ಲಿ
30 ವರ್ಷದಿಂದ ಕಲ್ಯಾಣದ ಡೊಂಬಿವಾಲಿ ಪ್ರದೇಶದಲ್ಲಿ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಕಲಿಸುವವರೊಬ್ಬರು "ಇದು ಡಿಸೆಂಬರ್ ತಿಂಗಳ ಸಮಯ. ರಾತ್ರಿ ತುಂಬಾ ಚಳಿಯಿರುತ್ತದೆ. ಈ ಸಮಯದಲ್ಲಿ ಹಾವು ಕಡಿದಿರುವುದು ಅತ್ಯಂತ ನೋವು ಹಾಗೂ ರಕ್ತಸ್ರಾವದಿಂದ ಕೂಡಿರುತ್ತದೆ ಎಂದರು."

ಆಸ್ಪತ್ರೆಗೆ ಸೇರಿಸಿದರು
ಆಸ್ಪತ್ರೆಗೆ ಕರೆದೊಯ್ದ ನನ್ನ ಸ್ನೇಹಿತ ಆಶಿಶ್ ರಾತ್ರಿಯೆಲ್ಲಾ ನನ್ನನ್ನು ಸಂಪೂರ್ಣವಾಗಿ ವೀಕ್ಷಣೆಯಲ್ಲಿ ಇರಿಸಿದ್ದನು. ವಿಷವು ಹರಡುವುದೇ ಎನ್ನುವ ಭಯದಲ್ಲಿ ಇದ್ದರು. ಆದರೆ ವಿಷ ನನ್ನ ದೇಹಕ್ಕೆ ಹರಡಲಿಲ್ಲ. ಹಾಗಾಗಿ ಎರಡು ದಿನಗಳ ನಂತರ ಆಸ್ಪತ್ರೆಯಿಂದ ಕಳುಹಿಸಿಕೊಟ್ಟರು. ಪಿಂಪಾಲೇ ಹೇಳುವ ಪ್ರಕಾರ ಇವರು ಹಾವನ್ನು ಹಿಡಿಯುವ ಕೆಲಸವನ್ನು ಇಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಎಷ್ಟೋ ಹಾವುಗಳನ್ನು ಹಿಡಿದಿದ್ದೇನೆ. ಆದರೆ ಈ ವರೆಗೆ ಯಾವುದೇ ಹಾವುಗಳಿಂದ ಕಚ್ಚಿಸಿಕೊಂಡಿಲ್ಲ. ಆದರೆ ಇದೀಗ ಆಕಸ್ಮಿಕವಾಗಿ ಹಾವಿನ ಕಡಿತಕ್ಕೆ ಒಳಗಾಗಿದ್ದೇನೆ. ಹಾಗಂತ ನಾನು ಹೆದರುವುದಿಲ್ಲ. ಹಾವುಗಳ ಸಂರಕ್ಷಣೆಯ ಕೆಲಸವನ್ನು ಮುಂದುವರಿಸುತ್ತೇನೆ ಎನ್ನುತ್ತಾರೆ.

ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದರು
ಹಾವು ಸಂರಕ್ಷಕರಾದ ಪಿಂಪಾಲೇ ಸಾಮಾನ್ಯವಾಗಿ ಡೋಂಬಿವಾಲೆಯ ವಿವಿಧ ಪ್ರದೇಶದಲ್ಲಿ ಹಾವು ಕಾಣಿಸಿಕೊಂಡಾಗ ಅವುಗಳ ತಲೆಯನ್ನು ಹಿಡಿದು, ಚೀಲಕ್ಕೆ ತುಂಬುತ್ತಿದ್ದರು. ಜೊತೆಗೆ ಹತ್ತಿರದಲ್ಲಿ ಇರುವ ಕಾಡುಗಳಿಗೆ ಅವುಗಳನ್ನು ಕೊಂಡೊಯ್ದು ಬಿಡುತ್ತಿದ್ದರು.

ಸಮುದ್ರದಲ್ಲಿ ಕಡಿತ
ಡಿ. ಬಂಟಿ ರಾವ್ ಎನ್ನುವವರು ಹೇಳುವ ಪ್ರಕಾರ "2011ರ ಆಗಸ್ಟ್ ತಿಂಗಳಲ್ಲಿ ಇವರು ಹಾಗೂ ಇವರ ಸಹವರ್ತಿಗಳು ಕಡಲ ತೀರದಲ್ಲಿ ಹಾವು ಇರುವುದನ್ನು ಕೇಳಿ ದೌಡಾಯಿಸಿದ್ದರು. ಆ ನೀರಿನಲ್ಲಿ ಇದ್ದ ಜನರನ್ನು ಹೊರ ಬರಲು ಹೇಳಿದರು. ಅಲೆಗಳೊಂದಿಗೆ ಆಯಾಸ ಗೊಂಡ ಹಾವು ರಾವ್ ಅವರ ಕಾಲಿಗೆ ಕಡಿಯಿತು. ನಂತರ ಅವರ ಸಹಚರರು ಹಾವನ್ನು ಹಿಡಿದು ಪೆಟ್ಟಿಗೆಯೊಂದರಲ್ಲಿ ತುಂಬಿದರು. ಹಾವಿನ ಸಂರಕ್ಷಕರಾದ ಇವರ ತಂಡಗಳು ಹೆದರದೆ ರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು.

ವಾಂತಿ ಅಥವಾ ವಾಕರಿಕೆ ಯಾವುದೂ ಕಾಣಿಸಿಕೊಂಡಿರಲಿಲ್ಲ
ಹಾವಿನ ಕಡಿತದಿಂದ ಕಾಣಿಸಿಕೊಳ್ಳುವ ವಾಂತಿ ಅಥವಾ ವಾಕರಿಕೆ ಯಾವುದೂ ಕಾಣಿಸಿಕೊಂಡಿರಲಿಲ್ಲ. ಆದರೂ ಸೂಕ್ತ ತಪಾಸಣೆಗಾಗಿ ಕೂಪರ್ ಆಸ್ಪತ್ರೆಗೆ ಸೇರಿಸಿದ್ದರು. ಹಾವಿನ ಕಡಿತದ ನೋವನ್ನು ತಗ್ಗಿಸಲು ಹಾಗೂ ವಿಷದ ಹರಡುವಿಕೆಯ ವೀಕ್ಷಣೆಗೆ ರಾತ್ರಿಯಿಡಿ ತಪಾಸಣೆಯಲ್ಲಿ ಇರಿಸಿದ್ದರು. ನಂತರ ಯಾವುದೇ ಅಪಾಯವಿಲ್ಲ ಎಂದು ಅರಿತ ನಂತರ ಆಸ್ಪತ್ರೆಯಿಂದ ಕಳುಹಿಸಿ ಕೊಟ್ಟರು.

ಅನೇಕ ಪ್ರವಾಸಿಗರು ಸಂದೇಹಾಸ್ಪದ ರೀತಿಯಲ್ಲಿ ಹಾವಿನ ಕಡಿತಕ್ಕೆ ಒಳಗಾಗಿದ್ದಾರೆ
ಅಲ್ಲಿ ಹಿಡಿದ ಹಾವನ್ನು ಜುಹು ಗಾರ್ಡನ್ ಅಲ್ಲಿ ಬಿಟ್ಟೆವು. ಕಡಲ ತೀರದಲ್ಲಿ ಅನೇಕ ಪ್ರವಾಸಿಗರಿಗೆ ಸಂದೇಹಾಸ್ಪದ ರೀತಿಯಲ್ಲಿ ಹಾವಿನ ಕಡಿತಕ್ಕೆ ಒಳಗಾಗಿದ್ದಾರೆ. ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಕೂಪರ್ ಆಸ್ಪತ್ರೆಗೆ ಸೇರಿಸುತ್ತೇವೆ. ಆದರೆ ಈ ವರೆಗೆ ಯಾವುದೇ ವಿಷಪೂರಿತ ಹಾವು ಸಮುದ್ರದಲ್ಲಿ ಕಾಣಿಸಿಕೊಂಡು, ಯಾರಿಗೂ ಕಡಿದಿಲ್ಲ. ಅದೇ ಒಂದು ಅದೃಷ್ಟದ ಸಂಗತಿ ಎನ್ನುತ್ತಾರೆ.

ಹಾವಿನ ಭಯ
ಅಜಯ್ ಪಣಿಕಾಲ್ ಎನ್ನುವವರು ಹಾವನ್ನು ಕಂಡರೆ ಈಗ ಅಧಿಕ ಭಯಕ್ಕೆ ಒಳಗಾಗಿದ್ದಾರೆ. ಇವರ ಭಯಕ್ಕೆ ಕಾರಣ ಹಾವಿನ ಕಡಿತ ಎಂದು ಹೇಳುತ್ತಾರೆ. "ಒಮ್ಮೆ ಇವರು ತನ್ನ ಸಹೋದರಿಯ ಜೊತೆ ಶಾಲೆಯಿಂದ ಮನೆಗೆ ಬರುವಾಗ ಅತಿಯಾಗಿ ಮಳೆ ಸುರಿಯುತ್ತಿತ್ತು. ಆ ಸಂದರ್ಭದಲ್ಲಿ ಏನೋ ಒಂದು ವಸ್ತು ಅವರ ಕಾಲಿಗೆ ತಾಗಿದಂತಾಯಿತು. ಅದನ್ನು ನೋಡುವಷ್ಟರಲ್ಲಿ ಅವರ ಕಾಲಿನಿಂದ ರಕ್ತ ಸೋರುತ್ತಿತ್ತು. ಜುಲೈ ತಿಂಗಳಾಗಿತ್ತು. ಅವರು ಆಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು. ಭಾರಿ ಮಳೆಯಲ್ಲಿ ಕಾಡಿನ ಪ್ರದೇಶದ ನಡುವೆ ನಡೆದು ಮನೆಗೆ ಮರಳುವಾಗ ಹಾವು ಕಡಿಯಿತು. ಆಗ ತಕ್ಷಣ ಸಹೋದರಿ ಕಾಲಿಗೆ ತನ್ನ ಕರವಸ್ತ್ರಗಳಿಂದ ಕಾಲಿಗೆ ಕಟ್ಟನ್ನು ಹಾಕಿ, ಮನೆಗೆ ಕರೆದು ತಂದಳು. ನಂತರ ಅವರ ತಾಯಿ ಆಸ್ಪತ್ರೆಗೆ ಕರೆದುಕೊಮಡು ಹೋದರು. ವೈದ್ಯರ ಸಲಹೆಯ ಮೇರೆಗೆ ಸಿಯಾನ್ ಆಸ್ಪತ್ರೆಗೆ ಸೇರಿಸಿದರು. ಪ್ರಥಮ ಚಿಕಿತ್ಸೆ ನೀಡುವುದರ ಮೂಲಕ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ವೀಕ್ಷಣೆಯಲ್ಲಿ ಇಟ್ಟಿದ್ದರು. ಬಳಿಕ ಯಾವುದೇ ತೊಂದರೆ ಇಲ್ಲ ಎಂದು ತಿಳಿದ ಮೇಲೆ ಮನೆಗೆ ಕಳುಹಿಸಿದರು.

ಹಾವು ಕಂಡರೆ ಅದನ್ನು ಹೊಡೆಯುತ್ತಿದ್ದೇವು
ಶಾಲೆಗೆ ಹೋಗುವಾಗ ಹಾವು ಕಂಡರೆ ಅದನ್ನು ಹೊಡೆಯುವುದನ್ನು ಮಾಡುತ್ತಿದ್ದೆ. ಎಂದು ನನ್ನ ಕಾಳಿಗೆ ಹಾವು ಕಡಿಯಿತೋ ಆಗ ಹೊಡೆಯುವುದನ್ನು ಬಿಟ್ಟೆ. ಆದರೆ ಅದರ ಭಯ ನನಗೆ ಈಗಲೂ ಇದೆ ಎಂದು 54 ವರ್ಷದ ಪಣಿಕಾಲ್ ಹೇಳುತ್ತಾರೆ.

ಕಾರ್ಯಾಚರಣೆಯಲ್ಲಿ ಹಾವಿನ ಕಡಿತ
ಪ್ರಭು ಸ್ವಾಮಿ ಅವರ ಅನುಭವದ ಪ್ರಕಾರ " ಅದು 2011 ಅಕ್ಟೋಬರ್ 29, ಸ್ವಾಮಿ 19 ವರ್ಷದಲ್ಲಿ ಇರುವಾಗ ಸ್ಕೌಟ್ಸ್ ಮತ್ತು ಗೈಡ್ ಕ್ಯಾಂಪ್‍ನಲ್ಲಿ ಇರುವಾಗ ಅಚಾನಕ್ ಆಗಿ ಬಂದ ನಾಯಿಯೊಂದು ಎಗರಿ ಬಂತು, ಆಗ ಕಾವಲುಗಾರನ ಕೊಠಡಿಯಲ್ಲಿ ಹಾವೊಂದನ್ನು ಹಿಡಿಯುವ ಪ್ರಯತ್ನದಲ್ಲಿದ್ದೆ. ನಾಯಿಯ ಹಠಾತ್ ಆಗಮನದಿಂದ ಅಲ್ಲಿದ್ದ ಎರಡು ಹಾವು ನನ್ನನ್ನು ಕಡಿಯಿತು.
*ಕಡಿದ ತಕ್ಷಣ ನಾನು ವಾಂತಿ ಮಾಡಲು ಪ್ರಾರಂಭಿಸಿದೆ. ತಕ್ಷಣಕ್ಕೆ ಅಲ್ಲಿದ್ದ ನನ್ನ ಸ್ನೇಹಿತರು ಭಗವತಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ನನಗೆ ಕಚ್ಚಿರುವ ಹಾವಿನ ವಿಚಾರ ತಿಳಿಸಲಾಯಿತು. ಅಲ್ಲಿಂದ ನನಗೆ ಚಿಕಿತ್ಸೆ ಪ್ರಾರಂಭಿಸಿದರು. ಜೀನ್ಸ್ ಧರಿಸಿದ ಸ್ವಾಮಿಯವರಿಗೆ ಹಾವಿನ ಕೋರೆಹಲ್ಲುಗಳು ಮಾತ್ರ ತಾಗಿವೆ. ಸಂಪೂರ್ಣ ವಿಷವು ದೇಹಕ್ಕೆ ಹೋಗಿಲ್ಲ. ಹಾಗಾಗಿ ದೇಹದಲ್ಲಿ ಇದ್ದ ವಿಷಗಳನ್ನು ಬಹುಬೇಗ ತೆಗೆಯಲು ಸಾಧ್ಯವಾಯಿತು.ಸಂಪೂರ್ಣವಾಗಿ ಗುಣಮುಖವಾಗಿಸಲು 5-6 ದಿನಗಳ ಕಾಲ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಬಳಿಕ ಸಂಪೂರ್ಣವಾಗಿ ಚೇತರಿಸಿಕೊಂಡೆ. ಆ ಬಳಿಕೆ ಎಲ್ಲಿಯೇ ಹಾವನ್ನು ಹಿಡಿಯಲು ಹೋದರು ಸಂಪೂರ್ಣ ಎಚ್ಚರಿಕೆಯನ್ನು ವಹಿಸುತ್ತಿದ್ದೆ. ಹಾಗಾಗಿ ಇಲ್ಲಿಯ ವರೆಗೆ ಯಾವುದೇ ಹಾವಿನ ಕಡಿತಕ್ಕೆ ಒಳಗಾಗಲಿಲ್ಲ. ಸುರಕ್ಷಿತವಾದ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ. ಹಾವು ಕಚ್ಚಿದ ಬಳಿಕ ಇಲ್ಲಿಯ ವರಗೆ ನಗರದಲ್ಲಿ ಕಾಣಿಸಿಕೊಂಡ 1000 ಹಾವುಗಳನ್ನು ರಕ್ಷಿಸಿದ್ದೇನೆ ಎಂದು ಹೆಳುತ್ತಾರೆ.
*ಮೂಕ ಜೀವಿಗಳನ್ನು ಹಿಂಸಿಸುವುದು ಅಪರಾಧ. ಹಾಗೆಯೇ ಅವುಗಳ ವಿಚಾರದಲ್ಲೂ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಅವುಗಳ ದಾಳಿಗೆ ಒಳಗಾಗಬೇಕಾಗುವುದು. ಅದೃಷ್ಟ ಉತ್ತಮವಾಗಿದ್ದರೆ ತೊಂದರೆಯಿಂದ ಪಾರಾಗಬಹುದು. ನಮ್ಮ ಅದೃಷ್ಟ ಸರಿಯಿಲ್ಲದೆ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕಾದ ಸಂಗತಿ. ನಾಗರ ಪಂಚಮಿಯ ದಿನ ನಾಗದೇವನಿಗೆ ಭಕ್ತಿ ಭಾವದಿಂದ ಪೂಜೆಯನ್ನು ಸಲ್ಲಿಸಿ, ಅದೃಷ್ಟದ ಜೀವನವನ್ನು ಪಡೆದುಕೊಳ್ಳಿ.



Click it and Unblock the Notifications











