ರಾಶಿ ಚಕ್ರದ ಅನುಸಾರ ಈ ಮಂತ್ರವನ್ನು ಜಪಿಸಿದರೆ ಲಕ್ಷ್ಮಿ ಒಲಿಯುವಳು..

Posted By: Deepu
Subscribe to Boldsky

ಹಣ ಯಾರಿಗೆ ಬೇಡ ಹೇಳಿ? ಎಲ್ಲರಿಗೂ ಬೇಕು. ಪ್ರಪಂಚ ನಿಂತಿರುವುದು ಹಣದ ಮೇಲೆಯೇ ಎಂದರೆ ತಪ್ಪಾಗಲಾರದು. ಹಣಕ್ಕಾಗಿ ಇಂದು ಮನುಷ್ಯ ಮಾಡದ ಕೆಲಸವಿಲ್ಲ. ತನ್ನ ಮಾನವೀಯತೆಯನ್ನು ಮರೆತು ಬಾಳುತ್ತಾನೆ. ಜೀವನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಹಣ ಬೇಕು. ಈ ಹಣ ನಮ್ಮ ಕೈ ಸೇರಬೇಕು, ಜೀವನದಲ್ಲಿ ಸದಾ ಸಂತೋಷದಿಂದ ಇರಬೇಕು ಎಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಇರಬೇಕು.

ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ನಿಷ್ಠಯಿಂದ ಮತ್ತು ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ನಡೆಸಬೇಕು. ಲಕ್ಷ್ಮಿಗೆ ಇಷ್ಟವಾಗುವ ಮಂತ್ರಗಳನ್ನು ಹೇಳುವುದರಿಂದಲೂ ಆಕೆಯ ಪ್ರೀತಿಗೆ ಪಾತ್ರರಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಜ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಯವರು ವಿಭಿನ್ನ ಬಗೆಯ ಮಂತ್ರಗಳನ್ನು ಹೇಳುವುದರ ಮೂಲಕ ಲಕ್ಷ್ಮಿ ದೇವಿಯ ಆರಾಧನೆ ಮಾಡಬೇಕು. ಆಗ ಲಕ್ಷ್ಮಿ ದೇವಿಯು ಪ್ರಸನ್ನಳಾಗಿ ಆಶೀರ್ವಾದ ನೀಡುವಳು.

ಆಯಾ ರಾಶಿ ಚಕ್ರಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳು ಲಕ್ಷ್ಮಿಯ ಮಂತ್ರವನ್ನು ಜಪಿಸುವುದರಿಂದ ಸಮೃದ್ಧವಾದ ಸಂಪತ್ತನ್ನು ಪಡೆದುಕೊಳ್ಳುವರು ಎಂದು ಹೇಳಲಾಗುತ್ತದೆ. ನಿಮಗೂ ನಿಮ್ಮ ಕನಸುಗಳು ನನಸಾಗಬೇಕು. ಕೈ ತುಂಬಾ ಹಣವನ್ನು ಪಡೆದುಕೊಳ್ಳಬೇಕು ಎಂದೆನಿಸಿದರೆ ಮುಂದೆ ನೀಡಿರುವ ವಿವರಣೆಯಂತೆ ಮಂತ್ರಗಳನ್ನು ಜಪಿಸಿ...

ಮೇಷ: ಮಾರ್ಚ್ 21-ಏಪ್ರಿಲ್ 19

ಮೇಷ: ಮಾರ್ಚ್ 21-ಏಪ್ರಿಲ್ 19

ಈ ರಾಶಿಯವರು ಬಲವಾದ ಮೊಂಡು ಮತ್ತು ಮಹತ್ವಕಾಂಕ್ಷೆಗಳನ್ನು ಒಳಗೊಂಡಿರುತ್ತಾರೆ. ಇವರ ಆಸೆಯು ಬಹು ದೊಡ್ಡದಾಗಿರುತ್ತವೆಯಾದ್ದರಿಂದ ಬಹು ಬೇಗ ನೆರವೇರುವುದಿಲ್ಲ. ಅದಕ್ಕಾಗಿಯೇ ಇವರು 10,008 ಬಾರಿ "ಶ್ರೀಮ್" ಎನ್ನುವ ಪದವನ್ನು ಪಠಿಸ ಬೇಕು. ಆಗ ಉತ್ತಮ ಸಮೃದ್ಧಿ ಹಾಗೂ ಹಣದ ಹರಿವು ಹೆಚ್ಚಾಗುವುದು.

ವೃಷಭ: ಏಪ್ರಿಲ್ 20-ಮೇ 20

ವೃಷಭ: ಏಪ್ರಿಲ್ 20-ಮೇ 20

ಈ ರಾಶಿಯವರು ಮಂತ್ರ "ಓಂ ಸರ್ವಾಬಾಧಾ ವಿನಿರ್ಮುಕ್ತೋ, ಧನ್ ದಹಾಯಾನಾ ಸುತಾನ್ವಿತ್ತಾ, ಮನುಶುಯ್ಯ ಮತ್ಪ್ರಸಾಡೆನ್ ಭವಿಶ್ಯಾತಿ ನಾ ಸನ್ಶಯಃ ಓಂ" ಎಂದು ಪಠಿಸಬೇಕು. ಇದರಿಂದ ವ್ಯಕ್ತಿಗೆ ಕುಟುಂಬ, ಸಮಾಜ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಸುಲಭವಾಗುತ್ತದೆ. ಜೊತೆಗೆ ಸಂಪತ್ತಿನಲ್ಲೂ ಸುಧಾರಣೆ ಕಾಣುವುದು.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಈ ರಾಶಿಯವರು""ಓಂ ಶ್ರಿಂಗ್ ಶ್ರಿಯೇ ನಮಃ" ಎಂಬ ಮಂತ್ರವನ್ನು ಪಠಿಸಬೇಕು. ಇದರಿಂದ ಈ ರಾಶಿಯವರು ಕಷ್ಟಗಳನ್ನು ಕಳೆದುಕೊಂಡು ಅನುಕೂಲಕರ ಪರಿಸ್ಥಿತಿಗೆ ಬರುವರು.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಈ ರಾಶಿಯವರು ಲಕ್ಷ್ಮಿ ದೇವಿಗಾಗಿ " ಓಂ ಶ್ರೀ ಮಹಾಲಕ್ಷ್ಮಿಯೈ ಚ ವಿಷ್ಮೆ ವಿಷ್ಣು ಪತ್ನಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತಮ್ ಓಂ" ಮಂತ್ರವನ್ನು ಪಠಿಸಬೇಕು. ಇದರಿಂದ ಇವರ ಇಂದ್ರೀಯಗಳು ಶಾಂತಗೊಳ್ಳುವುದು. ಜೊತೆಗೆ ಸಂಪತ್ತು ಸುಧಾರಿಸಲು ಸಹಾಯವಾಗುವುದು.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಈ ರಾಶಿಯವರು ಮಂತ್ರ "ಓಂ ಶ್ರೀಮ್ ಮಹಾ ಲಕ್ಷ್ಮೀಯೆ ನಮಃ" ಈ ಚಿಹ್ನೆಗೆ ಸೂಕ್ತವಾಗಿದೆ. ಏಕೆಂದರೆ ಈ ವ್ಯಕ್ತಿಗಳು ಭಯವಿಲ್ಲದವರು, ಅಹಂಕಾರಿ ಮತ್ತು ಧೈರ್ಯಶಾಲಿ. ಅವರು ಯಾವಾಗಲೂ ಅನ್ಯಾಯದ ವಿರುದ್ಧ ನಿಂತಿರುತ್ತಾರೆ. ಈ ಗುಣಲಕ್ಷಣವು ಅವರ ಸ್ನೇಹಿತರು ಮತ್ತು ಸಂಬಂಧಿಕರಲ್ಲಿ ಬಹಳಷ್ಟು ಖ್ಯಾತಿಯನ್ನು ತಂದುಕೊಡುತ್ತದೆ.

ಕನ್ಯಾ: ಆಗಸ್ಟ್ 24-ಸೆಪ್ಟೆಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟೆಂಬರ್ 23

ಈ ರಾಶಿಯವರು ಮಂತ್ರ "ಓಂ ಹ್ರೆಮ್ ಶ್ರೀಮ್ ಕ್ಲೆಮ್ ಮಹಾ ಲಕ್ಷ್ಮಿ ನಮಃ" ಈ ರಾಶಿಚಕ್ರಕ್ಕೆ ಉತ್ತಮ ಫಲವನ್ನು ನೀಡುವುದು. ಸ್ವಭಾವತಃ ಅವರು ಪ್ರಾಮಾಣಿಕ ವ್ಯಕ್ತಿಗಳು. ಇವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಇದು ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.

ತುಲಾ: ಸೆಪ್ಟೆಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟೆಂಬರ್ 24-ಅಕ್ಟೋಬರ್ 23

ಈ ರಾಶಿಯವರು ಮಂತ್ರ "ಓಂ ಶ್ರೀಮ್ ಶ್ರೀ- ಆಯೀ ನಮಃ" ಈ ರಾಶಿಚಕ್ರಕ್ಕೆ ಉತ್ತಮ ಫಲವನ್ನು ನೀಡುವುದು. ಈ ವ್ಯಕ್ತಿಗಳು ಆಕರ್ಷಕ ಮತ್ತು ಭಾವನಾತ್ಮಕ ಜನರು. ಪ್ರಾಮಾಣಿಕತೆ ಮತ್ತು ನ್ಯಾಯವು ಅವರ ಪ್ರಮುಖ ಲಕ್ಷಣ. ಈ ಮಂತ್ರವನ್ನು ಪಠಿಸುವುದರಿಂದ ಅವರ ಕೌಶಲ್ಯ ಮತ್ತು ಉತ್ತಮ ವ್ಯಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.

ವೃಶ್ಚಿಕ: ಅಕ್ಟೋಬರ್ 24-ನವೆಂಬರ್ 22

ವೃಶ್ಚಿಕ: ಅಕ್ಟೋಬರ್ 24-ನವೆಂಬರ್ 22

ಈ ರಾಶಿಯವರು ಲಕ್ಷ್ಮಿ ಮಂತ್ರವಾದ "ಓಂ ಹ್ರೀಮ್ ಶ್ರೀಮ್ ಲಕ್ಷ್ಮಿಭಯೊ ನಮಃ" ಎಂದು ಜಪಿಸಿ. ಈ ರಾಶಿಯವರು ಆರಂಭಿಕ ಹಂತದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿರುತ್ತಾರೆ. ಈ ಮಂತ್ರವನ್ನು ಪಠಿಸಲು ಪ್ರಾರಂಭಿಸಿದ ನಂತರ ಉತ್ತಮ ದಿನಗಳನ್ನು ಹಾಗೂ ಹಣವನ್ನು ಪಡೆದುಕೊಳ್ಳುತ್ತಾರೆ. ಈ ರಾಶಿ ಚಕ್ರದವರಿಗೆ ಈ ಮಂತ್ರವು ಅದ್ಭುತವನ್ನು ತಂದುಕೊಡುತ್ತದೆ.

ಧನು: ನವೆಂಬರ್ 23-ಡಿಸೆಂಬರ್ 22

ಧನು: ನವೆಂಬರ್ 23-ಡಿಸೆಂಬರ್ 22

ಈ ರಾಶಿಯವರು "ಓಂ ಶ್ರೀಮ್ ಹ್ರೀಮ್ ಶ್ರೀಮ್ ಕಮಲೇ ಕಮಲೈ ಪ್ರಸೀದ್ ಪ್ರಸೀದ್ ಓಂ ಶ್ರೀಮ್ ಹ್ರೀಮ್ ಶ್ರೀಮ್ ಲಕ್ಷ್ಮೀಯೆ ನಮಃ" ಮಂತ್ರವನ್ನು ಪಠಿಸಬೇಕು. ಈ ವ್ಯಕ್ತಿಗಳು ಸಾಮಾನ್ಯವಾಗಿ ದೇವ ಗುರು ಬ್ರಹ್ಸ್ಪಾತಿ ಗುಣಗಳನ್ನು ಹೊಂದಿರುತ್ತಾರೆ. ಈ ಮಂತ್ರವನ್ನು ಪಠಿಸುವುದರಿಂದ ಅವರ ವಿತ್ತೀಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಈ ರಾಶಿಯವರು ಲಕ್ಷ್ಮಿ ದೇವಿಗಾಗಿ "ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್ ಐಂಗ್ ಸಂಗ್ ಓಂ ಹ್ರಿಂಗ್ ಕಾ ಎ ಈ ಲಾ ಹ್ರಿಂಗ್ ಹಾ ಸಾ ಕಾ ಹಾ ಲಾ ಹ್ರಿಂಗ್ ಸಕಲ್ ಸಂಗ್ ಐಂಗ್ ಕ್ಲಿಂಗ್ ಹ್ರಿಂಗ್ ಶ್ರಿಂಗ್ ಓಂ" ಎಂಬ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ಅವರಿಗೆ ಅದೃಷ್ಟ ಮತ್ತು ಶ್ರೀಮಂತರಾಗಲು ಸಹಾಯವಾಗುತ್ತದೆ.

ಕುಂಭ: ಜನವರಿ 21-ಫೆಬ್ರವರಿ 18

ಕುಂಭ: ಜನವರಿ 21-ಫೆಬ್ರವರಿ 18

ಈ ರಾಶಿಯವರು " ಏಯಿಮ್ ಹ್ರೀಮ್ ಶ್ರೀಮ್ ಅಷ್ಟಲಕ್ಷ್ಮೈ ಹ್ರಿಮ್ ರಿಮ್ ಸಿದ್ವಾಯೇ ಮಮ್ ಗೃಹಿ ಅಗ್ರಾಚಗಚ ನಮಃ ಸ್ವಾಹ್" ಮಂತ್ರವನ್ನು ಪಠಿಸಬೇಕು. ಈ ವ್ಯಕ್ತಿಗಳು ಅರ್ಥಗರ್ಭಿತ, ಸ್ವತಂತ್ರ ಮತ್ತು ಹಠಮಾರಿ ಸ್ವಭಾವದವರಾಗಿರುತ್ತಾರೆ. ಇವರು ನಿತ್ಯ ಈ ಮಂತ್ರವನ್ನು ಜಪಿಸುವುದರಿಂದ ಶಾಂತವಾದ ಮನಸ್ಸು, ಪ್ರಗತಿ ಹಾಗೂ ಯಶಸ್ಸು ದೊರೆಯುವುದು.

ಮೀನ: ಫೆಬ್ರವರಿ 19-ಮಾರ್ಚ್ 20

ಮೀನ: ಫೆಬ್ರವರಿ 19-ಮಾರ್ಚ್ 20

ಈ ರಾಶಿಯವರು ಲಕ್ಷ್ಮಿ ದೇವಿಗಾಗಿ "ಓಂ ಶ್ರೀಮ್ ಹ್ರೀಮ್ ಶ್ರೀಮ್ ಕಮಲೇ ಕಮಲೈ ಪ್ರಸೀದ್ ಪ್ರಸೀದ್ ಓಂ ಶ್ರೀಮ್ ಹ್ರೀಮ್ ಶ್ರೀಮ್ ಲಕ್ಷ್ಮೀಯೆ ನಮಃ" ಮಂತ್ರವನ್ನು ಪಠಿಸಬೇಕು. ಈ ಮಂತ್ರ ಹೇಳುವುದರಿಂದ ಇವರಿಗೆ ಹೆಚ್ಚಿನ ಸಂಪತ್ತು ಲಭ್ಯವಾಗುವುದು.

English summary

Laxmi Mantras That Are Suited For Each Zodiac Sign

There are so many different gods that we pray to for different reasons and needs. Each god has its own significance and importance and praying to these specific gods will help in achieving the desired results. Here, in this article, we are sharing some of the best Goddess Laxmi mantras that one can chant, which are according to their zodiac signs.These are the mantras that are best defined as per the zodiac signs. So, find out which mantra is the best one for you, as per your zodiac sign, and chant them for good results and prosperity.