Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಈ 5 ರಾಶಿಯವರು ತಮ್ಮ ದಾರಿಯನ್ನು ಬಿಟ್ಟು ಬೇರೆಯವರ ಮಾತಿಗೆ ಬೆಲೆ ಕೊಡದ ವ್ಯಕ್ತಿಗಳು
ಸ್ವಾರ್ಥ ಎನ್ನುವುದು ಮನುಷ್ಯನಲ್ಲಿ ಅಡಗಿರುವ ಒಂದು ಗುಣ ಎನ್ನಬಹುದು. ಆದರೆ ಈ ಸ್ವಾರ್ಥದ ಗುಣ ಅತಿಯಾದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನ ಹಾಳುಮಾಡುತ್ತದೆ. ಒಂದು ಕುಟುಂಬ, ಸಮಾಜ ಹಾಗೂ ಸ್ನೇಹಿತರ ನಡುವೆ ಬೆರೆತು ಬಾಳಬೇಕು ಎಂದಾಗ ಸ್ವಾರ್ಥದ ಗುಣದಿಂದ ಹೊರ ಬರಬೇಕು. ಇಲ್ಲವಾದರೆ ಆತ್ಮೀಯರು ಸಿಗುವುದು ಕಷ್ಟ ಎಂತಲೇ ಹೇಳಬಹುದು. ಕೇವಲ ಸ್ವಾರ್ಥ ಗುಣಗಳನ್ನು ಅಳವಡಿಸಿಕೊಂಡರೆ ವಿಶ್ವಾಸಘಾತುಕರಾಗಿ ಉಳಿಯಬೇಕಾಗುವುದು. ತಮ್ಮ ವಾದಗಳನ್ನು ಬಿಟ್ಟು ಬೇರೆಯವರ ಮಾತನ್ನು ಕೇಳುವುದು ಹಾಗೂ ದನ್ನು ಅಳವಡಿಸಿಕೊಳ್ಳುವುದನ್ನು ಕಲಿತರೆ ನಮ್ಮ ಶಕ್ತಿ ಇನ್ನಷ್ಟು ದ್ವಿಗುಣವಾಗುವುದು.
ಯಾವಾಗ ನಾವು ನಮ್ಮ ಸ್ವಾರ್ಥ ಸ್ವಭಾವ ಅಥವಾ ಗುಣವನ್ನು ಸಾಕಷ್ಟು ದೂರ ಇಡುತ್ತೇವೆಯೋ ಆಗ ನಾವೊಬ್ಬ ಉತ್ತಮ ವ್ಯಕ್ತಿಗಳಾಗಿ ಬಾಳಬಹುದು. ಇತರರಿಗಾಗಿ ಸಹಾಯ ಮಾಡುವುದು ಅಥವಾ ಬಾಳುವುದರಲ್ಲಿ ಒಂದು ಸಿಹಿಯಾದ ಅನುಭವ ಇರುತ್ತದೆ. ಅಂತಹ ಒಂದು ಅದ್ಭುತ ಅನುಭವವನ್ನು ನಾವು ಪಡೆದುಕೊಳ್ಳುತ್ತೇವೆ ಎಂದರೆ ಅನೇಕ ಮಂದಿಗೆ ಬಹಳ ಹತ್ತಿರದ ವ್ಯಕ್ತಿಗಳಾಗಿರುತ್ತೇವೆ ಎಂದು ಹೇಳಬಹುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವ್ಯಕ್ತಿಗಳು ಬಹಳ ಸ್ವಾರ್ಥಿಗಳಾಗಿರುತ್ತಾರೆ. ಅವರು ಸದಾ ತಮ್ಮ ಬಗ್ಗೆಯೇ ಯೋಚಿಸುತ್ತಾರೆ. ಇತರರ ಬಗ್ಗೆ ಕೊಂಚವೂ ಚಿಂತಿಸುವುದಿಲ್ಲ. ಇಂತಹ ವ್ಯಕ್ತಿಗಳು ನಮ್ಮ ನಡುವೆ ಇದ್ದರೂ ನಮಗೆ ಅವರನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಆದರೆ ಅವರ ರಾಶಿಚಕ್ರಗಳನ್ನು ತಿಳಿದುಕೊಂಡರೆ ಅವರ ಗುಣಗಳನ್ನು ಹೇಳಬಹುದು ಎಂದು ಹೇಳಲಾಗುವುದು. ಹಾಗಾದರೆ ಯಾವ ರಾಶಿಚಕ್ರದವರು ಈ ಗುಣಗಳನ್ನು ಹೊಂದಿರುತ್ತಾರೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಕುಂಭ
ಈ ರಾಶಿಚಕ್ರದವರು ಅತ್ಯಂತ ಮುಕ್ತ ಚಿಂತಕರು ಎನ್ನಬಹುದು. ಇವರು ಏನು ಮಾಡಬೇಕು? ಏನು ಹೇಳಬೇಕು ಎನ್ನುವುದರ ಬಗ್ಗೆ ಸಾಕಷ್ಟು ತಿಳಿದಿರುತ್ತಾರೆ. ಇತರರ ಜನಪ್ರಿಯತೆಯನ್ನು ಅಷ್ಟಾಗಿ ಇಷ್ಟಪಡದೆ ಇರುವುದರಿಂದ ಇವರು ಇತರರನ್ನು ಶ್ಲಾಘಿಸುವುದಿಲ್ಲ. ಇವರು ತಮ್ಮ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ. ಎಲ್ಲವೂ ತಮಗಾಗಿಯೇ ಇರಬೇಕು ಎಂದು ಬಯಸುತ್ತಾರೆ. ಇವರು ತಮ್ಮ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಹೊಂದಿರುತ್ತಾರೆ. ಜೊತೆಗೆ ಪ್ರತಿಯೊಂದರಲ್ಲೂ ಇವರು ತಮ್ಮದೇ
ಆದ ವೈಯಕ್ತಿಕ ಅಭಿಪ್ರಾಯವನ್ನು ಹೊಂದಿರುತ್ತಾರೆ.

ಧನು
ಅತ್ಯಂತ ಧೈರ್ಯಶಾಲಿಯಾದ ಇವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಇವರು ಏನು ಮಾಡಬೇಕು ಎಂದು ಬಯಸುತ್ತಾರೋ ಅದನ್ನೇ ಮಾಡುತ್ತಾರೆ. ಬೇರೆ ವ್ಯಕ್ತಿಗಳ ಅಡೆತಡೆ ಅಥವಾ ಕಟ್ಟುಪಾಡನ್ನು ಇವರು ಇಷ್ಟಪಡರು. ಸಂದರ್ಭಗಳಿಗೆ ಬದ್ಧರಾಗಿರಲು ಬಯಸುವುದಿಲ್ಲ. ಇವರು ತಮ್ಮದೇ ಆದ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೊಂದಿರುವುದರಿಂದ ತಮ್ಮ ಹಾದಿಯಲ್ಲಿ ಬರುವ ಸಹಾಯ ಮತ್ತು ಅಪಾಯವನ್ನು ತಾವೇ ಎದುರಿಸುತ್ತಾರೆ.

ಮೇಷ
ಈ ರಾಶಿಯವರು ಸದಾ ಸ್ವತಂತ್ರರಾಗಿರಲು ಬಯಸುವರು. ಇವರು ಯಾವುದೇ ವಿಚಾರಗಳ ಕುರಿತು ಇತರರ ಅಭಿಪ್ರಾಯಕ್ಕೆ ಕಾಯುವುದಿಲ್ಲ. ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳುವರು. ಅದು ಕೆಲವೊಮ್ಮೆ ತಪ್ಪು ನಿರ್ಧಾರವೂ ಆಗಿರುತ್ತದೆ. ಇವರು ಸಕಾರಾತ್ಮಕ ವಿಚಾರಗಳಿಗೆ ಹೆಚ್ಚು ಒತ್ತುಕೊಡುವುದನ್ನು ಕಲಿಯಬೇಕು. ಜೊತೆಗೆ ಉತ್ತಮ ಭಾವನೆಗಳ ಕಡೆಗೆ ಶ್ರಮಿಸಬೇಕು.

ಮಿಥುನ
ಈ ವ್ಯಕ್ತಿಗಳು ಸಾಮಾನ್ಯವಾಗಿ ಇತರರ ಬಗ್ಗೆ ಅಸಯ್ಯ ಪಡುವುದಿಲ್ಲ. ಜೊತೆಗೆ ಯಾವುದೇ ಕಾರಣಕ್ಕೂ ಇತರರ ಹೃದಯಕ್ಕೆ ನೋವುಂಟುಮಾಡುವಂತಹ ಟೀಕೆಗಳನ್ನು ಮಾಡುವುದಿಲ್ಲ. ಅದರ ಬದಲಿಗೆ ಇತರರಿಗೆ ಸಂತೋಷ ಆಗುವಂತಹ ವಿಚಾರವನ್ನು ಹೇಳುತ್ತಾರೆ. ಅವರಿಗೆ ಸಹಾಯ ಮಾಡುತ್ತಾರೆ. ಅತ್ಯಂತ ಬುದ್ಧಿವಂತರಾದ ಇವರು ತಮ್ಮ ಬಗ್ಗೆ ಯೋಚಿಸುವುದು ಹೆಚ್ಚು. ಅಂತೆಯೇ ತಮಗೆ ಬೇಕಾದ ರೀತಿಯಲ್ಲಿಯೇ ನಡೆದುಕೊಳ್ಳುವರು.

ಮಕರ
ಈ ವ್ಯಕ್ತಿಗಳು ಅತ್ಯಂತ ಶ್ರಮ ಜೀವಿಗಳು ಎನ್ನುವ ಪಟ್ಟಕ್ಕೆ ಹೆಸರುವಾಸಿ ಯಾಗಿದ್ದಾರೆ. ಅಲ್ಲದೆ ಅತ್ಯಂತ ಸ್ವತಂತ್ರ ರಾಶಿಚಿಹ್ನೆಗಳು ಎಂದು ಸಹ ಹೇಳಲಾಗುವುದು. ಇವರು ಆಯ್ಕೆ ಮಾಡುವ ಕೆಲಸವು ಭಾವೋದ್ರಿಕ್ತ ವಿಚಾರವಾಗಿರುತ್ತದೆ. ಆರ್ಥಿಕ ಸ್ವಾತಂತ್ರ್ಯದಿಂದ ಬರುವ ಸ್ವಾತಂತ್ರ್ಯವನ್ನು ಇವರು ಇಷ್ಟಪಡುವರು. ಯಾವುದೇ ನಿರ್ಬಂಧಗಳಿಗೆ ಒಳಗಾಗದೆ ಕೆಲಸ ಮಾಡಲು ಬಯಸುವ ಇವರು ಇತರರ ಅಭಿಪ್ರಾಯಯಗಳಿಗೆ ಪ್ರಾಮುಖ್ಯತೆ ನೀಡರು. ಬದಲಾಗಿ ಮೇಲಾಧಿಕಾರಿಗಳಂತೆ ಕೆಲಸ ಮಾಡಲು ಬಯಸುವರು.

ಕನ್ಯಾ
ಈ ವ್ಯಕ್ತಿಗಳು ಯಾರನ್ನಾದರೂ ಎಂತಹ ಸನ್ನಿವೇಶದಲ್ಲಾದರೂ ನಿಯಂತ್ರಣಕ್ಕೆ ತರಬಹುದು ಎಂದು ಹೇಳಬಹುದು. ತಮ್ಮದೇ ಆದ ರೀತಿಯಲ್ಲಿ ಸಂಶೋಧನೆಯನ್ನು ಮಾಡುತ್ತಾರೆ. ಸತ್ಯದಿಂದ ಇರುವುದನ್ನು ಹೆಚ್ಚು ಬಯಸುವ ಇವರು ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ ಎನ್ನುವುದನ್ನು ಬಲು ಸುಲಭವಾಗಿ ತಿಳಿದಿರುತ್ತಾರೆ. ಆದರೆ ಇತರ ವ್ಯಕ್ತಿಗಳ ಅಭಿಪ್ರಾಯ ಅಥವಾ ಮಾತನ್ನು ಅಷ್ಟಾಗಿ ಪರಿಗಣಿಸುವುದಿಲ್ಲ. ಆದಷ್ಟು ಸ್ವಾವಲಂಭಿಯಾಗಿರಲು ಬಯಸುವರು. ಇವರು ಒಂದು ಗಡಿಯನ್ನು
ಹೊಂದಿದ್ದಾರೆ. ಅದನ್ನು ಮೀರಿ ಯಾರು ಬರುವುದನ್ನು ಇಷ್ಟಪಡುವುದಿಲ್ಲ.



Click it and Unblock the Notifications