2018: ನಿಮ್ಮ ರಾಶಿಯ ಮೇಲೆ ಶನಿಯ ಪ್ರಭಾವ ಹೀಗಿದೆ ನೋಡಿ...

By Deepu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಒಮ್ಮೆ ಶನಿಯ ಪ್ರಭಾವಕ್ಕೆ ಒಳಗಾಗುತ್ತಾನೆ. ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತ, ಧೈರ್ಯದ ಭಾವನೆಯಲ್ಲಿ ಮುನ್ನಡೆಯುವುದನ್ನು ಶನಿ ತಿಳಿಸಿಕೊಡುತ್ತಾನೆ ಎನ್ನಲಾಗುವುದು. ಧೈರ್ಯ ಹಾಗೂ ಜೀವನದ ಸತ್ಯವನ್ನು ತಿಳಿಸಿಕೊಡುವ ಗ್ರಹ ಶನಿಗ್ರಹ. ಇದರ ಪ್ರಭಾವಕ್ಕೆ ಒಳಗಾದಾಗ ವ್ಯಕ್ತಿ ಆರಂಭದಲ್ಲಿ ಕಷ್ಟಗಳು ಬಂದರೆ ಅಂತ್ಯದ ವೇಳೆಯಲ್ಲಿ ಸಂತೋಷದ ದಿನಗಳನ್ನು ತಂದು ಕೊಡುತ್ತಾನೆ. ಸುಖ ಮತ್ತು ದುಃಖದ ಅರಿವನ್ನುಂಟುಮಾಡುವುದೇ ಶನಿಗ್ರಹದ ಕೆಲಸ ಎಂತಲೂ ಸಹ ಹೇಳಲಾಗುತ್ತದೆ.

ಶನಿಯ ಪ್ರಭಾವ ಇದ್ದಾಗ ವ್ಯಕ್ತಿಯ ಸ್ಥಿತಿಯು ಅತ್ಯಂತ ಕಷ್ಟ, ನಷ್ಟ, ನೋವು ಹಾಗೂ ಹತಾಶೆಗಳನ್ನು ಅನುಭವಿಸ ಬೇಕಾಗುತ್ತದೆ. ಹಾಗಾಗಿಯೇ ಜನರು ಶನಿಯನ್ನು ಬೈದುಕೊಳ್ಳುತ್ತಾರೆ. ಅನೇಕ ಮನಸ್ಸಿನಲ್ಲಿ ಶನಿ ಎಂದರೆ ಅಶುಭ ಹಾಗೂ ಜೀವನದಲ್ಲಿ ದಾರಿದ್ರ್ಯ ಎದುರಾಗುತ್ತದೆ ಎನ್ನುವ ಭಾವನೆ ಇದೆ. ಆದರೆ ಅದು ತಪ್ಪು ಎನ್ನುವುದನ್ನು ಅರಿಯಬೇಕಾಗಿದೆ.

2018ರಲ್ಲಿ ಗ್ರಹಗತಿಗಳ ಕೆಲವು ಬದಲಾವಣೆಗಳು ರಾಶಿಚಕ್ರದ ಮೇಲೆ ಪ್ರಭಾವ ಬೀರಲಿವೆ. ಈ ಹಿನ್ನೆಲೆಯಲ್ಲಿ ಕೆಲವು ರಾಶಿಯವರು ಶನಿಯ ಪ್ರಭಾವಕ್ಕೆ ಒಳಗಾಗ ಬೇಕಾಗುವುದು. ಕೆಲವರು ಶನಿಯಿಂದ ಮುಕ್ತಿ ಪಡೆಯಲಿದ್ದಾರೆ. ನಿಮಗೂ ನಿಮ್ಮ ರಾಶಿ ಚಕ್ರದ ಮೇಲೆ ಶನಿಯ ಪ್ರಭಾವ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ಓದಿ...

ಶನಿಯ ಪ್ರಭಾವ

ಶನಿಯ ಪ್ರಭಾವ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2018ರಲ್ಲಿ ಶನಿಯು ತನ್ನ ಮನೆಯನ್ನು ಬದಲಿಸಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿ ಚಕ್ರದ ಮೇಲೆ ಅನೇಕ ಪ್ರಭಾವಿ ಪರಿಣಾಮಗಳು ಬೀರಲಿವೆ.

ಶನಿ ಏನು ಮಾಡುವನು?

ಶನಿ ಏನು ಮಾಡುವನು?

ನಿಮ್ಮ ರಾಶಿ ಚಕ್ರದ ಮೇಲೆ ಶನಿಯ ಪ್ರಭಾವ ಬೀರುತ್ತಿದೆ. ಇದರ ಪರಿಣಾಮವಾಗಿ ಕೆಲವು ರಾಶಿಚಕ್ರದವರು ಆನಂದ, ತೃಪ್ತಿ, ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಕೆಲವರು ದುರಾದೃಷ್ಟ, ದುಃಖ, ಹತಾಷೆ ಹಾಗೂ ಮಾರಕ ಫಲಿತಾಂಶಗಳೊಂದಿಗೆ ಆಕ್ರಮಣಗಳನ್ನು ಅನುಭವಿಸಲಿದ್ದಾರೆ.

2018ರಲ್ಲಿ ಶನಿಯ ಪ್ರಭಾವ

2018ರಲ್ಲಿ ಶನಿಯ ಪ್ರಭಾವ

ಪುರಾತನ ಅಧ್ಯಯನಗಳ ಪ್ರಕಾರ ಜ್ಯೋತಿಷ್ಯ ಶಾಸ್ತ್ರಜ್ಞರು ಗ್ರಹಗತಿಗಳ ಆಗು ಹೋಗುಗಳನ್ನು ಮೊದಲೆ ಅಧ್ಯಯನ ನಡೆಸುವುದರಿಂದ ರಾಶಿ ಚಕ್ರದ ಮೇಲೆ ಯಾವೆಲ್ಲಾ ಪ್ರಭಾವ ಬೀರಲಿದೆ ಎನ್ನುವುದನ್ನು ತಿಳಿಸಿಕೊಳ್ಳುತ್ತಾರೆ. ಇದು ಮನುಜ ಸಮಾಜಕ್ಕೆ ಒಂದು ಅತ್ಯುತ್ತಮ ಸಹಾಯ ಎನ್ನಬಹುದು.

2018ರಲ್ಲಿ ಶನಿಯ ಚಲನೆ

2018ರಲ್ಲಿ ಶನಿಯ ಚಲನೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ನಮ್ಮ ಜೀವಿತಾವಧಿಯಲ್ಲಿ ಕೆಲಟ್ಟದನ್ನು ಮಾಡಿದರೆ ಏನಾಗುತ್ತದೆ ಎನ್ನನುವುದರ ಬಗ್ಗೆ ಅರಿವನ್ನು ಮೂಡಿಸುತ್ತದೆ. ಒಳ್ಳೆಯ ನಡತೆಯನ್ನು ಕಲಿಸುವುದರ ಮೂಲಕ ಜೀವನವನ್ನು ಉಜ್ವಲ ಗೊಳಿಸುತ್ತಾನೆ. ಹಾಗಾದರೆ ಬನ್ನಿ ಮುಂದಿನ ವಿವರಣೆಯಲ್ಲಿ ರಾಶಿ ಚಕ್ರದ ಮೇಲೆ ಉಂಟಾಗುವ ಪರಿಣಾಮ ಅರಿಯಿರಿ.

ಮೇಷ

ಮೇಷ

ಈ ವರ್ಷ ನಿಮ್ಮ ಮೇಲೆ ಶನಿಯ ಪ್ರಭಾವದಿಂದ ವರ್ಷದುದ್ದಕ್ಕೂ ಅನಿರೀಕ್ಷಿತ ಮತ್ತು ಅಸ್ಥಿರ ಸನ್ನಿವೇಶಗಳನ್ನು ಎದುರಿಸುತ್ತೀರಿ. ಆದರೆ ಆರೋಗ್ಯ ಮತ್ತು ಬುದ್ಧಿವಂತಿಕೆಯ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರದಲ್ಲಿ ಸ್ವಲ್ಪ ಇಳಿಮುಖವನ್ನು ಅನುಭವಿಸುವ ಸಾಧ್ಯತೆಗಳಿವೆ. ನಿಮ್ಮ ಶತ್ರುಗಳು ನಿಮ್ಮ ನಿಲುವನ್ನು ಕಡಿಮೆ ಮಾಡುವರು. ಅಲ್ಲದೆ ಸುಳ್ಳು ಆರೋಪಗಳು ನಿಮ್ಮ ಹೆಗಲೇರುವ ಸಾಧ್ಯತೆಗಳಿವೆ.

ವೃಷಭ

ವೃಷಭ

ಈ ವರ್ಷ ನಿಮ್ಮ ದಾರಿಯಲ್ಲಿ ತೊಂದರೆಗಳು ಅನಿವಾರ್ಯವಾಗಿ ಎದುರಾಗುತ್ತಲೇ ಇರುತ್ತವೆ. ನಿಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಪ್ರಯತ್ನಿಸದಿರಿ. ವ್ಯಾಪಾರದಲ್ಲಿ ಹಾಗೂ ಉದ್ಯೋಗದಲ್ಲಿ ಯಾವುದೇ ಹೆಚ್ಚಳವನ್ನು ಕಾಣಲು ಸಾಧ್ಯವಿಲ್ಲ. ಕೆಲಸದಲ್ಲಿ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಅನೇಕ ಕೆಲಸಗಳು ನೆರವೇರುವುದು.

ಮಿಥುನ

ಮಿಥುನ

ಕುಟುಂಬದವರು ಹಾಗೂ ನಿಮ್ಮ ಸಹವರ್ತಿಗಳು ವರ್ಷಪೂರ್ತಿ ಸಂಘಟಿತರಾಗಿರುತ್ತಾರೆ. ವಿವಾಹಿತಾಗಿದ್ದವರು ಕೊಂಚ ಘರ್ಷಣೆಯನ್ನು ಕಾಣಬಹುದು. ಈ ವರ್ಷ ನೀವು ವಾಹನ, ಭೂಮಿ ಅಥವಾ ಆಭರಣಗಳಲ್ಲಿ ಹೂಡಿಕೆ ಮಾಡಬಹುದು.

ಕರ್ಕ

ಕರ್ಕ

ಈ ವರ್ಷ ನಿಮಗೆ ವ್ಯಾಪಾರ ವ್ಯವಸ್ಥೆಯಲ್ಲಿ ಹೆಚ್ಚಳ ಕಾಣುವಿರಿ. ನೀವು ಅಂದುಕೊಂಡ ವಿಚಾರ ನೆರವೇರುವುದು. ಸಂಪತ್ತು ನಿಮ್ಮ ಮಾರ್ಗದಲ್ಲಿ ಬರುವುದು. ಈ ವರ್ಷ ನಿಮಗೆ ಲಾಭದಾಯಕವಾದ ವರ್ಷ ಎಂತಲೇ ಹೇಳಬಹುದು. ನಿಮಗೆ ಬಂಜೆತನದ ಸಮಸ್ಯೆ ಇದ್ದರೆ ಈ ವರ್ಷ ಪರಿಹಾರ ಕಾಣುವುದು.

 ಸಿಂಹ

ಸಿಂಹ

ಕುಟುಂಬದಲ್ಲಿರುವ ಗೊಂದಲ ಹಾಗೂ ಅಶಾಂತಿಗಳು ಈ ವರ್ಷ ಕೊನೆಗಾಣಲಿದೆ. ಈ ವರ್ಷ ನೀವು ಭೂಮಿ ಮತ್ತು ಮನೆಯನ್ನು ಖರೀದಿಸಬಹುದು. ಈ ವರ್ಷ ಬೃಹತ್ ಹೂಡಿಕೆಯನ್ನು ನೀವು ಮಾಡಬಹುದು. ಮೇಲಾಧಿಕಾರಿಗಳು ಮತ್ತು ಹಿರಿಯರು ನಿಮ್ಮೊಂದಿಗೆ ಸಾಕಷ್ಟು ಪ್ರಭಾವಿತರಾಗಿರುತ್ತಾರೆ. ನಿಮ್ಮ ಆಕ್ರೋಶಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಇಲ್ಲವಾದರೆ ಜೀವನದಲ್ಲಿ ಅತ್ಯುತ್ತಮ ವಸ್ತು ಹಾಗೂ ವ್ಯಕ್ತಿಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಕನ್ಯಾ

ಕನ್ಯಾ

ನಿಮಗೆ ಶೇ.100ರಷ್ಟು ಉದ್ಯೋಗದ ಅಗತ್ಯ ಇರುತ್ತದೆ. ಖಾಸಗಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ವ್ಯಾಪಾರದ ವಿಸ್ತರಣೆ ಹೊಂದುವ ಕಲ್ಪನೆ ಹೊಂದುವುದು ಸೂಕ್ತ. ಆದರೆ ಅದರಿಂದ ದೊಡ್ಡ ಪ್ರಮಾಣದ ಅನುಕೂಲದ ಸ್ಥಾನವನ್ನು ನೀವು ಪಡೆದುಕೊಲ್ಳುವುದಿಲ್ಲ. ಹಣ ಬಂದಂತೆ ಕಂಡರೂ ಬಹುಬೇಗ ಖರ್ಚಾಗುವ ಸಾಧ್ಯತೆ ಇದೆ.

ತುಲಾ

ತುಲಾ

ಈ ವರ್ಷ ನಿಮ್ಮ ಆರೋಗ್ಯದೃಷ್ಟಿಯಿಂದ ಉತ್ತಮವಾಗಿರುತ್ತದೆ. ನೀವು ಸಾಕಷ್ಟು ಹಣವನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ಆದರೆ ನಿಮ್ಮ ನಿರೀಕ್ಷೆಯನ್ನು ತಲುಪಲು ಕಷ್ಟವಾಗುವುದು. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಲು ಉತ್ತಮ ಸಮಯ. ಸುತ್ತಲಿನ ಜನರು ಸಹ ನಿಮಗೆ ಉತ್ತಮ ಬೆಂಬಲ ನೀಡುವರು.

ವೃಶ್ಚಿಕ

ವೃಶ್ಚಿಕ

ನಿಮ್ಮ ಕಾರ್ಯದಲ್ಲಿ ಬಲು ಸುಲಭವಾಗಿ ಯಶಸ್ಸು ದೊರೆಯದು. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ನಿಮ್ಮ ಆರೋಗ್ಯ ಸಹಕರಿಸದು. ಕೆಲಸದಲ್ಲಿ ತೋರುವ ಅಸಡ್ಡೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಕಾರಣವಾಗುವ ಸಾಧ್ಯತೆಗಳಿವೆ. ದೂರದ ಪ್ರಯಾಣಕ್ಕೆ ಹಣ ವ್ಯಯಿಸುವ ಸಾಧ್ಯತೆಗಳಿವೆ. ಹೊರಗಿನವರನ್ನು ನಂಬದಿರಿ.

ಧನು

ಧನು

ಈ ವರ್ಷ ನಿಮಗೆ ಅನಾರೋಗ್ಯದ ಸಮಸ್ಯೆ ಕಾಡುವುದು. ಕೆಲಸದ ಮುಂಭಾಗದಲ್ಲಿ ಗುರಿಯನ್ನು ಸಾಧಿಸಲು ಇದು ಕಠಿಣವಾದ ಅವಧಿ. ಆದಷ್ಟು ತಾಳ್ಮೆಯಿಂದ ಇರಬೇಕು. ನಿಮ್ಮ ವ್ಯವಹಾರದ ಪ್ರತಿಸ್ಪರ್ಧಿಗಳು ನಿಮ್ಮ ಸಹೋದ್ಯೋಗಿಗಳ ಮೂಲಕ ನಿಮ್ಮ ದೌರ್ಬಲ್ಯವನ್ನು ಬಯಲು ಮಾಡಬಹುದು. ಆದಷ್ಟು ಎಚ್ಚರಿಕೆಯಿಂದ ಇರಿ.

ಮಕರ

ಮಕರ

ಅನಗತ್ಯ ಪ್ರಯಾಣ ಮತ್ತು ವ್ಯಾಪಾರದ ಏರಿಳಿತಗಳು ನಿಮ್ಮ ಮಾನಸಿಕ ಶಾಂತಿಯನ್ನು ಹಾಳುಮಾಡುವುದು. ವ್ಯವಹಾರದಲ್ಲಿ ಅಷ್ಟಾಗಿ ಸ್ಥಿರತೆ ಕಾಣದು. ಹೊಸ ಮನೆ ಖರೀದಿಸಲು ನೀವು ಆಸಕ್ತರಾಗಬಹುದು. ಎದುರಾಳಿಗಳು ನಿಮ್ಮ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಗಳಿವೆ. ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಇರಿ.

ಕುಂಭ

ಕುಂಭ

ಹಳೆಯ ಸಮಸ್ಯೆಗಳು ಈ ವರ್ಷ ಪರಿಹಾರ ಕಾಣುವುದು. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಕುಟುಂಬ ಮತ್ತು ಸ್ನೇಹಿತರು ಸಹಕಾರವನ್ನು ನೀಡುವರು. ಹಳೆಯ ವಿವಾದ ಈ ವರ್ಷ ಮುಕ್ತಿಯನ್ನು ಕಾಣುವುದು. ಈ ವರ್ಷ ನಿಮ್ಮ ಕುಟುಂಬಕ್ಕೆ ಒಳ್ಳೆಯ ಸ್ಥಿತಿ ಎದುರಾಗುವುದು.

ಮೀನ

ಮೀನ

ಆದಾಯದ ಮೂಲ ಈ ವರ್ಷ ಹೆಚ್ಚಳವನ್ನು ಕಾಣುವುದು. ವ್ಯಾಪಾರದ ಮುಂಭಾಗದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಬಹುಮಟ್ಟಿಗೆ ನಿಕಟ ವ್ಯಕ್ತಿಯು ನಿಮ್ಮನ್ನು ವಿಶ್ವಾಸಘಾತ ಉಂಟುಮಾಡುವರು. ಸರ್ಕಾರ ಸಂಬಂಧಿತ ಸಮಸ್ಯೆ ಕಾಡುವ ಸಾಧ್ಯತೆಗಳಿವೆ.

For Quick Alerts
ALLOW NOTIFICATIONS
For Daily Alerts

    Read more about: life facts ಜೀವನ
    English summary

    In 2018 how lord Shani trouble your zodiac sign

    Do you know that Lord Shani stays for almost two and a half years in your moon sign? Shani is considered to be one of the powerful lords, who can make or break your luck.In the coming year 2018, find out if Lord Shani is going to be kind or angry on your zodiac sign!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more