Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೊಡುವ ಬ್ರಾ ಕೂಡ ಮಹಿಳೆಯರ ವ್ಯಕ್ತಿತ್ವವನ್ನು ಪ್ರಕಟಿಸಬಲ್ಲದು!!
ನಮ್ಮ ನಡವಳಿಕೆಯಲ್ಲಿ ಕಂಡುಬರುವ ಚಿಕ್ಕ ಚಿಕ್ಕ ಚರ್ಯೆಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ವಿವರಗಳನ್ನು ನೀಡುತ್ತವೆ. ಆದರೆ ಇದನ್ನು ಗಮನಿಸಲು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಸಮಾನ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳ ಕೆಲವು ಚರ್ಯೆಗಳೂ ಸಮಾನವಾಗಿರುತ್ತವೆ. ಈಗ, ಇಲ್ಲೊಂದು ಕುತೂಹಲಕಾರಿಯಾದ ವಿಷಯವಿದೆ. ನಿಮಗೆ ಗೊತ್ತೇ? ನೀವು ತೊಡುವ ಬ್ರಾ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದು? ಬನ್ನಿ, ನಿಮ್ಮ ಆಯ್ಕೆಯ ಬ್ರಾ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ವಿವರಗಳನ್ನು ನೀಡಬಲ್ಲುದು, ಇವು ಯಾವುವು? ನೋಡೋಣ....

ಪಟ್ಟಿಯಿಲ್ಲದ ಬ್ರಾ (Strapless Bra)
ನೀವು ಜೀವನದ ಹರಿವಿನಲ್ಲಿ ಸುಲಲಿತವಾಗಿ ಮುಂದೆ ಸಾಗುವ ಮಹಿಳೆಯಾಗಿದ್ದೀರಿ. ನೀವು ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಹಾಗೂ ಸೌಮ್ಯ ಸ್ವಭಾವದವರೂ ಆಗಿದ್ದೀರಿ. ಆದರೆ ಇನ್ನೊಂದು ಮಗ್ಗುಅಲ್ಲಿ ನಿಮ್ಮ ಮನದಾಳದಲ್ಲಿ ಹುದುಗಿರುವ ಕೆಲವು ನಂಬುಗೆಗಳು ನಿಮ್ಮನ್ನು ಪ್ರಶ್ನಿಸುವ ಸಮಯದಲ್ಲಿ ನಿಮ್ಮನ್ನು ದೃಢನಿಲುವಿನಲ್ಲಿರಿಸಲು ನೆರವಾಗುತ್ತದೆ.

ಸ್ತನಗಳನ್ನು ಮೇಲೆತ್ತುವ ಬ್ರಾ (Push-up Bra)
ನಿಮ್ಮ ವ್ಯಕ್ತಿತ್ವದಲ್ಲಿ ನಿಮ್ಮ ಆತ್ಮವಿಶ್ವಾಸವೂ ಒಂದು ಪ್ರಮುಖ ಗುಣವಾಗಿದೆ. ಇನ್ನೊಂದು ಮಗ್ಗುಲಲ್ಲಿ, ನಿಮ್ಮ ಕಾಮನೆಗಳ ವಿವರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ನೀವು ಯಾವುದೇ ಅಳುಕು ಎದುರಿಸುವುದಿಲ್ಲ ಹಾಗೂ ನಿಮಗೆ ಬೇಕಾದುದನ್ನು ಪಡೆಯಲು ನೀವು ಅಗತ್ಯ ಕ್ರಮಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ಕೈಗೊಳ್ಳುವವರಾಗಿದ್ದೀರಿ.
ಈ ಚೈನೀಸ್ ರೆಸ್ಟೋರೆಂಟ್‌ಗೆ ಮಹಿಳೆಯರೇ ಜಾಸ್ತಿ ಬರುತ್ತಾರಂತೆ! ಯಾಕೆ ಗೊತ್ತೇ?
ಸ್ತನಗಳನ್ನು ಪೂರ್ಣವಾಗಿ ಆವರಿಸುವ ಬ್ರಾ (Underwire Bra)
ಈ ಬ್ರಾ ನಿಮಗೆ ಇಷ್ಟದ್ದಾಗಿದ್ದರೆ ಇದು ನೀವು ನಿಮ್ಮ ಆಪ್ತರ ಯಾವುದೇ ಅಗತ್ಯಕ್ಕೆ ತಕ್ಷಣ ನೆರವು ನೀಡಲು ಧಾವಿಸುವ ಗುಣವನ್ನು ಬಿಂಬಿಸುತ್ತದೆ. ನೀವು ನಿಮ್ಮ ಗುಂಪಿನ ನಾಯಕಿಯಾಗಲು ಇಷ್ಟಪಡುವ ಹಾಗೂ ನಿಮ್ಮ ತಂಡವನ್ನು ತಮ್ಮ ಹಿಡಿದಿಟ್ಟು ಕೊಳ್ಳುವುದನ್ನು ಬಯಸುತ್ತೀರಿ. ನಿಮ್ಮ ಜೊತೆಯನ್ನು ನಿಮ್ಮ ಆಪ್ತರು ಹೆಚ್ಚು ಇಷ್ಟಪಡುತ್ತಾರೆ ಹಾಗೂ ನಿಮ್ಮ ಉಪಸ್ಥಿತಿಯಲ್ಲಿ ಇವರು ಹೆಚ್ಚು ಸುರಕ್ಷತೆಯ ಭಾವನೆಯನ್ನು ಅನುಭವಿಸುತ್ತಾರೆ.

ಕ್ರೀಡಾ ಬ್ರಾ (Sports Bra)
ಈ ಬಗೆಯ ಬ್ರಾವನ್ನು ನೀವು ಆಯ್ಕೆ ಮಾಡಿದ್ದರೆ ನೀವು ಮಹತ್ವಾಕಾಂಕ್ಷಿ ಮಹಿಳೆಯಾಗಿದ್ದೀರಿ ಹಾಗೂ ನಿಮ್ಮಲ್ಲಿ ಸಾಕಷ್ಟು ಕ್ರೀಡಾಮನೋಭಾವನೆ ಇದೆ ಎಂದು ಇದು ಬಿಂಬಿಸುತ್ತದೆ. ನೀವು ಆರೋಗ್ಯ ಹಾಗೂ ದೇಹದಾರ್ಢ್ಯತೆಗೆ ಹೆಚ್ಚಿನ ಮಹತ್ವ ನೀಡುತ್ತೀರಿ ಹಾಗೂ ಯಾವುದೇ ಸಮಯದಲ್ಲಿ ಕೆಲಸಕ್ಕೆ ಸಿದ್ದರಾಗುತ್ತೀರಿ ಎಂದು ಇದು ತಿಳಿಸುತ್ತದೆ.

ನಡುಭಾಗ ತೆರೆದ ಬ್ರಾ (Halter-neck Bra)
ಈ ಬಗೆಯ ಬ್ರಾವನ್ನು ಇಷ್ಟಪಡುವ ವ್ಯಕ್ತಿ ನೀವಾಗಿದ್ದರೆ ನೀವು ಸ್ವತಂತ್ರ ವ್ಯಕ್ತಿತ್ವ ಹೊಂದಿಲ್ಲದಿರುವುದನ್ನು ಇದು ವ್ಯಕ್ತಪಡಿಸುತ್ತದೆ. ನೀವು ನಿಮ್ಮ ಸಂತೋಷಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸಿರುತ್ತೀರಿ. ನೀವು ಸ್ವತಂತ್ರರಾಗಬೇಕಾದರೆ ಇನ್ನೊಬ್ಬರ ಅವಲಂಬನೆಯನ್ನು ಬಿಟ್ಟು ನಿಮ್ಮ ಸ್ವಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕಾಗುತ್ತದೆ.

ಸಡಿಲವಾದ ಬ್ರಾ (Bralette)
ಈ ಕಂಚುಕಗಳು ಸ್ತನಗಳ ಮೇಲೆ ಯಾವುದೇ ಒತ್ತಡ ಹೇರದೇ ತಮ್ಮ ಸ್ವಾಭಾವಿಕ ಗಾತ್ರವನ್ನು ಪ್ರಕಟಿಸುತ್ತವೆ. ಈ ಕಂಚುಕ ಇಷ್ಟಪಡುವ ಮಹಿಳೆಯರು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಮೇಲಿನಿಂದ ಇವರು ಕಠಿಣರು ಹಾಗೂ ಒರಟರು ಎಂದು ತೋರಿದರೂ ಇವರ ಅಂತರಂಗವನ್ನು ಕಂಡವರಿಗೆ ಇವರು ದಯಾಪರರು ಹಾಗೂ ನೋವಿಗೆ ಸ್ಪಂದಿಸುವವರೂ ಆಗಿರುತ್ತಾರೆ.

ಎದೆಯನ್ನು ಪೂರ್ಣವಾಗಿ ಆವರಿಸುವ ಬ್ರಾ (Full Coverage)
ಈ ಬಗೆಯ ಬ್ರಾವನ್ನು ಧರಿಸುವ ಮಹಿಳೆಯರು ಜನ್ಮತಃ ನಾಯಕಿಯಾಗಿರುತ್ತಾರೆ. ಯಾವುದಾದರೊಂದು ವಿಷಯದ ನಾಯಕತ್ವ ವಹಿಸುವ ಸಮಯದಲ್ಲಿ ಜನರು ನಿಮ್ಮನ್ನೇ ಆಯ್ದುಕೊಳ್ಳುತ್ತಾರೆ. ಇನ್ನೊಂದು ಮಗ್ಗುಲಲ್ಲಿ, ಜನರ ಕಷ್ಟಕಾಲದಲ್ಲಿ ನೆರವು ನೀಡಲು ನೀವು ಸದಾ ಲಭ್ಯರಿರುತ್ತೀರಿ ಎಂದು ಎಲ್ಲರಿಗೂ ತಿಳಿದಿರುತ್ತದೆ ಹಾಗೂ ಇವರನ್ನು ನೀವೆಂದೂ ನಿರಾಶೆಗೊಳಿಸಲಾರಿರಿ.

ಹತ್ತಿಯ ಬ್ರಾ (Cotton Bra)
ಮೃದುವಾದ ಹತ್ತಿಯ ಬಟ್ಟೆಯ ಬ್ರಾವನ್ನು ಇಷ್ಟಪಡುವ ವ್ಯಕ್ತಿ ನೀವಾಗಿದ್ದರೆ ಯಾವುದೇ ಅಪಾಯ ಎದುರಾಗುವ ಸಂದರ್ಭದಲ್ಲಿ ನೀವು ವ್ಯಾಕುಲರಾಗುವುದನ್ನು ತಪ್ಪಿಸಲು ಹಾಗೂ ಇಂತಹ ಸಂದರ್ಭ ಎದುರಾಗದೇ ಇರಲು ಎಲ್ಲಾ ಕ್ರಮಗಳನ್ನು ಮುಂಚಿತವಾಗಿ ಕೈಗೊಳ್ಳುವ ವ್ಯಕ್ತಿತ್ವ ನಿಮ್ಮದಾಗಿದೆ.

ಹಲವು ಪಟ್ಟಿಗಳಿಂದ ಕೂಡಿದ ಬ್ರಾ (Cage Bra)
ಒಂದು ವೇಳೆ ಈ ಬ್ರಾ ನಿಮ್ಮ ಆಯ್ಕೆಯಾಗಿದ್ದರೆ ನೀವು ಎಲ್ಲಾ ವಿಷಯದಲ್ಲಿ ಪ್ರಭುತ್ವ ಸಾಧಿಸಲು ಇಚ್ಛಿಸುವ ಮಹಿಳೆ ಎಂದು ಇದು ಸೂಚಿಸುತ್ತದೆ, ನಿಮ್ಮ ಸಂಗಾತಿಯ ಕುರಿತಾಗಿ ಸಹಾ! ಯಾವುದೇ ಸಂದರ್ಭದಲ್ಲಿ ನೀವು ಮುಂದಾಳತ್ವ ವಹಿಸಲು ಇಷ್ಟಪಡುತ್ತೀರಿ ಹಾಗೂ ನಿಮಗೆ ನಾಯಕತ್ವದ ಹೊಣೆಯನ್ನು ನಿರಾಕರಿಸಿದಾಗ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ನಿಮ್ಮ ಸಾಮರ್ಥ್ಯಕ್ಕೂ ಮೀರಿ ಕಾರ್ಯನಿರ್ವಹಿಸುವ ವ್ಯಕ್ತಿತ್ವ ಹೊಂದಿದ್ದೀರಿ.

ಸ್ತನತೊಟ್ಟುಗಳನ್ನು ಮಾತ್ರವೇ ಮರೆಮಾಚುವ ಬ್ರಾ (The Nipple Pasties)
ಒಂದು ವೇಳೆ ಈ ಬ್ರಾಗಳು ನಿಮ್ಮ ಆಯ್ಕೆಯಾಗಿದ್ದರೆ 'ಏನೇ ಬರಲಿ, ನೋಡಿಕೊಳ್ಳೋಣ' ಎಂಬ ಹುಚ್ಚು ಧೈರ್ಯದಲ್ಲಿ ಮುನ್ನುಗ್ಗುವ ವ್ಯಕ್ತಿತ್ವ ನಿಮ್ಮದಾಗಿದೆ. ನಿಮಗೆ ಎದುರಾಗುವ ಯಾವುದೇ ಸಾಹಸಕಾರ್ಯವನ್ನು, ಇದರಲ್ಲಿ ಎಷ್ಟೇ ಅಪಾಯವಿರಲಿ, ನೀವು ಎಂದೂ ತಪ್ಪಿಸಿಕೊಳ್ಳಲು ಇಚ್ಛಿಸುವುದಿಲ್ಲ. ನೀವು ಸದಾ ಹೊಸತನವನ್ನು ಇಷ್ಟಪಡುವ ಹಾಗೂ ಗೆಲುವಿನ ಹಾದಿಯಲ್ಲಿ ಸೋಲು ಎದುರಾದರೆ ಎಂದಿಗೂ ಹಿಮ್ಮೆಟ್ಟುವವರಲ್ಲ.



Click it and Unblock the Notifications











