ಈ ಚೈನೀಸ್ ರೆಸ್ಟೋರೆಂಟ್‌‌‌ಗೆ ಮಹಿಳೆಯರೇ ಜಾಸ್ತಿ ಬರುತ್ತಾರಂತೆ! ಯಾಕೆ ಗೊತ್ತೇ?

By: Arshad
Subscribe to Boldsky

ಗ್ರಾಹಕರನ್ನು ಸೆಳೆಯಲು ವಾಣಿಜ್ಯ ಸಂಸ್ಥೆಗಳು ಯಾವ ರೀತಿಯ ಪ್ರಲೋಭನೆಗಳನ್ನು ಒಡ್ಡುತ್ತವೆ ಎಂಬುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಕೆಲವು ಪ್ರಲೋಭನೆಗಳು ಅತಿ ವಿಚಿತ್ರ ಹಾಗೂ ಹುಬ್ಬೇರಿಸುವಂತಹದ್ದೂ ಇರುತ್ತವೆ. ಇಂತಹ ಒಂದು ಪ್ರಲೋಭನೆ ಎಂದರೆ ಒಂದು ಚೈನೀಸ್ ರೆಸ್ಟೋರೆಂಟ್‌ನಲ್ಲಿ ಮಹಿಳೆಯರಿಗೆ ನೀಡಲಾಗುವ ರಿಯಾಯಿತಿ ಅವರ ಕಂಚುಕದ ಗಾತ್ರವನ್ನು ಅನುಸರಿಸಿದೆ.

ಮಹಿಳೆಯರೇ ಬ್ರಾ ಕೊಳ್ಳುವಾಗ ಮತ್ತು ಧರಿಸುವಾಗ ಇರಲಿ ಎಚ್ಚರ!

ಅಂದರೆ ಕಂಚುಕದ ಗಾತ್ರ ಹೆಚ್ಚಿದ್ದಷ್ಟೂ ರಿಯಾಯಿತಿಯೂ ಹೆಚ್ಚು! ಈ ಬಗೆಯ ಪ್ರಚಾರ ಹೆಚ್ಚಿನವರಿಗೆ ವಿಚಿತ್ರ ಮತ್ತು ಅಸಹ್ಯವೆನಿಸಬಹುದು. ಆದರೆ ವಾಸ್ತವದಲ್ಲಿ ಈ ರಿಯಾಯಿತಿ ಪಡೆಯಲು ಮಹಿಳೆಯರು ಮುಗಿಬೀಳುತ್ತಿದ್ದುರುವುದರ ಪರಿಣಾಮವಾಗಿ ಹೋಟೆಲಿನ ವಹಿವಾಟು 20%ರಷ್ಟು ಹೆಚ್ಚಿರುವುದು ಮಾತ್ರ ಸುಳ್ಳಲ್ಲ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ...

ಈ ರೆಸ್ಟೋರೆಂಟ್ ಹೆಸರು: ಟ್ರೆಂಡಿ ಶ್ರಿಂಪ್ ರೆಸ್ಟೋರೆಂಟ್

ಈ ರೆಸ್ಟೋರೆಂಟ್ ಹೆಸರು: ಟ್ರೆಂಡಿ ಶ್ರಿಂಪ್ ರೆಸ್ಟೋರೆಂಟ್

ಇದುವರೆಗೆ ಸಾಮಾನ್ಯ ವಹಿವಾಟು ಮಾಡುತ್ತಿದ್ದ ಈ ಹೋಟೆಲು ಚೀನಾದ ಹ್ಯಾಂಗ್ಜೌ ಎಂಬ ನಗರದಲ್ಲಿದ್ದು ಮಹಿಳೆಯರ ಕಂಚುಕದ ಗಾತ್ರಕ್ಕೆ ಸರಿಸಮನಾದ ರಿಯಾಯಿತಿ ನೀಡಲಾಗುವುದು ಎಂದು ಅಬ್ಬರದ ಪ್ರಚಾರ ನೀಡುತ್ತಿದೆ. ಅಂದರೆ ಎಷ್ಟು ದೊಡ್ಡ ಗಾತ್ರದ ಕಂಚುಕದ ಒಡತಿಯರಾಗುತ್ತೀರೋ ಅಷ್ಟು ಹೆಚ್ಚು ರಿಯಾಯಿತಿ.

ಆದರೆ ವಿರೋಧವೂ ಎದುರಾಯ್ತು, ಫಲಕವನ್ನೂ ಇಳಿಸಬೇಕಾಯ್ತು

ಆದರೆ ವಿರೋಧವೂ ಎದುರಾಯ್ತು, ಫಲಕವನ್ನೂ ಇಳಿಸಬೇಕಾಯ್ತು

ಇದೇನಿದು ಅಸಹ್ಯ! ಎಂಬ ಉದ್ಗಾರ ಹೊರಡಿಸಿದ ಕೆಲವರು ಈ ಬಗ್ಗೆ ನಗರಪಾಲಿಕೆಯಲ್ಲಿ ದೂರು ನೀಡಿದರು. ಇವರ ಪ್ರಕಾರ ಕೇವಲ ಒಳ ಉಡುಪುಗಳನ್ನು ತೊಟ್ಟು ರಿಯಾಯಿತಿಗಾಗಿ ಸಾಲು ನಿಂತಿರುವ ಮಹಿಳೆಯರನ್ನು ಈ ವ್ಯಕ್ತಿಗಳು ಇಷ್ಟಪಡುತ್ತಿರಲಿಲ್ಲ.

Image Source

ಅಷ್ಟಕ್ಕೂ ಈ ಫಲಕದಲ್ಲಿ ಏನಿತ್ತು?

ಅಷ್ಟಕ್ಕೂ ಈ ಫಲಕದಲ್ಲಿ ಏನಿತ್ತು?

ಈ ಫಲಕದಲ್ಲಿ "The whole city is looking for BREASTS" (ಇಡಿಯ ನಗರವೇ ವಕ್ಷಸ್ತಲವನ್ನು ನಿರೀಕ್ಷಿಸುತ್ತಿದೆ) ಎಂಬ ಒಕ್ಕಣೆಯನ್ನು ದೊಡ್ಡದಾಗಿ ಮುದ್ರಿಸಿದ್ದುದ್ದು ಹಲವು ವ್ಯಕ್ತಿಗಳ ವಿರೋಧಕ್ಕೆ ಕಾರಣವಾಗಿತ್ತು. ಫಲಕದಲ್ಲಿ ವಿವಿಧ ಗಾತ್ರದ ಸ್ತನದ ಮಹಿಳೆಯರ ರೇಖಾಚಿತ್ರವನ್ನು ಬರೆದು ಕಪ್ ಗಾತ್ರಕ್ಕನುಸಾರವಾಗಿ ಎಷ್ಟು ರಿಯಾಯಿತಿ ದೊರಕುತ್ತದೆ ಎಂದೂ ವಿವರಿಸಲಾಗಿತ್ತು.

ಈ ಬಗ್ಗೆ ಹೋಟೆಲಿನ ವ್ಯವಸ್ಥಾಪಕರು ಏನು ಹೇಳುತ್ತಾರೆ?

ಈ ಬಗ್ಗೆ ಹೋಟೆಲಿನ ವ್ಯವಸ್ಥಾಪಕರು ಏನು ಹೇಳುತ್ತಾರೆ?

ಈ ರೆಸ್ಟೋರೆಂಟಿನ ವ್ಯವಸ್ಥಾಪಕರ ಪ್ರಕಾರ ಈ ಪ್ರಚಾರದಿಂದ ವ್ಯವಹಾರ ಶೇಖಡಾ ಇಪ್ಪತ್ತಕ್ಕೂ ಹೆಚ್ಚಿದೆ ಹಾಗೂ ಇಡಿಯ ವಿಶ್ವದಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಅಲ್ಲದೇ ಈ ರೆಸ್ಟೋರೆಂಟಿಗೆ ಬರುವ ಕೆಲವು ಯುವತಿಯರು ತಮ್ಮ ಸ್ತನಗಳ ಗಾತ್ರದ ಬಗ್ಗೆ ಹೆಚ್ಚು ಹೆಮ್ಮೆ ಪಡುತ್ತಿದ್ದು ಇದರನ್ನು ಪ್ರಕಟಿಸಲು ಯಾವುದೇ ಸಂಕೋಚ ಪಡುತ್ತಿರಲಿಲ್ಲ ಎಂದೂ ಉದ್ಗರಿಸಿದ್ದಾರೆ.

Image Source

ಈ ರಿಯಾಯಿತಿಯನ್ನು ಹೋಟೆಲಿನ ಪರಿಚಾರಿಕೆಯರು ನೀಡುತ್ತಾರೆ

ಈ ರಿಯಾಯಿತಿಯನ್ನು ಹೋಟೆಲಿನ ಪರಿಚಾರಿಕೆಯರು ನೀಡುತ್ತಾರೆ

ಗ್ರಾಹಕರಾಗಿ ಆಗಮಿಸುವ ಮಹಿಳೆಯರ ಕಂಚುಕಗಾತ್ರವನ್ನು ಹೋಟೆಲಿನ ಪರಿಚಾರಿಕೆಯರೇ ಅಳತೆ ಮಾಡಿ ಪಡೆದುಕೊಳ್ಳುತ್ತಾರೆ. ಈ ಸ್ಥಳದಲ್ಲಿ ಪುರುಷರಿಗೆ ಪ್ರವೇಶವಿಲ್ಲ! ಇದರಿಂದ ಗ್ರಾಹಕರಿಗೆ ಯಾವುದೇ ಮುಜುಗರ ಉಂಟಾಗದೇ ಭರ್ಜರಿ ಊಟ ಮಾಡಿ ರಿಯಾಯಿತಿ ಪಡೆದುಕೊಳ್ಳಲು ಸಾಧ್ಯವಿರುವುದರಿಂದಲೇ ಹೆಚ್ಚು ಹೆಚ್ಚು ಮಹಿಳೆಯರು ಗ್ರಾಹಕರಾಗಿ ಆಗಮಿಸುತ್ತಿದ್ದಾರೆ.

ಇಲ್ಲಿ ರಿಯಾಯಿತಿ ಪಡೆಯಲು ಧೈರ್ಯವಿದೆಯೇ?

ಇಲ್ಲಿ ರಿಯಾಯಿತಿ ಪಡೆಯಲು ಧೈರ್ಯವಿದೆಯೇ?

ಒಂದು ವೇಳೆ ನೀವು ಮಹಿಳೆಯಾಗಿದ್ದು ಈ ರೀತಿಯ ರಿಯಾಯಿತಿ ಪಡೆದುಕೊಳ್ಳಲು ನಿಮಗೆ ಧೈರ್ಯವಿದೆಯೇ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

English summary

Chinese Restaurant Where Your Bra Size Gets You A Discount!

You would be amused to know the latest trend during sales and offers is to get a discount based on your weight or bra size. A Chinese restaurant has taken the trend to another level by giving the female customers discounts based on their bra size! Though this sounds bizarre and weird, the restaurant claims to have increased their business by about 20% and this is no joke, but serious business! Find out more about this bizarre trend set by the restaurant...
Subscribe Newsletter