Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಷ್ಟಕ್ಕೂ ಭಾರತದಲ್ಲಿ ವೇಶ್ಯಾವಾಟಿಕೆ ಪ್ರಾರಂಭವಾದದ್ದು ಯಾವಾಗ?
ಭಾರತದ ಇತಿಹಾಸ ಭವ್ಯ ಹಾಗೂ ರೋಚಕವಾಗಿದೆ. ಈ ಇತಿಹಾಸದಲ್ಲಿ ವೇಶ್ಯಾವಾಟಿಕೆ ಎಂಬ ಪದ ಅಸಮಂಜನ ಎನಿಸುತ್ತದೆ. ಏಕೆಂದರೆ ವಿವಾಹ ಪದ್ಧತಿಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸುತ್ತಾ ಬಂದಿರುವ, ಕುಟುಂಬ ವ್ಯವಸ್ಥೆ ಹಾಗೂ ಗೌರವಕ್ಕೆ ಅತ್ಯಂತ ಹೆಚ್ಚಿನ ಮೌಲ್ಯ ನೀಡುವ ನಮ್ಮ ಭಾರತದಲ್ಲಿ ಈ ಪದ್ಧತಿ ಹೇಗೆ ನುಸುಳಿತು?
ಈ ಪ್ರಶ್ನೆಗೆ ಉತ್ತರವನ್ನು ಪಡೆಯಲು ಇಂದಿನ ಲೇಖನದಲ್ಲಿ ಕೆಲವು ಮಾಹಿತಿಗಳನ್ನು ನೀಡಲಾಗಿದ್ದು ಇವು ಈ ನಗ್ನ ಸತ್ಯವನ್ನು ಸಮಗ್ರವಾಗಿ ಬಿಚ್ಚಿಡುತ್ತವೆ. ಇವು ನಿಮ್ಮನ್ನು ಖಂಡಿತವಾಗಿಯೂ ಆಚ್ಚರಿಗೊಳಿಸಲಿವೆ...

ಇದೊಂದು ಅತಿ ಪ್ರಾಚೀನ ಉದ್ಯಮ
ಪ್ರಾಯಶಃ ಇದೊಂದು ವಿಶ್ವದ ಅತ್ಯಂತ ಪ್ರಾಚೀನವಾದ ಉದ್ಯಮವಿರಬಹುದು. ಭಾರತದ ಇತಿಹಾಸದ ಪ್ರಕಾರ, ವೇಶ್ಯಾವಾಟಿಕೆ ಬ್ರಿಟಿಷರು ಇಲ್ಲಿ ಬರುವುದಕ್ಕಿಂತಲೂ ಮೊದಲೇ ಇತ್ತು. ಈ ಉದ್ಯಮದ ಬೇರುಗಳು ಪ್ರಾಚೀನ ಕಾಲದವರೆಗೂ ಇದ್ದಿರಬಹುದು.

ಇವೆಲ್ಲವೂ ಅರಮನೆಯ ಪ್ರತಿಷ್ಠೆಯ ರೂಪದಲ್ಲಿ ಪ್ರಾರಂಭವಾಗಿವೆ
ಈ ಉದ್ಯಮ ಕದ್ದು ಮುಚ್ಚಿ ನಡೆಯುತ್ತಿದ್ದರೂ ಬ್ರಿಟಿಷರು ಭಾರತಕ್ಕೆ ಬಂದ ಬಳಿಕ ಎಗ್ಗಿಲ್ಲದೇ ಮುಂದುವರೆಯಿತು ಹಾಗೂ ಕೆಲವೇ ವರ್ಷಗಳಲ್ಲಿ ವಿಪರೀತವಾಯಿತು. ಇದು ಇಂದಿಗೂ ಮುಂದುವರೆಯುತ್ತಿದೆ. ಇಂದು ಸರ್ಕಾರದ ಲೈಸನ್ಸ್ ಪಡೆದೇ ನಡೆಯುವ ವಾಟಿಕೆಗಳಿವೆ ಹಾಗೂ ಹೆಚ್ಚಿನ ಎಲ್ಲಾ ನಗರಗಳಲ್ಲಿ ಡ್ಯಾನ್ಸ್ ಬಾರ್, ಖಾಸಗಿ ಕ್ಲಬ್ ಗಳಿವೆ. ಇಲ್ಲಿ ಕಾರ್ಯನಿರ್ವಹಿಸುವ ಬಾರ್ ಹುಡುಗಿಯರು ಈ ಸ್ಥಳದ ಮಹತ್ವವನ್ನು ಹೆಚ್ಚಿಸಿದಂತೆಯೇ ಹಿಂದಿನ ಕಾಲದಲ್ಲಿ ಅಂದರೆ ಸುಮಾರು ಹದಿನೈದನೇ ಶತಮಾನದಲ್ಲಿ ಅರಮನೆಯಲ್ಲಿ ನರ್ತಿಸುವ ಈ ನರ್ತಕಿಯರು ಅರಮನೆಯ ಪ್ರತಿಷ್ಠೆಯನ್ನೂ ಹೆಚ್ಚಿಸುತ್ತಿದ್ದರು.

’ಖಾದಿ ಮೆಹಫಿಲ್’ ಪ್ರದರ್ಶನಗಳು
ಇಂದಿನ ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿದ್ದ ರಾಜ-ರಾಜವಾಡರು ಹಾಗೂ ಇತರ ಪ್ರತಿಷ್ಠಿತ ಕುಟುಂಬವರ್ಗದವರು ಅಂದಿನ ಕಾಲದ ಖ್ಯಾತ ನರ್ತಕಿಯರನ್ನು "ಖಾದಿ ಮೆಹಫಿಲ್" ಎಂಬ ನೃತ್ಯ ಪ್ರದರ್ಶನಕ್ಕೆ ಆಹ್ವಾನಿಸುತ್ತಿದ್ದರು. ಈ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡುವ ಇವರನ್ನು ಪ್ರತಿಷ್ಠಿತರಂತೆ ಗೌರವಿಸಲಾಗುತ್ತಿತ್ತು. ಈ ಬಗ್ಗೆ ವಿವರಣೆ ನೀಡಿರುವ ಇತಿಹಾಸಕಾರರು ಮೊಗಲರು, ಬ್ರಿಟಿಷ್ ಆಳ್ವಿಕೆ, ಹಿಂದೂ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿಯೂ ಈ ನರ್ತಕಿಯರಿಗೆ ಹೆಚ್ಚಿನ ಗೌರವ ಸಲ್ಲಿಸಲಾಗುತ್ತಿತ್ತು ಎಂದು ದಾಖಲಿಸಿದ್ದಾರೆ. ಆದರೆ ಕಾಲಕ್ರಮೇಣ ಈ ಗೌರವದ ರೂಪ ಬದಲಾವಣೆ ಪಡೆದಿದೆ.

ಅಂದು ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು
ಇತಿಹಾಸತಜ್ಞರ ಪ್ರಕಾರ ಸುಮಾರು ಹದಿನಾರನೇ ಶತಮಾನದವರೆಗೂ ಈ ನರ್ತಕಿಯರಿಗೆ ಅಪಾರ ಗೌರವ ಲಭಿಸುತ್ತಿತ್ತು. ಇವರನ್ನು ಸ್ಪರ್ಶಿಸುವುದಿರಲಿ, ಮಾತನಾಡಿಸಲು ಅಥವಾ ಮುಖ ನೋಡಲೂ ಜನಸಾಮಾನ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ಇವರ ನರ್ತನಕ್ಕೇ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದ ಕಾರಣ ಅಂದಿನ ರಾಜ ಮಹಾರಾಜರು ಸಹಾ ಕೇವಲ ಇವರ ಕಲಾವಂತಿಕೆಯನ್ನು ಆಸ್ವಾದಿಸುತ್ತಿದ್ದರೇ ವಿನಃ ಇವರನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿರಲಿಲ್ಲ.

ಕೆಟ್ಟ ಸಮಯ ಪ್ರಾರಂಭವಾಗಿದ್ದು ಯಾವಾಗ?
ಯಾವಾಗ ಬ್ರಿಟಿಷರು ಭಾರತಕ್ಕೆ ಬಂದು ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದರೋ ಆಗ ಇವರ ಆಗಮನವೂ ಈ ಮೆಹೆಫಿಲ್ ಗಳಲ್ಲಿ ಆಯಿತು. ನರ್ತಕಿಯರ ನರ್ತನವನ್ನು ಆಸ್ವಾದಿಸಿದ ಬ್ರಿಟಿಷರು ನರ್ತಕಿಯರತ್ತ ಅಪಾರವಾಗಿ ಆಕರ್ಷಿತರಾದರು ಹಾಗೂ ಒಂದು ರಾತ್ರಿಗಾಗಿ ನರ್ತಕಿಯ ಜೊತೆ ಕಳೆಯುವ ದೆಸೆ ಪ್ರಾರಂಭವಾಯಿತು. ಬಿಳಿಯರೇ ದೊರೆಗಳಾಗಿದ್ದರಿಂದ ನರ್ತಕಿಯರು ಅನಿವಾರ್ಯವಾಗಿ ತಮ್ಮ ನರ್ತನದ ಜೊತೆಗೇ ಈ ವೃತ್ತಿಯನ್ನೂ ಆಯ್ದುಕೊಳ್ಳಬೇಕಾಯಿತು. ಕೆಲ ದೊರೆಗಳು ಕೊಂಚ ಹೊತ್ತಿಗಾಗಿ ನರ್ತಕಿಯರ ಒಡನಾಟ ಬಯಸಿದರೆ ಕೆಲವರು ಇಡಿಯ ರಾತ್ರಿ ಕಳೆಯಬಯಸಿದ್ದರು.

ಹಣದ ಮೋಹ ಈ ವೃತ್ತಿಗೆ ಹೆಚ್ಚಿನ ಪ್ರೇರಣೆ ನೀಡಿತು
ಹೀಗೆ ರಾತ್ರಿ ಕಳೆದ ದೊರೆಗಳು ಸಾಕಷ್ಟು ಹಣವನ್ನೂ ಈ ನರ್ತಕಿಯರಿಗೆ ನೀಡುತ್ತಿದ್ದರು. ನರ್ತನದಿಂದ ಬರುವ ಹಣಕ್ಕಿಂತಲೂ ಈ ಆದಾಯ ಸಾಕಷ್ಟು ಹೆಚ್ಚೇ ಇರುತ್ತಿದ್ದುದರಿಂದ ಇವರಿಗೆ ಸಂತೋಷವೇ ಆಗಿತ್ತು. ಹಣದ ಆಕರ್ಷಣೆ ಈ ನರ್ತಕಿಯರನ್ನು ತಾವಾಗಿಯೇ ತಮ್ಮ ದೇಹಗಳನ್ನು ಮಾರುವ ಸ್ಥಿತಿಯತ್ತ ಕರೆದೊಯ್ದಿತ್ತು. ಕ್ರಮೇಣ ಈ ನರ್ತಕಿಯರು ತಮ್ಮ ವಂಶ ಪಾರಂಪರ್ಯದ ನರ್ತಕಿ ಎಂಬ ಬಿರುದನ್ನು ಕಳೆದುಕೊಳ್ಳುತ್ತಾ ವೇಶ್ಯೆ ಎಂಬ ಹೆಸರಿನಿಂದ ಕರೆಯಲ್ಪಡತೊಡಗಿದರು. ಹೀಗೆ, ವೇಶ್ಯಾವೃತ್ತಿ ಭಾರತದಲ್ಲಿ ಪ್ರಾರಂಭಗೊಂಡಿತು.



Click it and Unblock the Notifications
