Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
2018ರ ರಾಶಿ ಭವಿಷ್ಯ: ಯಾವ ರಾಶಿಯವರಿಗೆ ಪ್ರೀತಿಯಲ್ಲಿ ಮೋಸವಾಗಬಹುದು ನೋಡಿ...
ನಾವು ದುಃಖದಲ್ಲಿದ್ದಾಗ ಅಥವಾ ಸಂತೋಷದಲ್ಲಿದ್ದಾಗ ನಮ್ಮ ಮನಸ್ಸಿನ ಮಾತನ್ನು ಕೇಳುವ ಜೀವ, ಬೇಸರದ ಕಣ್ಣೀರು ಒರೆಸುವ ಕೈ, ಭಾರವಾದ ಮನಸ್ಸಿಗೆ ಸಾಂತ್ವನ ನೀಡುವ ಹೆಗಲು, ಸದಾ ಕಷ್ಟ ಸುಖಕ್ಕೆ ಕೈಜೋಡಿಸುವ ವ್ಯಕ್ತಿಗಳು ನಮ್ಮ ಜೀವನದಲ್ಲಿ ಇಲ್ಲವೆಂದಾದರೆ ನಮ್ಮ ಜೀವನ ಶೂನ್ಯ. ಎಷ್ಟೇ ಹಣವಂತರಾಗಿದ್ದರೂ ನಮ್ಮ ಭಾವನೆಯನ್ನು ಅರಿಯುವ ಒಂದು ಜೀವವನ್ನು ಹೊಂದಿಲ್ಲ ಎಂದರೆ ಆತ ಬಡವ ಎನ್ನಬಹುದು. ಹೌದು, ಪ್ರತಿಯೊಬ್ಬ ವ್ಯಕ್ತಿಗೂ ನೋವು ನಲಿವನ್ನು ಹಂಚಿಕೊಳ್ಳುವ ಒಬ್ಬ ಆತ್ಮೀಯ ವ್ಯಕ್ತಿ ಇರಬೇಕು.
ನಮ್ಮ ಕೈಗಳಲ್ಲಿ ಎಷ್ಟೇ ದುಬಾರಿಯ ವಸ್ತುಗಳು, ಮನೆಯಲ್ಲಿ ಐಶ್ವರ್ಯ ಮತ್ತು ಸಂಪತ್ತುಗಳು ಇರಬಹುದು. ಆದರೆ ನಮ್ಮನ್ನು ಪ್ರೀತಿಸುವ ಒಂದು ಜೀವ ಇಲ್ಲವೆಂದಾದರೆ ಬದುಕು ಬರಡು ಎನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆ ಕಾರಣದಿಂದಲೇ ವಿವಾಹ, ಪತಿ-ಪತ್ನಿ ಎನ್ನುವ ಪವಿತ್ರ ಬಂಧನ ಇರುವುದು. ಈ ಸುಂದರ ಸಂಬಂಧ ಬೆಸೆಯಲು ದೇವರ ಅನುಗ್ರಹ ಹಾಗೂ ಗ್ರಹಗತಿಗಳ ಸಹಕಾರ ಇರಬೇಕು. 2018ರ ಈ ವರ್ಷ ಕೆಲವು ಗ್ರಹಗಳ ಸಂಚಾರದಿಂದ ಪ್ರತಿಯೊಂದು ರಾಶಿಚಕ್ರದ ಪ್ರೀತಿಯ ಜೀವನದಲ್ಲಿ ಕೆಲವು ಬದಲಾವಣೆಗಳು ಉಂಟಾಗುವ ಸಾಧ್ಯತೆಗಳಿವೆ.
ಭಾವನೆಗೆ ಹಾಗೂ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುವಂತಹ ಸನ್ನಿವೇಶಗಳು ನಡೆಯಬಹುದು. ಈ ವಿಚಾರ ನಿಮಗೂ ಕುತೂಹಲ ಹಾಗೂ ನಿಮ್ಮ ರಾಶಿಚಕ್ರದ ಮೇಲೆ ಯಾವ ಪ್ರಭಾವ ಬೀರಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೆಂದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ...
ಮೇಷ: (ಮಾರ್ಚ್21-ಏಪ್ರಿಲ್19)
ನೀವು ಬಹು ಬೇಗ ಸಿಟ್ಟಿಗೆ ಒಳಗಾಗುತ್ತೀರಿ. ನಿಮ್ಮ ಕೋಪದ ಪ್ರವೃತ್ತಿ ನಿಮ್ಮ ಸಂಗಾತಿಗೆ ಕಿರಿಕಿರಿ ಉಂಟು ಮಾಡುವುದು. ಪದೇ ಪದೇ ಸಿಟ್ಟು ಮಾಡುವುದು ಹಾಗೂ ನಿಮ್ಮ ಭಾವನೆಯನ್ನು ನೀವು ಹಿಡಿದಿಟ್ಟು ಕೊಳ್ಳಲು ಕಷ್ಟವಾಗುವ ಪರಿಯಿಂದ ಸಂಬಂಧದಲ್ಲಿ ಕೊಂಚ ಬೇಸರ ಉಂಟು ಮಾಡುವುದು. ಈ ವರ್ಷ ನೀವು ಏಕಾಂಗಿಯಾಗಿ ಜೀವನ ಕಳೆಯುವ ಸಾಧ್ಯತೆಗಳಿವೆ. ಏಕೆಂದರೆ ನಿಮ್ಮ ಸಿಟ್ಟನ್ನು ಸಹಿಸಿಕೊಳ್ಳುವ ಶಕ್ತಿ ನಿಮ್ಮ ಪಾಲುದಾರರಿಗೆ ಇರುವುದಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು.
ವೃಷಭ: (ಏಪ್ರಿಲ್20-ಮೇ21)
ಈ ವರೆಗೆ ನೀವು ಬ್ರಹ್ಮಚರ್ಯ ಜೀವನವನ್ನು ಅನುಭವಿಸುತ್ತಿದ್ದೀರಿ ಎಂದರೆ ಈ ವರ್ಷದ ಅಂತ್ಯದೊಳಗೆ ಸಂಗಾತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ನಿಮ್ಮ ಸ್ವಾರ್ಥ ಗುಣದಿಂದಾಗಿ ಸಂಬಂಧವನ್ನು ಕಳೆದುಕೊಳ್ಳಬೇಕಾಗುವ ಸಂದರ್ಭ ಒದಗಿ ಬರುವುದು. ಸಂಸಾರದಲ್ಲಿ ನೀವು ನಿಭಾಯಿಸಲೇ ಬೇಕಾದ ಕೆಲವು ಕರ್ತವ್ಯಗಳಿರುವುದರಿಂದ ನೀವು ಸಂಬಂಧವನ್ನು ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ಸಂಗಾತಿಯೊಂದಿಗೆ ಹೇಗೆ ಪ್ರೀತಿಯಲ್ಲಿ ಇರಬೇಕು ಎನ್ನುವುದನ್ನು ನೀವು ತಿಳಿದುಕೊಂಡರೆ ಸಂಬಂಧ ಖುಷಿಯಲ್ಲಿ ಇರುವುದು.
ಮಿಥುನ: (ಮೇ 22-ಜೂನ್ 21)
ನೀವು ಪದೇ ಪದೇ ಮಾನಸಿಕವಾಗಿ ನೋವನ್ನು ಅನುಭವಿಸಬೇಕಾಗುತ್ತದೆ. ಅದು ನೀವು ಪ್ರೀತಿಸುವ ವ್ಯಕ್ತಿಯಿಂದಲೇ. ನಿಮ್ಮ ಸಿಟ್ಟು ನಿಮ್ಮ ಪ್ರೀತಿಯನ್ನು ಅಲ್ಲಾಡಿಸುವುದು. ನೀವು ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಿದ್ದೀರಿ ಎಂದರೆ ಆ ವ್ಯಕ್ತಿಯೊಂದಿಗೇ ಪ್ರೀತಿಯನ್ನು ಮುಂದುವರಿಸಿ. ಆಗ ನಿಮ್ಮ ಪ್ರೀತಿಯಲ್ಲಿ ಯಾವುದೇ ನಾಟಕೀಯ ರೀತಿಯ ಬದಲಾವಣೆ ಉಂಟಾಗದು. ನೀವು ನೀವಾಗಿರಲು ಹಾಗೂ ಧೈರ್ಯಶಾಲಿಯಾಗಿರಲು ಪ್ರಯತ್ನಿಸಿ.
ಕರ್ಕ:(ಜೂನ್22-ಜುಲೈ22)
ಈಗಾಗಲೇ ನೀವು ಒಬ್ಬ ವಿಶೇಷ ವ್ಯಕ್ತಿಯಿಂದ ಪ್ರೀತಿಯಲ್ಲಿ ಮೋಸ ಅಥವಾ ನೋವನ್ನು ಅನುಭವಿಸಿದ್ದೀರಿ. ಆ ವ್ಯಕ್ತಿಯೇ ಈ ವರ್ಷ ಪುನಃ ನಿಮ್ಮನ್ನು ಅರಸಿ ಬರುತ್ತಾರೆ. ನೀವು ಪ್ರೀತಿಯನ್ನು ಹಿಡಿದಿಟ್ಟು ಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನೀವು ನಿಮ್ಮ ಪ್ರೀತಿಯನ್ನು ಮನರಂಜನೆಗಾಗಿ ಅಥವಾ ಪ್ರಲೋಭನೆಗಾಗಿ ಮಾಡಬಾರದು. ನಿಮ್ಮ ಕೆಲವು ತಪ್ಪುಗಳು ನಿಮ್ಮ ಸಂಬಂಧವನ್ನು ಹಾಳು ಮಾಡುವ ಸಾಧ್ಯತೆಗಳಿವೆ.
ಸಿಂಹ:(ಜುಲೈ23-ಆಗಸ್ಟ್ 22)
ನೀವು ನಿಮ್ಮ ಪ್ರೀತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರೀತಿಸುತ್ತಿರುತ್ತೀರಿ. ಅದನ್ನು ನೀವು ಪ್ರೀತಿಸುವ ವ್ಯಕ್ತಿಗೆ ತಿಳಿದಿರುವುದಿಲ್ಲ. ನೀವು ಮಾಡುತ್ತಿರುವ ಪ್ರೀತಿಯ ಪರಿ ಸರಿಯಾಗಿದೆ ಎನ್ನುವ ಭಾವನೆಯನ್ನು ತಳೆಯದಿರಿ. ನೀವು ನಿಮ್ಮ ಬಗ್ಗೆ ಹೆಚ್ಚು ವಿಮರ್ಶಾತ್ಮಕವಾಗಿ ಚಿಂತಿಸಲು ಪ್ರಯತ್ನಿಸುತ್ತೀರಿ. ಅದು ನಿಮ್ಮ ಸಂಗಾತಿಗೆ ನೋವನ್ನುಂಟುಮಾಡುವುದು. ನಿಮಗೆ ಪ್ರೀತಿಯನ್ನು ಹೇಗೆ ಕಾಪಾಡುವುದು ಎನ್ನುವುದು ತಿಳಿದಿದೆ. ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ.
ಕನ್ಯಾ:(ಜುಲೈ23-ಆಗಸ್ಟ್22)
ನೀವು ನಿಮ್ಮ ಹತ್ತಿರದ ವ್ಯಕ್ತಿಯನ್ನು ಪ್ರೀತಿಸುವ ಹಾಗೂ ಆರೈಸುವ ಪ್ರವೃತ್ತಿಯನ್ನು ಹೊಂದಿದ್ದೀರಿ. ಹಾಗೆಯೇ ಬಹಳ ನೋವನ್ನುಂಟುಮಾಡುವ ಸಾಮಥ್ರ್ಯವೂ ನಿಮ್ಮಲ್ಲಿದೆ. ನೀವು ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ನಿಮ್ಮ ಕೆಲವು ಸ್ವಭಾವವನ್ನು ಸುಧಾರಿಸಿಕೊಳ್ಳಬೇಕು. ನಿಮ್ಮ ಪ್ರೀತಿಯನ್ನು ನೀವೇ ರಕ್ಷಿಸಿಕೊಳ್ಳಬೇಕು. ಇಲ್ಲವಾದರೆ ನೀವೇ ವ್ಯಂಗ್ಯ ವ್ಯಕ್ತಿಗಳಾಗುವ ಸಾಧ್ಯತೆಗಳಿವೆ.
ತುಲಾ:(ಸಪ್ಟೆಂಬರ್23-ಅಕ್ಟೋಬರ್22)
ಈ ವರ್ಷ ಪೂರ್ತಿ ಬಹಳ ಸ್ವಾರ್ಥಿಯಾಗಿ ಚಿಂತಿಸುತ್ತಾರೆ. ನಿಮ್ಮ ಸ್ವಂತ ವ್ಯಕ್ತಿತ್ವದ ಮೇಲೆ ನೀವು ಹೆಚ್ಚು ಗಮನಹರಿಸುತ್ತೀರಿ. ನೀವು ವ್ಯಕ್ತಿಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ವಿಫಲರಾಗುವಿರಿ. ನಿಮಗೆ ಮುಂದಿನ ವರ್ಷದವರೆಗೂ ಒಂಟಿತನವನ್ನು ಅನುಭವಿಸಬೇಕಾಗುವ ಸಂದರ್ಭಗಳು ಒದಗಿ ಬರುತ್ತವೆ.
ವೃಶ್ಚಿಕ: (ಅಕ್ಟೋಬರ್23-ನವೆಂಬರ್22)
ನೀವು ನಿಮ್ಮ ಪ್ರೀತಿಯನ್ನು ಕಳೆದುಕೊಳ್ಳಲು ನೀವೇ ಪ್ರಮುಖ ಕಾರಣವಾಗಿರುತ್ತೀರಿ. ನೀವು ನಿಮ್ಮ ಪ್ರೀತಿಯ ವಿಶ್ವಾಸವನ್ನು ಕಳೆದುಕೊಳ್ಳುತ್ತೀರಿ. ಅದನ್ನು ಪುನಃ ಪಡೆದುಕೊಳ್ಳಲು ಅನೇಕ ಪ್ರಯತ್ನಗಳನ್ನು ಮಾಡುವಿರಿ. ನಿಮ್ಮ ತಪ್ಪುಗಳೇ ನಿರಂತರವಾಗಿ ನಿಮ್ಮ ಪ್ರೀತಿಯ ವಿಫಲತೆಗೆ ಕಾರಣವಾಗುವುದು. ಅದು ನಿಮ್ಮಲ್ಲಿರುವ ದೋಷ ಎಂದು ಸಹ ಹೇಳಬಹುದು.
ಧನು:(ನವೆಂಬರ್23-ಡಿಸೆಂಬರ್21)
ಇವರು ಬದ್ಧತೆಯ ಸಮಸ್ಯೆಯನ್ನು ಹೊಂದಿದ್ದಾರೆ. ನೀವು ನಿಮ್ಮ ಪ್ರೀತಿಯನ್ನು ನಿರಂತರವಾಗಿ ಕಳೆದುಕೊಳ್ಳುತ್ತಿರುತ್ತೀರಿ. ನಿಮಗೆ ದೀರ್ಘಕಾಲದವರೆಗೆ ಒಂದೇ ವ್ಯಕ್ತಿಯೊಂದಿಗಿರಲು ಕಷ್ಟವಾಗುವುದು.
ಮಕರ:(ಡಿಸೆಂಬರ್22-ಜನವರಿ20)
ನೀವು ನಿಮ್ಮದೇ ಆದ ವಿಶೇಷ ವ್ಯಕ್ತಿತ್ವವನ್ನು ನೀವು ರೂಪಿಸಿಕೊಳ್ಳಬೇಕು. ನೀವು ಸಂಪೂರ್ಣವಾಗಿ ಇತರರನ್ನು ನಂಬಲು ನಿರಾಕರಿಸುತ್ತೀರಿ. ನೀವು ಸದಾ ಒಂಟಿಯಾಗಿರಲು ಬಯಸುವುದು ಅಥವಾ ಪ್ರತ್ಯೇಕವಾಗಿ ಇರುವ ಪ್ರವೃತ್ತಿಯು ನಿಮ್ಮನ್ನು ಒಂಟಿಯಾಗಿರುವಂತೆ ಮಾಡುತ್ತದೆ. ಪ್ರೀತಿಯಿಂದ ಹೇಗೆ ವರ್ತಿಸಬೇಕು ಹಾಗೂ ಬೆರೆಯಬೇಕು ಎನ್ನುವ ವಿಚಾರವನ್ನು ಇವರು ಅರಿತುಕೊಂಡರೆ ಸಂಬಂಧವು ಸುಖಕರವಾಗಿರುತ್ತದೆ.
ಕುಂಭ:(ಜನವರಿ21-ಫೆಬ್ರವರಿ18)
ನಿಮ್ಮ ಬುದ್ಧಿಯೇ ನಿಮ್ಮ ಅವನತಿಗೆ ಕಾರಣವಾಗಲಿದೆ. ನಿಮ್ಮ ಲಾಭಕ್ಕೆ ನೀವು ಚುರುಕುತನವನ್ನು ತೋರುವಿರಿ. ನಿಮ್ಮ ಹವ್ಯಾಸವನ್ನು ಅಥವಾ ಆಸಕ್ತಿಯನ್ನು ಅರಿಯದ ವ್ಯಕ್ತಿಗಳನ್ನು ನೀವು ದೂರ ಇಡಲು ಪ್ರಯತ್ನಿಸುವಿರಿ. ನೀವು ಅನೇಕ ಹೃದಯಗಳನ್ನು ಗೆಲ್ಲಲು ಪ್ರಯತ್ನಿಸುವಿರಿ. ಹಾಗಂತ ನಿಮ್ಮ ಬಲವಾದ ವ್ಯಕ್ತಿತ್ವವನ್ನು ನೀವು ಕಳೆದುಕೊಳ್ಳಲಾರಿರಿ.
ಮೀನ:(ಫೆಬ್ರವರಿ 19-ಮಾರ್ಚ್20)
ನೀವು ಸೂಕ್ತರಲ್ಲದ ವ್ಯಕ್ತಿಯನ್ನು ಪ್ರೀತಿಸುತ್ತೀರಿ. ನಿಮ್ಮನ್ನು ಇಷ್ಟ ಪಡದ ವ್ಯಕ್ತಿಯನ್ನು ನೀವು ಪ್ರೀತಿಸಲು ಮುಂದಾಗುವಿರಿ. ಈ ಕಾರಣದಿಂದ ನೀವು ನಿಮ್ಮ ಪ್ರೀತಿಯನ್ನು ಕಳೆದುಕೊಳ್ಳುವಿರಿ. ಅದರಿಂದ ನಿಮ್ಮ ಹೃದಯ ನೋವನ್ನು ಅನುಭವಿಸುವುದು.