For Quick Alerts
ALLOW NOTIFICATIONS  
For Daily Alerts

ಬಾಲಕಿಯ ತಲೆಯಲ್ಲಿತ್ತು ಟೇಪ್ ವರ್ಮ್ ಕೋಶ! ಇದು ವೈದ್ಯಲೋಕಕ್ಕೇ ಸವಾಲ್

By Hemanth
|

ಕೆಲವೊಂದು ಅಪರೂಪದ ಹಾಗೂ ವಿಚಿತ್ರವಾದ ಆರೋಗ್ಯ ಸಮಸ್ಯೆಗಳ ಬಗ್ಗೆ ನೀವು ಬೋಲ್ಡ್ ಸ್ಕೈಯಲ್ಲಿ ಓದಿರಬಹುದು. ಕಣ್ಣೀರಿನೊಂದಿಗೆ ಕಲ್ಲು ಬರುವುದು, ದೇಹವು ಮರದ ರೂಪವನ್ನು ಪಡೆಯುವುದು ಇತ್ಯಾದಿ. ಇಂತಹ ಹಲವಾರು ಸಮಸ್ಯೆಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಟ್ಟಿದೆ. ಅದೇ ರೀತಿಯ ತುಂಬಾ ವಿಚಿತ್ರ ಎನಿಸುವಂತಹ ಒಂದು ಪ್ರಕರಣವು ಗುಜರಾತ್ ನಲ್ಲಿ ಪತ್ತೆಯಾಗಿದೆ. ಬಾಲಕಿಯೊಬ್ಬಳ ಮೆದುಳಿನಲ್ಲಿ ಟೇಪ್ ವರ್ಮ್ ಕೋಶ ಪತ್ತೆಯಾಗಿದೆ. ಇದು ಆಕೆಯ ಮೆದುಳಿನ ಅರ್ಧದಷ್ಟು ಇತ್ತು ಎಂದು ನರರೋಗ ತಜ್ಞರು ತಿಳಿಸಿದ್ದಾರೆ. ಆಕೆಯ ಬಗ್ಗೆ ಮತ್ತಷ್ಟು ತಿಳಿಯಲು ಮುಂದಕ್ಕೆ ಓದಿ....

ಇದು ಭಾರತದ್ದೇ ಕಥೆ

ಇದು ಭಾರತದ್ದೇ ಕಥೆ

ಈ ಪ್ರಕರಣವು ಗುಜರಾತ್ ನ ಕಛ್ ನಲ್ಲಿ ಪತ್ತೆಯಾಗಿದೆ. ಈ ಬಾಲಕಿಯ ಹೆಸರು ನೀತಾ ಜುಗ್ಗಿ ಎಂದು. ಆಕೆ ತುಂಬಾ ವಿಚಿತ್ರವಾದ ಸಮಸ್ಯೆಯಿಂದ ಬಳಲುತ್ತಿದ್ದಳು. ಆಕೆಯ ಮೆದುಳಿನಲ್ಲಿ ಟೇಪ್ ವರ್ಮ್ ಕೋಶ ಕಳೆದ ಎರಡು ವರ್ಷಗಳಿಂದ ಸಮಸ್ಯೆಯುಂಟು ಮಾಡುತ್ತಿತ್ತು.

ಆಕೆಯ ಪರಿಸ್ಥಿತಿ ತೀರ ಹದಗೆಟ್ಟಿತು

ಆಕೆಯ ಪರಿಸ್ಥಿತಿ ತೀರ ಹದಗೆಟ್ಟಿತು

ಬಾಲಕಿಯ ಪರಿಸ್ಥಿತಿಯು ತೀರ ಹದಗೆಡಲು ಆರಂಭಿಸಿತು ಎಂದು ನೀತಾಳ ಪೋಷಕರು ತಿಳಿಸಿದ್ದಾರೆ. ಆಕೆಗೆ ತಲೆನೋವು ಮತ್ತು ಕಳೆದ ಎರಡು ವರ್ಷಗಳಿಂದ ನಿಶ್ಯಕ್ತಿಯಿಂದ ಬಳಲುತ್ತಿದ್ದಳು. ಕಳೆದ ಕೆಲವು ಸಮಯದಿಂದ ಆಕೆಯ ದೇಹದ ಬಲ ಭಾಗದಲ್ಲಿ ಪಾರ್ಶ್ವವಾಯು ಕಾಣಿಸಿಕೊಂಡಿದೆ.

ನರರೋಗ ತಜ್ಞರನ್ನು ಭೇಟಿಯಾದರು

ನರರೋಗ ತಜ್ಞರನ್ನು ಭೇಟಿಯಾದರು

ಸ್ವತಃ ಆಹಾರವನ್ನು ಬಾಯಿಗಿಡಲು ಮತ್ತು ಒಂದು ಲೋಟ ನೀರು ಎತ್ತಲು ಕಷ್ಟಪಡುತ್ತಿದ್ದ ಬಾಲಕಿಯನ್ನು ನರರೋಗ ತಜ್ಞರ ಬಳಿ ತೋರಿಸಿದರು. ಆಕೆಗೆ ಪದೇ ಪದೆ ಕಾಡುತ್ತಿದ್ದ ತಲೆನೋವು ತೀವ್ರ ಸಮಸ್ಯೆ ಉಂಟು ಮಾಡುತ್ತಿತ್ತು. ಆದರೆ ಆಕೆಯನ್ನು ಪರೀಕ್ಷೆ ಮಾಡಿದ ನರರೋಗ ತಜ್ಞರು ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಿದರು.

ಪರೀಕ್ಷೆ ವೇಳೆ ತಿಳಿದ ಸತ್ಯ...

ಪರೀಕ್ಷೆ ವೇಳೆ ತಿಳಿದ ಸತ್ಯ...

ನರರೋಗ ತಜ್ಞರು ಆಕೆಯನ್ನು ಪರೀಕ್ಷಿಸಿ ಎಂಆರ್ ಐ ಸ್ಕ್ಯಾನ್ ಮಾಡಿದ ಬಳಿಕ ಬಾಲಕಿಯ ತಲೆಯಲ್ಲಿ ಟೇಪ್ ವರ್ಮ್ ಕೋಶ ಇರುವುದು ಪತ್ತೆಯಾಗಿದೆ ಮತ್ತು ಇದು ಮೆದುಳಿನ ಅರ್ಧ ಭಾಗದಷ್ಟಿತ್ತು.

ಕೋಶ ಎಷ್ಟು ತೂಕವಿತ್ತು?

ಕೋಶ ಎಷ್ಟು ತೂಕವಿತ್ತು?

ನೀತಾಳ ತಲೆಯಲ್ಲಿ ಪತ್ತೆಯಾದ ಕೋಶ ಸುಮಾರು 675 ಗ್ರಾಂನಷ್ಟು ಭಾರವಿತ್ತು ಮತ್ತು 12.2 ಸೆ.ಮೀx11ಸೆ.ಮೀ.x9.8 ಸೆ.ಮೀ. ನಷ್ಟಿತ್ತು.

ಆಕೆ ಸರಿಯಾದ ಸಮಯದಲ್ಲಿ ಪರೀಕ್ಷೆಗೊಳಪಟ್ಟಳು

ಆಕೆ ಸರಿಯಾದ ಸಮಯದಲ್ಲಿ ಪರೀಕ್ಷೆಗೊಳಪಟ್ಟಳು

ಕೋಶ ಸಾಮಾನ್ಯಕ್ಕಿಂತ ತುಂಬಾ ದೊಡ್ಡದಾಗಿ ಬೆಳೆದಿತ್ತು ಮತ್ತು ಇದು ತಲೆಯನ್ನು ಸಿಡಿಯುವ ಸಾಧ್ಯತೆ ಕೂಡ ಇತ್ತು. ಈ ವೇಳೆ ಬಾಲಕಿ ಸಾವನ್ನಪ್ಪುತ್ತಿದ್ದಳು. ಬಾಲಕಿ ಸರಿಯಾದ ಸಮಯದಲ್ಲಿ ಪರೀಕ್ಷೆಗೆ ಒಳಪಟ್ಟಳು. ಶಸ್ತ್ರಚಿಕಿತ್ಸೆಯ ಮೂಲಕ ನರರೋಗ ತಜ್ಞರು ಬಾಲಕಿಯನ್ನು ಅಪಾಯದಿಂದ ಪಾರು ಮಾಡಿದ್ದಾರೆ. ನೀತಾ ಪರಿಸ್ಥಿತಿ ಈಗ ಸುಧಾರಣೆಯಾಗಿದೆ ಮತ್ತು ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಕೇಳಲು ತುಂಬಾ ಖುಷಿಯಾಗುತ್ತಿದೆ. ಬಾಲಕಿಗೆ ಸಂತೋಷ ಹಾಗೂ ಅದೃಷ್ಟ ಸಿಗಲಿ ಎಂದು ಹಾರೈಸುತ್ತೇವೆ.

Image source

English summary

girl-has-tapeworm-cyst-half-the-size-of-her-brain-removed

There are many bizarre and weird conditions of health that can shock or stun us. From a face melting condition to tumours that are really huge, these can give one a shock upon knowing of the criticalities. Here, in this article, we are sharing a story of a young girl named Nita Juggi, from India, who suffered from a bizarre condition of having a tapeworm cyst that was so big that the neurosurgeons claimed it to be half the size of her brain! So, check out more details on this incident.
X
Desktop Bottom Promotion