Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೆಹಲಿಯಲ್ಲಿ ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್ ಗಳಿಂದ ಒಳಚರಂಡಿ ಬ್ಲಾಕ್ ಆಗುತ್ತಿದೆಯಂತೆ!
ಗುಟ್ಕಾ ಮತ್ತು ಪಾನ್ ಮಸಾಲವು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದೇ ಈಗ ದೆಹಲಿಯಲ್ಲಿ ಇದು ಒಳಚರಂಡಿ ಬ್ಲಾಕ್ ಗೆ ಕಾರಣವಾಗಿ ತುಂಬಾ ಅಪಾಯವನ್ನು ಉಂಟು ಮಾಡಿದೆ. ದೆಹಲಿಯಲ್ಲಿ ಜನರು ಅತಿಯಾಗಿ ಗುಟ್ಕಾ ಮತ್ತು ಪಾನ್ ಮಸಾಲ ಸೇವನೆ ಮಾಡುವ ಕಾರಣದಿಂದಾಗಿ ಅದರ ಪ್ಯಾಕೆಟ್ ಗಳು ಚರಂಡಿ ಸೇರಿಕೊಂಡು ಬ್ಲಾಕ್ ಆಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.
ಅಧ್ಯಯನವೊಂದರ ಪ್ರಕಾರ ದೆಹಲಿಯಲ್ಲಿ ಚರಂಡಿ ಬ್ಲಾಕ್ ಆಗಲು ಕಾರಣವಾಗುವುದರಲ್ಲಿ ಐದನೇ ಒಂದು ಭಾಗವು ಗುಟ್ಕಾ ಮತ್ತು ಪಾನ್ ಮಸಾಲ್ ಪ್ಯಾಕೆಟ್ ಗಳು ಎಂದು ಹೇಳಿವೆ...

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ
ಖಾರಪುರದಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ನಡೆಸಿರುವ ತನಿಖೆ ಪ್ರಕಾರ ದೆಹಲಿಯಲ್ಲಿ ಮಳೆಗಾಲದ ವೇಳೆ ಕೃತಕ ನೆರೆ ಸೃಷ್ಟಿಯಾಗಲು ಶೇ.22ರಷ್ಟು ಗುಟ್ಕಾ ಮತ್ತು ಪಾನ್ ಮಸಾಲ ಪ್ಯಾಕೇಟ್ ಗಳು ಎಂದು ಹೇಳಿವೆ.ದೆಹಲಿಯಲ್ಲಿರುವ ಚರಂಡಿಗಳು ಗುಟ್ಕಾದ ಸಣ್ಣ ಫ್ಯಾಕ್ಟರಿಯಂತೆ ಕಂಡುಬರುತ್ತದೆ.

ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ
ಸಾಮಾನ್ಯ ಪ್ಲಾಸ್ಟಿಕ್ ಗಿಂತಲೂ ಈ ಪ್ಯಾಕೆಟ್ ಗಳು ತುಂಬಾ ಅಪಾಯಕಾರಿ. ಜನರು ಗುಟ್ಕಾ ಹಾಗೂ ಪಾನ್ ಮಸಾಲ ತಿಂದು ಅದರ ಪ್ಯಾಕೇಟ್ ಗಳನ್ನು ರಸ್ತೆ ಬದಿ ಎಸೆದುಬಿಡುತ್ತಾರೆ. ಇದು ಚರಂಡಿಯೊಳಗೆ ಹೋಗಿ ಅಲ್ಲಿ ಜಮೆಯಾಗಿ ಚರಂಡಿ ಬ್ಲಾಕ್ ಆಗುವಂತೆ ಮಾಡುವುದು. ಐಐಟಿಯ ನಗರಾಭಿವೃದ್ಧಿ ಯೋಜನೆಯ ಅಧ್ಯಯನ ಪ್ರಕಾರ ದೆಹಲಿಯ ಚರಂಡಿಗಳಲ್ಲಿ ಶೇ.27ರಷ್ಟು ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಬ್ಯಾಗ್ ಗಳು, ಶೇ.39ರಷ್ಟು ಕಾಗದ ಮತ್ತು ಇತರ ಸಾಮಗ್ರಿಗಳು ಮತ್ತು ಶೇ.12ರಷ್ಟು ಎಲೆಗಳು ಮತ್ತು ಮಣ್ಣು ಇದೆ.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ!
ಪ್ರತೀ ವರ್ಷ ಇದೇ ಕಾರಣದಿಂದಾಗಿ ದೆಹಲಿ ಜನರಿಗೆ ಕೃತಕ ನೆರೆಯ ಸಮಸ್ಯೆ ಉಂಟಾಗುವುದು ಎಂದು ಅಧ್ಯಯನವು ತಿಳಿಸಿದೆ. ಇಂತಹ ಆಘಾತಕಾರಿ ವರದಿಯ ಬಳಿಕ ಜನರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಕ್ಯಾನ್ಸರ್ ನಂತಹ ರೋಗ ತರಬಲ್ಲ ಗುಟ್ಕಾ ಮತ್ತು ಪಾನ್ ಮಸಾಲ ತಿನ್ನದಂತೆ ಅಭಿಯಾನ ನಡೆಸಬೇಕು. ಇಷ್ಟು ಮಾತ್ರವಲ್ಲದೆ ಚರಂಡಿಗೆ ಇದರ ಪ್ಯಾಕೇಟ್ ಗಳನ್ನು ಬಿಸಾಕುವುದನ್ನು ನಿಲ್ಲಿಸಬೇಕು.

ನೆರೆಯ ಸಮಸ್ಯೆಗೆ ಇದೇ ಕಾರಣವಂತೆ! ನಿಮ್ಮ ಅಭಿಪ್ರಾಯವೇನು?
ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಭಾರತದ ಯಾವ ಭಾಗದಲ್ಲಿ ಅತೀ ಹೆಚ್ಚು ಗುಟ್ಕಾ ಸೇವನೆ ಮಾಡುತ್ತಾರೆಂದು ನಿಮಗೆ ತಿಳಿದಿದೆಯಾ? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ.



Click it and Unblock the Notifications
