Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
ಗಾನ ಕೋಗಿಲೆ ಗಂಗಮ್ಮನಿಗೆ ನಮ್ಮದೊಂದು ಸಲಾಂ

ಪ್ರತಿಭೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಅದನ್ನು ಗುರುತಿಸಿ, ವೇದಿಕೆಯನ್ನು ಕಲ್ಪಿಸಿಕೊಟ್ಟರೆ ಅದು ಪ್ರಪಂಚಕ್ಕೆ ಪರಿಚಯವಾಗುವುದು. ಕೆಲವೊಮ್ಮೆ ಅವಕಾಶಗಳು ದೊರೆಯದೆ ಪ್ರತಿಭೆಯನ್ನು ಪರಿಚಯಿಸಲು ಸಾಧ್ಯವಾಗದೆ ಇರಬಹುದು. ಆದರೂ ನಮ್ಮ ಪ್ರಯತ್ನಗಳು ಹಾಗೂ ಕಲಿಕೆಯು ಮುಂದುವರಿಯುತ್ತಲೇ ಇದ್ದಾಗ ಖಂಡಿತವಾಗಿಯೂ ಪ್ರಸಿದ್ಧಿಯನ್ನು ಪಡೆಯಬಹುದು.
ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣವು ಬಹುತೇಕ ಮಂದಿಗೆ ಚಿರಪರಿಚಿತವಾಗಿದೆ. ಮಾಧ್ಯಮದ ಮೂಲಕವೇ ಎಷ್ಟೋ ಜನರು ತಮ್ಮ ಭಾವನೆಗಳನ್ನು ಪ್ರತಿಭೆಗಳನ್ನು ಪರಿಚಯಿಸುತ್ತಿರುತ್ತಾರೆ. ಈ ರೀತಿಯಲ್ಲೇ ಒಬ್ಬ ಮಹಿಳೆ ಇತ್ತೀಚೆಗೆ ಬಹಳ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾಳೆ.
ಹೌದು, ಗಂಗಮ್ಮಾ ಎನ್ನುವವರು ತಾವು ಹಾಡಿದ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದರ ಫಲಿತಾಂಶ ಏನಾಗಬಹುದು ಎನ್ನುವುದನ್ನು ಅವರು ಅಂದಾಜಿಸಿರಲು ಸಾಧ್ಯವಿಲ್ಲ. ಅಂತಹ ಒಂದು ಫಲಿತಾಂಶ ದೊರೆಯಿತು. ಹಾಗಾದರೆ ಆಕೆಗೆ ಸಿಕ್ಕ ಜಯವೇನು? ಎನ್ನುವುದರ ಕುರಿತು ಇನ್ನಷ್ಟು ಮಾಹಿತಿಗೆ ಮುಂದೆ ಓದಿ...

ಗಂಗಮ್ಮಾ ಅವರ ಕುಟುಂಬ
ಗಂಗಮ್ಮಾ ಅವರು ಕೊಪ್ಪಳದ ಒಂದು ಚಿಕ್ಕ ಹಳ್ಳಿಯಿಂದ ಬಂದವರು. ರೈತಾಪಿ ಕುಟುಂಬದಿಂದ ಬಂದ ಇವರು 5ನೇ ತರಗತಿಯ ವರೆಗೆ ಓದಿದ್ದಾರೆ. ಇವರು 9 ಜನ ಒಡಹುಟ್ಟಿದವರೊಂದಿಗೆ ಬೆಳೆದು ಬಂದಿದ್ದಾರೆ. ಇವರು ತನ್ನ ವಿದ್ಯಾಭ್ಯಾಸವನ್ನು 5ನೇ ತರಗತಿಗೆ ನಿಲ್ಲಿಸಿದರೂ ಕನ್ನಡ, ಹಿಂದಿ, ತೆಲಗು ಹಾಡನ್ನು ಬರೆಯಬಲ್ಲರು. ಜೊತೆಗೆ ಚೆನ್ನಾಗಿ ಹಾಡುತ್ತಾರೆ.

ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಿ ಬಂದವರು
ಇವರು ತಮ್ಮ ಜೀವನದಲ್ಲಿ ಸಾಕಷ್ಟು ನೋವನ್ನು ಹಾಗೂ ಕಷ್ಟವನ್ನು ಅನುಭವಿಸಿ ಬಂದವರು. ಒಡಹುಟ್ಟಿದವರಿಬ್ಬರನ್ನು ಹಾಗೂ ತಂದೆಯನ್ನು ಕಳೆದುಕೊಂಡು ಬದುಕಲ್ಲಿ ಕಷ್ಟವನ್ನು ಅನುಭವಿಸಿದ್ದಾರೆ. ಆದರೆ ಇವರು ಹಾಡುವ ಹವ್ಯಾಸ ಹೊಂದಿರುವುದು ಅವರಿಗೆ ಸ್ವಲ್ಪ ಭಾವನಾತ್ಮಕ ಸಮಾಧಾನವನ್ನು ಪಡೆಯುತ್ತಿದ್ದರು.

ಹಾಡುವಿಕೆಯು ಭಾವನಾತ್ಮಕ ಬೆಂಬಲ ನೀಡುತ್ತಿತ್ತು
ಗಂಗಮ್ಮಾ ಯಾವಾಗಲೂ ತಾನು ಉತ್ತಮ ಹಾಡುಗಾರ್ತಿ ಆಗಬೇಕು ಎಂದು ಕನಸು ಕಾಣುತ್ತಿದ್ದರು. ಆದರೆ ಅವರ ಪ್ರತಿಭೆ ಹಾಗೂ ಆಸೆಗೆ ಯಾವುದೇ ರೀತಿಯ ಪ್ರೋತ್ಸಾಹ ದೊರೆತಿರಲಿಲ್ಲ. ಮೊದಮೊದಲು ತಾಯಿ ಕೂಡ ಇವರು ಹಾಡುವುದನ್ನು ಖಂಡಿಸುತ್ತಿದ್ದರು. ಜೊತೆಗೆ ಆರಂಭದ ಹಂತದಲ್ಲಿ ಇವರು ಹಾಡಿದರೆ ಹೊಡೆಯುತ್ತಿದ್ದರು. ಅಲ್ಲದೆ 3 ದಿನಗಳ ಕಾಲ ಊಟವನ್ನು ನೀಡಿರಲಿಲ್ಲ.

ತಾಯಿ ಹೆದರಿಸಿದರು
ಬೆಂಗಳೂರಿನಂತಹ ನಗರದಲ್ಲಿ ಇರುವ ತಾಯಿ ಸುರಕ್ಷತೆಯ ಬಗ್ಗೆ ಹೆದರುತ್ತಿದ್ದರು. ಹಳ್ಳಿಯಲ್ಲಿ ಜನಿಸಿದ ಇವರು ಹಳ್ಳಿಯ ಜನರನ್ನು ಸಂಬಾಳಿಸುವುದು ತಿಳಿದಿದ್ದರೇ ಹೊರತು ನಗರದ ಜನರೊಂದಿಗೆ ವ್ಯವಹರಿಸುವುದು ಕಷ್ಟ ಎನ್ನುವ ಭಾವ ಹೊಂದಿದ್ದರು. ಹಾಗಾಗಿ ಮಗಳು ಹಾಡುವುದು ಅವರ ತಾಯಿಗೆ ಇಷ್ಟವಿರಲಿಲ್ಲ.

ಆದರೆ ಗಂಗಮ್ಮಾ ದೃಢ ಸಂಕಲ್ಪ ಹೊಂದಿದ್ದರು
ವಿನಮ್ರ ಹಿನ್ನೆಲೆಯಲ್ಲಿ ಬೆಳೆದು ಬಂದ ಗಂಗಮ್ಮಾ ಅವಳದ್ದೇ ಆದರ ಗುರಿಯನ್ನು ಹೊಂದಿದ್ದರು. ಆರ್ಕೆಸ್ಟ್ರಾಗಳಲ್ಲಿ ಹಾಡಲು ಪ್ರಾರಂಭಿಸಿದ್ದರು. ಆದರೆ ಅವರ ತಾಯಿಗೆ ಮಗಳು ಹಾಡುವುದು ಇಷ್ಟಇರಲಿಲ್ಲ. ಜನರು ಇವರ ಧ್ವನಿಯನ್ನು ಇಷ್ಟಪಟ್ಟರು ಮತ್ತು ಅವಳನ್ನು ಹೆಚ್ಚು ಹಾಡಲು ಪ್ರೋತ್ಸಾಹಿಸಿದರು.

ಜೀವನದಲ್ಲಿ ಸಾಧಿಸುವ ಛಲ ಇವರಲ್ಲಿತ್ತು
ಕೂಲಿ ಕೆಲಸದ ಜೊತೆಗೆ ಹಾಡುಗಾರಿಕೆಯ ಕೆಲಸವನ್ನು ಗಂಗಮ್ಮಾ ಸಮನಾಗಿ ನಿರ್ವಹಿಸುತ್ತಿದ್ದರು. ಶಿವಪ್ರಸಾದ ಎನ್ನುವ ಶ್ರೇಷ್ಠ ವ್ಯಕ್ತಿ ತನ್ನ ಕಥೆಯನ್ನು ಜಗತ್ತಿಗೆ ತಿಳಿಸುವುದು ಹಾಗೂ ಅವರ ಪ್ರತಿಭೆಯನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದರು.

ಆ ಒಂದು ಫೇಸ್ ಬುಕ್ ಪೋಸ್ಟ್
ಶಿವಪ್ರಸಾದ್ ಎನ್ನುವವರು ಗಂಗಮ್ಮಾ ಹಾಡಿರುವ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದರು. ಇದು ಎಲ್ಲೆಡೆ ವೈರಲ್ ಆಯಿತು. ಈ ಹಿನ್ನೆಲೆಯಲ್ಲಿಯೇ ಗಂಗಮ್ಮಾ ಜೀವನದಲ್ಲಿ ದೊಡ್ಡ ತಿರುವನ್ನು ಪಡೆದುಕೊಂಡರು. ಇವರ ಹಾಡನ್ನು ಶೇರ್ ಮಾಡಿದ 6 ಗಂಟೆಯ ಒಳಗೆ 5 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದರು. ಈ ರೀತಿಯ ಒಂದು ಬೆಚ್ಚನೆಯ ಪ್ರತಿಕ್ರಿಯೆ ದೊರೆತ ಮೇಲೆ ಶಿವಪ್ರಸಾದ್ ಫೇಸ್‍ಬುಕ್‍ನಲ್ಲಿ ಲೈವ್ ಮಾಡಲು ನಿರ್ಧರಿಸಿದರು. ನಂತರ ಇವರ ಜನಪ್ರಿಯತೆ ಹೆಚ್ಚುತ್ತಾ ಸಾಗಿತು.

ಜೂನಿಯರ್ ಎಸ್.ಜಾನಕಿ
ಇವರ ಹಾಡನ್ನು ಕೇಳಿದ ಜನರು ಇವರಿಗೆ ಜೂನಿಯರ್ ಎಸ್.ಜಾನಕಿ ಎನ್ನುವ ಪ್ರಸಿದ್ಧಿಯನ್ನು ಪಡೆದುಕೊಂಡಳು.

ಎಸ್. ಜಾನಕಿಯವರ ಪರಿಚಯ
ಎಸ್. ಜಾನಕಿಯವರು ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ. ಇವರು 17 ಭಾಷೆಗಳಲ್ಲಿ 48,000 ಹಾಡುಗಳನ್ನು ಹಾಡಿದ್ದಾರೆ. ಇವರು 1957ರಲ್ಲಿ ವೃತ್ತಿಜೀವನವನ್ನು ಆರಂಭಿಸಿದ ಇವರು ಇಂದಿಗೂ ಉತ್ತಮ ಗಾಯನವನ್ನು ಜನರಿಗೆ ನೀಡುತ್ತಿದ್ದಾರೆ.

ಎಸ್. ಜಾನಕಿಯವರು ಮಾದರಿಯ ವ್ಯಕ್ತಿಯಾಗಿದ್ದರು
ಗಂಗಮ್ಮ ಅವರಿಗೆ ಎಸ್. ಜಾನಕಿಯವರು ಮಾದರಿಯ ವ್ಯಕ್ತಿಯಾಗಿದ್ದರು. ಜಾನಕಿಯವರಂತೆ ಹಾಡಬೇಕು ಎಂದು ಬಯಸುತ್ತಿದ್ದರು. ಜೊತೆಗೆ ಅವರು ಹಾಡಿರುವ ಹಾಡುಗಳನ್ನು ಹಾಡಲು ಪ್ರಯತ್ನಿಸುತ್ತಿದ್ದರು.ಕಾರ್ಯಕ್ರಮವೊಂದರಲ್ಲಿ ಎಸ್. ಜಾನಕಿಯನ್ನು ಭೇಟಿ ಮಾಡಲು ಅವಕಾಶ ಗಂಗಮ್ಮನಿಗೆ ಸಿಕ್ಕಿತ್ತು, ಅಂದು ಅವರ ಎದುರಿಗೆ ಹಾಡು ಹಾಡಿದಾಗ, ಎಸ್ ಜಾನಕಿ ಇವರ ಹಾಡಿಗೆ ಮರುಳಾಗಿ, ಮುಕ್ತ ಕಂಠದಿಂದ "ನಾನಲ್ಲಮ್ಮ ಜಾನಕಿ... ನೀನೇ ನಿಜವಾದ ಜಾನಕಿ ಅಂದರಂತೆ" ಅಂದಿನಿಂದ ಇವರ ಹೆಸರೇ ಜ್ಯೂನಿಯರ್ ಜಾನಕಿ ಎಂದೇ ಪ್ರಸಿದ್ದಿ ಪಡೆಯಿತು.

ಕನ್ನಡ ಉದ್ಯಮದಲ್ಲಿ ಅವಕಾಶ
ಗಂಗಮ್ಮನ ವೀಡಿಯೂ ವೈರಲ್ ಹೊಂದಿದ ನಂತರ ಕನ್ನಡ ಚಿತ್ರೋದ್ಯಮದಲ್ಲಿ ಹಲವಾರು ಚಿತ್ರ ನಿರ್ಮಾಪಕರು ಹಾಡಲು ಅವಕಾಶ ನೀಡಿದರು. ಜೊತೆಗೆ ಪ್ರಶಸ್ತಿಯನ್ನು ಪಡೆದುಕೊಂಡರು.

15 ದಿನಗಳಲ್ಲಿ ಬದಲಾದ ಭವಿಷ್ಯ
ಗಂಗಮ್ಮಾ ಗಾಯಕಿಯಾಗಬೇಕು ಎಂದು 20 ವರ್ಷಗಳಿಮದ ಕನಸನ್ನು ಕಂಡಿದ್ದಳು. ಜೊತೆಗೆ ಒಂದಿಷ್ಟು ಕಷ್ಟವನ್ನು ಅನುಭವಿಸಿದರು. ಇದೀಗ ಅವರ ಹಾಡು ಸಾಮಾಜಿಕ ತಾಣದಲ್ಲಿ ವೈರಲ್ ಆದ ಬಳಿಕ 15 ದಿನಗಳಲ್ಲಿ ಪ್ರಸಿದ್ಧ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬೆಂಗಳೂರು ಹಾಗೂ ಕೊಪ್ಪಳ ಎಲ್ಲೆಡೆ ಗಂಗಮ್ಮ ಅವರಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ.

ಒಳ್ಳೆಯ ಬದಲಾವಣೆ
20 ವರ್ಷಗಳ ಕಾಲ ಕೂಲಿ ಹಾಗೂ ಹಾಡುಗಾರಿಕೆಯಲ್ಲಿ ಸಮಾನತಯನ್ನು ವಹಿಸಿ, ತನ್ನ ಪ್ರತಿಭೆಯನ್ನು ಮುಂದುವರಿಸಿಕೊಂಡು ಬಂದ ಗಂಗಮ್ಮನಿಗೆ ಈಗ ಉತ್ತಮ ಭವಿಷ್ಯ ದೊರೆತಿದೆ. ಉತ್ತಮ ಬದಲಾದ ಬದುಕನ್ನು ಹೊಂದಿವ ಮೂಲಕ ಪ್ರಸಿದ್ಧ ವ್ಯಕ್ತಿಯಾಗಿ ನಿಂತಿದ್ದಾರೆ.



Click it and Unblock the Notifications











