For Quick Alerts
ALLOW NOTIFICATIONS  
For Daily Alerts

  ನೋಡಿ ಈ ಐದು ರಾಶಿಯವರು ತುಂಬಾ ಸಜ್ಜನ, ಶಾಂತ ಸ್ವಭಾವದವರು...

  By Lekhaka
  |

  ಹುಟ್ಟುಗುಣ ಬೆಟ್ಟ ಹತ್ತಿದರೂ ಹೋಗದು ಎನ್ನುವ ಮಾತಿದೆ. ಇದು ನಿಜ ಕೂಡ. ಯಾಕೆಂದರೆ ಕೆಲವರು ಜೀವನದಲ್ಲಿ ಎಷ್ಟೇ ಏಳುಬೀಳುಗಳನ್ನು ಕಂಡರೂ ಅವರ ಸ್ವಭಾವದಲ್ಲಿ ಯಾವುದೇ ಬದಲಾವಣೆ ಆಗದು. ಇನ್ನು ಕೆಲವರು ಬಾಲ್ಯದಿಂದಲೇ ತುಂಬಾ ಒರಟರಾಗಿರುವರು. ಎಲ್ಲರ ನೆರವಿಗೆ ಬರುವುದು ಮತ್ತು ಯಾವುದೇ ಕೆಲಸಕ್ಕೆ ಇಲ್ಲವೆನ್ನದೆ ಇರುವುದು ಕೂಡ ಕೆಲವರ ಹುಟ್ಟುಗುಣವಾಗಿದೆ.

  ರಾಶಿಯ ಅನುಗುಣವಾಗಿ ಬಂದಿರುವಂತಹ ಗುಣವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಕೆಲವು ರಾಶಿಯವರು ನೀವು ಏನೇ ಕೇಳಿದರೂ ಇಲ್ಲವೆನ್ನಲ್ಲ. ಯಾಕೆಂದರೆ ಅವರ ಸ್ವಭಾವವೇ ಆ ರೀತಿಯದ್ದು. ರಾಶಿಗೆ ಅನುಗುಣವಾಗಿ ತುಂಬಾ ಸಜ್ಜನ, ಶಾಂತ ಸ್ವಭಾವದವರಾಗಿರುವರು. ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ರಾಶಿ ಬರುವುದು. ಅಂತಹ ರಾಶಿಗಳ ಬಗ್ಗೆ ಈ ಲೇಖನ ಮೂಲಕ ತಿಳಿದು ಕೊಳ್ಳುವ...

  ಮೀನ (19ರಿಂದ ಮಾರ್ಚ್ 20ರ ತನಕ ಹುಟ್ಟಿದವರು)

  ಮೀನ (19ರಿಂದ ಮಾರ್ಚ್ 20ರ ತನಕ ಹುಟ್ಟಿದವರು)

  ಫೆಬ್ರವರಿ 19ರಿಂದ ಮಾರ್ಚ್ 20ರ ತನಕ ಹುಟ್ಟಿದವರು ಈ ರಾಶಿಯವರಾಗಿರುವರು. ಇವರು ಮೂಲತಃ ತುಂಬಾ ಒಳ್ಳೆಯ ವ್ಯಕ್ತಿಗಳಾಗಿರುವರು. ಇವರು ತಮ್ಮ ದೈನಂದಿನ ಜೀವನದಲ್ಲಿ ಭೇಟಿಯಾಗುವ ಪರಿಚಿತ ಹಾಗೂ ಅಪರಿಚಿತರಿಗೆ ಯಾವಾಗಲೂ ನೆರವಾಗುವರು.

  ಮೀನ (19ರಿಂದ ಮಾರ್ಚ್ 20ರ ತನಕ ಹುಟ್ಟಿದವರು)

  ಮೀನ (19ರಿಂದ ಮಾರ್ಚ್ 20ರ ತನಕ ಹುಟ್ಟಿದವರು)

  ಮೀನ ರಾಶಿಯವರು ಅಪರಿಚಿತರಿಗೆ ನೆರವಾಗಿ,ಅಪರಿಚಿತರಿಗೂ ಇದು ತಮ್ಮದೇ ಮನೆ ಎನ್ನುವ ಭಾವನೆ ಬರುವಂತೆ ಮಾಡುವರು. ಮೀನ ರಾಶಿಯವರು ಯಾರಿಗಾದರೂ ನೆರವು ನೀಡದೆ ಇದ್ದರೆ ಅದು ಗಂಭೀರ ಅಪರಾಧವಾಗುವುದು.

  ಕನ್ಯಾ (23ರಿಂದ ಸಪ್ಟೆಂಬರ್ 22ರ ತನಕ)

  ಕನ್ಯಾ (23ರಿಂದ ಸಪ್ಟೆಂಬರ್ 22ರ ತನಕ)

  ಅಗಸ್ಟ್ 23ರಿಂದ ಸಪ್ಟೆಂಬರ್ 22ರ ತನಕ ಹುಟ್ಟಿದಂತವರು ಕನ್ಯಾ ರಾಶಿಯವರಾಗಿರುವರು. ಕನ್ಯಾ ರಾಶಿಯವರು ಒಳ್ಳೆಯ ಸ್ನೇಹಿತರಾಗಿರುವರು ಮತ್ತು ಯಾವಾಗಲೂ ತಮ್ಮ ನೆರವು ನೀಡಲು ಮುಂದಾಗವರು. ಸ್ನೇಹಿತರು ನೆರವು ಕೇಳಲು ಹಿಂಜರಿದರೂ ಇವರಾಗಿಯೇ ನೆರವಾಗುವರು.

  ಕನ್ಯಾ (23ರಿಂದ ಸಪ್ಟೆಂಬರ್ 22ರ ತನಕ)

  ಕನ್ಯಾ (23ರಿಂದ ಸಪ್ಟೆಂಬರ್ 22ರ ತನಕ)

  ಪ್ರತಿಯೊಬ್ಬರೊಂದಿಗೆ ಒಳ್ಳೆಯವರಾಗಿರುವುದರ ಪರಿಣಾಮ ಕೆಲವೊಂದು ಸಲ ಜನರು ಇದರ ಲಾಭ ಪಡೆದುಕೊಳ್ಳುವರು. ಕನ್ಯಾ ರಾಶಿಯವರಿಗೆ ಇಲ್ಲವೆನ್ನಲು ಬರುವುದೇ ಇಲ್ಲ. ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದರೂ ಸಹಿತ ಇವರು ನೆರವು ಕೇಳಿದವರಿಗೆ ಇಲ್ಲವೆನ್ನುವುದಿಲ್ಲ.

  ಕರ್ಕಾಟಕ (21ರಿಂದ ಜುಲೈ22 ರ ತನಕ ಹುಟ್ಟಿರುವಂತಹ ಜನರು)

  ಕರ್ಕಾಟಕ (21ರಿಂದ ಜುಲೈ22 ರ ತನಕ ಹುಟ್ಟಿರುವಂತಹ ಜನರು)

  ಜೂನ್ 21ರಿಂದ ಜುಲೈ22 ರ ತನಕ ಹುಟ್ಟಿರುವಂತಹ ಜನರು ಈ ರಾಶಿಯವರಾಗಿರುವರು. ಕರ್ಕಾಟಕ ರಾಶಿಯಲ್ಲಿ ಹುಟ್ಟಿದಂತಹ ಜನರು ಪ್ರತಿಯೊಬ್ಬರು ತಮ್ಮ ಸುತ್ತಲಿನವರೊಂದಿಗೆ ತುಂಬಾ ಒಳ್ಳೆಯ ವರ್ತನೆ ತೋರಿಸುವರು. ಜನರು ತಮ್ಮ ಸ್ವಾರ್ಥಕ್ಕಾಗಿ ಅವರ ಒಳ್ಳೆಯತನವನ್ನು ಬಳಸಿಕೊಂಡರೂ ಅವರಿಗೆ ಇದರ ಬಗ್ಗೆ ಚಿಂತಿಸುವುದಿಲ್ಲ.

  ಕರ್ಕಾಟಕ (21ರಿಂದ ಜುಲೈ22 ರ ತನಕ ಹುಟ್ಟಿರುವಂತಹ ಜನರು)

  ಕರ್ಕಾಟಕ (21ರಿಂದ ಜುಲೈ22 ರ ತನಕ ಹುಟ್ಟಿರುವಂತಹ ಜನರು)

  ತಮ್ಮ ಒಳ್ಳೆಯತನ ಉಳಿಸಿಕೊಳ್ಳಲು ಈ ರಾಶಿಯವರು ತುಂಬಾ ಸೂಕ್ಷ್ಮತೆ ಕಾಪಾಡುವರು. ಕೆಲವು ಕೆಲಸಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಳಗೊಳ್ಳದೆ ಇದ್ದರೂ ಬೇರೆಯವರಿಗೆ ನೆರವಾಗುವರು.

  ಧನುರಾಶಿ (22ರಿಂದ ಡಿಸೆಂಬರ್ 21ರ ತನಕ ಹುಟ್ಟಿದವರು)

  ಧನುರಾಶಿ (22ರಿಂದ ಡಿಸೆಂಬರ್ 21ರ ತನಕ ಹುಟ್ಟಿದವರು)

  ನವಂಬರ್ 22ರಿಂದ ಡಿಸೆಂಬರ್ 21ರ ತನಕ ಹುಟ್ಟಿದವರು ಈ ರಾಶಿಯವರಾಗಿರುವರು. ಈ ರಾಶಿಯವರು ತಮ್ಮ ಸುತ್ತಲು ಇರುವಂತಹ ಜನರನ್ನು ಖುಷಿಯಾಗಿಡಲು ಎಲ್ಲಾ ರೀತಿಯ ಪ್ರಯತ್ನ ಮಾಡುವರು. ಇದಕ್ಕಾಗಿ ಅವರು ತ್ಯಾಗ ಮಾಡಲು ತಯಾರಿರುವರು. ಧನು ರಾಶಿಯಲ್ಲಿ ಹುಟ್ಟಿದವರು ತಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ತುಂಬಾ ಒಳ್ಳೆಯವರಾಗಿರುವರು.

  ಧನುರಾಶಿ (22ರಿಂದ ಡಿಸೆಂಬರ್ 21ರ ತನಕ ಹುಟ್ಟಿದವರು)

  ಧನುರಾಶಿ (22ರಿಂದ ಡಿಸೆಂಬರ್ 21ರ ತನಕ ಹುಟ್ಟಿದವರು)

  ಇವರನ್ನು ಸುಲಭವಾಗಿ ನಂಬಹುದಾಗಿದೆ. ಆದರೆ ಯಾವಾಗಲೂ ತಮ್ಮ ಸೇವೆ ನೀಡುವ ಕಾರಣದಿಂದ ಇವರು ಮಾನಸಿಕ ಹಾಗೂ ದೈಹಿಕವಾಗಿ ಬಳಲುವರು. ಇದರಿಂದ ಅವರಲ್ಲಿ ಹಠಾತ್ ಆಗಿ ಕೋಪ ಬರುವುದು ಮತ್ತು ತಾಳ್ಮೆ ಕಳೆದುಕೊಳ್ಳುವರು. ಆದರೆ ಇದು ತುಂಬಾ ಅಪರೂಪ.

  ತುಲಾ (23ರಿಂದ ಅಕ್ಟೋಬರ್ 22ರ ತನಕ ಹುಟ್ಟಿದ ಜನರು)

  ತುಲಾ (23ರಿಂದ ಅಕ್ಟೋಬರ್ 22ರ ತನಕ ಹುಟ್ಟಿದ ಜನರು)

  ಸಪ್ಟೆಂಬರ್ 23ರಿಂದ ಅಕ್ಟೋಬರ್ 22ರ ತನಕ ಹುಟ್ಟಿದ ಜನರು ಈ ರಾಶಿಯವರಾಗಿರುವರು. ಈ ರಾಶಿಯ ಜನರು ತುಂಬಾ ಒಳ್ಳೆಯವರಾಗಿರುವರು. ಆದರೆ ಇವರು ಯಾವುದೇ ವಿವಾದವಿಲ್ಲದೆ ಜೀವನದಲ್ಲಿ ಒಂದು ಸಮತೋಲನ ಕಾಯ್ದುಕೊಳ್ಳುವರು. ಇದರಿಂದಾಗಿ ಅವರು ತಮ್ಮ ಸುತ್ತಲಿರುವರ ಜನರಿಗೆ ಎಲ್ಲಾ ರೀತಿಯಿಂದಲೂ ನೆರವು ನೀಡಲು ಮುಂದಾಗುವರು.

  ತುಲಾ (23ರಿಂದ ಅಕ್ಟೋಬರ್ 22ರ ತನಕ ಹುಟ್ಟಿದ ಜನರು)

  ತುಲಾ (23ರಿಂದ ಅಕ್ಟೋಬರ್ 22ರ ತನಕ ಹುಟ್ಟಿದ ಜನರು)

  ಅವರು ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವರು ಮತ್ತು ತೃಪ್ತರಾಗಿರುವಂತೆ ಪ್ರಯತ್ನಿಸುವರು. ಈ ರಾಶಿಯವರು ಮನೆ ಹಾಗೂ ಕೆಲಸದ ಜಾಗದಲ್ಲಿ ಯಾವಾಗಲೂ ತುಂಬಾ ಶಾಂತ ಸ್ವಭಾವದವರಾಗಿರುವರು. ಈ ಎಲ್ಲಾ ರಾಶಿಯವರು ತುಂಬಾ ಒಳ್ಳೆಯ ಸ್ವಭಾವದವರಾಗಿರುವರು. ಇವರು ಕಷ್ಟದಲ್ಲಿದ್ದರೂ ಯಾವತ್ತೂ ನೆರವು ಕೇಳಿದವರಿಗೆ ಇಲ್ಲವೆನ್ನುವುದಿಲ್ಲ.

  English summary

  zodiac signs they cannot say a no

  As zodiac sign of a person can never be changed, his/her original nature remains unaltered as well. Some zodiac signs specifically make people too nice for others, for which these people can never say a NO to, even if they realize that they are being taken for granted. The date of birth of a person decides his/her zodiac sign and thus it is better to simply have some knowledge about the zodiac signs that produce the most sweet-natured people in this world.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more