ಕಿರುಬೆರಳಿನ ಗಾತ್ರ ನೋಡಿ-ವ್ಯಕ್ತಿಯ ವ್ಯಕ್ತಿತ್ವ ಅರಿಯಿರಿ!

By: Arshad
Subscribe to Boldsky

ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಲು ಪ್ರಯತ್ನಿಸಬಹುದಾದ ಕೆಲವಾರು ವಿಧಾನಗಳಿವೆ. ಇವುಗಳಲ್ಲಿ ಕೆಲವು ವೈಜ್ಞಾನಿಕವಾದ ಅಧ್ಯಯನದ ಮೂಲಕ ಕಂಡುಕೊಂಡವಾದರೆ ಉಳಿದವು ಅನುಭವ ಮತ್ತು ಪರಂಪರಾಗತವಾಗಿ ಬಂದಿರುವಂತಹವು. ದಕ್ಷಿಣ ಕೊರಿಯಾ ದೇಶದ ಪುರಾತನ ಹಸ್ತಸಾಮುದ್ರಿಕೆಯ ಒಂದು ಪರೀಕ್ಷೆಯ ಮೂಲಕ ವ್ಯಕ್ತಿಯ ಅಂಗವೊಂದರ ಗಾತ್ರವನ್ನು ಅಳೆಯುವ ಮೂಲಕ ಕಂಡುಕೊಳ್ಳಲಾಗುತ್ತಿದೆ.

ಈ ಪುರಾತನ ಕಲೆಯಲ್ಲಿ ವ್ಯಕ್ತಿಯೊಬ್ಬರ ಕಿರುಬೆರಳಿನ ಗಾತ್ರವನ್ನು ಸೂಕ್ಷ್ಮವಾಗಿ ಅವಲೋಕಿಸುವ ಮೂಲಕ ಆತನ ವ್ಯಕ್ತಿತ್ವದ ಬಗ್ಗೆ ಪ್ರಮುಖ ಅಂಶಗಳನ್ನು ಕಂಡುಕೊಳ್ಳಬಹುದು. ಕೇವಲ ಕಿರುಬೆರಳಿನ ಗಾತ್ರ ಹೇಗೆ ವ್ಯಕ್ತಿತ್ವವನ್ನು ಪ್ರಕಟಪಡಿಸುತ್ತದೆ ಎಂದು ಅಚ್ಚರಿ ಪಡುತ್ತಿದ್ದೀರೋ?

ಕೈ ಬೆರಳಿನ ಉದ್ದವನ್ನು ಪರಿಗಣಿಸಿ, ಭವಿಷ್ಯವನ್ನು ನಿರ್ಧರಿಸಿ!

ಹೌದು, ಈ ಮಾಹಿತಿಯನ್ನು ಪರಿಗಣಿಸಿ ಈ ವ್ಯಕ್ತಿ ತನ್ನ ಸುತ್ತಮುತ್ತಲಿನವರೊಂದಿಗೆ ಹೇಗೆ ವ್ಯವಹರಿಸುತ್ತಾನೆ ಎಂಬುದನ್ನು ಕಂಡುಕೊಳ್ಳಬಹುದು. ಬನ್ನಿ, ಈ ಅಚ್ಚರಿಯ ಆದರೆ ಕರಾರುವಾಕ್ಕಾದ ವಿದ್ಯಮಾನದ ಬಗ್ಗೆ ಕೊಂಚ ಅರಿಯೋಣ..... 

ಒಂದು ವೇಳೆ ಕಿರುಬೆರಳು ಉಂಗುರಬೆರಳಿನ ಮೊದಲ ಗಂಟಿಗೆ ಸಮನಾಗಿದ್ದರೆ

ಒಂದು ವೇಳೆ ಕಿರುಬೆರಳು ಉಂಗುರಬೆರಳಿನ ಮೊದಲ ಗಂಟಿಗೆ ಸಮನಾಗಿದ್ದರೆ

ಒಂದು ವೇಳೆ ಕಿರುಬೆರಳಿನ ತುದಿ ಉಂಗುರಬೆರಳಿನ ಮೊದಲ ಗಂಟಿಗೆ ಸಮನಾಗಿದ್ದರೆ ಈ ವ್ಯಕ್ತಿಗಳು ಸಮಾಧಾನಚಿತ್ತದ ಹಾಗೂ ಸೌಮ್ಯಸ್ವಭಾವದ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲ ಜನರ ಬಗ್ಗೆ ಕಾಳಜಿ ಹಾಗೂ ಕಳವಳ ವಹಿಸಿದ್ದರೂ ತಕ್ಷಣವೇ ಪ್ರಕಟಿಸಲಾರದು. ಆದ್ದರಿಂದ ಸುತ್ತಮುತ್ತಲ ಜನರು ಇವರ ಅದ್ಭುತ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಕೊಂಚ ಸಮಯವೇ ಬೇಕಾಗುತ್ತದೆ.

ಕಿರುಬೆರಳು ಉಂಗುರಬೆರಳಿನ ಮೊದಲ ಗಂಟಿಗಿಂತಲೂ ಉದ್ದವಾಗಿದ್ದರೆ

ಕಿರುಬೆರಳು ಉಂಗುರಬೆರಳಿನ ಮೊದಲ ಗಂಟಿಗಿಂತಲೂ ಉದ್ದವಾಗಿದ್ದರೆ

ಒಂದು ವೇಳೆ ಕಿರುಬೆರಳು ಉಂಗುರಬೆರಳಿನ ಮೊದಲ ಗಂಟಿಗಿಂತಲೂ ಉದ್ದವಾಗಿದ್ದರೆ ಈ ವ್ಯಕ್ತಿಗಳು ಸುತ್ತಮುತ್ತಲಿನವರನ್ನು ಸುಲಭವಾಗಿ ಆಕರ್ಷಿಸುವವರಾಗಿದ್ದು ಸುಲಭವಾಗಿ ಎಲ್ಲರೊಂದಿಗೆ ಬೆರೆಯುವವರಾಗಿರುತ್ತಾರೆ. ಆದರೆ ಇವರಿಗೆ ಅದೃಷ್ಟ ಎಲ್ಲಾ ಸಮಯದಲ್ಲಿಯೂ ಜೊತೆ ನೀಡದ ಕಾರಣ ಈ ವ್ಯಕ್ತಿಗಳು ತಮ್ಮ ಪ್ರಯತ್ನಗಳಲ್ಲಿ ಹಾಗೂ ತಾವು ವಿಶ್ವಾಸಾರ್ಹರು ಎಂದು ಸುತ್ತಮುತ್ತಲಿನವರಲ್ಲಿ ನಂಬಿಕೆ ಹುಟ್ಟಿಸಲು ಕೊಂಚ ಹೆಚ್ಚೇ ಕಷ್ಟಪಡಬೇಕಾಗುತ್ತದೆ.

ಕಿರುಬೆರಳ ಬುಡ ಇತರ ಬೆರಳುಗಳಿಗಿಂತ ಕೆಳಗಿದ್ದರೆ

ಕಿರುಬೆರಳ ಬುಡ ಇತರ ಬೆರಳುಗಳಿಗಿಂತ ಕೆಳಗಿದ್ದರೆ

ಮೊದಲು ಎಲ್ಲಾ ಬೆರಳುಗಳು ಕೂಡಿರುವಂತೆ ಹಸ್ತವನ್ನು ಬಿಡಿಸಿ ಬೆರಳುಗಳ ಬುಡವನ್ನು ಗಮನಿಸಿ. ತೋರು, ಮಧ್ಯ ಹಾಗೂ ಉಂಗುರಬೆರಳುಗಳ ಬುಡಗಳು ಹೆಚ್ಚೂ ಕಡಿಮೆ ಅರ್ಧವೃತ್ತಾಕಾರದಲ್ಲಿರುತ್ತವೆ. ಒಂದು ವೇಳೆ ಕಿರುಬೆರಳಿನ ಬುಡ ಈ ವೃತ್ತಾಕಾರವನ್ನು ಸೇರದೇ ಸ್ಪಷ್ಟವಾಗಿ ಕೊಂಚ ಕೆಳಗೇ ಇರುವಂತೆ ಕಂಡರೆ ಈ ವ್ಯಕ್ತಿಗಳು ದೊಡ್ಡ ದೊಡ್ಡ ಕನಸುಕಾಣುತ್ತಾ ಮಿಥ್ಯಾ ಪ್ರಪಂಚದಲ್ಲಿ ಜೀವಿಸುವವರಾಗಿರುತ್ತಾರೆ. ಆದರೆ ಈ ವ್ಯಕ್ತಿಗಳು ಯಾವಾಗ ತಮ್ಮ ಕನಸುಗಳನ್ನು ವಾಸ್ತವ ಜಗತ್ತಿನಲ್ಲಿ ಅಳವಡಿಸಲು ಯತ್ನಿಸುತ್ತಾರೋ ಆಗ ಭಾರೀ ವಿರೋಧವನ್ನು ಎದುರಿಸಬೇಕಾಗುತ್ತದೆ.

ಒಂದು ವೇಳೆ ಕಿರುಬೆರಳು ಉಂಗುರಬೆರಳಿನಷ್ಟೇ ಉದ್ದವಿದ್ದರೆ

ಒಂದು ವೇಳೆ ಕಿರುಬೆರಳು ಉಂಗುರಬೆರಳಿನಷ್ಟೇ ಉದ್ದವಿದ್ದರೆ

ಈ ಪರಿಯ ಬೆರಳಿರುವ ವ್ಯಕ್ತಿಗಳು ಅತಿ ವಿರಳರಾಗಿರುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಅಧಿಕಾರ ಲಾಲಸೆ ಹೊಂದಿರುವ ವ್ಯಕ್ತಿಗಳಾಗಿದ್ದು ಇತರ ಪ್ರಭಾವೀ ವ್ಯಕ್ತಿಗಳ ಅಡಿಯಾಳುಗಳಾಗಿರುತ್ತಾರೆ. ಇವರಿಗೆ ಸೋಲು ಅಸಹ್ಯವಾಗಿದ್ದು ಇದರ ಪ್ರತೀಕಾರದ ಪ್ರಯತ್ನಗಳು ಸರ್ವನಾಶವನ್ನೇ ಉಂಟುಮಾಡಬಹುದು.

ಕಿರುಬೆರಳಿನ ತುದಿ ಚೌಕಾಕಾರದಲ್ಲಿದ್ದರೆ

ಕಿರುಬೆರಳಿನ ತುದಿ ಚೌಕಾಕಾರದಲ್ಲಿದ್ದರೆ

ಒಂದು ವೇಳೆ ಅಡ್ಡಲಾಗಿ ಗಮನಿಸಿದಾಗ ಕಿರುಬೆರಳಿನ ತುದಿ ಹೆಚ್ಚೂ ಕಡಿಮೆ ಚಪ್ಪಟೆಯಾಗಿದ್ದು ಚೌಕಾಕಾರದಲ್ಲಿದ್ದಂತೆ ಕಂಡುಬಂದರೆ ಈ ವ್ಯಕ್ತಿಗಳಲ್ಲಿ ಕೆಲವು ಪ್ರಶಂಸಾರ್ಹ ಗುಣಗಳಿರುತ್ತವೆ. ವೈಯಕ್ತಿಕವಾಗಿ ಈ ವ್ಯಕ್ತಿಗಳು ಮೊಂಡರೂ ಮಿತಭಾಷಿಗಳೂ ಆಗಿರುತ್ತಾರೆ. ಆದರೆ ಇವರ ಪ್ರಾಮಾಣಿಕತೆ ಹಾಗೂ ದಿಟ್ಟ ಮನೋಭಾವದ ಕಾರಣ ಸುತ್ತಲ ಜನರ ವಿಶ್ವಾಸವನ್ನು ಪಡೆದಿರುತ್ತಾರೆ.

ಕಿರುಬೆರಳಿನ ತುದಿ ಚೂಪಾಗಿದ್ದರೆ

ಕಿರುಬೆರಳಿನ ತುದಿ ಚೂಪಾಗಿದ್ದರೆ

ಒಂದು ವೇಳೆ ಕಿರುಬೆರಳಿನ ತುದಿ ಇಂಗ್ಲಿಷ್ ವಿ ಅಕ್ಷರ ತಲೆಕೆಳಗಾದಂತೆ ಇದ್ದರೆ ಈ ವ್ಯಕ್ತಿಗಳು ಅದ್ಭುತ ವಾಗ್ಮಿಗಳೂ, ಲೇಖಕರೂ, ತಮ್ಮ ವಿಚಾರಗಳನ್ನು ನಿರರ್ಗಳವಾಗಿ ಪ್ರಕಟಿಸುವವರೂ ಆಗಿರುತ್ತಾರೆ. ಇವರು ವೈಯಕ್ತಿಕವಾಗಿ ಉತ್ತಮ ರಾಜತಾಂತ್ರಿಕರಾಗಿರುತ್ತಾರೆ.

ಕಿರುಬೆರಳಿನ ತುದಿ ವೃತ್ತಾಕಾರದಲ್ಲಿದ್ದರೆ

ಕಿರುಬೆರಳಿನ ತುದಿ ವೃತ್ತಾಕಾರದಲ್ಲಿದ್ದರೆ

ಒಂದು ವೇಳೆ ಬೆರಳಿನ ತುದಿ ಹೆಚ್ಚೂ ಕಡಿಮೆ ಸ್ಪಷ್ಟವಾದ ವೃತ್ತಾಕಾರದಲ್ಲಿದ್ದರೆ ಅಥವಾ ಕೊಂಚವೇ ಇತರ ಬೆರಳುಗಳಿನ ಅತ್ತ ಅಥವಾ ಇತ್ತ ಬಾಗಿದ್ದರೆ ಈ ವ್ಯಕ್ತಿಗಳು ಪರಿಸ್ಥಿತಿಯನ್ನು ಎದುರಿಸಲು ಹಿಂದೇಟು ಹಾಕುವ ವ್ಯಕ್ತಿಗಳಾಗಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಸುತ್ತ ಮುತ್ತಲ ಜನರ ನಡುವೆ ವ್ಯವಹಾರ ಕುದುರಿಸುವ, ವ್ಯಾಜ್ಯಗಳನ್ನು ಪರಿಹರಿಸುವ, ಒಪ್ಪಂದಗಳನ್ನು ಮಾಡಿಸುವ ಹಾಗೂ ಸಂಬಂಧ ಕಡಿದುಕೊಂಡ ವ್ಯಕ್ತಿಗಳ ನಡುವೆ ಸೇತುವೆಯಾಗುವ ವ್ಯಕ್ತಿತ್ವ ಹೊಂದಿರುತ್ತಾರೆ.

ನಿಮ್ಮ ಅನಿಸಿಕೆ ಏನು?

ನಿಮ್ಮ ಅನಿಸಿಕೆ ಏನು?

ಇವನ್ನೆಲ್ಲಾ ಓದುತ್ತಿರುವಾಗ ನೀವು ನಿಮ್ಮ ಕಿರುಬೆರಳನ್ನು ಖಂಡಿತಾ ಗಮನಿಸಿಯೇ ಇರುತ್ತೀರಿ ಎಂದು ನಮಗೆ ಅರಿವಿದೆ. ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

ಅಚ್ಚರಿಗೆ ತಳ್ಳುವ ಕೈ ಬೆರಳಿನ ಮೂಲಕ ಮಾಡುವ ಚಿಕಿತ್ಸೆ!

English summary

Your Little Finger Reveals How Secretive You Are!

In this test, it was revealed that the basics of a personality type can be deciphered with just a single variable and that is the pinky/little finger!
Subscribe Newsletter