For Quick Alerts
ALLOW NOTIFICATIONS  
For Daily Alerts

  19-12-2017 ಮಂಗಳವಾರದ ದಿನ ಭವಿಷ್ಯ

  By Divya Pandith
  |
  ದಿನ ಭವಿಷ್ಯ - Kannada Astrology 19-12-2017 - Your Day Today - Oneindia Kannada

  ಪ್ರತಿಯೊಬ್ಬರಿಗೂ ಅವರದ್ದೇ ಆದ ತೊಂದರೆಗಳಿರುತ್ತವೆ. ಕೆಲವರು ತಮ್ಮ ನೋವು ನಲಿವನ್ನು ಬಹುಬೇಗ ವ್ಯಕ್ತ ಪಡಿಸುತ್ತಾರೆ. ಹಾಗಂತ ಅವರು ಅತ್ಯಂತ ದುರ್ಬಲ ಮನೋಪ್ರವೃತ್ತಿಯವರು ಎಂದಲ್ಲ. ಕೆಲವರು ತಮ್ಮ ಭಾವನೆಗಳನ್ನು ಅಷ್ಟು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅಲ್ಲದೆ ತೋರಿಸಿಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಹಾಗಂತ ಅವರು ಬಹಳ ಗಟ್ಟಿ ಮನಸ್ಸಿನವರು ಎಂದಲ್ಲಾ. ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಕೌಶಲ್ಯ ಹಾಗೂ ವ್ಯಕ್ತಿತ್ವ ಇರುತ್ತದೆ.

  ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವುದು ಹಾಗೂ ಗೌರವಿಸಬೇಕು. ಆಗಲೇ ನಮ್ಮದು ಒಂದು ಉತ್ತಮವಾದ ವ್ಯಕ್ತಿತ್ವವಾಗಿ ಪ್ರತಿಬಿಂಬಿಸುತ್ತದೆ. ಮಂಗಳವಾರವಾದ ಈ ಶುಭದಿನದಂದು ಯಾವೆಲ್ಲಾ ಬದಲಾವಣೆಗಳು ನಿಮ್ಮ ಭವಿಷ್ಯದಲ್ಲಿ ಉಂಟಾಗಲಿದೆ. ಅದಕ್ಕಾಗಿ ನೀವು ಮಾನಸಿಕ ಹಾಗೂ ದೈಹಿಕವಾಗಿ ಹೇಗೆ ಸಬಲರಾಗಿರಬೇಕು ಎನ್ನುವುದನ್ನು ಈ ಮುಂದಿನ ದಿನ ಭವಿಷ್ಯ ನೋಡಿ ಅರಿಯಿರಿ.... 

  ಮೇಷ- 21 ಮಾರ್ಚ್ -20 ಏಪ್ರಿಲ್

  ಮೇಷ- 21 ಮಾರ್ಚ್ -20 ಏಪ್ರಿಲ್

  ನಿಮ್ಮ ಎಲ್ಲಾ ಸುಂದರವಾದ ಕನಸು ನನಸಾಗುವುದು. ಉದ್ಯೋಗ ಕ್ಷೇತ್ರದಲ್ಲಿ ಲಾಭಾಂಶವನ್ನು ಪಡೆದುಕೊಳ್ಳುವಿರಿ. ದೇವರ ಆಶೀರ್ವಾದ ನಿಮಗೆ ಲಭಿಸುವುದು. ಆಂತರಿಕ ವಿಚಾರವನ್ನು ಇತರರಲ್ಲಿ ಹಂಚಿಕೊಳ್ಳುವುದರಿಂದ ಲಾಭ ಉಂಟಾಗುವುದು. ನೂತನ ಉದ್ಯೋಗವನ್ನು ಕೈಗೊಳ್ಳುವ ಲಕ್ಷಣಗಳಿವೆ. ಪ್ರಯತ್ನಕ್ಕೆ ಸೂಕ್ತ ಪ್ರತಿಫಲವನ್ನು ಸಹ ನೀವು ಪಡೆದುಕೊಳ್ಳಲಿದ್ದೀರಿ. ಯಾವುದೇ ಕಾರ್ಯವನ್ನು ಕೈಗಳ್ಳಲು ಇದು ಉತ್ತಮವಾದ ಸಮಯ. ಮಹಿಳೆಯರು ನಿಂಬೆ ಹಣ್ಣಿನ ದೀಪವನ್ನು ಬೆಳಗಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ದೇವಿಯ ಆರಾಧನೆ ಮಾಡಿ.

  ವೃಷಭ 21 ಏಪ್ರಿಲ್ -21 ಮೇ

  ವೃಷಭ 21 ಏಪ್ರಿಲ್ -21 ಮೇ

  ಹಣಕಾಸಿನ ವಿಚಾರದಲ್ಲಿ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುವುದು. ಒಂದಿಷ್ಟು ಪ್ರಮಾಣದ ಹಣವನ್ನು ವ್ಯಯಿಸಬೇಕಾಗುವುದು. ಅನಿರೀಕ್ಷಿತವಾದ ಸೋಲು ಹಾಗೂ ದೈಹಿಕವಾದ ಆಯಾಸ ನಿಮ್ಮನ್ನು ಮಾನಸಿಕವಾಗಿ ಕಂಗೆಡುವಂತೆ ಮಾಡುವುದು. ನಿರ್ದಿಷ್ಟಗುರಿಯನ್ನು ತಲುಪಲು ಅಸಾಧ್ಯವಾಗುವುದು. ಸ್ತ್ರೀಯರಿಂದ ಅವಮಾನಕರವಾದ ವಾತಾವರಣ ಉಂಟಾಗುವುದು. ಷೇರು ವ್ಯವಹಾರದಲ್ಲಿ ಹಣವನ್ನು ಹೂಡದಿರಿ. ಸಮಸ್ಯೆಗಳ ನಿವಾರಣೆಗೆ ಗಣೇಶನ ಆರಾಧನೆ ಮಾಡಿ. ಗಣೇಶನಿಗೆ ಗರಿಕೆಯನ್ನು ಸಲ್ಲಿಸಿ.

  ಮಿಥುನ 22 ಮೇ -21 ಜೂನ್

  ಮಿಥುನ 22 ಮೇ -21 ಜೂನ್

  ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಆದರೂ ಹೆದರುವ ಅಗತ್ಯವಿಲ್ಲ. ಮಾಡುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆಗೆ ಒಳಗಾಗುವಿರಿ. ಮನೆಯಲ್ಲಿ ನೆಮ್ಮದಿ. ಅನಿರೀಕ್ಷಿತ ಸೋಲು ದೂರಾಗುವುದು. ಸ್ತ್ರೀಯರಿಂದ ಪ್ರಶಂಸೆಗೆ ಒಳಗಾಗುವಿರಿ. ಇದರಿಂದ ಮಾನಸಿಕವಾಗಿ ಸಂತೋಷಕ್ಕೆ ಒಳಗಾಗುವಿರಿ. ಪ್ರೇಮಿಗಳಿಗೆ ಸಮಾಧಾನಕರವಾದ ದಿನ. ದೂರದ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾಋಣೆ ಹಾಗೂ ಸಂತೋಷಕರ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಕುಲದೇವರ ಪ್ರಾರ್ಥನೆ ಮಾಡಿ.

  ಕರ್ಕ 22 ಜೂನ್ -22 ಜುಲೈ

  ಕರ್ಕ 22 ಜೂನ್ -22 ಜುಲೈ

  ಇಂದು ನಿಮಗೆ ಅದೃಷ್ಟಕರವಾದ ದಿನ. ಇಂದು ನಿಮಗೆ ತೋಚಿದ ಶುಭ ಕೆಲಸಗಳಿಗೆ ಮುಂದಾಗಬಹುದು. ಮಂಗಳವಾರ ಎನ್ನುವ ಹಿಂಜರಿಕೆಯ ಅಗತ್ಯವಿಲ್ಲ. ಕೈಗಾರಿಕೋದ್ಯಮದಿಂದ ಲಾಭ ಉಂಟಾಗುವುದು. ತಾಂತ್ರಿಕ ಕೆಲಸದಲ್ಲಿರುವವರಿಗೆ ಲಾಭ ಉಂಟಾಗುವುದು. ಛಾಯಾಗ್ರಾಹಕರಿಗೆ ಧನಾತ್ಮಕ ಲಾಭ ಹಾಗೂ ಉತ್ತಮ ಅವಕಾಶಗಳು ದೊರೆಯುವುದು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಅಗತ್ಯ ಕೆಲಸವನ್ನು ಮುಂದುವರಿಸುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

  ಸಿಂಹ 23 ಜುಲೈ -21 ಆಗಸ್ಟ್

  ಸಿಂಹ 23 ಜುಲೈ -21 ಆಗಸ್ಟ್

  ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಸಾಲಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಇತರರಿಂದ ಅವಮಾನಕ್ಕೆ ಒಳಗಾಗುವ ಸಾಧ್ಯತೆಗಳಿವೆ. ವಾಹನ ಚಲಾಯಿಸುವಾಗ ಹೆಚ್ಚು ಕಾಳಜಿವಹಿಸಬೇಕು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

  ಕನ್ಯಾ 22 ಆಗಸ್ಟ್ -23 ಸೆಪ್ಟೆಂಬರ್

  ಕನ್ಯಾ 22 ಆಗಸ್ಟ್ -23 ಸೆಪ್ಟೆಂಬರ್

  ಇಂದು ನಿಮಗೆ ಸುಗಮವಾದಂತಹ ದಿನ. ಎಲ್ಲಾ ರೀತಿಯ ಪ್ರಗತಿಯನ್ನು ನೀವು ಕಾಣುವಿರಿ. ಮಾಡುತ್ತಿರುವ ಕೆಲಸದಲ್ಲಿ ಬಡ್ತಿ ಹಾಗೂ ಪ್ರಶಂಸೆ ದೊರೆಯುವುದು. ಸ್ತ್ರೀಯರು ನೆಮ್ಮದಿಯನ್ನು ಪಡೆದುಕೊಳ್ಳುವರು. ಸ್ನೇಹಿತರು ನಿಮ್ಮ ಪರವಾಗಿ ನಿಲ್ಲುವರು. ಪ್ರೇಮ ವೈಫಲ್ಯಕ್ಕೆ ಇದ್ದ ಅಡೆತಡೆ ದೂರವಾಗುವುದು. ವಿವಾಹಕ್ಕೆ ಇದ್ದ ಅಡೆತಡೆಗಳು ದೂರವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ದೇವಿಯಾರಾಧನೆ ಮಾಡಿ.

  ತುಲಾ 24 ಸೆಪ್ಟೆಂಬರ್ -23 ಅಕ್ಟೋಬರ್

  ತುಲಾ 24 ಸೆಪ್ಟೆಂಬರ್ -23 ಅಕ್ಟೋಬರ್

  ಸುಂದರವಾದ ದಿನವಾಗಿ ನಿಮಗೆ ಪರಿಣಮಿಸುವುದು. ಅಂದುಕೊಂಡ ಕೆಲಸಗಳಿಗೆ ಸಕಾರಾತ್ಮಕವಾದ ಸಹಕಾರ ದೊರೆಯುವುದು. ಕಲಾವಿದರಿಗೆ ಹಾಗೂ ವಿಜ್ಞಾನ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ಹಾಗೂ ಧಾರ್ಮಿಕ ಚಿಂತಕರಿಗೆ ಅನುಕೂಲ ಉಂಟಾಗುವುದು. ಎಲ್ಲಾ ರೀತಿಯಿಂದಲೂ ಶುಭ ಶಕುನವನ್ನು ಅನುಭವಿಸುವಿರಿ. ಕಪ್ಪು ಬಟ್ಟೆಯನ್ನು ಧರಿಸದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಬದುಕಿಗೆ ದೇವಿಯ ಆರಾಧನೆ ಮಾಡಿ.

  ವೃಶ್ಚಿಕ 24 ಅಕ್ಟೋಬರ್ -22 ನವೆಂಬರ್

  ವೃಶ್ಚಿಕ 24 ಅಕ್ಟೋಬರ್ -22 ನವೆಂಬರ್

  ಅಂದುಕೊಂಡ ವಿಚಾರವು ಸುಲಭವಾಗಿ ನೆರವೇರದು. ಬಂಧು ಮಿತ್ರರಿಂದ ಕಿರಿಕಿರಿಯನ್ನು ಅನುಭವಿಸಬೇಕಾದ ಸಾಧ್ಯತೆಗಳಿವೆ. ಸಮಸ್ಯೆಗಳಿಂದ ಮನಸ್ಸಿಗೆ ನೋವುಂಟಾಗುವುದು. ವೃದ್ಧರು ಮಾನಸಿಕವಾಗಿ ನೋವನ್ನು ಉಂಟುಮಾಡುವ ಸಾಧ್ಯತೆಗಳಿವೆ. ಉತ್ತಮ ಬದುಕು ಹಾಗೂ ಸಂತೋಷಕ್ಕಾಗಿ ಶೀವನ ಆರಾಧನೆ ಮಾಡಿ.

  ಧನು 23 ನವೆಂಬರ್ -22 ಡಿಸೆಂಬರ್

  ಧನು 23 ನವೆಂಬರ್ -22 ಡಿಸೆಂಬರ್

  ಸಮಾಧಾನ ಪಡೆಯಲು ಕಷ್ಟವಾಗುವುದು. ಮಾನಸಿಕ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಕೈಗಾರಿಕಾ ಕ್ಷೇತ್ರದಲ್ಲಿರುವವರಿಗೆ ಪೂರ್ತಿಪ್ರಮಾಣದ ಲಾಭ ಉಂಟಾಗದು. ಆಮದು ರಫ್ತು ವ್ಯವಹಾರದಲ್ಲಿ ಸಮಾಧಾನ ದೊರೆಯದು. ಮಕ್ಕಳಿಂದ ಅಶುಭ ಸುದ್ದಿಯನ್ನು ಕೇಳಬೇಕಾಗುವುದು. ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಹಾಗಾಗಿ ಗಣೇಶ ಹಾಗೂ ಆಂಜನೇಯನ ಆರಾಧನೆ ಮಾಡಿ.

  ಮಕರ 23 ಡಿಸೆಂಬರ್ -20 ಜನವರಿ

  ಮಕರ 23 ಡಿಸೆಂಬರ್ -20 ಜನವರಿ

  ಸುಂದರವಾದ ಜೀವನವನ್ನು ಪಡೆದುಕೊಳ್ಳುವಿರಿ. ಸುಂದರವಾದ ಕನಸುಗಳು ನನಸಾಗುವುದು. ನೆಮ್ಮದಿಯ ಬದುಕನ್ನು ನೀವು ಕಾಣುವಿರಿ. ಅನೇಕ ದಿನಗಳಿಂದ ಕಂಡ ಕನಸು ಇಂದು ನನಸಾಗುವುದು. ಪ್ರಗತಿಪರ ಜೀವನಕ್ಕಾಗಿ ಶಿವ ಮತ್ತು ದೇವಿಯ ಆರಾಧನೆ ಮಾಡಿ.

  ಕುಂಬ 21 ಜನವರಿ -19 ಫೆಬ್ರುವರಿ

  ಕುಂಬ 21 ಜನವರಿ -19 ಫೆಬ್ರುವರಿ

  ಸಮಾಧಾನಕರವಾದ ಜೀವನ ಸಕಾರಾತ್ಮಕವಾಗಿ ನೆಲೆಗೊಳ್ಳುವುದು. ನೆಮ್ಮದಿಯ ಜೀವನ ನಿಮ್ಮದಾಗುವುದು. ಅನಿರೀಕ್ಷಿತ ಸೋಲಿಗೆ ನೀವು ತೆರೆ ಎಳೆಯುವಿರಿ. ಅನೇಕದಿನಗಳಿಮದ ಅಂದುಕೊಂಡ ಕಾರ್ಯಗಳು ಅನುಕೂಲವನ್ನೇ ತಂದುಕೊಡುತ್ತದೆ. ಮನೆಯಲ್ಲಿ ಶುಭಕರವಾದ ವಾತಾವರಣ ಜರುಗುವುದು. ಮಹಿಳೆಯರಿಗೆ ಪ್ರಶಂಸೆ ದೊರೆಯುವುದು. ಮಾನಸಿಕವಾಗಿ ಖುಷಿ ಉಂಟಾಗುವುದು. ಎಲ್ಲಾ ರೀತಿಯ ನೆಮ್ಮದಿಯನ್ನು ನೀವು ಕಾಣುವಿರಿ. ಇನ್ನಷ್ಟು ಒಳಿತಿಗಾಗಿ ದೇವಿಯ ಆರಾಧನೆ ಮಾಡಿ.

  ಮೀನ 20 ಫೆಬ್ರವರಿ -20 ಮಾರ್ಚ್

  ಮೀನ 20 ಫೆಬ್ರವರಿ -20 ಮಾರ್ಚ್

  ಸುಂದರವಾದ ಜೀವನವನ್ನು ನೀವು ಪಡೆದುಕೊಳ್ಳುವಿರಿ. ಅನಿರೀಕ್ಷಿತ ಸೋಲು ದೂರವಾಗುವುದು. ಸಂತೋಷಕರವಾದ ಬದುಕನ್ನು ನೀವು ಪಡೆದುಕೊಳ್ಳುವಿರಿ. ಮನೆಯಲ್ಲಿ ನೆಮ್ಮದಿಯನ್ನು ಅನುಭವಿಸುವಿರಿ. ನವಗ್ರಹ ಶಾಂತಿಯ ಅಷ್ಟೋತ್ತರವನ್ನು ನೀವು ಜಪಿಸಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶೀವ ಮತ್ತು ದೇವಿಯ ಆರಾಧನೆ ಮಾಡಿ.

  English summary

  your-daily-horoscope-for-19-December-2017

  Know what astrology and the planets have in store for you today. Choose your zodiac sign and read the details..
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more