Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
28-12-2017 ಗುರುವಾರದ ದಿನ ಭವಿಷ್ಯ
ಇರುವುದೊಂದೇ ಜೀವನ. ಆ ಜೀವನ ಎನ್ನುವುದು ಸಿಗುವುದು ಕೆಲವೇ ದಿನ. ಅದರೊಳಗೆ ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ ಎಲ್ಲವೂ ಅಡಗಿರುತ್ತದೆ. ಈ ಎಲ್ಲಾ ಹಂತದಲ್ಲೂ ಉತ್ತಮವಾದ ವರ್ತನೆ ಹಾಗೂ ಸಾರ್ಥಕ ಎನ್ನುವಂತಹ ಕೆಲಸ ಮಾಡುವುದರ ಮೂಲಕ ಜೀವನವನ್ನು ಅನುಭವಿಸುತ್ತ ಬಾಳುವುದೇ ಬದುಕು. ಹಾಗಾಗಿ ಅಮೂಲ್ಯವಾದ ಬದುಕನ್ನು ದುರುಪಯೋಗಕ್ಕೆ ಬಳಸಿಕೊಳ್ಳದೆ ಧಾನ-ಧರ್ಮ, ಕರ್ತವ್ಯ, ನಿಷ್ಠೆ, ಪ್ರೀತಿ-ಸ್ನೇಹ ಎನ್ನುವುದರ ಮೂಲಕ ಸುಂದರಗೊಳಿಸಿಕೊಂಡು ಬಾಳಿ ಎನ್ನುವುದೇ ನಮ್ಮ ಆಶಯ.
ಗುರುವಾರವಾದ ಇಂದು ಹಲವರ ಬದುಕಲ್ಲಿ ಅದೃಷ್ಟವನ್ನು ಹಾಗೂ ಕೆಲವರ ಬದುಕಲ್ಲಿ ಕಷ್ಟವನ್ನು ತಂದೊಡ್ಡಬಹುದು. ಯಾವುದಕ್ಕೂ ಹೆದರದೆ ನಿಮ್ಮ ಗುರಿಯೆಡೆಗೆ ಹೆಜ್ಜೆಯಿಡಿ. ನಿಮ್ಮ ಭವಿಷ್ಯ ಯಾವ ಪತದಲ್ಲಿ ಕರೆದೊಯ್ಯುವುದು ಎನ್ನುವುದನ್ನು ಮುಂಚಿತವಾಗಿ ನೀವು ತಿಳಿದು ಕೊಳ್ಳಬೇಕು ಎಂದು ಬಯಸುವುದಾದರೆ ಈ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ...

ಮೇಷ: 28 ಮಾರ್ಚ್ -20 ಏಪ್ರಿಲ್
ಇಂದು ನಿಮಗೆ ಸಮಾಧಾನ ಲಭಿಸುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಉದ್ಯೋಗ ಇಲ್ಲದವರಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸ್ತ್ರೀಯರಿಗೆ ಮಾನಸಿಕ ನೆಮ್ಮದಿ ದೊರೆಯುವುದು. ಪತ್ರಕರ್ತರಿಗೆ ಅನುಕೂಲ ಉಂಟಾಗುವುದು. ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡ ಬಯಸುವವರಿಗೆ ಇಂದು ಕನಸು ನನಸಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಹಾಗೂ ಗುರುವಿನ ಪ್ರಾರ್ಥನೆ ಮಾಡಿ.

ವೃಷಭ: ಏಪ್ರಿಲ್ 28-ಮೇ 20
ಮಾನಸಿಕ ಕಿರಿಕಿರಿ ನಿಮ್ಮನ್ನು ಭಾದಿಸುವುದು. ಆರ್ಥಿಕವಾಗಿ ಒಂದಿಷ್ಟು ತೊಂದರೆ ಉಂಟಾಗುವಂತಹ ದಿನ. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಆಸ್ತಿ ವಿಚಾರದಲ್ಲಿ ಬಂಧು ಮಿತ್ರರ ನಡುವೆ ಕಲಹ ಉಂಟಾಗಬಹುದು. ಆರ್ಥಿಕ ಸ್ಥಿತಿಯಲ್ಲಿ ಹಿನ್ನೆಡೆ ಉಂಟಾಗುವುದರಿಂದ ಬೇರೆಯವರಲ್ಲಿ ಕೈಚಾಚುವ ಸ್ಥಿತಿ ಎದುರಾಗಬಹುದು. ಚಿಕ್ಕ ಪುಟ್ಟ ವ್ಯಾಪಾರಿಗಳಿಗೂ ವ್ಯಾಪಾರದಲ್ಲಿ ಅಡಚಣೆ ಉಂಟಾಗಬಹುದು. ಅರಳಿ ಮರವನ್ನು ಸುತ್ತುವುದರ ಮೂಲಕ ಸಮಸ್ಯೆಯನ್ನು ದೂರಾಗಿಸಬಹುದು. ಜೀವನದಲ್ಲಿ ಪ್ರಗತಿಗಾಗಿ ಶಿವನ ಆರಾಧನೆ ಮಾಡಿ.

ಮಿಥುನ: ಮೇ 28 ಜೂನ್ 20
ಇಂದು ನಿಮಗೆ ಸಮಾಧಾನ ಲಭಿಸುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ಕಣುವಿರಿ. ಅನಿರೀಕ್ಷಿತ ಲಾಭಗಳು ಹಾಗೂ ಹೊಸ ಆಯಾಮಗಳ ತಿರುವು ನಿಮಗೆ ಅದೃಷ್ಟವನ್ನು ತಂದುಕೊಡುವುದು. ಹಿತ ಶತ್ರುಗಳಿಂದ ಆದಷ್ಟು ಕಾಳಜಿಯಿಂದ ಇರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಹಾಗೂ ಗುರುವಿನ ಪ್ರಾರ್ಥನೆ ಮಾಡಿ.

ಕರ್ಕ: ಜೂನ್ 28-ಜುಲೈ 22
ಇಂದು ನಿಮಗೆ ಉತ್ತಮವಾದ ದಿನ. ಲಾಭವನ್ನು ಪಡೆದುಕೊಳ್ಳುವಿರಿ. ಮನಸ್ಸಿನ ಆಸೆಗಳು ಇಂದು ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳುವುದು. ಮನೆಯಲ್ಲಿ ನೆಮ್ಮದಿ ಹಾಗೂ ಪತ್ನಿಯ ಸಹಕಾರ ದೊರೆಯುವದು. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ ದೊರೆಯುವುದು. ಸ್ಥಿರಾಸ್ತಿಯಿಂದ ಲಾಭ ದೊರೆಯುವುದು. ರೈತರಿಗೆ ನೆಮ್ಮದಿ ದೊರೆಯುವುದು. ವಿವಾಹದ ವಿಳಂಬ ದೂರವಾಗುವುದು. ಅವಿವಾಹಿತರಿಗೆ ವಿವಾಹ ಯೋಗ. ಹಿರಿಯರು ದೂರದ ಪ್ರಯಾಣ ಕೈಗೊಳ್ಳುವ ಅವಕಾಶಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವನ ಆರಾಧನೆ ಹಾಗೂ ಗುರುವಿನ ಪ್ರಾರ್ಥನೆ ಮಾಡಿ.

ಸಿಂಹ: ಜುಲೈ 28-ಆಗಸ್ಟ್ 23
ಪಂಚಮ ಶನಿಯ ಪ್ರಭಾವ ಇರುವುದರಿಂದ ಮಾನಸಿಕ ಕಿರಿಕಿರಿ ಮುಂದು ವರಿಯುವುದು. ಯಾವುದೇ ಕಾರಣಕ್ಕೂ ಹೊಸ ಉದ್ಯಮಗಳಿಗೆ ಅಥವಾ ಉದ್ದೇಶಗಳಿಗೆ ಹಣ ಹೂಡಿಕೆ ಮಾಡದಿರಿ. ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ರಾಜಕೀಯ ಕ್ಷೇತ್ರದಲ್ಲಿ ಹಿನ್ನಡೆ ಉಂಟಾಗುವುದು. ಇಲ್ಲ ಸಲ್ಲದ ಆರೋಪ ಮತ್ತು ಅವಮಾನವನ್ನು ನೀವು ಅನುಭವಿಸಬೇಕಾಗುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಕನ್ಯಾ: ಆಗಸ್ಟ್ 28-ಸೆಪ್ಟಂಬರ್ 23
ಮಾನಸಿಕ ಕಿರಿಕಿರಿ ದೂರಾಗುವುದು. ಸಮಾಧಾನಕರವಾದ ಜೀವನವನ್ನು ಪಡೆದುಕೊಳ್ಳುವಿರಿ. ಮಾಡುತ್ತಿರುವ ಉದ್ಯೋಗದಲ್ಲಿ ನೆಮ್ಮದಿ ದೊರೆಯುವುದು. ಸುಖಮಯವಾದ ಜೀವನವನ್ನು ನೀವು ಕಾಣುವಿರಿ. ಹಲವಾರು ಅಡೆತಡೆಗಳು ಹಾಗೂ ಅನಿರೀಕ್ಷಿತ ಸೋಲು ನಿಮ್ಮಿಂದ ದೂರಾಗುವುದು. ವ್ಯಾಪಾರ ವಹಿವಾಟುಗಳಲ್ಲಿ ಲಾಭ ತಂದುಕೊಡುವುದು. ವೃತ್ತಿಕ್ಷೇತ್ರದಲ್ಲಿ ಬಡ್ತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 28-ಅಕ್ಟೋಬರ್ 23
ಸಮಾಧಾನದ ಬದುಕಿಗೆ ನಾಂದಿಯಾಗುವಂತಹ ದಿನ. ಮನೆಯಲ್ಲಿ ಶುಭ ಸುದ್ದಿಯನ್ನು ಕೇಳುವಿರಿ. ಮಾಡುತ್ತಿರುವ ಕೆಲಸದಲ್ಲಿ ಧೈರ್ಯದ ಹೆಜ್ಜೆಯನ್ನು ಮುಂದಿಡಿ. ನಿಮಗೆ ಲಾಭ ಉಂಟಾಗುವುದು. ಅನೇಕ ದಿನಗಳಿಂದ ಕಂಡ ಕನಸು ನನಸಾಗುವುದು. ಹೊಸ ಉದ್ಯೋಗಗಳು ದೊರೆಯುವ ಸಾಧ್ಯತೆ ಇದೆ. ಕಪ್ಪು ಬಟ್ಟೆಯನ್ನು ಧರಿಸದಿರಿ. ಮನೆಯಿಂದ ಹೊರಡುವಾಗ ಗಣೇಶನ ಪ್ರಸಾದವನ್ನು ಪಡೆದು ಹೊರಡಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ವೃಶ್ಚಿಕ: ಅಕ್ಟೋಬರ್ 28-ನವೆಂಬರ್ 22
ಶನಿ ಪ್ರಭಾವ ಇರುವುದರಿಂದ ಆಂತರಿಕ ವಿಚಾರವನ್ನು ಬಹಿರಂಗ ಪಡಿಸದಿರಿ. ವಿಪರೀತವಾದ ಆಯಾಸ ನಿಮ್ಮನ್ನು ಕಂಗೆಡಿಸಬಹುದು. ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಿ. ಮೂರನೇ ವ್ಯಕ್ತಿಗಳ ಮಾತಿಗೆ ಕಿವಿಕೊಡದಿರಿ. ರಾಜಕೀಯ ಕ್ಷೇತ್ರದಲ್ಲಿರುವ ವ್ಯಕ್ತಿಗಳು ಒಂದಿಷ್ಟು ತುಳಿತಕ್ಕೆ ಒಳಗಾಗಬಹುದು. ಇಲ್ಲ ಸಲ್ಲದ ಆರೋಪ ನಿಮ್ಮ ಬೆನ್ನೇರಬಹುದು. ಆದಷ್ಟು ಕಾಳಜಿಯಿಂದ ಇರಿ. ಜಾಮೀನು ವಿಚಾರವಾಗಿ ಸಹಿ ನೀಡದಿರಿ. ಸಾಲ ಪಡೆಯುವುದು ಅಥವಾ ನೀಡುವ ಗೋಜಿಗೆ ಹೋಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಧನು: 28 ನವೆಂಬರ್ -22 ಡಿಸೆಂಬರ್
ಜನ್ಮ ಶನಿಯ ಪ್ರಭಾವ ಇರುವುದರಿಂದ ಆಂತರಿಕ ಕಲಹ ಬಹಿರಂಗವಾಗುವುದು. ಸ್ತ್ರೀಯರಿಂದ ಇಲ್ಲ ಸಲ್ಲದ ಆರೋಪ ಹಾಗೂ ಅವಮಾನಗಳು ನಿಮ್ಮಮೇಲೆ ಬರಬಹುದು. ಯಮಗಂಡಕಾಲ ಹಾಗೂ ರಾಹುಕಾಲದಲ್ಲಿ ವಾಹನಗಳನ್ನು ಓಡಿಸದಿರಿ. ಆರ್ಥಿಕ ವಲಯದಲ್ಲಿ ಉಂಟಾಗುವ ಏರುಪೇರುಗಳಿಂದ ಕಂಗೆಡುವ ಸಧ್ಯತೆಗಳಿವೆ. ಜಂಟಿ ವ್ಯವಹಾರದಲ್ಲಿ ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 28-ಜನವರಿ 20
ಮನೆಯಲ್ಲಿ ನೆಮ್ಮದಿಯ ವಾತಾವರಣ ಲಭಿಸುವುದು. ಕೃಷಿಗೆ ಸಂಬಂಧಿಸಿದ ಉತ್ಪನ್ನಗಳ ಉತ್ಪಾದನೆಯಲ್ಲಿ ಲಾಭ ಗಳಿಸುವಿರಿ. ಸ್ಟೀಲ್ ಉದ್ಯಮದಲ್ಲಿ ಸಂಪೂರ್ಣ ಲಾಭ ಉಂಟಾಗದು. ಬಟ್ಟೆ ವ್ಯಾಪಾರದಲ್ಲಿ ಪ್ರಗತಿ ಹಾಗೂ ಹೊಲಿಗೆ ಕೆಲಸದಲ್ಲಿ ಸಂಪೂರ್ಣ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಕುಂಬ: 28 ಜನವರಿ -19 ಫೆಬ್ರುವರಿ
ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವರು. ಕೆಲವು ಮಾನಸಿಕ ಬಯಕೆಗಳು ನೆರವೇರುವುದು. ಸುಂದರವಾದ ಕನಸು ನನಸಾಗುವುದು. ಅನಿರೀಕ್ಷಿತ ಹಣಗಳು ಮರು ಪಾವತಿ ಕಾಣುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಕ್ಕೆ ಇದ್ದ ಅಡೆತಡೆಗಳು ದೂರಾಗುವುದು. ಸಂತೋಷಕರವಾದ ಪ್ರಗತಿಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ಮೀನ: 28 ಫೆಬ್ರವರಿ -20 ಮಾರ್ಚ್
ಇಂದು ನಿಮಗೆ ಶುಭಕರವಾದ ದಿನ. ಉದ್ಯೋಗದಲ್ಲಿ ಲಾಭ ಹಾಗೂ ಮಕ್ಕಳಿಂದ ಶುಭ ಸುದ್ದಿಯನ್ನು ಕೊಡುವರು. ವೈಜ್ಞಾನಿಕ ಕ್ಷೇತ್ರದಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ವಿದೇಶ ಯಾನದ ಕನಸು ನನಸಾಗುವುದು. ಎಲ್ಲಾ ಬಗೆಯ ಉದ್ಯೋಗದಲ್ಲೂ ಲಾಭ ದೊರೆಯುವುದು. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಅನುಕೂಲ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.



Click it and Unblock the Notifications











