Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಹಿಳೆಯ ಮೂಗಿನಲ್ಲಿ ಜಿರಲೆ ಪತ್ತೆ! ವಿಡಿಯೋ ವೈರಲ್....
ವೈದ್ಯಲೋಕಕ್ಕೇ ಅಚ್ಚರಿ ಎನ್ನುವ ಪ್ರಕರಣವೊಂದರಲ್ಲಿ ಚೆನ್ನೈನ Stanley Medical College Hospitalನ ವೈದ್ಯರು ಮಹಿಳೆಯ ಮೂಗಿನಾಳದಲ್ಲಿ ಸೇರಿದ್ದ ಜೀವಂತ ಜಿರಳೆಯನ್ನು ಹೊರ ತೆಗೆದಿದ್ದಾರೆ.
ತೇಜಸ್ವಿಯವರ ಕುಬಿ ಮತ್ತು ಇಯಾಲ ಎಂಬ ಕಥೆಯನ್ನು ಓದಿದವರಿಗೆ ಡಾ. ಕುಬೇರ ಚಿಕಿತ್ಸೆ ನೀಡಿದ ಒಬ್ಬ ಹುಡುಗನ ಮೂಗಿನಲ್ಲಿ ನೊಣದ ಮರಿಗಳಿರುವ ಉಲ್ಲೇಖ ನೆನಪಿರಬಹುದು. ತೇಜಸ್ವಿಯವರು ಈ ಮಾತನ್ನು ಬರೆಯ ಕಲ್ಪನೆಯಿಂದ ಬರೆದದ್ದಲ್ಲ, ಈ ಪರಿಯ ಸೋಂಕು ನಿಜಕ್ಕೂ ಉಂಟಾಗಿದ್ದು ಇದಕ್ಕೆ ವೈದ್ಯವಿಜ್ಞಾನದ ಬಳಿ ಸೂಕ್ತ ಉತ್ತರವಿದೆ. ಇಂತಹ ಒಂದು ನಿಜಘಟನೆ ಕೊಂಚ ಭಿನ್ನವಾಗಿ ಈಗ ವಾಸ್ತವದಲ್ಲಿಯೂ ನಡೆದಿದೆ. ಮನೆಯಲ್ಲಿ ಜಿರಳೆಗಳ ಕಾಟವೇ? ಇನ್ನು ಚಿಂತೆ ಬಿಡಿ!
ಇತ್ತೀಚೆಗೆ ಚೆನ್ನೈಯಲ್ಲಿರುವ ಮಹಿಳೆಯೊಬ್ಬರು ವೈದ್ಯರ ಬಳಿ ಬಂದು ಇತರ ರೋಗಿಗಳು ಹೇಳದ ತನ್ನದೇ ಬೇರೆಯೇ ಗೋಳನ್ನು ಹೇಳತೊಡಗಿದರು. ನಡುರಾತ್ರಿ ಕಿವಿಯೊಳಗಿನಿಂದ ಮೂಗಿನವರೆಗೆ ಏನೋ ನಡೆದಾಡಿದಂತೆ ಅವರಿಗೆ ಅನ್ನಿಸುತ್ತಿತ್ತಂತೆ. ವೈದ್ಯರಿಗೆ ಈ ತೊಂದರೆ ಬೇರಾವುದೋ ತೊಂದರೆ ಇರಬಹುದು ಎಂದುಕೊಂಡು ಪ್ರಾರಂಭಿಸಿ ಈಕೆಯ ಮೂಗಿನ ಮತ್ತು ಕಿವಿಯ ಪರೀಕ್ಷೆ ಮಾಡುತ್ತಿದ್ದಂತೆ ಒಳಗೆ ನಿಜವಾಗಿಯೂ ಜಿರಳೆಗಳಿರುವುದನ್ನು ಕಂಡು ಅವಾಕ್ಕಾದರಂತೆ. ಜಿರಳೆ ಹಲ್ಲಿಗಳನ್ನು ಮನೆಯಿಂದ ಓಡಿಸಬೇಕೆ? ಇಲ್ಲಿದೆ ನೋಡಿ ಟಿಪ್ಸ್
ಈ ಪರೀಕ್ಷೆ ನಡೆಸಿದಾಗ ಮಹಿಳೆಯ ಮೂಗಿನೊಳಗೆ ಈ ಜಿರಲೆ ಜೀವಂತವಾಗಿದ್ದು ಆರಾಮವಾಗಿತ್ತು. ಆರಾಮವಾಗಿತ್ತು ಎಂದು ಏಕೆ ಹೇಳಿದೆವೆಂದರೆ ಸಾಮಾನ್ಯವಾಗಿ ಜಿರಲೆಗಳು ಮನುಷ್ಯರಿಂದ ದೂರ ಓಡುತ್ತವೆ. ಆದರೆ ಈ ಜಿರಲೆ ಹೊರ ಬರಲಿಕ್ಕೇ ತಯಾರಿರಲಿಲ್ಲವಂತೆ. ಬನ್ನಿ, ಈಕೆಯ ಮತ್ತು ಜಿರಲೆಯ ಕಥೆಯನ್ನು ಕೇಳೋಣ...

ಯಾರು ಈ ದುರ್ದೈವಿ ಮಹಿಳೆ?
ಈಕೆಯ ಹೆಸರು ಸೆಲ್ವಿ, ವಯಸ್ಸು ನಲವತ್ತೆರಡು. ಸುಮಾರು ಅರ್ಧ ದಿನಕ್ಕಿಂತಲೂ ಹೆಚ್ಚು ಕಾಲ ಒಂದು ಜಿರಲೆಯನ್ನು ತನ್ನ ಮೂಗಿನಲ್ಲಿಟ್ಟುಕೊಂಡ ಮಹಿಳೆ.

ನಡುರಾತ್ರಿಯಲ್ಲಿ ಆಕೆ ಎದ್ದಾಗ ಮೂಗಿನಲ್ಲಿ ಭಾರೀ ನೋವಿತ್ತು
ಈಕೆಗೆ ಚಿಕಿತ್ಸೆ ನೀಡಿದ ವೈದ್ಯರ ವರದಿಯ ಪ್ರಕಾರ ಚಿಕಿತ್ಸೆಗ ಬಂದ ದಿನದ ಹಿಂದಿನ ದಿನ ರಾತ್ರಿ ಮಲಗಿದ್ದಾಗ ನಡುರಾತ್ರಿಯಲ್ಲಿ ಆಕೆಯ ಎಚ್ಚರಾಗಿತ್ತು. ಮೂಗಿನ ಬಳ ಹೊಳ್ಳೆಯೊಳಗೆ ಏನೋ ಓಡಾಡಿದಂತೆ, ಓಡಾಡಿದಾಗ ಕಚಗುಳಿ ಮತ್ತು ನೋವು ಉಂಟಾಗುತ್ತಿತ್ತು. ಪರಿಣಾಮವಾಗಿ ತಲೆಯ ನಡುವಿನಲ್ಲಿಯೂ ಬೆಂಕಿ ಹತ್ತಿಕೊಂಡಂತೆ ಉರಿ ಪ್ರಾರಂಭವಾಗಿತ್ತು.

ಸ್ಕ್ಯಾನ್ ಮಾಡಿದ ವೈದ್ಯರಿಗೆ ಭಾರೀ ಅಚ್ಚರಿ!
ಬೆಳಗಾಗುತ್ತಿದ್ದಂತೆಯೇ ಖಾಸಗಿ ವೈದ್ಯರಲ್ಲಿ ಭೇಟಿ ಕೊಟ್ಟಾಗ ವೈದ್ಯರಿಗೆ ಇದಕ್ಕೆ ಮೂಗಿನ ಒಳಗಿನ ಸೋಂಕು ಕಾರಣವಿರಬಹುದೆಂದು ತಿಳಿದು ಹೆಚ್ಚಿನ ಚಿಕಿತ್ಸೆಗಾಗಿ Stanley Medical College Hospital ಗೆ ಕಳುಹಿಸಿಕೊಟ್ಟರು.

ಆಸ್ಪತ್ರೆಯ ಸಿಬ್ಬಂದಿ ಅವಾಕ್ಕಾದರು....
ಈ ಆಸ್ಪತ್ರೆಯಲ್ಲಿ ಮೂಗಿನ ಸ್ಕ್ಯಾನ್ ಮಾಡಿದ ಬಳಿಕ ಲಭ್ಯವಾದ ಚಿತ್ರವನ್ನು ನೋಡಿ
ಆಸ್ಪತ್ರೆಯ ಸಿಬ್ಬಂದಿ ಅವಾಕ್ಕಾದರು. ಆಕೆಯ ಮೂಗಿನ ಹಿಂಭಾಗದಲ್ಲಿ, ತಲೆಬುರುಡೆಯ ಒಳಗೆ, ಎರಡು ಕಣ್ಣುಗಳ ನಡುವಿನ ಭಾಗದಲ್ಲಿ ಜಿರಲೆಯೊಂದು ಆರಾಮವಾಗಿ ಕುಳಿತಿತ್ತು. ಇನ್ನೂ ಅಚ್ಚರಿ ಎಂದರೆ ಈ ಜಿರಲೆ ಜೀವಂತವಾಗಿದ್ದು ತನ್ನ ಮೀಸೆಗಳನ್ನು ಆಡಿಸುತ್ತಿತ್ತು!

ಇಲ್ಲಿ ತಲುಪಿದ್ದು ಹೇಗೆ? ವೈದ್ಯರಿಗೂ ತಲೆಬಿಸಿ
ಈ ಸ್ಥಳವನ್ನು ಜಿರಲೆ ತಲುಪಿದ್ದಾದರೂ ಹೇಗೆ? ಈ ವಿಷಯದ ಬಗ್ಗೆ ವೈದ್ಯರು ಎಷ್ಟು ಯೋಚಿಸಿದರೂ ಸ್ಪಷ್ಟವಾದ ಉತ್ತರ ದೊರಕಲಿಲ್ಲ. ನಿದ್ದೆಯ ಸಮಯದಲ್ಲಿ ತೆರೆಯುವ ಮೂಗಿನ ಹೊಳ್ಳೆಗಳ ಕವಾಟದ ಮೂಲಕ ಈ ಜಿರಲೆ ತೆವಳಿಕೊಂಡು ಒಳನುಗ್ಗಿರಬಹುದು ಎಂದು ವೈದ್ಯರು ಸ್ಥೂಲವಾಗಿ ಅಂದಾಜಿಸಿದರು.

ಈ ಜಿರಲೆ ಹೊರಬರಲಿಕ್ಕೇ ತಯಾರಿರಲಿಲ್ಲ!
ಸಾಮಾನ್ಯವಾಗಿ ಕಿವಿಯಲ್ಲಿ ಹೋದ ಕೀಟಗಳನ್ನು ಹೊರತರಲು ಚಿಕ್ಕ ಕೊಳವೆಯೊಂದನ್ನು ವೈದ್ಯರು ನಾಜೂಕಾಗಿ ತೂರಿಸಿ ಕೀಟ ತಾನಾಗಿಯೋ ಹೊರಬರುವಂತೆ ಮಾಡುತ್ತಾರೆ. ಆದರೆ ಈ ಜಿರಳೆ ತಲೆಬುರುಡೆಯ ಒಳಭಾಗದಲ್ಲಿ ಆರಾಮವಾಗಿ ಕುಳಿತಿದ್ದುದು ಮಾತ್ರವಲ್ಲ, ಹೊರಬರುವ ಯಾವ
ಸೂಚನೆಯನ್ನೂ ನೀಡುತ್ತಿರಲಿಲ್ಲ.

ಮುಕ್ಕಾಲು ಗಂಟೆ ಹರಸಾಹಸ!
ಕಡೆಗೆ ವೈದ್ಯರೇ ತಮ್ಮ ಉಪಕರಣಗಳನ್ನು ಉಪಯೋಗಿಸಿ ಈಕೆಯ ಮೂಗಿನ ಮುಖಾಂತರವೇ ಜಿರಲೆಯನ್ನು ಹೊರತೆಗೆಯಲು ಸುಮಾರು ಮುಕ್ಕಾಲು ಗಂಟೆ ಹರಸಾಹಸ ನಡೆಸಬೇಕಾಯಿತು.

ವಿಡಿಯೋ ನೋಡಿ....
ಈ ವಿಷಯದ ವೀಡಿಯೋ ಚಿತ್ರೀಕರಣ ಲಭ್ಯವಿದ್ದು ಇದನ್ನು ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದು.



Click it and Unblock the Notifications











