For Quick Alerts
ALLOW NOTIFICATIONS  
For Daily Alerts

ವಿವಾಹದ ಉಂಗುರವನ್ನು ವಧು ಎಡಬೆರಳಿಗೆ ಏಕೆ ತೊಡಬೇಕು?

By Manu
|

ವೈವಾಹಿಕ ಬಂಧನದಲ್ಲಿ ನಿಶ್ಚಯ, ಹುಡುಗಿ ನೋಡುವುದು, ವಿವಾಹ, ಆರತಕ್ಷತೆ ಮೊದಲಾದ ಕಾರ್ಯಗಳು ಒಂದು ಅಂಗವಾಗಿ ಮಾರ್ಪಟ್ಟಿದೆ. ಕೆಲವು ಧರ್ಮಗಳಲ್ಲಿ ನಿಶ್ಚಿತಾರ್ಥ ಪದ್ಧತಿಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಈ ನಿಶ್ಚಿತಾರ್ಥದಲ್ಲಿ ಪ್ರಮುಖವಾಗಿ ಹುಡುಗ ಮತ್ತು ಹುಡುಗಿ ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಇದು ಪ್ರೀತಿಯ ಸಂಕೇತವಾಗಿದ್ದು ನಿಮ್ಮ ಸಂಗಾತಿಯ ಮೇಲೆ ನಿಮಗಿರುವ ನಂಬಿಕೆ, ಸ್ನೇಹವನ್ನು ಗಟ್ಟಿಗೊಳಿಸುತ್ತದೆ.

ಹಿಂದೆ ಎಲ್ಲಾ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ವಾಡಿಕೆಯಲ್ಲಿದ್ದ ನಿಶ್ಚಿತಾರ್ಥ ಸಂಪ್ರದಾಯ ಈಗ ವಿವಾಹದಂತೆಯೇ ಸಂಭ್ರಮದಿಂದ ನಡೆಯುತ್ತದೆ. ನಿಶ್ಚಿತಾರ್ಥ ಸಮಯದಲ್ಲಿ ಉಂಗುರವನ್ನು ಹುಡುಗಿಯ ಎಡ ಬೆರಳಿಗೆ ತೊಡಿಸಲಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ನಿಶ್ಚಯ ಅಥವಾ ವಿವಾಹದ ಉಂಗುರವನ್ನು ಎಡಬೆರಳಿಗೆ ಏಕೆ ತೊಡಿಸಲಾಗುತ್ತದೆ ಎಂಬ ಅಂಶವನ್ನೇ ಚರ್ಚಿಸಲಿದ್ದೇವೆ.

ಬೆರಳಿನಲ್ಲಿ ಮೂಡಿರುವ ಉಂಗುರದ ಗುರುತಿನ ನಿವಾರಣೆ ಹೇಗೆ?

ಸಾಂಪ್ರದಾಯಿಕವಾಗಿ ವ್ಯಕ್ತಿಗಳು ತಮ್ಮ ವಿವಾಹದ ಉಂಗುರವನ್ನು ಎಡಬೆರಳಿಗೆ ತೊಟ್ಟುಕೊಳ್ಳುತ್ತಾರೆ. ತಮ್ಮ ವಿವಾಹದ ದಿನದವರೆಗೆ ಉಂಗುರವನ್ನು ತಮ್ಮ ಎಡಗೈನ ಬೆರಳಿನಲ್ಲಿ ಸ್ತ್ರೀಯರು ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವು ವಧುಗಳು ತಮ್ಮ ವಿವಾಹದ ಉಂಗುರವನ್ನು ಎಡಗೈನ ಬೆರಳಿಗೆ ತೊಟ್ಟುಕೊಂಡರೆ ಇನ್ನು ಕೆಲವರು ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಬಲಕೈ ಬೆರಳಿಗೆ ತೊಟ್ಟುಕೊಳ್ಳುವುದು ಈಗ ಚಾಲ್ತಿಯಲ್ಲಿದೆ. ವಜ್ರದ ಉಂಗುರವನ್ನು ವಿವಾಹದ ಸಮಯದಲ್ಲಿ ಖರೀದಿಸಿ ಅದನ್ನು ನಿಶ್ಚಯದ ಉಂಗುರಕ್ಕೆ ಬದಲಾಗಿ ತೊಡಲಾಗುತ್ತದೆ.

ಉಂಗುರವನ್ನು ಎಡಬೆರಳಿಗೆ ಏಕೆ ಧರಿಸಲಾಗುತ್ತದೆ?

ಉಂಗುರವನ್ನು ಎಡಬೆರಳಿಗೆ ಏಕೆ ಧರಿಸಲಾಗುತ್ತದೆ?

ಈ ಉಂಗುರ ತೊಡುವ ಪದ್ಧತಿ ರೋಮನ್ನರ ಕಾಲದಿಂದ ಚಾಲ್ತಿಯಲ್ಲಿದೆ. ಎಡಬೆರಳಿನಲ್ಲಿರುವ ರಕ್ತನಾಳವು ಹೃದಯಕ್ಕೆ ನೇರವಾಗಿ ಸಂಪರ್ಕವನ್ನು ಪಡೆದುಕೊಂಡಿದೆ ಎಂಬುದು ಅವರ ವಾದವಾಗಿದೆ. ನಿಮ್ಮ ಎಡಬೆರಳಿನಲ್ಲಿರುವ ಉಂಗುರವು ನಿಮ್ಮ ಸಂಗಾತಿಯನ್ನು ನಿಮ್ಮ ಹೃದಯಕ್ಕೆ ಸನಿಹಪಡಿಸುತ್ತಿದೆ ಎಂಬುದು ಇದರ ಅರ್ಥವಾಗಿದೆ. ನಿಮ್ಮ ಹೃದಯಕ್ಕೆ ನಿಮ್ಮ ಸಂಗಾತಿ ಸನಿಹದಲ್ಲಿದ್ದಾರೆ ಎಂಬುದನ್ನು ಇದು ತಿಳಿಸುತ್ತದೆ.

ವಿವಾಹದ ಉಂಗುರವನ್ನು ಧರಿಸುವ ಪದ್ಧತಿ

ವಿವಾಹದ ಉಂಗುರವನ್ನು ಧರಿಸುವ ಪದ್ಧತಿ

ವಿವಾಹದ ಉಂಗುರವನ್ನು ಧರಿಸುವುದಕ್ಕೆ ಯಾವುದೇ ಪದ್ಧತಿ ಕ್ರಮಗಳು ಏನಿಲ್ಲ. ಇನ್ನು ಕೆಲವು ದೇಶಗಳಲ್ಲಿ ಬಲಕೈಗೆ ಉಂಗುರವನ್ನು ಧರಿಸಲಾಗುತ್ತದೆ. ಎಡಬೆರಳಿಗೆ ಧರಿಸುವ ಪದ್ಧತಿ ಏಕೆಂದರೆ ಈ ಉಂಗುರಕ್ಕೆ ಯಾವುದೇ ಹಾನಿಯುಂಟಾಗದಿರಲಿ ಎಂಬ ಅರ್ಥವೂ ಆಗಿರಬಹುದು. ನೀವು ದಿನನಿತ್ಯದ ಕೆಲಸಗಳನ್ನು ಮಾಡುವಾಗ ಬಲಗೈಯನ್ನು ಹೆಚ್ಚು ಬಳಸುತ್ತೀರಿ. ಈ ಸಂದರ್ಭದಲ್ಲಿ ಈ ಕೈನಲ್ಲಿರುವ ಉಂಗುರಕ್ಕೆ ಯಾವುದೇ ಹಾನಿಯಾಗದಿರಲಿ ಎಂಬುದು ಇದರ ಹಿಂದಿನ ಅರ್ಥವಾಗಿದೆ.

ವಿವಾಹದ ಉಂಗುರವನ್ನು ಧರಿಸುವ ಪದ್ಧತಿ

ವಿವಾಹದ ಉಂಗುರವನ್ನು ಧರಿಸುವ ಪದ್ಧತಿ

ವಿವಾಹದ ಸಂದರ್ಭದಲ್ಲಿ ಧರಿಸುವ ಒಂದು ಉಂಗುರವನ್ನು ಎಡಬೆರಳಿಗೂ ನಿಶ್ಚಯದ ಉಂಗುರವನ್ನು ಬಲಬೆರಳಿಗೂ ಹೀಗೆ ನಿಮಗೆ ಧರಿಸಬಹುದಾಗಿದೆ. ಈಗ ಹೊಸ ಟ್ರೆಂಡ್ ಎಂದರೆ ಹೆಚ್ಚಿನ ಉಂಗುರಗಳನ್ನು ಧರಿಸುವುದಾಗಿದೆ. ಮೇಲೆ ಮತ್ತು ಕೆಳಗೆ ಹೆಚ್ಚಿನ ಉಂಗುರಗಳನ್ನು ನಿಮಗೆ ಕಾಣಬಹುದಾಗಿದೆ. ಇದರಲ್ಲಿ ಪ್ಲೇನ್, ಜ್ಯುವೆಲ್ಲರಿ, ವಿನ್ಯಾಸಗಳನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಅಂತೂ ಉಂಗುರ ಧರಿಸುವಿಕೆ ನಿಮ್ಮ ವೈಯಕ್ತಿಕ ಇಷ್ಟವಾಗಿದ್ದು ನಿಮ್ಮ ಮನಸ್ಸಿಗೆ ಒಪ್ಪುವಂತೆ ಇದನ್ನು ಧರಿಸಿಕೊಳ್ಳಬಹುದಾಗಿದೆ. ಅದರಲ್ಲೂ ನಿಮ್ಮ ವೈವಾಹಿಕ ಬಂಧನ ಉಂಗುರದಂತೆಯೇ ಗಟ್ಟಿಯಾಗಿರಬೇಕು.

ಇದಕ್ಕೆ ಇನ್ನೊಂದು ಕಾರಣಕೂಡ ಇದೆ

ಇದಕ್ಕೆ ಇನ್ನೊಂದು ಕಾರಣಕೂಡ ಇದೆ

ಎಡಗೈಗೆ ಏಕೆ ಉಂಗುರ ತೊಡಲಾಗುತ್ತಿತ್ತು ಎಂಬ ಪ್ರಶ್ನೆಗೆ ಇನ್ನೊಂದು ವಾದವೂ ಇದೆ. ಹಿಂದೆ ಉಂಗುರವನ್ನು ದಂತ, ಚರ್ಮದ ಪಟ್ಟಿ ಮತ್ತು ಇತರ ಅಮೂಲ್ಯ ವಸ್ತುಗಳಿಂದ ತಯಾರಿಸಲಾಗುತ್ತಿತ್ತು. ಬಲಗೈಯಲ್ಲಿ ಧರಿಸಿದ್ದರೆ ಕೆಲಸದ ಭರದಲ್ಲಿ ಉಂಗುರದ ಪಟ್ಟಿ ಹಾಳಾಗುವ ಸಾಧ್ಯತೆ ಇದ್ದುದರಿಂದ ಎಡಗೈಗೆ ಧರಿಸಲಾಗುತ್ತಿತ್ತು ಎಂಬುದೇ ಈ ವಾದ. ಅಲ್ಲದೇ ನಾಲ್ಕನೆಯ ಬೆರಳಿಗೆ ತೊಡುವ ಮೂಲಕ ಅತಿ ಕಡಿಮೆ ಘಾಸಿಯಾಗುತ್ತದೆ ಎನ್ನಲಾಗುತ್ತಿತ್ತು. ಇದರಿಂದ

ತಮ್ಮ ಪ್ರೇಮದ ಸಂಕೇತವನ್ನು ಜೋಪಾನವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ಈ ಬೆರಳಿಗೆ ಬಿಟ್ಟು ಬೇರೆ ಬೆರಳುಗಳಿಗೆ ತೊಡಲು ಇತರ ಕಾರಣಗಳಿವೆ. ಸಂಧಿವಾತ ಅಥವಾ ಇತರ ತೊಂದರೆಗಳ ಕಾರಣ ಬೆರಳುಗಳು ಕೊಂಚ ಊದಿಕೊಂಡು ಉಂಗುರ ತೊಡಲು ಕಷ್ಟವಾದಾಗ ಇತರ ಬೆರಳಿಗೆ ತೊಡಲಾಗುತ್ತದೆ.

ಉಂಗುರ ಧರಿಸುವ ಸಂಪ್ರದಾಯದ ಇತಿಹಾಸ ಕೆದಕಿದಾಗ

ಉಂಗುರ ಧರಿಸುವ ಸಂಪ್ರದಾಯದ ಇತಿಹಾಸ ಕೆದಕಿದಾಗ

ಈ ಸಂಪ್ರದಾಯ ಎಂದು ಪ್ರಾರಂಭವಾಯಿತು ಎಂಬ ಕುತೂಹಲಕ್ಕೆ ಇತಿಹಾಸವನ್ನು ಕೆದಕಿದರೆ ಇದಕ್ಕೆ ಸುರಿಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿರುವುದು ಕಂಡುಬರುತ್ತದೆ. ಕ್ರಿ.ಪೂ 3000ರಲ್ಲಿಯೇ ನವವಿವಾಹಿತರು ಉಂಗುರ ಬದಲಿಸಿಕೊಳ್ಳುವುದು ಕಂಡುಬಂದಿದೆ. ಅಂದಿನ ದಿನದಿಂದಲೇ ವರ ತನ್ನ ಮಾವನಿಗೆ ಅಂದರೆ ಮದುವೆಯಾಗುವ ಹುಡುಗಿಯ ತಂದೆಗೆ ಉಂಗುರವೊಂದನ್ನು ಕೊಡುವ ಮೂಲಕ 'ವಧುವನ್ನು ಖರೀದಿಸಿದ' ಸೂಚನೆಯಾಗಿತ್ತು.ಆದರೆ ಈ ಉಂಗುರವನ್ನು ಉಂಗುರ ಬೆರಳಿಗೆ ಅಂದಿನಿಂದಲೇ ತೊಡಲು ಪ್ರಾರಂಭವಾಯಿತೇ? ಪ್ರಾಯಶಃ ಈ ವಿಧಿ ಪುರಾತನ ರೋಮನ್ ಮತ್ತು ಗ್ರೀಕ್ ಪರಂಪರೆಗಳ ಮೂಲಕ ಪ್ರಾರಂಭವಾಯಿತು. ಆಗಲೇ ಈ ಬೆರಳಿನ ನರ ನೇರವಾಗಿ ಹೃದಯಕ್ಕೆ ಸಂಪರ್ಕ ಹೊಂದಿದೆ ಎಂದು ಪ್ರಚಾರ ಪಡಿಸಲಾಯಿತು.

ಆದರೆ ಎಡಗೈಯೇ ಏಕೆ?

ಆದರೆ ಎಡಗೈಯೇ ಏಕೆ?

ಆದರೆ ಎಡಕೈಗೆಯೇ ಯಾಕೆ ಉಂಗುರ ಧರಿಸಬೇಕು? ಇಂತಹ ಪ್ರಶ್ನೆ ಕೂಡ ನಿಮ್ಮನ್ನು ಕಾಡಬಹುದು ಅಲ್ಲವೇ? ಕಾರಣವಿಷ್ಟೇ ಹೃದಯದ ಎಡಭಾಗದಲ್ಲಿರುವ ಕಾರಣ ಬಲಗೈಗಿಂತಲೂ ಎಡಗೈ ಹೆಚ್ಚು ಹತ್ತಿರ ಎನ್ನುವುದು ಇವರ ತರ್ಕವಾಗಿತ್ತು. ಈ ನರಕ್ಕೆ ಅವರು "vena amoris" ಅಥವಾ ಪ್ರೀತಿಯ ನರ ಎಂದು ಹೆಸರನ್ನೂ ಇಟ್ಟುಬಿಟ್ಟರು.

ಪಾಶ್ಚಾತ್ಯ ದೇಶಗಳಲ್ಲಿಯೂ ಈ ಸಂಪ್ರದಾಯಕ್ಕೆ ಮಾರುಹೋದರು...

ಪಾಶ್ಚಾತ್ಯ ದೇಶಗಳಲ್ಲಿಯೂ ಈ ಸಂಪ್ರದಾಯಕ್ಕೆ ಮಾರುಹೋದರು...

ಈ ಪರಂಪರೆಯನ್ನು ನಿಧಾನವಾಗಿ ಪಾಶ್ಚಾತ್ಯ ದೇಶಗಳಲ್ಲಿಯೂ ಅನುಸರಿಸಲು ಪ್ರಾರಂಭಿಸಲಾಯಿತು. ತನ್ನ ಎಡಗೈಯ ಉಂಗುರ ಬೆರಳಿಗೆ ಉಂಗುರ ತೊಟ್ಟ ಪುರುಷ ತನ್ನ ಪತ್ನಿ ಮತ್ತು ತನ್ನ ಕುಟುಂಬದ ಪ್ರತಿ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥನಾಗಿದ್ದಾನೆ ಎಂದು ಈ ಮೂಲಕ ಪ್ರಕಟಿಸಲಾಗುತ್ತಿತ್ತು. ಮುಂದಿನ ಜೀವನವಿಡೀ ಆಕೆಯ ರಕ್ಷಣೆಯ ಜವಾಬ್ದಾರಿ ತನ್ನದು ಎಂದು ವಿವಾಹದ ವಿಧಿಯನ್ನು ಬೋಧಿಸಲಾಗುತ್ತಿತ್ತು. ಅಂದಿನಿಂದಲೇ "till death do us part" ಎಂಬ ವಿಧಿಯನ್ನು ಬೋಧಿಸಿದ ಬಳಿಕವೇ ಉಂಗುರವನ್ನು ತೊಟ್ಟು ಈ ಬಾಧ್ಯತೆಯನ್ನು ಹಿರಿಯರ ಮತ್ತು ದೇವರ ಎದುರು ಪ್ರಮಾಣ ಮಾಡಲಾಗುತ್ತಿದೆ.

ಪ್ರೇಮವನ್ನು ನಿವೇದಿಸಲು....

ಪ್ರೇಮವನ್ನು ನಿವೇದಿಸಲು....

ಅಷ್ಟೇ ಅಲ್ಲ, ಉಂಗುರವನ್ನು ಸದಾ ಈ ಬೆರಳಿನಲ್ಲಿಯೇ ತೊಟ್ಟಿರುವ ಮೂಲಕ ದಂಪತಿಗಳು ತಮ್ಮ ಪ್ರೇಮವನ್ನು ನಿವೇದಿಸಲು ಸಾಧ್ಯವಾಗುತ್ತಿತ್ತು. ಅಂದರೆ ಈ ಉಂಗುರ ಬೆರಳಿನಲ್ಲಿದ್ದಷ್ಟೂ ಹೊತ್ತು ತಮ್ಮ ಪತ್ನಿಯ ಹೊರತಾಗಿ ಪರಸ್ತ್ರಿಯನ್ನು ನೋಡುವುದಿಲ್ಲ ಎಂಬುದೇ ಆಗಿದೆ.

 ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ....

ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ....

ಆದರೆ ಉಂಗುರವನ್ನು ಇದೇ ಬೆರಳಿಗೆ ತೊಡಬೇಕೆಂದು ಯಾವುದೇ ದೇಶದ ಕಾನೂನಿನಲ್ಲಿಯೇ ಆಗಲಿ, ಯಾವುದೇ ಧರ್ಮದ ಗ್ರಂಥಗಳಲ್ಲಾಗಲಿ ಕಟ್ಟಪ್ಪಣೆಯಂತೆ ಸೂಚಿಸಿಯೇ ಇಲ್ಲ. ಹಿಂದಿನಿಂದ ನಡೆದು ಬಂದ ಸಂಪ್ರದಾಯದಂತೆ ಇದು ಇಂದಿಗೂ ನಡೆಯುತ್ತಾ ಬಂದಿದೆ ಅಷ್ಟೇ. ಆದರೆ ವಿಶ್ವದ ಕೆಲವು ಕಡೆ, ಉದಾಹರಣೆಗೆ ಉತ್ತರ ಯೂರೋಪ್ ರಾಷ್ಟ್ರಗಳಲ್ಲಿ ಎಡಗೈ ಬದಲಿಗೆ ಬಲಗೈಯ ಉಂಗುರ ಬೆರಳಿಗೆ ತೊಡಲಾಗುತ್ತದೆ. ಆಸ್ಟ್ರಿಯಾ, ಡೆನ್ಮಾರ್ಕ್, ಪೋಲ್ಯಾಂಡ್, ಜರ್ಮನಿಯ ನವವಿವಾಹಿತರು ಬಲಗೈಯ ಉಂಗುರ ಬೆರಳಿನಲ್ಲಿ ಉಂಗುರ ತೊಡುತ್ತಾರೆ.

English summary

Why Is A Wedding Ring Worn on a Woman’s Left Hand?

Wearing a wedding ring (and engagement ring) is a time-honored tradition that dates back to ancient times, a symbol of the love and devotion that you pledge to your spouse. But how did this tradition come to be? Why do we wear our wedding rings on our left hands? Are there alternative options for the less-traditional bride and groom?
X
Desktop Bottom Promotion