ತಪ್ಪು ಎಂದೂ ಗೊತ್ತಿದ್ದರೂ ಕೂಡ, ವೇಶ್ಯೆಯರ ಸಹವಾಸ ಮಾಡುತ್ತಾರೆ!

By: Arshad
Subscribe to Boldsky

ಅನಾದಿಕಾಲದಿಂದಲೂ ಮಹಿಳೆಯರ ಮನದಲ್ಲಿ ಉದ್ಭವಿಸಿರುವ ಪ್ರಶ್ನೆ ಇದು. ಪ್ರತಿ ಊರಿನಲ್ಲಿಯೂ ಇರುವ ವೇಶ್ಯಾವಾಟಿಕೆಗಳು ಅಥವಾ ವೃತ್ತಿ ಏಕೆ ನಡೆಯುತ್ತಿದೆ? ಎಲ್ಲಿಯವರೆಗೆ ಗ್ರಾಹಕರಿರುತ್ತಾರೋ, ಅಲ್ಲಿಯವರೆಗೆ ಇದು ನಡೆಯುತ್ತಿರುತ್ತದೆ. ಗ್ರಾಹಕರು ಯಾರು? ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿರುವ ಸಭ್ಯಸ್ಥರೇ. ಮನೆಯಲ್ಲಿ ಪತ್ನಿಯಿದ್ದೂ ಪುರುಷರು ವೇಶ್ಯೆಯರೆಡೆಗೆ ಏಕೆ ಆಕರ್ಷಿತರಾಗುತ್ತಾರೆ?    ಭಾರತದ ರೆಡ್ ಲೈಟ್ ಏರಿಯಾದ ಹಿಂದಿರುವ ಸತ್ಯಾಸತ್ಯತೆ

ಹಿಂದಿನ ಶತಮಾನದಲ್ಲಿ ದೇವದಾಸಿ ಪದ್ಧತಿ ಮೊದಲಾದ ಅನಿಷ್ಟಪದ್ಧತಿಗಳ ಮೂಲಕ ತಮ್ಮ ಅಗತ್ಯತೆಗಳನ್ನು ಸುಲಭವಾಗಿ ಪೂರೈಸಿಕೊಂಡಿದ್ದು ಎಲ್ಲರಿಗೂ ತಿಳಿದೇ ಇರುವ ವಿಷಯ. ಇಂದು ಈ ಪದ್ದತಿ ಇಲ್ಲವಾದರೂ ಹೆಚ್ಚಿನ ಪುರುಷರು ಮನೆಯ ಹೊರಗಿನ ಹಾಲಿಗೆ ಆಕರ್ಷಣೆಯನ್ನು ಹೊಂದಿರುವುದು ಮಾತ್ರ ಸುಳ್ಳಲ್ಲ.  ಇದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ವೇಶ್ಯೆಯ ಕಣ್ಣೀರ ಕಥೆ

ಅದರಲ್ಲೂ ಕೆಲವರು ತಾವು ಗಳಿಸಿದುದನ್ನೆನ್ನಾ ಇವರಿಗೆ ಸುರಿದು ಮನೆಯಲ್ಲಿ ಪತ್ನಿ ಮಕ್ಕಳನ್ನು ದರಿದ್ರರಾಗಿಸುವುದನ್ನು ಸಹಾ ನೋಡಬಹುದು. ಎಷ್ಟೋ ಕುಟುಂಬಗಳಲ್ಲಿ ಇದರಿಂದಾಗಿ ಹೇಳಲಾರದ ನೋವು ಮಡುಗಟ್ಟಿರುತ್ತದೆ. ಆದರೂ ಈ ಆಕರ್ಷಣೆ ಏಕೆ? ಶತಮಾನಗಳಿಂದ ಸಮರ್ಪಕ ಉತ್ತರ ಸಿಗಲಾಗದ ಈ ಪ್ರಶ್ನೆಗೆ ಮನಃಶಾಸ್ತ್ರಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ.... 

ಮಾನಸಿಕ ವ್ಯಭಿಚಾರ

ಮಾನಸಿಕ ವ್ಯಭಿಚಾರ

ಪುರುಷರು ಎಷ್ಟೇ ಏಕಪತ್ನಿ ವ್ರತಸ್ಥರಾಗಿದ್ದರೂ ಮಾನಸಿಕವಾಗಿ ಕೊಂಚವಾದರೂ ವ್ಯಭಿಚಾರಿಗಳೇ ಆಗಿರುತ್ತಾರೆ. ಇವರು ಬದ್ಧತೆಯ ಬಂಧನದಲ್ಲಿ ಬಂಧಿತರಾಗಿದ್ದರೂ ಮಾನಸಿಕವಾಗಿ ತಮಗೆ ಅಪರಿಚಿತರಾಗಿರುವವರಲ್ಲಿ ಇನ್ನೇನೋ ಹೊಸದಿರಬಹುದೆಂಬ ಆಶಾಭಾವನೆ ಹೊಂದಿರುತ್ತಾರೆ. ಈ ಮಾನಸಿಕ ಸ್ಥಿತಿ ಕೆಲವೊಮ್ಮೆ ಪೇಟೆಯ ಹಾಲಿನ ರುಚಿ ನೋಡಲು ಪ್ರೇರೇಪಿಸುತ್ತದೆ!

ತಮ್ಮ ಪತ್ನಿಗಿಂತಲೂ ಆಕರ್ಷಕರಾಗಿರುವ ಮಹಿಳೆಯರ ಆಕರ್ಷಣೆ ಹೆಚ್ಚು!

ತಮ್ಮ ಪತ್ನಿಗಿಂತಲೂ ಆಕರ್ಷಕರಾಗಿರುವ ಮಹಿಳೆಯರ ಆಕರ್ಷಣೆ ಹೆಚ್ಚು!

ಸಾಮಾನ್ಯವಾಗಿ ಮಹಿಳೆಯರ ದೇಹಸೌಂದರ್ಯ ಅಥವಾ ಮೈಮಾಟ ಪುರುಷರ ಆಕರ್ಷಣೆಗೆ ಪ್ರಮುಖ ಕಾರಣವಾಗಿದ್ದು ತಮ್ಮ ಪತ್ನಿಗಿಂತಲೂ ಉತ್ತಮ ಮೈಮಾಟ ಹೊಂದಿರುವ ಮಹಿಳೆಯರ ಬಗ್ಗೆ ಹೆಚ್ಚು ಆಕರ್ಷಣೆ ಹೊಂದಿರುತ್ತಾರೆ. ಒಂದು ವೇಳೆ ಈ ಮೈಮಾಟ ಮಾರಾಟಕ್ಕಿದೆ ಎಂದು ತಿಳಿದರೆ ಇದನ್ನು ಖರೀದಿಸುವತ್ತ ಮನಸ್ಸು ಹೊರಳುತ್ತದೆ.

ತಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು

ತಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು

ಸಾಮಾನ್ಯವಾಗಿ ಕಾಮದ ವಿಷಯದಲ್ಲಿ ಪುರುಷರು ಹೆಚ್ಚಿನ ರಂಜನೆಯನ್ನು ಹೆಚ್ಚಿನ ವಿಧದಲ್ಲಿ ಪಡೆಯಲು ಇಚ್ಛಿಸುತ್ತಾರೆ. ಆದರೆ ಇದಕ್ಕೆ ಮನೆಯಲ್ಲಿ ಅವಕಾಶ ಸಿಗದಿದ್ದಲ್ಲಿ ನಿರಾಶರಾಗುತ್ತಾರೆ. ಒಂದು ವೇಳೆ ಅವಕಾಶ ಸಿಕ್ಕಿದರೆ ತಮ್ಮ ಬಯಕೆಯನ್ನು ತೀರಿಸಿಕೊಳ್ಳಲು ಅವರು ಖರ್ಚು ಮಾಡಲು ಹಿಂದೆ ನೋಡುವುದಿಲ್ಲ. ಈ ಮೂಲಕ ಹಣ ಕೊಟ್ಟು ತಮಗೆ ಬೇಕೆನಿಸಿದಂತಹ ಸೇವೆಯನ್ನು ಪಡೆದುಕೊಳ್ಳುತ್ತಾರೆ.

ತಕ್ಷಣವೇ ಶಯನಕ್ಕೆ ತಯಾರಾಗುವ ಕಾರಣ

ತಕ್ಷಣವೇ ಶಯನಕ್ಕೆ ತಯಾರಾಗುವ ಕಾರಣ

ಕೆಲವು ಪುರುಷರಿಗೆ ತಾವು ಕರೆದಾಕ್ಷಣ ತಮ್ಮ ಕಾಮನೆಯನ್ನು ಪೂರೈಸಲು ಬರಬೇಕು ಎಂಬ ಬಯಕೆ ಇರುತ್ತದೆ. ಒಂದು ವೇಳೆ ಮನೆಯಲ್ಲಿ ಇದು ಸಾಧ್ಯವಾಗದೇ ಇದ್ದರೆ ಇವರು ಅವಮಾನವಾದಂತೆ ಅಥವಾ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಭಾವಿಸುತ್ತಾರೆ. ಈ ನಿರ್ಲಕ್ಷ್ಯಕ್ಕೆ ಪ್ರತೀಕಾರದ ರೂಪದಲ್ಲಿ ಹಣಕೊಟ್ಟ ತಕ್ಷಣ ಶಯನಕ್ಕೆ ತಯಾರಾಗುವ ಸೇವೆಯನ್ನು ಪಡೆಯಲು ಇಚ್ಛಿಸುತ್ತಾರೆ.

ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರದೇ ಇರಲು

ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರದೇ ಇರಲು

ಸಾಮಾನ್ಯವಾಗಿ ಪುರುಷರು ವರ್ಷದ ಎಲ್ಲಾ ದಿನಗಳಲ್ಲಿಯೂ ಕಾಮದ ವಿಷಯದಲ್ಲಿ ಆಸಕ್ತಿ ಹೊಂದಿರುತ್ತಾರೆ.ಆದರೆ ಮಹಿಳೆಯರಿಗೆ ಹಾಗಲ್ಲ, ಅವರಿಗೆ ತಿಂಗಳ ರಜಾದಿನ, ಮಾನಸಿಕ ತೊಳಲಾಟ, ದೈಹಿಕ ಸ್ವಾಸ್ಥ್ಯ ಮೊದಲಾದ ಹತ್ತು ಹಲವು ಕಾರಣಗಳಿಂದ ಇಲ್ಲ ಎನ್ನಬೇಕಾಗುತ್ತದೆ. ಈ ಸಮಯದಲ್ಲಿ ಇವರ ಬೇಡಿಕೆ ಬಂದರೆ 'ಸದಾಶಿವನಿಗೆ ಸದಾ ಅದೇ ಧ್ಯಾನ' ಎಂಬ ಹಣೆಪಟ್ಟಿ ಸುಲಭವಾಗಿ ದಕ್ಕಿಬಿಡುತ್ತದೆ. ಈ ಹಣೆಪಟ್ಟಿ ಪಡೆಯಲು ಸರ್ವಥಾ ಸಿದ್ಧರಿಲ್ಲದ ಪುರುಷರು ಯಾರಿಗೂ ಗೊತ್ತಾಗದಂತೆ ತಮ್ಮ ಕಾಮನೆಯನ್ನು ಹಣ ಕೊಟ್ಟು ಪೂರೈಸಿಕೊಂಡು ಮನೆಯಲ್ಲಿಯೂ ಯಾವುದೇ ಅನುಮಾನಕ್ಕೆ ಅವಕಾಶ ನೀಡದೇ ನಿರಾಳತೆ ಅನುಭವಿಸುತ್ತಾರೆ.

ಕೆಲವು ಹೊಸ ಪ್ರಯೋಗಗಳಿಗಾಗಿ

ಕೆಲವು ಹೊಸ ಪ್ರಯೋಗಗಳಿಗಾಗಿ

ಎಷ್ಟೋ ಪುರುಷರು ತಮ್ಮ ಜೀವನದಲ್ಲಿ ಸಾಧಿಸಬೇಕಾದ ಪಟ್ಟಿಯಲ್ಲಿ ಈ ವಿಷಯವನ್ನೂ ಸೇರಿಸಿರುತ್ತಾರೆ. ಇನ್ನೂ ಕೆಲವರು ತಮಗೆ ಮನೆಯಲ್ಲಿ ಮಾಡಲು ಅಸಾಧ್ಯವಾದ ಪ್ರಯೋಗಗಳನ್ನು ಸಾಧಿಸಲೇಬೇಕೆಂಬ ಛಲವಿರುತ್ತದೆ. ಈ ಕಾರಣಗಳೂ ಪೇಟೆಯ ಹಾಲನ್ನು ಖರೀದಿಸಲು ಪ್ರೇರಣೆ ನೀಡುತ್ತವೆ.

 
English summary

Why Do Men Sleep With Prostitutes

Here we have mentioned about the reasons as to why men love to spend their quality time with prostitutes and this is no joke. So, find out about the things that attract them towards these women.
Please Wait while comments are loading...
Subscribe Newsletter