ಅಚ್ಚರಿಯಾದರೂ ನಿಜ: ಈ ವಿದೇಶಿಯರು ಕಲಿಯದ ವಿದ್ಯೆಯೇ ಇಲ್ಲ!

Posted By: Hemanth
Subscribe to Boldsky

ಹೈನುಗಾರಿಕೆಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡಯಲ್ಲಿ ಪ್ರಮುಖ ಉದ್ಯೋಗವಾಗುತ್ತಿದೆ. ಹೈನುಗಾರಿಕೆಯಿಂದ ರೈತರು ಹಲವಾರು ರೀತಿಯ ಉಪಯೋಗಗಳನ್ನು ಪಡೆಯುತ್ತಿರುವುದು ನಾವು ತಿಳಿದಿದ್ದೇವೆ. ಹಾಲಿನಿಂದ ಹಿಡಿದು ಗೊಬ್ಬರ ತನಕ ಪ್ರತಿಯೊಂದು ಕೂಡ ರೈತರಿಗೆ ಲಾಭವನ್ನು ತಂದುಕೊಡುತ್ತದೆ.  ಗೋಮೂತ್ರ, ಇದುವೇ ಸ್ವಸ್ಥ ಜೀವನದ ಮೂಲ ಮಂತ್ರ

ಆದರೆ ಅಮೆರಿಕಾ ಮತ್ತು ಸ್ವಿಟ್ಜರ್ಲೆಂಡ್‌ನ ರೈತರು ತುಂಬಾ ವಿಚಿತ್ರವಾದ ತಂತ್ರವೊಂದನ್ನು ಅನುಸರಿಸುತ್ತಾ ಇದ್ದರೆ. ಇವರು ಹಸುವಿನ ಹೊಟ್ಟೆಯಲ್ಲಿ ದೊಡ್ಡ ರಂಧ್ರಗಳನ್ನು ಮಾಡುತ್ತಾ ಇದ್ದಾರೆ. ಇದನ್ನು ಫಿಸ್ತುಲಾ ಅಥವಾ ಕ್ಯಾನುಲಸ್ ಎಂದು ಕರೆಯಲಾಗುತ್ತಿದೆ. ಇದು ತುಂಬಾ ಅಪಾಯಕಾರಿಯಲ್ಲವೇ ಮತ್ತು ಇದರಿಂದ ಹಸುಗಳ ಜೀವಕ್ಕೆ ಹಾನಿಯಾಗುವುದಿಲ್ಲವೇ ಎಂದು ನೀವು ಪ್ರಶ್ನಿಸಬಹುದು. ಆದರೆ ಇದರಿಂದ ಯಾವುದೇ ಅಪಾಯವಿಲ್ಲವೆಂದು ಹೇಳಲಾಗುತ್ತಿದೆ. ಇದನ್ನು ಅವರು ಪ್ರತೀ ದಿನ ಪರೀಕ್ಷಿಸುತ್ತಾ ಇರುತ್ತಾರೆ. ಇದು ಹೇಗೆಂದು ತಿಳಿಯಿರಿ.... 

ಪೋಷಕಾಂಶಗಳ ಪರೀಕ್ಷೆಗಾಗಿ

ಪೋಷಕಾಂಶಗಳ ಪರೀಕ್ಷೆಗಾಗಿ

ಕೆಲವೊಂದು ವರದಿಗಳ ಪ್ರಕಾರ ಹಸುವಿನ ಹೊಟ್ಟೆಯಲ್ಲಿ ಮಾಡುವಂತಹ ರಂಧ್ರವನ್ನು ಹಸುವಿನ ಜೀರ್ಣಕ್ರಿಯೆಯನ್ನು ಪ್ರಕ್ರಿಯೆಯನ್ನು ತಿಳಿಯಲು ಮಾಡಲಾಗುತ್ತಿದೆ. ಹಸುವಿನ ಪೋಷಕಾಂಶವನ್ನು ತಿಳಿಯಲು ರಂಧ್ರ ಮಾಡುವುದು ತುಂಬಾ ವಿಚಿತ್ರ ತಂತ್ರಜ್ಞಾನ.

ಕ್ಯಾನುಲಸ್ ಎರಡೂ ಬದಿಗಳಲ್ಲಿ

ಕ್ಯಾನುಲಸ್ ಎರಡೂ ಬದಿಗಳಲ್ಲಿ

ಸುಮಾರು 8 ಇಂಚಿನ ಕ್ಯಾನುಲಸ್ ಅನ್ನು ಹಸುವಿನ ಹೊಟ್ಟೆಯ ಎರಡೂ ಬದಿಗಳಲ್ಲಿ ತೆಗೆಯಲಾಗುತ್ತದೆ. ಆಧುನಿಕ ಯುಗದ ಈ ತಂತ್ರಜ್ಞಾನವು ತುಂಬಾ ಅದ್ಭುತವಾಗಿದೆ ಎಂದು ಕೆಲವೊಂದು ವರದಿಗಳು ತಿಳಿಸಿವೆ.

ಕ್ಯಾನುಲಸ್ ನಿಂದ ವರದಿ

ಕ್ಯಾನುಲಸ್ ನಿಂದ ವರದಿ

ಹಸುವಿನ ಜೀರ್ಣಾಂಗ ವ್ಯವಸ್ಥೆಯ ಅಂತ್ಯದಲ್ಲಿ ಕ್ಯಾನುಲಸ್ ಕೊನೆಗೊಳ್ಳುತ್ತದೆ. ಇದರಿಂದ ರೈತರು ಜೀರ್ಣಕ್ರಿಯೆ ಪ್ರತಿಕ್ರಿಯೆಯನ್ನು ನೋಡಬಹುದು. ಈ ರಂಧ್ರಗಳಿಗೆ ರಬ್ಬರ್ ನಿಂದ ತಯಾರಿಸಲಾಗಿರುವಂತಹ ಮುಚ್ಚಳವನ್ನು ಹಾಕಲಾಗುತ್ತದೆ. ರೈತರು ಪರೀಕ್ಷೆ ನಡೆಸಿದ ಬಳಿಕ ಈ ಮುಚ್ಚಳವನ್ನು ಮುಚ್ಚಬಹುದು.

ಇದೊಂದು ಪ್ರಯೋಗ

ಇದೊಂದು ಪ್ರಯೋಗ

ಅಧ್ಯಯನಗಳ ಪ್ರಕಾರ ಓಟ್ಸ್ ಮತ್ತು ಇತರ ಕೆಲವೊಂದು ಆಹಾರಗಳನ್ನು ಹಸುಗಳು ಯಾವ ರೀತಿ ಜೀರ್ಣಗೊಳಿಸುತ್ತದೆ ಎಂದು ಪರೀಕ್ಷಿಸಲಾಗುತ್ತದೆ. ಇದರ ಬಗ್ಗೆ ಈಗಾಗಲೇ ಪ್ರಯೋಗಗಳು ನಡೆದಿದೆ. ಇದರಿಂದ ಹಸುಗಳ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು.

ಈ ತಂತ್ರವನ್ನು ಹಿಂದೆಯೂ ಪ್ರಯೋಗಿಸಲಾಗಿತ್ತು

ಈ ತಂತ್ರವನ್ನು ಹಿಂದೆಯೂ ಪ್ರಯೋಗಿಸಲಾಗಿತ್ತು

ಈ ತಂತ್ರಜ್ಞಾನವು ಹೊಸತೇನಲ್ಲ ಮತ್ತು ಇದನ್ನು 1920ರಲ್ಲಿ ಇದನ್ನು ಪ್ರಯೋಗಿಸಲಾಗಿತ್ತು. ಕ್ಯಾನುಲಸ್ ನ್ನು ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗುತ್ತದೆ. ಇದರ ಬಳಿಕ ಹಸುವಿಗೆ ವಿಶ್ರಾಂತಿ ಪಡೆಯಲು ಹೆಚ್ಚಿನ ಸಮಯ ಒದಗಿಸಲಾಗುತ್ತದೆ. ಅಂತಿಮವಾಗಿ ಹಸುವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಹಸುಗಳ ಸಾಕಾಣಿಕೆ ಹೆಚ್ಚುವುದು

ಹಸುಗಳ ಸಾಕಾಣಿಕೆ ಹೆಚ್ಚುವುದು

ಹಸುಗಳಿಗೆ ಯಾವ ರೀತಿಯ ಫಸಲುಗಳು ತುಂಬಾ ಆರೋಗ್ಯಕಾರಿ ಎಂದು ತಿಳಿಯಲು ಈ ಪ್ರಯೋಗವು ತುಂಬಾ ಪರಿಣಾಮಕಾರಿಯಾಗಿದೆ ಎಂದು ವರದಿಗಳು ಹೇಳಿವೆ. ಈ ಮೂಲಕ ಆರೋಗ್ಯವಂತ ಹಸುಗಳ ಸಾಕಾಣಿಕೆ ಹೆಚ್ಚಾಗಬಹುದು.

ಈ ಹಸುಗಳಿಗೆ ದೀರ್ಘಾಯುಷ್ಯ

ಈ ಹಸುಗಳಿಗೆ ದೀರ್ಘಾಯುಷ್ಯ

ಕ್ಯಾನುಲಸ್ ಮಾಡಿದಂತಹ ಹಸುಗಳ ವಯಸ್ಸು ದೀರ್ಘವಾಗುತ್ತದೆ ಎಂದು ವರದಿಗಳು ಹೇಳಿವೆ. ಕ್ಯಾನುಲಸ್ ಮಾಡಿದ ಹಸುಗಳಿಗೆ ಹೆಚ್ಚಿನ ಆರೈಕೆ ಮಾಡುವ ಕಾರಣದಿಂದ ಅವುಗಳ ವಯಸ್ಸು ಹೆಚ್ಚುವುದು. ಪ್ರಯೋಗಗಳು ಯಶಸ್ವಿಯಾದ ಬಳಿಕ ಹಸುವಿನ ಹೊಟ್ಟೆಯಲ್ಲಿ ದೊಡ್ಡ ರಂಧ್ರವನ್ನು ಮಾಡುವಂತಹ ಪ್ರಕ್ರಿಯೆಯು ಈಗ ವಿಶ್ವದೆಲ್ಲೆಡೆ ಹಬ್ಬುತ್ತಾ ಇದೆ.

All Images Courtesy

 

 

For Quick Alerts
ALLOW NOTIFICATIONS
For Daily Alerts

    English summary

    Why Do A Few Cows Have Giant Holes?

    Farmers these days in the US and Switzerland have come up with some of the most weirdest concepts to improve their farming methods. They are digging holes in the stomach of the cows, which is known as a fistula or a cannula. Though at first glance it looks life-threatening, it is claimed not to be.
    Story first published: Wednesday, April 26, 2017, 23:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more