For Quick Alerts
ALLOW NOTIFICATIONS  
For Daily Alerts

ಈ ಮಹಿಳೆಯರು, ಪುರುಷರೊಂದಿಗೆ ವಿವಾಹವಾಗುವುದಿಲ್ಲ! ಯಾಕೆ ಗೊತ್ತೇ?

ಟಾಂಜೇನಿಯಾ ಬುಡಕಟ್ಟು ಜನಾಂಗದ ಮಹಿಳೆಯರು ಪುರುಷರ ಪ್ರಭುತ್ವವನ್ನು ತಡೆಗಟ್ಟಲು ಅಥವಾ ಪುರುಷ ಪ್ರಧಾನತೆಯನ್ನು ತಪ್ಪಿಸುವ ಉದ್ದೇಶಕ್ಕೆ ಒಬ್ಬ ಮಹಿಳೆ ಇತರ ಮಹಿಳೆಯರನ್ನು ವಿವಾಹವಾಗುವ ಒಂದು ವಿಲಕ್ಷಣ ಪದ್ಧತಿ ಎಂದು ಹೇಳಲಾಗಿದೆ

By Manu
|

ಪ್ರಪಂಚದಲ್ಲಿ ಅನೇಕ ಜಾತಿ-ಉಪಜಾತಿಗಳಿವೆ. ಪ್ರತಿಯೊಂದರಲ್ಲೂ ತನ್ನದೇ ಆದ ರೀತಿ-ನೀತಿಗಳು, ಆಚಾರ-ವಿಚಾರಗಳು, ಸಂಸ್ಕೃತಿ-ಸಂಪ್ರದಾಯಗಳಿವೆ. ಅದರಲ್ಲೂ ಬುಡಕಟ್ಟು ಜನಾಂಗದವರ ಸಂಸ್ಕೃತಿ ಹಾಗೂ ಪರಂಪರೆಗಳು ಕೊಂಚ ಭಿನ್ನವಾಗಿರುತ್ತವೆ. ಇವು ಕೆಲವೊಮ್ಮೆ ಎಲ್ಲರ ಹುಬ್ಬೇರಿಸುವಂತಹ ಸಂಗತಿಗಳನ್ನು ತೆರೆದಿಡುತ್ತವೆ. ಇಂತಹ ಚಿತ್ರ-ವಿಚಿತ್ರ ಮದುವೆಯನ್ನು ಎಲ್ಲಿಯಾದರೂ ನೋಡಿದ್ದೀರಾ?

ನಿಜ, ಅಂತಹ ಒಂದು ಆಶ್ಚರ್ಯಕರ ಸಂಗತಿಯನ್ನು ಒಳಗೊಂಡಿರುವ ವಿಚಾರವೆಂದರೆ "ಟಾಂಜೇನಿಯಾದ ಬುಡಕಟ್ಟು ಜನಾಂಗದ ಮಹಿಳೆಯರು ಪಿತೃಪ್ರಭುತ್ವ ಸೋಲಿಸಲು ಪರಸ್ಪರ ವಿವಾಹವಾಗುವುದು'. ಒಂದು ವರದಿಯ ಪ್ರಕಾರ ಟಾಂಜೇನಿಯಾ ಬುಡಕಟ್ಟು ಜನಾಂಗದ ಮಹಿಳೆಯರು ಪುರುಷರ ಪ್ರಭುತ್ವವನ್ನು ತಡೆಗಟ್ಟಲು ಅಥವಾ ಪುರುಷ ಪ್ರಧಾನತೆಯನ್ನು ತಪ್ಪಿಸುವ ಉದ್ದೇಶಕ್ಕೆ ಒಬ್ಬ ಮಹಿಳೆ ಇತರ ಮಹಿಳೆಯರನ್ನು ವಿವಾಹವಾಗುವ ಒಂದು ವಿಲಕ್ಷಣ ಪದ್ಧತಿ ಎಂದು ಹೇಳಲಾಗಿದೆ....

ಎಲ್ಲಿ ಇದು?

ಎಲ್ಲಿ ಇದು?

ಉತ್ತರ ಟಾಂಜಾನಿಯಾದ ನ್ಯಾಮಂಗೋ ಹಳ್ಳಿಯಲ್ಲಿ ಅನೇಕ ವರ್ಷದಿಂದ ನಡೆದುಕೊಂಡು ಬಂದ ಒಂದು ಪದ್ಧತಿ ಎನ್ನಲಾಗುತ್ತದೆ. ಈ ಬುಡಕಟ್ಟಿನ ಪ್ರತಿಯೊಂದು ಮಹಿಳೆಯರು ಸಾಮಾಜಿಕವಾಗಿಯೇ ಪರಸ್ಪರ ಒಬ್ಬರನ್ನೊಬ್ಬರು ವಿವಾಹವಾಗುತ್ತಾರೆ.

ಸ್ಥಳೀಯ ಸಂಪ್ರದಾಯ

ಸ್ಥಳೀಯ ಸಂಪ್ರದಾಯ

ಇವರು "ನೈಂಬಾ ನಿಟೋಬು' ಎಂಬ ಸ್ಥಳೀಯ ಸಂಪ್ರದಾಯದಡಿಯಲ್ಲಿ ಒಬ್ಬರನ್ನೊಬ್ಬರು ವಿವಾಹವಾಗುತ್ತಾರೆ. ಇದು "ಮಹಿಳೆಯರ ಮನೆ' ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿ ಮದುವೆಯಾದ ಮಹಿಳೆಯರು ಹಿಂದೆ ಪುರುಷನೊಂದಿಗೆ ವಿವಾಹವಾದಾಗ ಜನಿಸಿದ ಮಗುವನ್ನು ಬೆಳೆಸುತ್ತಾರೆ. ಅವರು ಆ ಮಗುವಿನ ತಂದೆಯೊಂದಿಗೆ ಮಾತ್ರ ಒಡನಾಟವನ್ನು ಇಟ್ಟುಕೊಂಡಿರುತ್ತಾರೆ.

ಅವರು ವಿವಾಹಿತ ದಂಪತಿಗಳಂತೆ

ಅವರು ವಿವಾಹಿತ ದಂಪತಿಗಳಂತೆ

ಇವರು ಆ ಪುರುಷರೊಂದಿಗೆ ಸಾಮಾನ್ಯವಾಗಿ ವಿವಾಹಿತ ದಂಪತಿಗಳಂತೆ ಇರುತ್ತಾರೆ. ಆದರೆ ಲೈಂಗಿಕ ಸಂಪರ್ಕ ಹೊಂದಿರುವುದಿಲ್ಲ. ಮಗುವನ್ನು ಪಡೆಯುವ ಉದ್ದೇಶ ಬಿಟ್ಟರೆ ಅವರು ಸಲಿಂಗ ಕಾಮಿಗಳಾಗಿರುತ್ತಾರೆ. ಇದಕ್ಕೆ ಕಾರಣ ಅವರಿಗೆ ವಿವಾಹ ಅಥವಾ ಸಂಬಂಧಗಳ ಬಗ್ಗೆ ಸೂಕ್ತವಾದ ಅರಿವು ಇಲ್ಲದಿರುವುದೇ ಕಾರಣ ಎಂದು ತಿಳಿಯಲಾಗಿದೆ.

ಕಿರಿಯ ಪತ್ನಿಗೆ ಆಯ್ಕೆಯ ಅವಕಾಶ...

ಕಿರಿಯ ಪತ್ನಿಗೆ ಆಯ್ಕೆಯ ಅವಕಾಶ...

ಬಹು ಪತ್ನಿತ್ವವನ್ನು ಹೊಂದಿರುವ ಈ ಜನಾಂಗದಲ್ಲಿ ಕಿರಿಯ ಪತ್ನಿಗೆ ತನ್ನ ಪತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ. ಈ ಆಯ್ಕೆ ಕೇವಲ ತನ್ನ ಉತ್ತರಾಧಿಕಾರಿ ಮಗುವಿಗೆ ಜನ್ಮ ನೀಡಲು ಅಷ್ಟೆ. ಮಗುವಿನ ಜನನದ ನಂತರ ಪುರುಷ ಮಗುವಿನ ಲಾಲನೆ-ಪಾಲನೆಯನ್ನು ಮಹಿಳೆಯರ ಮೇಲೆ ಬಿಟ್ಟು ಬಿಡುತ್ತಾನೆ. ಸಲಿಂಗ ಕಾಮಿಗಳಾಗಿ ಮಹಿಳೆಯರು ವಿವಾಹವಾಗುತ್ತಾರೆ. ಅಲ್ಲಿ ಈ ಮಗುವನ್ನು ಬೆಳೆಸುತ್ತಾರೆ.

ಈ ಬಗೆಯ ವಿವಾಹಕ್ಕೆ ಕಾರಣವೇನು?

ಈ ಬಗೆಯ ವಿವಾಹಕ್ಕೆ ಕಾರಣವೇನು?

ಈ ಸಂಪ್ರದಾಯದ ಮುಖ್ಯ ಉದ್ದೇಶ ತಮ್ಮ ಆಸ್ತಿಯ ರಕ್ಷಣೆಗೆ ಎನ್ನುತ್ತಾರೆ. ಇಲ್ಲಿ ಮಕ್ಕಳಿಲ್ಲದ ಮತ್ತು ವಿಧವೆಯಾಗಿರುವ ಮಹಿಳೆಯರಿಗೆ ತಮ್ಮ ಆಸ್ತಿಯನ್ನು ಹೊಂದಲು ಅಧಿಕಾರವಿರುವುದಿಲ್ಲ. ಹಾಗಾಗಿಯೇ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿ ತಮ್ಮ ಆಸ್ತಿಯನ್ನು ಕಾಪಾಡಿಕೊಳ್ಳುತ್ತಾರೆ ಎನ್ನಲಾಗುತ್ತದೆ.

{promotion-urls}

English summary

What? Women Marry Each Other In This Tribe!!

Women from Tanzanian tribe marry each other to defeat Patriarchy and this tradition has been followed since years. To know more, read on.
Story first published: Saturday, May 6, 2017, 20:03 [IST]
X
Desktop Bottom Promotion