ವಿಚಿತ್ರ ಹಬ್ಬ: ಇಲ್ಲಿ ಮಗು ಅತ್ತರೆ ಇವರಿಗೆ-ಹಾಲು ಕುಡಿದಷ್ಟೇ ಸಂತಸ!

By: manu
Subscribe to Boldsky

ಈ ವಿಶ್ವದಲ್ಲಿ ಹಬ್ಬಗಳು ಸಾವಿರಾರಿವೆ. ಆದರೆ ಕೆಲವು ಹಬ್ಬಗಳು ಮಾತ್ರ ವಿಚಿತ್ರ ಆಚಾರಗಳನ್ನು ಅನುಸರಿಸುವ ಮೂಲಕ ಉಳಿದವರಲ್ಲಿ ಅಚ್ಚರಿ ಮೂಡಿಸುತ್ತವೆ. ನಮ್ಮ ದೇಶದ ಸಿಡಿ ಕಟ್ಟುವುದು ಮತ್ತು ಕೆಂಡದ ಮೇಲೆ ನಡೆಯುವ ಆಚರಣೆಗಳು ವಿದೇಶೀಯರ ಆಕರ್ಷಣೆ ಪಡೆದರೆ ನಮಗೆ ಅಮೇರಿಕಾದ ಹಾಲೋವೀನ್ ಅಚ್ಚರಿ ಮೂಡಿಸುತ್ತದೆ.

ಇಂತಹದ್ದೇ ಇನ್ನೊಂದು ಹಬ್ಬ ಜಪಾನಿನಲ್ಲಿ ಇತ್ತೀಚೆಗೆ ನಡೆಯಿತು. ಕ್ರೈಯಿಂಗ್ ಸುಮೋ ಅಥವಾ ಅಳುವ ಸುಮೋ ಎಂಬ ಹೆಸರಿನ ಈ ಹಬ್ಬವನ್ನು ಜಪಾನ್‌ನಲ್ಲಿ ಅತ್ಯಂತ ವೈಭವ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ವರದಿಗಳ ಪ್ರಕಾರ ಈ ಹಬ್ಬಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ.  

ಇದನ್ನೂ ಓದಿ -   ಜಪಾನೀಯರ ಶಿಸ್ತು, ಪ್ರಾಮಾಣಿಕತೆಗೆ ತಲೆಬಾಗಲೇಬೇಕು!

ನಾಜಿಕುಮೋ ಉತ್ಸವದ ಬಳಿಕ ಆಚರಿಸಲಾಗುವ ಈ ಹಬ್ಬದ ಮೂಲಕ ನವಜಾತ ಶಿಶುಗಳ ಆರೋಗ್ಯ ವೃದ್ಧಿಸುತ್ತದೆ. ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ, ಇದಕ್ಕೆ ಅಳುವ ಹೆಸರೇಕೆ ಅಂಟಿಕೊಂಡಿತು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ... ಮುಂದೆ ಓದಿ 

ಈ ಹಬ್ಬ ಶಿಶುಗಳೊಂದಿಗೆ ಆಚರಿಸಲಾಗುತ್ತದೆ!

ಈ ಹಬ್ಬ ಶಿಶುಗಳೊಂದಿಗೆ ಆಚರಿಸಲಾಗುತ್ತದೆ!

ಈ ವರ್ಷದ ಹಬ್ಬದಲ್ಲಿ ನೂರಕ್ಕೂ ಹೆಚ್ಚು ಶಿಶುಗಳು ಪಾಲ್ಗೊಂಡಿದ್ದವು. ಈ ಹಬ್ಬದಲ್ಲಿ 'ಹಲ್ಕ್' ಎಂಬ ದೈತ್ಯನ ರೂಪ ಧರಿಸಿದ ಠೊಣಪ ಸುಮೋ ಕುಸ್ತಿಪಟುಗಳು ಈ ಮಕ್ಕಳನ್ನು ಅಳಿಸಲು ತಮ್ಮೆಲ್ಲಾ ಪ್ರಯತ್ನ ನಡೆಸುತ್ತಾರೆ. ಮಕ್ಕಳಿಗೆ ಕಚಗುಳಿ ಇಡುವ ಮೂಲಕ, ಮುಖವನ್ನು ವಿಕಾರಗೊಳಿಸಿ ಒಟ್ಟಾರೆ ಮಕ್ಕಳನ್ನು ಅಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಅಷ್ಟಕ್ಕೂ ಮಕ್ಕಳು ಅಳದೇ ಇದ್ದರೆ ಇವರು ಕಿರಿಚುತ್ತಾರೆ ಸಹಾ!

ಮಕ್ಕಳನ್ನು ಮೊದಲು ಅಳಿಸಿದವರೇ ವಿಜೇತರು

ಮಕ್ಕಳನ್ನು ಮೊದಲು ಅಳಿಸಿದವರೇ ವಿಜೇತರು

ಈ ಪಂದ್ಯದಲ್ಲಿ ಯಾವ ಮಗು ಮೊದಲು ಅತ್ತಿತೋ ಅವರೇ ವಿಜೇತರು. ಈ ಪಂದ್ಯವನ್ನು ನಿರ್ಣಯಿಸಲು ಒಬ್ಬರು ನಿರ್ಣಾಯಕರನ್ನೂ ನೇಮಿಸಲಾಗಿರುತ್ತದೆ. ಎಲ್ಲಾ ಪಂದ್ಯಗಳಂತೆ ಇಲ್ಲಿಯೂ ಸಹಾ ಯಾವ ಮಗು ಮೊದಲು ಅತ್ತಿತು ಎಂಬುದರ ಬಗ್ಗೆ ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಆದರೆ ಇದರ ನಿಯಮಗಳು ಕೆಲವು ಭಾಗದಲ್ಲಿ ಪಕ್ಕಾ ವಿರುದ್ಧವಾಗಿದೆ. ಈ ಪ್ರದೇಶಗಳಲ್ಲಿ ಯಾವ ಮಗು ಮೊದಲು ಅತ್ತಿತೋ ಆ ಸ್ಪರ್ಧಿ ಸೋಲುತ್ತಾನೆ.

ಮಕ್ಕಳನ್ನು ಅಳಿಸಲೂ ಒಂದು ಕಾರಣವಿದೆ

ಮಕ್ಕಳನ್ನು ಅಳಿಸಲೂ ಒಂದು ಕಾರಣವಿದೆ

ಮಕ್ಕಳು ಅತ್ತಷ್ಟೂ ಆರೋಗ್ಯಕರವಾಗಿರುತ್ತವೆ ಎಂದು ಜಪಾನೀಯರು ನಂಬುತ್ತಾರೆ. ಇದನ್ನು ಹೆಚ್ಚು ಪ್ರಚಾರಗೊಳಿಸಲೆಂದೇ ಈ ಹಬ್ಬವನ್ನು ಪ್ರಾರಂಭಿಸಲಾಯಿತು ಎಂದು ಹೇಳಲಾಗುತ್ತದೆ. ಮಕ್ಕಳನ್ನು ಅಳಿಸಲು ಮಗುವಿನ ತೊಟ್ಟಿಲನ್ನು ಅಲುಗಾಡಿಸುವುದು, ಕಚಗುಳಿ ಇರಿಸುವುದು, ವಿವಿಧ ವೇಷಭೂಷಣಗಳಿಂದ ಹೆದರಿಸುವ ಮೂಲಕ ವಿವಿಧ ಪ್ರಯತ್ನಗಳನ್ನು ನಡೆಸಲಾಗುತ್ತದೆ. ಒಟ್ಟಾರೆ ಮಗು ಅಳಬೇಕು ಅಷ್ಟೇ.

ಇದನ್ನೂ ಓದಿ- ಮನಸ್ಸಿನ ಒತ್ತಡ ನಿಯಂತ್ರಣಕ್ಕೆ-ಜಪಾನೀಯರ ಸಿಂಪಲ್ ಟ್ರಿಕ್ಸ್!

ಮಗುವಿನ ಅಳು ಹೆಚ್ಚಿದಷ್ಟೂ ಆರೋಗ್ಯವೂ ಹೆಚ್ಚು ಎಂಬ ನಂಬಿಕೆ

ಮಗುವಿನ ಅಳು ಹೆಚ್ಚಿದಷ್ಟೂ ಆರೋಗ್ಯವೂ ಹೆಚ್ಚು ಎಂಬ ನಂಬಿಕೆ

ಮಗು ಎಷ್ಟು ಜೋರಾಗಿ ಅಳುತ್ತದೆಯೋ ಅಷ್ಟೂ ಅದರ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಭವಿಷ್ಯದಲ್ಲಿ ಮಗುವಿಗೆ ಅದೃಷ್ಟದ ಬೆಂಬಲ ಸಿಗುವ ಮೂಲಕ ಜೀವನ ಉತ್ತಮವಾಗುತ್ತದೆ ಎಂದು ಜಪಾನೀಯರು ನಂಬುತ್ತಾರೆ.

ಬರೆಯ ಅದೃಷ್ಟ ಮಾತ್ರವಲ್ಲ

ಬರೆಯ ಅದೃಷ್ಟ ಮಾತ್ರವಲ್ಲ

ಈ ಆಚರಣೆಯ ಮೂಲಕ ಮಗುವಿಗೆ ಅದೃಷ್ಟದ ಬೆಂಬಲ ದೊರಕುವುದು ಮಾತ್ರವಲ್ಲ ಸುತ್ತ ಮುತ್ತ ಇರುವ ದುಷ್ಟ ಶಕ್ತಿಗಳಿಂದಲೂ ರಕ್ಷಣೆ ದೊರಕುತ್ತದೆ ಎಂದು ಜಪಾನೀಯರು ನಂಬುತ್ತಾರೆ.

ಒಂದು ವೇಳೆ ಮಗು ಅಳದೇ ಇದ್ದರೆ?

ಒಂದು ವೇಳೆ ಮಗು ಅಳದೇ ಇದ್ದರೆ?

ಈ ಸುಮೋ ದೈತ್ಯರ ಯಾವುದೇ ಪಟ್ಟಿಗೆ ಬಗ್ಗದ ಕೆಲವು ಹಠಮಾರಿ ಮಕ್ಕಳು ಅಳುವುದೇ ಇಲ್ಲ. ಈ ಸೋಲನ್ನು ಸೋಲು ಎಂದು ಪರಿಗಣಿಸುವಂತೆಯೇ ಇಲ್ಲ. ಒಟ್ಟಾರೆ ಮಗು ಅಳುವುದು ಅನಿವಾರ್ಯವೇ ಆಗಿರುವ ಕಾರಣ ಈಗ ನಿರ್ಣಾಯಕರೇ ಸ್ಪರ್ಧಿಯಾಗಿ ಮಗುವನ್ನು ಅಳಿಸಲು ಬರಬೇಕಾಗುತ್ತದೆ.

ಒಂದು ವೇಳೆ ಮಗು ಅಳದೇ ಇದ್ದರೆ?

ಒಂದು ವೇಳೆ ಮಗು ಅಳದೇ ಇದ್ದರೆ?

ಇವರು ಸಾಂಪ್ರಾದಾಯಿಕ ಮುಖವಾಡಗಳನ್ನು ತೊಟ್ಟು, ದೊಡ್ಡ ದೊಡ್ಡ ಧ್ವನಿ ಹೊರಡಿಸುತ್ತಾ ಮಗುವನ್ನು ಅಳಿಸಲು ಯತ್ನಿಸುತ್ತಾರೆ. ಅಂತೂ ಮಗು ಅತ್ತ ಬಳಿಕವೇ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ.

All Image courtesy

English summary

What Happens in 'Crying Sumo' Festival In Japan?

There are many festivals around the world. But what catches our eyes is the most bizarre and weird celebrations from around the world.This article is all about the 'Crying Sumo' Festival that happened in Japan recently. It is celebrated in Japan with great pomp and show.
Subscribe Newsletter