ಏನಿಲ್ಲ? ಏನಿದೆ? ಎಲ್ಲವೂ ಬಾಯಿಯೊಳಗಿನ ಹಲ್ಲುಗಳಲ್ಲಿ ಅಡಗಿದೆ!!

By: Deepu
Subscribe to Boldsky

ಸಂಖ್ಯೆಗಳು, ಹುಟ್ಟಿದ ದಿನ, ಕ್ಷಣ ಮೊದಲಾದವು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಇಂದು ವ್ಯಕ್ತಿಯ ಹಲ್ಲುಗಳ ಸಂಖ್ಯೆ ಮತ್ತು ಆಕಾರಗಳೊಂದಿಗೆ ವ್ಯಕ್ತಿತ್ವ ಹೇಗೆ ಸಂಬಂಧ ಹೊಂದಿದೆ ಎಂದು ನೋಡೋಣ. ಒಂದು ವೇಳೆ ಹಲ್ಲುಗಳ ಸಂಖ್ಯೆ ಮತ್ತು ಆಕಾರದಲ್ಲಿ ವ್ಯತ್ಯಾಸವಿದ್ದರೆ ಯಾವ ರೀತಿಯ ಪ್ರಭಾವ ಬೀರುತ್ತದೆ, ಹಾಗೂ ಈ ಗುಣಗಳಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಗೆ ಅಳೆಯಬಹುದು ಎಂಬುದನ್ನೂ ಗಮನಿಸೋಣ...  

31 ರಿಂದ 32 ಹಲ್ಲುಗಳಿರುವ ವ್ಯಕ್ತಿಗಳು

31 ರಿಂದ 32 ಹಲ್ಲುಗಳಿರುವ ವ್ಯಕ್ತಿಗಳು

ಶಾಸ್ತ್ರಗಳ ಪ್ರಕಾರ ಚಿಕ್ಕಂದಿನಿಂದಲೇ 31 ರಿಂದ 32 ಹಲ್ಲುಗಳಿರುವ ವ್ಯಕ್ತಿಗಳು ಜೀವನದಲ್ಲಿ ಶ್ರೀಮಂತರಾಗಿ, ಖ್ಯಾತರಾಗಿ ಮತ್ತು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿ ಬದುಕುತ್ತಾರೆ.

28 ರಿಂದ 30 ಹಲ್ಲುಗಳಿರುವ ವ್ಯಕ್ತಿಗಳು

28 ರಿಂದ 30 ಹಲ್ಲುಗಳಿರುವ ವ್ಯಕ್ತಿಗಳು

ವೇದಗಳ ಪ್ರಕಾರ ಚಿಕ್ಕಂದಿನಿಂದಲೂ 28-30 ಹಲ್ಲುಗಳಿರುವ ವ್ಯಕ್ತಿಗಳು ಸಮತೋಲನದ ಜೀವನವನ್ನು ಸಾಗಿಸುತ್ತಾರೆ ಹಾಗೂ ಇವರ ಜೀವನದಲ್ಲಿ ಸುಖವೂ ದುಃಖವೂ ಸರಿಸಮನಾಗಿರುತ್ತದೆ.

25 ರಿಂದ 28 ಹಲ್ಲುಗಳಿರುವ ವ್ಯಕ್ತಿಗಳು

25 ರಿಂದ 28 ಹಲ್ಲುಗಳಿರುವ ವ್ಯಕ್ತಿಗಳು

ವೇದಗಳ ಪ್ರಕಾರ 25 ರಿಂದ 28 ಹಲ್ಲುಗಳಿರುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಒತ್ತಡ ಎದುರಾಗುತ್ತಾ ಇರುತ್ತದೆ. ಅಲ್ಲದೇ ಇವರಿಗೆ ಇಡಿಯ ಜೀವಮಾನದಲ್ಲಿ ಏನಾದರೊಂದು ಆರೋಗ್ಯ ಸಮಸ್ಯೆಗಳು ಇದ್ದೇ ಇರುತ್ತವೆ. ಅಲ್ಲದೇ ಮನೆಯವರಿಂದ ದೂರಾಗುವುದು ಮತ್ತು ಆತ್ಮೀಯರನ್ನು ದೂರಮಾಡಿಕೊಳ್ಳುವ ಸಂಭವವೂ ಇರುತ್ತದೆ.

25ಕ್ಕೂ ಕಡಿಮೆ ಹಲ್ಲುಗಳಿರುವ ವ್ಯಕ್ತಿಗಳು

25ಕ್ಕೂ ಕಡಿಮೆ ಹಲ್ಲುಗಳಿರುವ ವ್ಯಕ್ತಿಗಳು

25ಕ್ಕೂ ಕಡಿಮೆ ಹಲ್ಲುಗಳಿರುವ ವ್ಯಕ್ತಿಗಳು ಸಾಮಾನ್ಯವಾಗಿ ಜೀವನದುದ್ದಕ್ಕೂ ಕಷ್ಟಪಡುತ್ತಲೇ ಇರುವ ಮತ್ತು ಸದಾ ಒತ್ತಡದಲ್ಲಿರುವ ಜೀವನ ನಡೆಸುತ್ತಾರೆ. ಇವರಿಗೆ ಜೀವನದ ಕಡೆಯ ವರ್ಷಗಳಲ್ಲಿ ಯಶಸ್ಸು ದೊರಕುತ್ತದೆ ಹಾಗೂ ಅದೂ ತೀರಾ ನಿಧಾನವಾಗಿ ಆಗಮಿಸುತ್ತದೆ.

ಒಸಡುಗಳು ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಒಸಡುಗಳು ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ವೇದಗಳ ಪ್ರಕಾರ ಒಸಡುಗಳು ತುಂಬಾ ದಪ್ಪನಾಗಿದ್ದರೆ ಈ ವ್ಯಕ್ತಿಗಳು ತೀರಾ ಅಹಂಕಾರಿಗಳೂ, ಸ್ವಪ್ರತಿಷ್ಠೆಯುಳ್ಳವರೂ ಆಗಿರುತ್ತಾರೆ ಹಾಗೂ ಈ ವ್ಯಕ್ತಿಗಳು ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯವನ್ನು ಬಡತನದಲ್ಲಿಯೇ ಕಳೆಯುತ್ತಾರೆ.

ಒಂದು ವೇಳೆ ಒಸಡುಗಳು ಗುಲಾಬಿ ಬಣ್ಣದಲ್ಲಿದ್ದರೆ

ಒಂದು ವೇಳೆ ಒಸಡುಗಳು ಗುಲಾಬಿ ಬಣ್ಣದಲ್ಲಿದ್ದರೆ

ಈ ಬಣ್ಣದ ಒಸಡುಗಳಿರುವ ಹಾಗೂ ಸಾಮಾನ್ಯ ಅಗಲದ ಒಸಡುಗಳಿರುವ ವ್ಯಕ್ತಿಗಳು ಸಭ್ಯರೂ, ಕರುಣಾಮಯಿಗಳೂ ಮತ್ತು ಕಾಳಜಿಯುಳ್ಳವರೂ ಆಗಿರುತ್ತಾರೆ. ಅಲ್ಲದೇ ಈ ವ್ಯಕ್ತಿಗಳು ದೀರ್ಘಾಯಸ್ಸನ್ನೂ ಹೊಂದಿರುತ್ತಾರೆ.

ಒಂದು ವೇಳೆ ಒಸಡುಗಳು ಗಾಢ ರಕ್ತದ ಬಣ್ಣ ಹೊಂದಿದ್ದರೆ

ಒಂದು ವೇಳೆ ಒಸಡುಗಳು ಗಾಢ ರಕ್ತದ ಬಣ್ಣ ಹೊಂದಿದ್ದರೆ

ಈ ಬಣ್ಣದ ಒಸಡುಗಳಿರುವ ವ್ಯಕ್ತಿಗಳು ಶೀಘ್ರ ಸಿಟ್ಟಿಗೇಳುವ, ಜಗಳಗಂಟ, ಆಕ್ರಮಣ ಮನೋಭಾವದ ವ್ಯಕ್ತಿಗಳಾಗಿರುತ್ತಾರೆ.

ಒಸಡುಗಳು ಕಪ್ಪಗಾಗಿದ್ದರೆ

ಒಸಡುಗಳು ಕಪ್ಪಗಾಗಿದ್ದರೆ

ಒಸಡುಗಳು ಹೆಚ್ಚೂ ಕಡಿಮೆ ಕಪ್ಪೇ ಆಗಿಹೋಗಿದ್ದರೆ ಈ ವ್ಯಕ್ತಿಗಳು ದುರಾದೃಷ್ಟವಂತರೂ, ಕೊನೆಯೇ ಇಲ್ಲದ ಬಡತನ ಮತ್ತು ಜೀವನವಿಡೀ ಕಷ್ಟಪಡುವುದನ್ನು ಪ್ರಕಟಿಸುತ್ತದೆ. ಈ ವ್ಯಕ್ತಿಗಳು ತಮ್ಮ ಜೀವಮಾನವಿಡೀ ಕಷ್ಟಪಡುತ್ತಲೇ ಇರುತ್ತಾರೆ.

ಹಲ್ಲುಗಳ ಆಕಾರ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಹಲ್ಲುಗಳ ಆಕಾರ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

ಶಾಸ್ತ್ರಗಳ ಪ್ರಕಾರ ಮುಂದಿನ ಹಲ್ಲುಗಳ ನಡುವೆ ಹಾಗೂ ಮೇಲಿನ ಮತ್ತು ಕೆಳಗಿನ ದವಡೆಗಳ ನಡುವೆ ಪುಟ್ಟ ಅಂತರವಿರುವ ವ್ಯಕ್ತಿಗಳು ಅತಿ ಹೆಚ್ಚು ವಾಚಾಳಿಗಳಾಗಿದ್ದರೂ ಅದೃಷ್ಟವಂತರೂ ಆಗಿರುತ್ತಾರೆ.

ಪ್ರತಿ ಹಲ್ಲುಗಳ ನಡುವೆ ಅಂತರವಿದ್ದರೆ

ಪ್ರತಿ ಹಲ್ಲುಗಳ ನಡುವೆ ಅಂತರವಿದ್ದರೆ

ಎಲ್ಲಾ ಹಲ್ಲುಗಳ ನಡುವೆ ಕೊಂಚ ಖಾಲಿಜಾಗವಿದ್ದರೆ ಈ ವ್ಯಕ್ತಿಗಳು ತಮ್ಮ ಜೀವನಸಂಗಾತಿಯನ್ನು ಮೋಸಗೊಳಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಕಳ್ಳಪ್ರೇಮಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಪ್ರವೀಣರೂ ಆಗಿದ್ದು ಅತಿ ಕಡಿಮೆ ಸಂದರ್ಭಗಳಲ್ಲಿ ಸಿಕ್ಕಿ ಬೀಳುತ್ತಾರೆ.

 
English summary

What Does The Shape & Number Of Teeth Indicate About Your Personality

Check out on what happens when there are different types of teeth and numbers of teeth that people have. Here you can get to read about the interesting facts on teeth numbers and shape, and how these factors can help in defining a character of a person.
Please Wait while comments are loading...
Subscribe Newsletter