Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಉಗುರಿನಲ್ಲಿ 'ಅರ್ಧಚಂದ್ರಾಕೃತಿ' ಇದ್ದರೆ-ಅದೃಷ್ಟವೇ ಬದಲಾಗಬಹುದು!
ಕೈಬೆರಳುಗಳ ಉಗುರುಗಳ ಕೆಳಭಾಗದಲ್ಲಿ ಚಂದ್ರನನ್ನು ಹೋಲುವ ಅರ್ಧ ಚಂದ್ರಾಕೃತಿ ಇರುತ್ತದೆ...ಒಂದು ವೇಳೆ ಇಂತಹ ಚಿಹ್ನೆ ನಿಮ್ಮ ಕೈ ಬೆರಳಿನ ಉಗುರಿನಲ್ಲಿಯೂ ಇದ್ದರೆ, ಅದೃಷ್ಟವೇ ಬದಲಾಗಬಹುದು....
ನಾವು ಜೀವನದಲ್ಲಿ ಬಹಳಷ್ಟು ವಿಷಯಗಳನ್ನು ನಂಬಿಕೆಯ ಆಧಾರದ ಮೇಲೆಯೇ ಅವಲಂಬಿಸಿದ್ದೇವೆ. ಎಷ್ಟೋ ವಿಷಯಗಳಲ್ಲಿ ಇದು ಅನಿವಾರ್ಯ ಸಹಾ. ಭಾರತೀಯರಲ್ಲಿ ಮತ್ತು ಚೀನೀಯರಲ್ಲಿ ಸೂಚನೆಗಳ ಬಗೆಗಿನ ನಂಬಿಕೆ ಉಳಿದವರಿಗಿಂತ ಹೆಚ್ಚು. ಇದೇ ಕಾರಣಕ್ಕೆ ಭವಿಷ್ಯ ಶಾಸ್ತ್ರ, ಹಸ್ತಸಾಮುದ್ರಿಕೆ, ಕೆಲವು ಶಾರೀರಿಕ ಲಕ್ಷಣಗಳು ಮೊದಲಾದವು ಇಲ್ಲಿ ತಮ್ಮದೇ ಆದ ಪ್ರಾಮುಖ್ಯತೆಯನ್ನು ಪಡೆದಿವೆ. ಉಗುರು ನೋಡಿ ಭವಿಷ್ಯ ಹೇಳಬಹುದಂತೆ! ನಂಬುತ್ತೀರಾ..?
ನಮ್ಮ ಉಗುರುಗಳ ಬುಡದಲ್ಲಿ ಕಾಣಬರುವ ಅರ್ಧಚಂದ್ರಾಕೃತಿಯ ಗುರುತು ಏನನ್ನು ಹೇಳುತ್ತದೆ? ಈ ವಿಷಯದ ಬಗ್ಗೆ ಭಾರತೀಯರಲ್ಲಿ ಬೆಳೆದುಬಂದಿರುವ ನಂಬಿಕೆಯನ್ನು ಮತ್ತು ಇದಕ್ಕೆ ಆಧಾರವಾಗಿರುವ ಮಾಹಿತಿಯನ್ನು ನೋಡೋಣ......

ಅಧ್ಯಯನ ನಡೆಸಿದವರ ಪ್ರಕಾರ
ಉಗುರುಗಳಲ್ಲಿರುವ ಗುರುತುಗಳು ಜನಸಾಮಾನ್ಯರಿಗೆ ವಿಶೇಷವೆಂದು ಅನ್ನಿಸದಿದ್ದರೂ ಇದರ ಬಗ್ಗೆ ಅಧ್ಯಯನ ನಡೆಸುವವರಿಗೆ ತುಂಬಾ ಅಗತ್ಯವಾಗಿದೆ. ಈ ಅಧ್ಯಯನವನ್ನು "Onychomancy" ಎಂದು ಕರೆಯುತ್ತಾರೆ. ಈ ವಿದ್ಯೆಯಲ್ಲಿ ಉಗುರುಗಳಲ್ಲಿರುವ ಗುರುತುಗಳನ್ನು ಅಭ್ಯಸಿಸಿ ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಆತನ ಮುಂದಿನ ಭವಿಷ್ಯದ ಬಗ್ಗೆ ವಿವರಗಳನ್ನು ತಿಳಿಸಲಾಗುತ್ತದೆ. ಬನ್ನಿ, ಈ ವಿದ್ಯೆಯಲ್ಲಿ ಕಂಡುಕೊಂಡ ಮಹತ್ವದ ಮಾಹಿತಿಗಳನ್ನು ಮುಂದೆ ಓದಿ...

ತೋರುಬೆರಳಿನ ಉಗುರಿನ ಅರ್ಧಚಂದ್ರ
ತೋರುಬೆರಳಿನಲ್ಲಿ ಅರ್ಧಚಂದ್ರ ಮೂಡಿದರೆ ನಿಮಗೆ ಕೆಲವೇ ದಿನಗಳಲ್ಲಿ ಶುಭಸುದ್ದಿ ಪಡೆಯುವ ಅಥವಾ ಕೆಲಸದಲ್ಲಿ ಏಳ್ಗೆ ಕಾಣುವ ಸಂಕೇತವಾಗಿದೆ. ಒಂದು ವೇಳೆ ನಿಮ್ಮ ವಾರ್ಷಿಕ ಮೌಲ್ಯಮಾಪನ ನಡೆಯುವುದಿದ್ದರೆ ಮತ್ತು ಇದಕ್ಕೂ ಮುನ್ನಾದಿನಗಳಲ್ಲಿ ತೋರುಬೆರಳಿನಲ್ಲಿ ಈ ಆಕೃತಿ ಮೂಡಿದರೆ ಶುಭಸುದ್ದಿ ಖಂಡಿತಾ ಇದೆ ಎಂದು ಅರ್ಥ. ಕೈ ಬೆರಳಿನ ಉದ್ದವನ್ನು ಪರಿಗಣಿಸಿ, ಭವಿಷ್ಯವನ್ನು ನಿರ್ಧರಿಸಿ!

ಮಧ್ಯದ ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ
ಈ ಬೆರಳು ನಮ್ಮ ಹಸ್ತದ ಅತಿ ಉದ್ದವಾದ ಬೆರಳಾಗಿದ್ದು ಈ ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿರುವ ವ್ಯಕ್ತಿಯು ಯಂತ್ರಗಳನ್ನು ಅವಲಂಬಿಸಿದ ಉದ್ಯಮದಲ್ಲಿ ಹೆಚ್ಚಿನ ಫಲವನ್ನು ಪಡೆಯುತ್ತಾನೆ.

ಉಂಗುರ ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ
ಈ ಬೆರಳಿನಲ್ಲಿ ಮೂಡಿರುವ ಅರ್ಧಚಂದ್ರದ ಸ್ಪಷ್ಟವಾದ ಅರ್ಥವೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಈ ವ್ಯಕ್ತಿಯ ಸಾಮಾಜಿಕ ಸ್ಥಾನಮಾನದಲ್ಲಿ ಏರಿಕೆಯಾಗುತ್ತದೆ ಹಾಗೂ ಜೀವನ ಉತ್ತಮಗೊಳ್ಳುತ್ತದೆ.

ಕಿರು ಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ
ಯಾವ ವ್ಯಕ್ತಿಯ ಕಿರುಬೆರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿರುತ್ತದೆಯೋ ಆ ವ್ಯಕ್ತಿ ಶೀಘ್ರದಲ್ಲಿಯೇ ಅತಿ ಹೆಚ್ಚು ಅಂದರೆ ದುಪ್ಪಟ್ಟು ಅಥವಾ ಮೂರುಪಟ್ಟು ಲಾಭವನ್ನು ಪಡೆಯುವ ಘಳಿಗೆಗೆ ಸನ್ನಿಹಿತನಾಗಿದ್ದಾನೆ.

ಹೆಬ್ಬರಳಿನ ಉಗುರಿನಲ್ಲಿ ಅರ್ಧಚಂದ್ರ ಮೂಡಿದರೆ
ಒಂದು ವೇಳೆ ಹೆಬ್ಬೆರಳಿನ ಉಗುರಿನಲ್ಲಿ ಈ ಗುರುತಿದ್ದರೆ ಶೀಘ್ರವೇ ನಿಮಗೆ ಶುಭಸುದ್ದಿ ಬರಲಿದೆ. ಅಲ್ಲದೇ ಈ ವ್ಯಕ್ತಿಗಳಿಗೆ ಜೀವನದ ನಡುವಯಸ್ಸು ದಾಟಿದ ಬಳಿಕ ಥಟ್ಟನೇ ಹೆಚ್ಚಿನ ಯಶಸ್ಸು ದೊರಕುತ್ತದೆ. ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಅರ್ಧಚಂದ್ರಾಕೃತಿ ದೊಡ್ಡದಿದ್ದರೆ
ನಮ್ಮ ಉಗುರು ಬೆಳೆಯುತ್ತಿದ್ದಂತೆ ಈ ಅರ್ಧ ಚಂದ್ರಾಕೃತಿಯೂ ಬದಲಾಗುತ್ತಾ ಹೋಗುತ್ತದೆ. ಹೆಚ್ಚಿನಾಂಶ ಕಾಣೆಯಾಗುತ್ತದೆ. ಆದರೆ ಅಪರೂಪಕ್ಕೊಮ್ಮೆ ಇದು ದೊಡ್ಡದಾಗುತ್ತಾ ಉಗುರಿನ ಅರ್ಧಭಾಗಕ್ಕಿಂತಲೂ ದೊಡ್ಡದಾಗಿರುತ್ತದೆ. ಒಂದು ವೇಳೆ ಈ ಪರಿಯಲ್ಲಿ ಗುರುತು ದೊಡ್ಡದಾಗಿದ್ದರೆ ಇದು ಶುಭಸಂಕೇತವಲ್ಲ. ಬದಲಿಗೆ ಕೆಟ್ಟ ಸುದ್ದಿಯನ್ನು ಕೇಳಬೇಕಾಗಿ ಬರಬಹುದು.

ಒಂದು ವೇಳೆ ನಿಮ್ಮ ಯಾವುದೇ ಉಗುರಿನಲ್ಲಿ ಅರ್ಧಚಂದ್ರಾಕೃತಿ ಇಲ್ಲದೇ ಹೋದರೆ
ಕನಿಷ್ಠ ಒಂದು ಬೆರಳಿನಲ್ಲಾದರೂ, ಚಿಕ್ಕದಾದರೂ ಸರಿ ಈ ಗುರುತು ಇದ್ದರೆ ಆರೋಗ್ಯಕರ ಲಕ್ಷಣವಾಗಿದೆ. ಆದರೆ ಒಂದು ವೇಳೆ ಒಂದಿನಿತೂ ಇಲ್ಲದೇ ಹೋದರೆ ಇದು ಅನಾರೋಗ್ಯದ ಲಕ್ಷಣವಾಗಿದ್ದು ತಕ್ಷಣವೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಬೇಕೆಂದು ಇದರ ಅರ್ಥವಾಗಿದೆ. ಈ ಬಗ್ಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿಯಿದ್ದಲ್ಲಿ ಕೆಳಗಿನ ಕಮೆಂಟ್ಸ್ ಭಾಗದ ಮೂಲಕ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.



Click it and Unblock the Notifications
