For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಹಾವಿನ ಕನಸ್ಸು ಬಿದ್ದರೆ ಕೂಡ ಅನೇಕ ನಂಬಿಕೆಗಳಿವೆ. ಹಾವು ಕಚ್ಚಿದಂತೆ ಬಿದ್ದರೆ ಒಂದು ಅರ್ಥ, ಹಾವು ಅಟ್ಟಿಸಿಕೊಂಡು ಬಂದರೆ ಅದಕ್ಕೊಂದು ಅರ್ಥ ಹೀಗೆ ಹಾವಿನ ಕನಸ್ಸು ಬಿದ್ದರೆ ಸಾಕಷ್ಟು ಅರ್ಥಗಳಿವೆ.

By Deepak
|
Snake Dreams | What Happens When You Get Snakes In Your Dream?

ಕನಸಿನಲ್ಲಿ ಹಾವು ನೋಡಿದಿರಾ? ಅರೆ ಈಗ ಟಿವಿಯಲ್ಲಿ ಯಾವ ಕನ್ನಡ ಚಾನೆಲ್ ನೋಡಿದರೂ ಅದರಲ್ಲಿ ಒಂದು ಹಾವಿನ ದ್ವೇಷದ ಕತೆ ಇರುವ ಸೀರಿಯಲ್ ಬರುತ್ತಿದೆ ಅದಕ್ಕೆ ಇರಬೇಕು ಅಂದುಕೊಂಡಿರಾ? ಇಲ್ಲವೇ ಇನ್ನೇನೋ ಊಹಿಸಿಕೊಂಡು ಹೆದರಿದಿರಾ? ಅದನ್ನು ಬಿಡಿ ಹಾವುಗಳು ಕಾಣಿಸಿಕೊಂಡರೆ ಕನಸಿನ ಅರ್ಥವೇನು ಎಂದು ವಿವರಿಸುವುದು ಸ್ವಲ್ಪ ಕಷ್ಟವೇ! ಏಕೆಂದರೆ ಹಾವುಗಳು ಧನಾತ್ಮಕ ಮತ್ತು ಋಣಾತ್ಮಕ ಅರ್ಥಗಳೇರಡನ್ನು ಪ್ರತಿನಿಧಿಸುತ್ತವೆ. ಹಾವು ಕಚ್ಚಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ ವ್ಯಕ್ತಿಯ ಪ್ರಾಣ ಉಳಿಸಿ

ಈ ಕನಸನ್ನು ವಿಶ್ಲೇಷಣೆ ಮಾಡಬೇಕು ಎಂದರೆ ನಿಮ್ಮ ವೈಯಕ್ತಿಕ ಅನುಭವವನ್ನು ಮೊದಲು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಹಾವುಗಳನ್ನು ನೀವು ಸಾಮಾಜಿಕವಾಗಿ ಹೇಗೆ ಪರಿಗಣಿಸುತ್ತೀರಾ ಎಂಬುದರ ಮೇಲೆ ಈ ಕನಸನ್ನು ವಿಶ್ಲೇಷಣೆ ಮಾಡಬಹುದು. ಕೆಲವರಿಗೆ ಹಾವು ಎಂದರೆ ವಿಷಕಾರಿ ಜೀವಿಗಳು, ಇನ್ನೂ ಕೆಲವರಿಗೆ ದೇವರು, ಇನ್ನೂ ಕೆಲವರಿಗೆ ಮುದ್ದಿನ ಸಾಕು ಪ್ರಾಣಿಗಳು!.

ಹೀಗೆ ಕನಸಿನ ಅರ್ಥ ಅವರು ಹಾವು ನೋಡುವ ರೀತಿಯನ್ನು ಅವಲಂಬಿಸುತ್ತದೆ. ಬನ್ನಿ ಅದೆಲ್ಲಾ ಸರಿ ಎಲ್ಲಾ ನಾಗರೀಕತೆಗಳಲ್ಲಿ ಹಾವು ಶಕ್ತಿಶಾಲಿ ಜೀವಿಯ ಸಂಕೇತವಾಗಿಯೇ ಚಿತ್ರಿತವಾಗಿದೆ. ಅದಕ್ಕಾಗಿ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಇದರ ಮಹತ್ವ ತುಂಬಾ ಮುಖ್ಯವಾಗಿರುತ್ತದೆ. ಬನ್ನಿ ಇನ್ನು ಕನಸಿನ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.....

ಹಾವುಗಳಿಗೆ ಗುಣಪಡಿಸುವ ಶಕ್ತಿಯಿರುತ್ತದೆ

ಹಾವುಗಳಿಗೆ ಗುಣಪಡಿಸುವ ಶಕ್ತಿಯಿರುತ್ತದೆ

ಹಾವನ್ನು ಕನಸಿನಲ್ಲಿ ಕಂಡರೆ ನೀವು ಯಾವುದೋ ರೋಗದಿಂದ ಗುಣವಾಗುತ್ತಿದ್ದೀರಿ ಎಂದರ್ಥ. "ಕ್ಯಾಡುಸಿಯಸ್" ಎಂಬ ವೈದ್ಯ ವೃತ್ತಿಯ ಸಂಕೇತದಲ್ಲಿಯೇ ಎರಡು ಹಾವುಗಳನ್ನು ನಾವು ನೋಡಬಹುದು. ಹಾಗಾಗಿ ಹಾವು ಕಂಡರೆ ಹಾಗು ನೀವು ರೋಗಿಯಾಗಿದ್ದಲ್ಲಿ, ನಿಮ್ಮ ರೋಗ ಗುಣವಾಗುವ ಪ್ರಕ್ರಿಯೆಯಲ್ಲಿದೆ ಎಂದರ್ಥ.

ಹಾವು ಎಂದರೆ ಸುಪ್ತ ಪ್ರಜ್ಞೆ ಎಂದರ್ಥ

ಹಾವು ಎಂದರೆ ಸುಪ್ತ ಪ್ರಜ್ಞೆ ಎಂದರ್ಥ

ಹಾವುಗಳು ಸುಪ್ತ ಪ್ರಜ್ಞೆಯ ಸಂಕೇತ. ಒಂದು ವೇಳೆ ನೀವು ಈಜುವ ಹಾವನ್ನು ನೋಡಿದರೆ, ಅದು ನೀವು ನಿಮ್ಮ ಭಾವನೆಗಳನ್ನು ನಿಗ್ರಹಿಸುತ್ತಿದ್ದೀರಿ ಎಂದರ್ಥ. ಒಂದು ಪೆಟ್ಟಿಗೆಯಲ್ಲಿನ ಹಾವನ್ನು ನೋಡಿದರೆ ನೀವು ನಿಮ್ಮ ಸುಪ್ತ ಪ್ರಜ್ಞೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದರ್ಥ.ಪೆಟ್ಟಿಗೆಯಲ್ಲಿರುವ ಹಾವು ನಿಮಗೆ ಒಂದು ಅಡಗಿರುವ ಸಂದೇಶವನ್ನು ನೀಡಬಹುದು ಅಥವಾ ನಿಮಗೆ ಎಚ್ಚರಿಕೆಯನ್ನು ಸಹ ನೀಡಬಹುದು.

ಹಾವು ಕಚ್ಚಿದಂತಹ ಕನಸ್ಸು!

ಹಾವು ಕಚ್ಚಿದಂತಹ ಕನಸ್ಸು!

ಹಾವು ಕಚ್ಚಿದಂತಹ ಕನಸ್ಸು ಬಿದ್ದರೆ ಯಾರೋ ಒಬ್ಬರಿಂದ ಅಥವಾ ಯಾವುದೋ ಒಂದು ವಸ್ತುವಿನಿಂದ ಹಾನಿಯಾಗಲಿದೆ ಎಂಬ ನಂಬಿಕೆ ಜನರಲ್ಲಿದೆ.

ಹಾವುಗಳು ಕಾಳಜಿವಹಿಸದ ವ್ಯಕ್ತಿಯನ್ನು ತಿಳಿಸಬಹುದು

ಹಾವುಗಳು ಕಾಳಜಿವಹಿಸದ ವ್ಯಕ್ತಿಯನ್ನು ತಿಳಿಸಬಹುದು

ಒಂದು ವೇಳೆ ನೀವು ಒಬ್ಬ ವ್ಯಕ್ತಿಯ ಜೊತೆಗೆ ಇದ್ದಾಗ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ, ಅದು ಆ ವ್ಯಕ್ತಿ ದುಷ್ಟ ಮತ್ತು ನಿರ್ದಯಿ ಎಂಬುದನ್ನು ತೋರಿಸುತ್ತದೆ. ಈ ಕನಸಿನಲ್ಲಿ ಹಾವು ನಿಮ್ಮನ್ನು ಕಚ್ಚುತ್ತದೆ ಅಥವಾ ನುಂಗುತ್ತದೆ. ಒಮ್ಮೊಮ್ಮೆ ಹಾವು ಮನುಷ್ಯನ ರೂಪ ಸಹ ತಾಳುತ್ತದೆ. ಆಗ ನಿಮ್ಮ ಜೊತೆ ಇರುವ ವ್ಯಕ್ತಿಯನ್ನು ನಂಬಲು ಹೋಗಬೇಡಿ.

ಹಾವುಗಳು ಅಪಾಯವನ್ನು ಸೂಚಿಸುತ್ತವೆ

ಹಾವುಗಳು ಅಪಾಯವನ್ನು ಸೂಚಿಸುತ್ತವೆ

ಹಾವುಗಳು ಕನಸಿನಲ್ಲಿ ಬಂದರೆ ಮುಂಬರುವ ಅಪಾಯವನ್ನು ತಿಳಿಸುತ್ತವೆ. ಹಾವು ಕಚ್ಚಿದ ಕನಸು ಬಿದ್ದರೆ, ನಿಮಗೆ ಮುಂದೆ ಅಪಾಯ ಕಾದಿದೆ ಎಂದರ್ಥ. ಇನ್ನೂ ಕೆಲವೊಮ್ಮೆ ಮರಿಹಾವು ಕಾಣಿಸಿಕೊಂಡರೆ ಆ ಅಪಾಯವನ್ನು ನೀವು ಹಗುರವಾಗಿ ತೆಗೆದುಕೊಂಡಿದ್ದೀರಿ ಎಂದರ್ಥ. ಒಂದು ವೇಳೆ ನೀವು ಹಾವನ್ನು ಕೊಂದರೆ ಅಥವಾ ಸತ್ತ ಹಾವನ್ನು ನೋಡಿದರೆ ಆ ಅಪಾಯವನ್ನು ನೀವು ಜಯಿಸಿದ್ದೀರಿ ಎಂದರ್ಥ.

ಹಾವು ಎಂದರೆ ಸೃಜನಶೀಲತೆ

ಹಾವು ಎಂದರೆ ಸೃಜನಶೀಲತೆ

ಕನಸಿನಲ್ಲಿ ಹಾವು ಬಂದರೆ ನಿಮ್ಮ ಸೃಜನಶೀಲತೆ ಮತ್ತು ಪ್ರತಿಭೆ ಉತ್ತಮ ಸ್ಥಾನದಲ್ಲಿದೆ ಎಂದರ್ಥ. ನೀವು ನಿಮ್ಮ ಪ್ರತಿಭೆ ಇರುವ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆಯುತ್ತೀರಿ. ಇದು ಒಂದು ಧನಾತ್ಮಕ ವಿಶ್ಲೇಷಣೆಯಾಗಿದೆ.

ಹಾವು ರೂಪಾಂತರರದ ಸಂಕೇತ

ಹಾವು ರೂಪಾಂತರರದ ಸಂಕೇತ

ಹಾವುಗಳು ಪೊರೆಯನ್ನು ಕಳಚುತ್ತವೆ. ಒಂದು ವೇಳೆ ನೀವು ಹಾವಿನ ಕನಸು ಬಿದ್ದು ಎಚ್ಚರಗೊಂಡಲ್ಲಿ, ಅದರಿಂದ ನಿಮ್ಮ ಅಭಿವೃದ್ಧಿಯಾಗುತ್ತದೆ ಎಂದರ್ಥ. ಸ್ವಯಂ-ಅಭಿವೃದ್ಧಿ, ಜ್ಞಾನ ಸಂಪಾದನೆ ಮತ್ತು ವ್ಯಕ್ತಿತ್ವದಲ್ಲಿ ಧನಾತ್ಮಕ ಬದಲಾವಣೆ ನಿಮಗೆ ದೊರೆಯುತ್ತದೆ. ಈ ಬದಲಾವಣೆಗಳು ನೀವು ಹುಡುಕುತ್ತಿರುವುದೇ ಆಗಬಹುದು ಅಥವ ನಿಮ್ಮ ಜೀವನದ ಮಹತ್ವದ ತಿರುವೇ ಆಗಬಹುದು.

ಕೆಂಪು ಹಾವು ನಿಮ್ಮ ಕನಸಿನಲ್ಲಿ ಬಂದರೆ...

ಕೆಂಪು ಹಾವು ನಿಮ್ಮ ಕನಸಿನಲ್ಲಿ ಬಂದರೆ...

ಒಂದು ಕೆಂಪು ಹಾವು ನಿಮ್ಮ ಕನಸಿನಲ್ಲಿ ಬಂದರೆ ಅದು ನಿಮ್ಮ ಭಾವೋದ್ರೇಕವನ್ನು ಹಾಗು ಅದಕ್ಕೆ ಸಂಬಂಧಿಸಿದ ಧನಾತ್ಮಕ ಲಕ್ಷಣಗಳನ್ನು ತೋರಿಸುತ್ತದೆ. ಹಾವಿನ ಜೊತೆಗೆ ಸೆಣಸಾಡುವುದು ನೀವು ಬದಲಾವಣೆಗೆ ಹೋರಾಡುತ್ತಿದ್ದೀರಿ ಎಂದು ತೋರಿಸುತ್ತದೆ. ಒಟ್ಟಾರೆಯಾಗಿ ನೀವು ಬದಲಾವಣೆಗಾಗಿ ಹೋರಾಡುತ್ತಿದ್ದೀರಿ ಇಲ್ಲವೇ ಬದಲಾವಣೆಯನ್ನು ಒಪ್ಪಿಕೊಂಡಿದ್ದೀರಿ ಎಂದು ಹಾವಿನ ಕನಸು ತೋರಿಸುತ್ತದೆ.

ಹಾವು ಎಂದರೆ ಜಗಳ!

ಹಾವು ಎಂದರೆ ಜಗಳ!

ಹಾವಿನ ಕನಸು ಬಂದರೆ ಸಾಕು ಅದು ಹಲವರಿಗೆ ಒಂದು ಅಪಾಯದ ಸೂಚನೆ ನೀಡುತ್ತದೆ. ಆದ್ದರಿಂದ ಹಾವಿನ ಕನಸನ್ನು ಉದಾಸೀನ ಮಾಡಬೇಡಿ. ಹಾವುಗಳು ನಿಮ್ಮ ಜೀವನದಲ್ಲಿ ನಡೆಯುವ ಯಾವುದೋ ನಿಯಂತ್ರಿಸಲಾಗದ ಸಂಗತಿಯ ಕುರಿತು ನಿಮಗೆ ತಿಳಿಸಬಹುದು. ಆ ಸಂಗತಿ ಘಟನೆ, ವ್ಯಕ್ತಿ ಅಥವಾ ಯಾವುದೋ ಅಂಶವಾಗಿರಬಹುದು.

ಹಾವಿನ ಜೊತೆ ಹೋರಾಡುವುದು!

ಹಾವಿನ ಜೊತೆ ಹೋರಾಡುವುದು!

ಕೆಲವರಿಗೆ ತಾವು ಹಾವಿನ ಜೊತೆ ಹೋರಾಡುತ್ತಿರುವಂತೆ ಕನಸ್ಸು ಬೀಳುತ್ತದೆ. ಈ ರೀತಿಯ ಕನಸ್ಸು ಬಿದ್ದರೆ ನೀವು ನಿಮ್ಮ ಭಾವನೆಗಳ ಜೊತೆ ಹೋರಾಡುತ್ತಿದ್ದೀರ, ನಿಮಗೆ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ, ಗೊಂದಲದಲ್ಲಿದ್ದೀರ ಎಂದು ಅರ್ಥ. ಅಲ್ಲದೆ ಈ ರೀತಿಯ ಕನಸ್ಸು ಬಿದ್ದರೆ ಸಂಬಂಧ ಅಥವಾ ಕೆಲಸದಲ್ಲಿ ಏನಾದರೂ ತೊಂದರೆ ಇದ್ದರೆ ಈ ರೀತಿಯ ಕನಸ್ಸು ಬೀಳುತ್ತದೆ.

English summary

What Does Dreaming About Snakes Mean?

Dreams can be a sign of something that could happen or is related to your daily life. But, what happens when you get snakes in your dream? Check out this article to find out more.
X
Desktop Bottom Promotion