For Quick Alerts
ALLOW NOTIFICATIONS  
For Daily Alerts

  ದೇಹದ ಮೇಲಿರುವ ಗುರುತು ನಿಮ್ಮ 'ಸ್ವಭಾವಕ್ಕೆ' ಕುರುಹು!

  By Manu
  |

  ನಮ್ಮ ಚರ್ಮದ ಜೀವಕೋಶಗಳು ಸತತವಾಗಿ ಸಾಯುತ್ತಾ, ಹೊಸದಾಗಿ ಹುಟ್ಟುತ್ತಾ ಹೋಗುತ್ತವೆ. ಇದರಿಂದಾಗಿ ಕೆಲವು ಕಲೆಗಳು ಮಾಯವಾಗುತ್ತವೆ ಹಾಗೂ ಗಾಯದ ಗುರುತುಗಳು ಪೇಲವವಾಗುತ್ತಾ ಹೋಗುತ್ತವೆ. ಕೇವಲ ಹುಟ್ಟುಮಚ್ಚೆಗಳು ಮಾತ್ರ ಹೆಚ್ಚು ಕಡಿಮೆ ಹಾಗೇ ಇರುತ್ತವೆ ಅಥವಾ ದೊಡ್ಡದಾಗುತ್ತಾ ಹೋಗುತ್ತವೆ.

  ಆದರೆ ಹುಟ್ಟುವಾಗ ಇಲ್ಲದಿದ್ದ ಚರ್ಮದಲ್ಲಿ ಕಾಲಕಳೆದಂತೆ ಹೊಸದಾಗಿ ಕಲೆಗಳು ಅಥವಾ ವರ್ತುಲಗಳು ಕಂಡುಬರುತ್ತವೆ. ಇಂದಿನ ಲೇಖನದಲ್ಲಿ ಈ ಕಲೆಗಳು ಅಥವಾ ಗುರುತುಗಳ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಸಾಮಾನ್ಯವಾಗಿ ನೋವು ಅಥವಾ ತುರಿಕೆ ಇಲ್ಲದಿದ್ದಲ್ಲಿ ನಾವೆಲ್ಲಾ ಈ ಗುರುತುಗಳನ್ನು ಅಲಕ್ಷಿಸುತ್ತೇವೆ.  ಒಂದೇ ತಿಂಗಳಲ್ಲಿ ಮಾಯವಾಗುವ ತ್ವಚೆಯ ಕಪ್ಪು ಕಲೆ!

  ಆದರೆ ಈ ಗುರುತುಗಳಿಗೆ ತಮ್ಮದೇ ಆದ ವ್ಯಾಖ್ಯಾನ ಮತ್ತು ಅರ್ಥಗಳಿವೆ. ಇವುಗಳು ಸಾಮಾನ್ಯವಾಗಿ ಸಹಜವರ್ಣಕ್ಕೂ ಕೊಂಚ ಗಾಢವಾಗಿ, ತಿಳಿಯಾಗಿ, ಗುಲಾಬಿ ಅಥವಾ ಗಾಢನೀಲಿ ಬಣ್ಣ ಬೆರೆಸಿದಂತಿರುತ್ತವೆ. ಇವುಗಳ ನಿಜವಾದ ಅರ್ಥವೇನು? ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಇವೇನು ಹೇಳುತ್ತವೆ ನೋಡೋಣ...  

  ಬೆನ್ನಿನಲ್ಲಿರುವ ಗುರುತುಗಳು

  ಬೆನ್ನಿನಲ್ಲಿರುವ ಗುರುತುಗಳು

  ಯಾವಾಗ ಬೆನ್ನಿನ ಮೇಲ್ಭಾಗದಲ್ಲಿ ಗುರುತುಗಳು ಮೂಡಲು ಪ್ರಾರಂಭವಾಯಿತೋ ಆಗ ಆ ವ್ಯಕ್ತಿಗೆ ಭಾವನಾತ್ಮಕ ನೆರವು ದೊರಕುವುದು ಕಡಿಮೆಯಾಗುತ್ತದೆ. ಬೆನ್ನಿನ ಮಧ್ಯಭಾಗದಲ್ಲಿದ್ದರೆ ಈ ವ್ಯಕ್ತಿ ಮಾಡುವ ಒಂದು ತಪ್ಪಿನಿಂದಾಗಿ ಇಡಿಯ ಜೀವಮಾನ ಕೊರಗುವಂತಾಗುತ್ತದೆ. ಕೆಳಬೆನ್ನಿನ ಮೇಲೆ ಮೂಡಿರುವ ಗುರುತುಗಳು ಅತಿ ಹೆಚ್ಚಿನ ಒತ್ತಡದ ಜೀವನ ಮತ್ತು ಅನಿಶ್ಚಿತತೆಯನ್ನು ತೋರುತ್ತದೆ.

  ಕುತ್ತಿಗೆಯ ಹಿಂಭಾಗದ ಗುರುತುಗಳು

  ಕುತ್ತಿಗೆಯ ಹಿಂಭಾಗದ ಗುರುತುಗಳು

  ಈ ಭಾಗದಲ್ಲಿ ಗುರುತು ಇರುವ ವ್ಯಕ್ತಿಗಳು ಹಿಂದುಮುಂದು ನೋಡದೆ ನುಗ್ಗುವ ಮತ್ತು ತಕ್ಷಣವೇ ನಿರ್ಧಾರವನ್ನು ತೆಗೆದುಕೊಳ್ಳುವ ವ್ಯಕ್ತಿಗಳಾಗಿದ್ದಾರೆ. ಇದರಿಂದ ಈ ವ್ಯಕ್ತಿಗಳು ಅಥವಾ ಇವರ ಆಪ್ತರು ಮತ್ತು ಒಡನಾಟದಲ್ಲಿರುವವರು ಭಾರೀ ತೊಂದರೆಯನ್ನು ಎದುರಿಸುವಂತಾಗುತ್ತದೆ.

  ಕುತ್ತಿಗೆಯ ಮುಂಭಾಗದ ಗುರುತುಗಳು

  ಕುತ್ತಿಗೆಯ ಮುಂಭಾಗದ ಗುರುತುಗಳು

  ಕುತ್ತಿಗೆಗೆ ಸರ ಹಾಕಿದಾಗ ಪೆಂಡೆಂಟ್ ತಾಕುವ ಭಾಗದಲ್ಲಿರುವ ಗುರುತುಗಳು ಥೈರಾಯ್ಡ್ ಅಥವಾ ಹಾರ್ಮೋನುಗಳ ತೊಂದರೆಯ ಪರಿಣಾಮಗಳಾಗಿವೆ. ಇವು ವ್ಯಕ್ತಿತ್ವದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.

  ಹೊಟ್ಟೆಯ ಮೇಲಿನ ಗುರುತುಗಳು

  ಹೊಟ್ಟೆಯ ಮೇಲಿನ ಗುರುತುಗಳು

  ಈ ಗುರುತುಗಳೂ ವ್ಯಕ್ತಿತ್ವದ ಬಗ್ಗೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಆದರೆ ಈ ಗುರುತುಗಳು ಯಕೃತ್ ಅಥವಾ ಮಹಿಳೆಯರಲ್ಲಿ ಗರ್ಭಕೋಶದ ತೊಂದರೆಯ ಗುರುತುಗಳಾಗಿರಬಹುದು. ತಕ್ಷಣವೇ ವೈದ್ಯರಲ್ಲಿ ತಪಾಸಣೆಗೊಳಗಾಗುವುದು ಅಗತ್ಯ.

  ತೊಡೆಯ ಮೇಲಿನ ಗುರುತುಗಳು

  ತೊಡೆಯ ಮೇಲಿನ ಗುರುತುಗಳು

  ಈ ಭಾಗದಲ್ಲಿ ಗುರುತು ಇರುವ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿದ್ದು ಶ್ರಮಜೀವಿಗಳೂ ಆಗಿರುತ್ತಾರೆ. ಆದರೆ ಕೆಲವೊಮ್ಮೆ ಇವರು ಯೋಚಿಸಿದಂತೆ ಆಗದೇ ಹೋದರೆ ಇವರು ಭಾವನಾತ್ಮಕವಾಗಿ ಖಿನ್ನರಾಗುತ್ತಾರೆ.

  ಮೊಣಗಂಟಿನ ಹಿಂಭಾಗದ ಗುರುತುಗಳು

  ಮೊಣಗಂಟಿನ ಹಿಂಭಾಗದ ಗುರುತುಗಳು

  ಮೊಣಗಂಟಿನ ಹಿಂಭಾಗ ಅಂದರೆ ಮಡಚಿದಾಗ ಮರೆಯಾಗುವ ಭಾಗದಲ್ಲಿರುವ ಗುರುತುಗಳಿರುವ ವ್ಯಕ್ತಿಗಳ ಜೀವನದಲ್ಲಿ ತುಂಬಾ ಕಷ್ಟವಿದ್ದು ಸದಾ ಒತ್ತಡದಲ್ಲಿಯೇ ಇರುತ್ತಾರೆ. ಇವರು ಸಾಮಾನ್ಯವಾಗಿ ಸುಲಭವಾಗಿ ರೋಗಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಆರೋಗ್ಯದ ಕಾಳಜಿ ಇವರ ಪ್ರಾಮುಖ್ಯತೆಯಾಗಬೇಕು.

  ಕಣ್ಣಿನ ಕೆಳಭಾಗದ ಗುರುತುಗಳು

  ಕಣ್ಣಿನ ಕೆಳಭಾಗದ ಗುರುತುಗಳು

  ಈ ಗುರುತುಗಳು ಖಿನ್ನತೆಯ ಸ್ಪಷ್ಟ ಸಂಕೇತವಾಗಿದೆ. ಇವು ಆತ್ಮವಿಶ್ವಾಸದ ಕೊರತೆ ಮತ್ತು ಏಕಾಂಗಿಜೀವನವನ್ನು ಪ್ರಕಟಿಸುತ್ತವೆ. ಈ ವಕ್ತಿಗಳಿಗೆ ಮದುವೆಯ ಭಾಗ್ಯ ತುಂಬಾ ತಡವಾಗಿ ಆಗುತ್ತದೆ. ಇವರು ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದು, ಮನೆಯವರೊಂದಿಗೂ ಆಗಾಗ ಜಗಳ ಕಾಯುತ್ತಿರುತ್ತಾರೆ.

   

  English summary

  What Do Your Skin Patches Mean?

  Here, in this article, we are about to share the significance of such skin spots or patches, as it has a deep meaning to it and understanding the meaning of these patches is important. Skin patches are defined as dark spots, or spots that are bluish. Find out what exactly it means and analyse it with a person's personality!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more