ಈ ದೇಶಗಳ ಕಥೆ ಕೇಳಿದರೆ, ನಗಬೇಕೋ, ಅಳಬೇಕೋ ಅರ್ಥನೇ ಆಗಲ್ಲ!

By: Deepak
Subscribe to Boldsky

ನಮ್ಮ ದೇಶದಲ್ಲಿ ನಿರ್ಬಂಧ ಎಂಬುದಕ್ಕೆ ಒಂದು ಬಗೆಯ ಸರಿ ಎನ್ನುವ ಭಾವನೆ ಬರುವಂತಹ ಕಾನೂನುಗಳು ಇರುತ್ತವೆ. ಗಲಾಟೆ ಮಾಡಬಾರದು, ಹಲ್ಲೆ ಮಾಡಬಾರದು ಇತ್ಯಾದಿ ಇತ್ಯಾದಿ ಕಾನೂನು ಚೌಕಟ್ಟುಗಳು ಇರುವುದು ಸಹಜ. ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವನ್ನು ನಮಗೆ ನಮ್ಮ ಸಂವಿಧಾನ ಕೊಟ್ಟಿಲ್ಲ.  ವಿಚಿತ್ರ, ಹುಚ್ಚು ಹುಚ್ಚಾದ, ತಲೆಚಿಟ್ಟು ಹಿಡಿಸುವ ಕಾನೂನು!

ಆದರೆ ಲೈಂಗಿಕ ಕ್ರಿಯೆ ನಡೆಸಬೇಡಿ, ಅದರಲ್ಲೂ ಲಂಡನ್‌ನಲ್ಲಿ ಪಾರ್ಕಿಂಗ್‌ನಲ್ಲಿ ನಿಲ್ಲಿಸಿರುವ ಬೈಕ್ ಮೇಲೆ ಲೈಂಗಿಕ ಕ್ರಿಯೆ ನಡೆಸಬಾರದು ಎಂಬ ಕಾನೂನು ಇದೆಯಂತೆ!, ಇನ್ನು ಜೀನ್ಸ್ ಧರಿಸಬೇಡಿ, ಮೂಗಿನಿಂದ ಸಿಂಬಳ ತೆಗೆಯಬೇಡಿ ಎಂಬ ಕಾನೂನುಗಳನ್ನು ಮಾಡಿದರೆ ನಗು ಬರುವುದಿಲ್ಲವೇ?. ಬನ್ನಿ ನಿಮಗೆ ಪ್ರಪಂಚದ ಕೆಲವೊಂದು ದೇಶಗಳಲ್ಲಿ ಬ್ಯಾನ್ ಆಗಿರುವ ವಿಚಿತ್ರ ಅಂಶಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಓದಿ ನಕ್ಕುಬಿಡಿ! 

ಮೋಟರ್ ಬೈಕ್ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ!

ಮೋಟರ್ ಬೈಕ್ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ!

ಲಂಡನ್‍ನಲ್ಲಿರುವ ಕೆಲವೊಂದು ವಿಚಿತ್ರ ಕಾನೂನಗಳ ಪೈಕಿ ಇದು ಸಹ ಒಂದು. ಪಾರ್ಕಿಂಗ್ ಮಾಡಿರುವ ಬೈಕ್ ಮೇಲೆ ಲೈಂಗಿಕ ಕ್ರಿಯೆ ನಡೆಸಿದರೆ ಅಪರಾಧವಂತೆ ಹಾಗು ಈ ಶಿಕ್ಷೆಗೆ ಜೈಲು ವಾಸ ಸಹ ವಿಧಿಸಲಾಗುವುದಂತೆ. ಪಾರ್ಕಿಂಗ್ ಮಾಡಿರುವ ಬೈಕ್ ಪಕ್ಕದಲ್ಲಿ ಈ ಕತೆ ನಡೆದರೆ ಏನು ಎಂಬುದಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.

ಮೋಟರ್ ಬೈಕ್ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ!

ಮೋಟರ್ ಬೈಕ್ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ!

ಅಲಬಮಾದಲ್ಲಿ ಎರಡು ಲೈಂಗಿಕ ಆಟಿಕೆಗಿಂತ ಹೆಚ್ಚು ಇರಿಸಿಕೊಳ್ಳುವಂತಿಲ್ಲ ಎಂಬ ಕಾನೂನು ಇದೆ. ಅಲ್ಲಾರೀ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ನಿಯಮದಿಂದ ನಮ್ಮ ದೇಶ ಒಂದು ಮಗು ದೇಶಕ್ಕೆ ನಗು ಎಂಬ ನೀತಿಗೆ ಬಂದಿದೆ. ಇದು ಯಾವುದುರೀ ಎರಡು ಸೆಕ್ಸ್ ಟಾಯ್, ಸಂತೋಷಕ್ಕೆ ಇಷ್ಟೇ ಸಾಕಾರ ನೀತಿ!. ಅದಿರಲೀ ಇಲ್ಲಿ ಎರಡಕ್ಕಿಂತ ಹೆಚ್ಚು ಸೆಕ್ಸ್ ಟಾಯ್ ಇರಿಸಿಕೊಂಡರೆ ಶಿಕ್ಷೆ ಖಚಿತ, ಎಚ್ಚರವಿರಲಿ.

ಸೈತಾನನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಾರದಂತೆ

ಸೈತಾನನ ಜೊತೆಗೆ ಲೈಂಗಿಕ ಕ್ರಿಯೆ ನಡೆಸಬಾರದಂತೆ

ಅಯ್ಯೋ ಈ ಕಾನೂನು ಬರೆದವನು ಸಿಕ್ಕರೆ ಕೇಳಬೇಕು. ಸೈತಾನ ನಮ್ಮ ಬಾಲಿವುಡ್ ಹೀರೋ ತರಹ ಇರುತ್ತಾನಾ? ಇಲ್ಲವೇ ಹಾಲಿವುಡ್ ವಿಲನ್ ತರ ಇರುತ್ತಾನಾ? ಎಂದು. ಅಂದಹಾಗೆ ಈ ಕಾನೂನು ಇರುವುದು ಬೇಕರ್ಸ್‌ಫೀಲ್ಡ್, ಕ್ಯಾಲಿಫೋರ್ನಿಯಾದಲ್ಲಿ. ಅಂದರೆ ಇಲ್ಲಿ ಸೈತಾನ ಎಂಬ ಸಮಾಜಘಾತುಕ ಶಕ್ತಿ ಇದ್ದಾನೆ ಎಂದರ್ಥವಾಯಿತು. ಕುತೂಹಲಕಾರಿ ವಿಚಾರ ಏನು ಗೊತ್ತೆ, ಒಂದು ವೇಳೆ ನೀವು ಲೈಂಗಿಕ ಕ್ರಿಯೆ ನಡೆಸಬೇಕು ಎಂದಲ್ಲಿ, ಕಾಂಡೋಮ್ ಧರಿಸಿ ಮಾಡಬಹುದು ಎಂದು ಇಲ್ಲಿನ ಕಾನೂನು ಹೇಳುತ್ತದೆ.

ಮುಖ ಮೈಥುನವನ್ನು ಇಲ್ಲಿ ಮಾಡುವಂತಿಲ್ಲ...

ಮುಖ ಮೈಥುನವನ್ನು ಇಲ್ಲಿ ಮಾಡುವಂತಿಲ್ಲ...

ಇಂಡಿಯಾನಾ ಎಂಬ ಪ್ರದೇಶಕ್ಕೆ ಹೋದಾಗ ಹುಷಾರಾಗಿರಿ. ಇಲ್ಲಿ ಮುಖ ಮೈಥುನ ಕಾನೂನು ಸಮ್ಮತವಲ್ಲ. ಒಂದು ವೇಳೆ ಸಿಕ್ಕಿಹಾಕಿಕೊಂಡಲ್ಲಿ ನೇರವಾಗಿ ಬೆಡ್‌ರೂಮಿನಿಂದ ಜೈಲಿಗೆ ಹೋಗಬೇಕಾಗುತ್ತದೆ.

ಮಹಿಳೆಯರು ನಗ್ನರಾಗುವಂತಿಲ್ಲ!

ಮಹಿಳೆಯರು ನಗ್ನರಾಗುವಂತಿಲ್ಲ!

ಚೀನಾದಲ್ಲಿ ಕಾನೂನು ಪ್ರಕಾರವಾಗಿ ಮಹಿಳೆಯರು ಹೋಟೆಲ್ ರೂಮಿನಲ್ಲಿ ನಗ್ನರಾಗುವಂತಿಲ್ಲವಂತೆ. ಇದು ಹೋಟೆಲನ್ನು ಹಾಳು ಮಾಡುವ ಅಂಶವಂತೆ. ಅವರು ಕೇವಲ ಬಾತ್‌ರೂಮಿನಲ್ಲಿ ಮಾತ್ರ ನಗ್ನರಾಗಬಹುದು ಎಂಬ ಕಾನೂನು ಇಲ್ಲಿದೆ. ದೇವರೇ ಕಾಪಾಡಬೇಕು ಅಷ್ಟೇ.

ಒಂದು ನಿಮಿಷಕ್ಕಿಂತ ಹೆಚ್ಚು ಅವಧಿಗೆ ಚುಂಬಿಸುವಂತಿಲ್ಲ!

ಒಂದು ನಿಮಿಷಕ್ಕಿಂತ ಹೆಚ್ಚು ಅವಧಿಗೆ ಚುಂಬಿಸುವಂತಿಲ್ಲ!

ಓಹ್ ಮೈ ಮನ್ಮಥ! ಏನಪ್ಪಾ ನಿನ್ನ ಲೀಲೆ! ಹಲೆಥೋರ್ಪ್, ಮೇರಿಲ್ಯಾಂಡ್ ಎನ್ನುವ ಪ್ರದೇಶದಲ್ಲಿ ಈ ಕಾನೂನು ಇದೆಯಂತೆ. ಅಂದಹಾಗೆ ಮುತ್ತು ಕೊಡುವ, ಮುದ್ದಾಡುವ ಜೋಡಿಯ ಪಕ್ಕದಲ್ಲಿ ಗಡಿಯಾರ ಹಿಡಿದುಕೊಂಡು ಯಾರು ನಿಂತಿರುತ್ತಾರೆ ಎಂಬುದನ್ನು ಆ ಚಿತ್ರಗುಪ್ತ ಮತ್ತು ವಿಚಿತ್ರಗುಪ್ತರೇ ಹೇಳಬೇಕು. ಶಿವ ಶಿವ ಕಾನೂನಿಗೆ ಕಣ್ಣಿಲ್ಲ ಎಂಬುದು ಇವತ್ತು ನನಗೆ ಅರ್ಥವಾಯಿತು. ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು!

 
English summary

Weird Laws Banned Around The World

These are some of the random laws that can get a person into trouble. Check them out, as it is something that is really weird. Some of the weirdest laws include not making love on a parked bike on the streets of London! Check out some of these laws, as they can simply amaze you, or probably shock you.
Subscribe Newsletter