For Quick Alerts
ALLOW NOTIFICATIONS  
For Daily Alerts

ಹರಳು: ಸ್ವಲ್ಪ ಎಡವಟ್ಟಾದರೂ, ಕಷ್ಟದ ಮೇಲೆ ಕಷ್ಟ ಬರಬಹುದು!

By Arshad
|

ಜ್ಯೋತಿಷಿಗಳು ವ್ಯಕ್ತಿಯ ಹುಟ್ಟಿದ ದಿನಾಂಕ, ಗ್ರಹಗತಿಗಳನ್ನು ಪರಿಗಣಿಸಿ ಕೆಲವು ಹರಳು ಮತ್ತು ಲೋಹಗಳನ್ನು ತೊಡಲು ಸಲಹೆ ನೀಡುತ್ತಾರೆ. ಇವುಗಳನ್ನು ಧರಿಸುವ ಮೂಲಕ ಆರೋಗ್ಯ ಮತ್ತು ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ಈ ಹರಳುಗಳನ್ನು ಧರಿಸುವ ಮೂಲಕ ಗ್ರಹಗಳ ಮೂಲಕ ಎದುರಾಗುವ ಕೆಲವು ಪರಿಣಾಮಗಳನ್ನು ಕಡಿಮೆಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಎದುರಾಗಬಹುದಾದ ದುರಾದೃಷ್ಟವನ್ನು ತಪ್ಪಿಸಲು ನೆರವಾಗುತ್ತದೆ. ಆದರೆ ಪ್ರತಿ ವ್ಯಕ್ತಿಯೂ ಧರಿಸಬೇಕಾದ ಹರಳುಗಳು ಬೇರೆಬೇರೆಯಾಗಿರುತ್ತವೆ.

ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

ಒಂದು ವೇಳೆ ಈ ವ್ಯಕ್ತಿ ಧರಿಸಲೇಬಾರದ ಹರಳನ್ನು ಧರಿಸಿದರೆ ಅಥವಾ ಒಂದಕ್ಕಿಂತಹ ಹೆಚ್ಚಿನ ಹರಳುಗಳಿರುವಲ್ಲಿ ಯಾವುದಾದರೊಂದು ಹರಳು ವ್ಯಕ್ತಿಗೆ ಸೂಕ್ತವಾಗದೇ ಇದ್ದರೆ ಇದು ದುರಾದೃಷ್ಟವನ್ನು ಆಹ್ವಾನಿಸಿದಂತಾಗುತ್ತದೆ. ಬನ್ನಿ, ನೀವು ಯಾವ ಹರಳುಗಳನ್ನು ಧರಿಸಬಾರದು ಎಂಬುದನ್ನು ನೋಡೋಣ...

ಇಂದ್ರನೀಲಮಣಿ (Blue Sapphire)

ಇಂದ್ರನೀಲಮಣಿ (Blue Sapphire)

ಈ ಹರಳು ಅಥವಾ ಕಲ್ಲನ್ನು ನೀಲಮಣಿ ಎಂದೂ ಕರೆಯುತ್ತಾರೆ. ಜ್ಯೋಷಿಷ್ಯಾಸ್ತ್ರದಲ್ಲಿ ಈ ಹರಳನ್ನು ಅತ್ಯಂತ ಪ್ರಬಲವೆಂದು ಭಾವಿಸಲಾಗುತ್ತದೆ. ಶನಿದೇವ ಈ ಮಣಿಯ ಅಧಿಪತಿ ಎಂದು ಭಾವಿಸಲಾಗಿದೆ. ಈ ಹರಳಿನ ವಿರೋಧಿಗ್ರಹಗಳೆಂದರೆ ಸೂರ್ಯ, ಚಂದ್ರ ಹಾಗೂ ಮಂಗಳ.

ಇಂದ್ರನೀಲಮಣಿಯೊಂದಿಗೆ ಹೊಂದಲಾರದ ಹರಳುಗಳು

ಇಂದ್ರನೀಲಮಣಿಯೊಂದಿಗೆ ಹೊಂದಲಾರದ ಹರಳುಗಳು

ಇಂದ್ರನೀಲಮಣಿಯನ್ನು ಮಾಣಿಕ್ಯ (ರೂಬಿ), ಮುತ್ತು ಮತ್ತು ಕೆಂಪುಹವಳದ ಕಲ್ಲುಗಳೊಂದಿಗೆ ಸರ್ವಥಾ ಹೊಂದಿಸಬಾರದು. ಇಂದ್ರನೀಲಮಣಿಯನ್ನು ಏಕ ರೂಪದಲ್ಲಿಯೇ ಧರಿಸುವ ಮೂಲಕ ಗರಿಷ್ಠ ಪ್ರಯೋಜನವನ್ನು ಪ್ರಯೋಜನಪಡೆಯಬಹುದು.

ಜಾತಕದಲ್ಲಿ ಗ್ರಹದ ಪ್ರಭಾವಿದ್ದರೆ ಯಾವ ಹರಳು ಒಳ್ಳೆಯದು?

ಮಾಣಿಕ್ಯ ಅಥವಾ ಕೆಂಪುಮಾಣಿಕ್ಯ (ರೂಬಿ)

ಮಾಣಿಕ್ಯ ಅಥವಾ ಕೆಂಪುಮಾಣಿಕ್ಯ (ರೂಬಿ)

ಈ ಹರಳಿನ ಅಧಿಪತಿ ಸೂರ್ಯನಾದ ಕಾರಣ ಈ ಹರಳನ್ನು ಸೂರ್ಯನ ವಿರೋಧಿಗಳಾದ ಶನಿ ಮತ್ತು ಮಂಗಳ ಅಧಿಪತಿಗಳಾಗಿರುವ ಹರಳುಗಳೊಂದಿಗೆ ಸರ್ವಥಾ ಹೊಂದಿಸಬಾರದು. ಈ ಸಂಯೋಜನೆಯಿಂದ ಅತ್ಯಧಿಕವಾದ ದುರಾದೃಷ್ಟ ಆವರಿಸುತ್ತದೆ.

ಮಾಣಿಕ್ಯದೊಂದಿಗೆ ಯಾವ ಹರಳುಗಳು ಸಲ್ಲವು?

ಮಾಣಿಕ್ಯದೊಂದಿಗೆ ಯಾವ ಹರಳುಗಳು ಸಲ್ಲವು?

ಮಾಣಿಕ್ಯದೊಂದಿಗೆ ವಜ್ರ ಅಥವಾ ಇಂದ್ರನೀಲಮಣಿಯನ್ನು (ಬ್ಲೂ ಸಫೈರ್) ಎಂದಿಗೂ ಸಂಯೋಜಿಸಬಾರದು. ಈ ಸಂಯೋಜನೆಯನ್ನು ಧರಿಸಿದ ವ್ಯಕ್ತಿಯ ಜೀವನದಲ್ಲಿ ಭಾರೀ ಗಂಡಾಂತರ ಎದುರಾಗುತ್ತದೆ ಅಲ್ಲದೇ ಖಿನ್ನತೆ, ದುಗುಡಗಳು ನೆಮ್ಮದಿಯನ್ನು ಕಸಿದುಬಿಡುತ್ತದೆ.

ಪಚ್ಚೆಹರಳು (ಎಮರಾಲ್ಡ್)

ಪಚ್ಚೆಹರಳು (ಎಮರಾಲ್ಡ್)

ಈ ಹರಳಿನ ಅಧಿಪತಿ ಬುಧಗ್ರಹವಾಗಿದೆ. ಈ ಹರಳು ಪ್ರೀತಿ, ಮಮತೆ, ಅನುರಾಗ ಹಾಗೂ ವಾತ್ಸಲ್ಯಗಳಾಗಿವೆ. ಈ ಗ್ರಹಕ್ಕೆ ಪ್ರಬಲ ಶತ್ರುಗಳಿಲ್ಲದಿದ್ದರೂ ಚಂದ್ರ ಮತ್ತು ಮಂಗಳ ಗ್ರಹಗಳು ಕೊಂಚಮಟ್ಟಿಗೆ ವಿರೋಧವನ್ನು ಹೊಂದಿವೆ.

ಪಚ್ಚೆಹರಳಿನೊಂದಿಗೆ ಏನನ್ನು ಹೊಂದಿಸಬಾರದು?

ಪಚ್ಚೆಹರಳಿನೊಂದಿಗೆ ಏನನ್ನು ಹೊಂದಿಸಬಾರದು?

ಈ ಹರಳನ್ನು ಎಂದಿಗೂ ಕೆಂಪುಮಾಣಿಕ್ಯ ಅಥವಾ ಮುತ್ತುಗಳೊಂದಿಗೆ ಹೊಂದಿಸಬಾರದು. ಏಕೆಂದರೆ ಈ ಸಂಯೋಜನೆಯನ್ನು ಧರಿಸುವ ವ್ಯಕ್ತಿಯ ಜೀವನದಲ್ಲಿ ಭಾರೀ ದುರಾದೃಷ್ಟ ಎದುರಾಗುತ್ತದೆ. ಇದರೊಂದಿಗೆ ಅನಾರೋಗ್ಯ ಇಡಿಯ ಜೀವಮಾನ ಕಾಡುತ್ತದೆ.

ಮುತ್ತು

ಮುತ್ತು

ಮುತ್ತನ್ನು ಧರಿಸಿದ ವ್ಯಕ್ತಿಯ ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುತ್ತದೆ. ಅಲ್ಲದೇ ಈ ಹರಳಿನಲ್ಲಿ ಶಮನಕಾರಿ ಗುಣವಿದೆ. ಈ ಹರಳಿನ ಅಧಿಪತಿ ಚಂದ್ರನಾಗಿರುವ ಕಾರಣ ಈ ಹರಳನ್ನು ಧರಿಸಿದವರು ಪ್ರಶಾಂತತೆಯನ್ನು ಅನುಭವಿಸುತ್ತಾರೆ.

ಮುತ್ತುಗಳೊಂದಿಗೆ ಏನನ್ನು ಧರಿಸಬಾರದು?

ಮುತ್ತುಗಳೊಂದಿಗೆ ಏನನ್ನು ಧರಿಸಬಾರದು?

ಚಂದ್ರನ ವಿರೋಧಿಗಳೆಂದರೆ ರಾಹು ಮತ್ತು ಕೇತು. ನವರತ್ನಗಳಲ್ಲಿರುವ ಎರಡು ಹರಳುಗಳಾದ ಗೋಮೇಧಿಕ (Hessonite) ಹಾಗೂ ವೈಢೂರ್ಯ (Cat's Eye) ಗಳ ಅಧಿಪತಿಗಳು ರಾಹು ಮತ್ತು ಕೇತುಗಳಾಗಿದ್ದು ಇವನ್ನು ಎಂದಿಗೂ ಮುತ್ತುಗಳೊಂದಿಗೆ ಧರಿಸಬಾರದು.

ಕೆಂಪು ಹವಳ

ಕೆಂಪು ಹವಳ

ಮಾಂಗಳಿಕ ದೋಶವಿರುವ ವ್ಯಕ್ತಿಗಳು ಈ ಹರಳುಗಳನ್ನು ಧರಿಸುವುದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಮಂಗಳ ಗ್ರಹ ಈ ಹರಳಿನ ಅಧಿಪತಿಯಾಗಿದ್ದು ಯಾವ ವ್ಯಕ್ತಿಗಳ ಗ್ರಹಗತಿಯಲ್ಲಿ ಮಂಗಳ ಗ್ರಹದ ದೋಷ ಅಥವಾ ಕಡಿಮೆ ಪ್ರಭಾವ ಇರುತ್ತದೆಯೋ ಅವರಿಗೆ ಈ ಹರಳು ಶ್ರೇಯಸ್ಕರವಾಗಿದೆ.

ಕೆಂಪು ಹವಳದೊಂದಿಗೆ ಏನನ್ನು ಸಂಯೋಜಿಸಬಾರದು?

ಕೆಂಪು ಹವಳದೊಂದಿಗೆ ಏನನ್ನು ಸಂಯೋಜಿಸಬಾರದು?

ಮಂಗಳ ಗ್ರಹದ ವಿರೋಧಿಗಳೆಂದರೆ ಬುಧ, ಶುಕ್ರ, ಶನಿ ಹಾಗೂ ರಾಹು-ಕೇತುಗಳಾಗಿವೆ. ಈ ಗ್ರಹಗಳು ಪ್ರತಿನಿಧಿಸುವ ಪಚ್ಚೆಹರಳು, ವಜ್ರ, ಇಂದ್ರನೀಲಮಣಿ, ವೈಢೂರ್ಯ ಹಾಗೂ ಗೋಮೇಧಿಕ ಹರಳುಗಳೊಂದಿಗೆ ಕೆಂಪುಹವಳವನ್ನು ಸಂಯೋಜಿಸಲೇಬಾರದು.

ಹಳದಿ ನೀಲಮಣಿ

ಹಳದಿ ನೀಲಮಣಿ

ವೈದಿಕ ಜ್ಯೊತಿಷ್ಯಾಸ್ತ್ರದ ಪ್ರಕಾರ ಈ ಮಣಿಯನ್ನು ಧರಿಸುವುದರಿಂದ ಆರ್ಥಿಕ ತೊಂದರೆಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಅಲ್ಲದೇ ಇದನ್ನು ಧರಿಸುವವರಿಗೆ ಶಾಂತಿ ಮತ್ತು ಸಮೃದ್ದಿ ಲಭಿಸುತ್ತದೆ. ಗುರು ಈ ಹರಳಿನ ಅಧಿಪತಿಯಾಗಿದ್ದಾನೆ.

ಹಳದಿ ನೀಲಮಣಿಯೊಂದಿಗೆ ಏನನ್ನು ಸಂಯೋಜಿಸಬಾರದು?

ಹಳದಿ ನೀಲಮಣಿಯೊಂದಿಗೆ ಏನನ್ನು ಸಂಯೋಜಿಸಬಾರದು?

ಗುರುವಿನ ವಿರೋಧಿಗಳೆಂದರೆ ಬುಧ, ಮಂಗಳ ಹಾಗೂ ಶನಿ. ಈ ಗ್ರಹಗಳು ಪ್ರತಿನಿಧಿಸುವ ಪಚ್ಚೆಹರಳು, ವಜ್ರ ಹಾಗೂ ನೀಲ ನೀಲಮಣಿಗಳನ್ನು ಹಳದಿ ನೀಲಮಣಿಯೊಂದಿಗೆ ಸಂಯೋಜಿಸಬಾರದು.

ವಜ್ರ

ವಜ್ರ

ವಿಶ್ವದ ಅತಿ ದುಬಾರಿ ಹಾಗೂ ಹೆಚ್ಚು ಜನರು ಇಷ್ಟಪಡುವ ಹರಳಾಗಿರುವುದರಲ್ಲಿ ಎರಡು ಮಾತಿಲ್ಲ. ಈ ಹರಳಿನ ಅಧಿಪತಿ ಬುಧಗ್ರಹವಾಗಿದ್ದು ಇದರ ವಿರೋಧಿಗ್ರಹಗಳೆಂದರೆ ಸೂರ್ಯ, ಚಂದ್ರ ಹಾಗೂ ಗುರು ಗ್ರಹಗಳಾಗಿದ್ದಾರೆ.

ವಜ್ರದೊಂದಿಗೆ ಏನನ್ನು ಧರಿಸಬಾರದು?

ವಜ್ರದೊಂದಿಗೆ ಏನನ್ನು ಧರಿಸಬಾರದು?

ವಜ್ರದೊಂದಿಗೆ ಕೆಂಪುಮಾಣಿಕ್ಯ, ಮುತ್ತು ಹಾಗೂ ಹಳದಿ ನೀಲಮಣಿಗಳನ್ನು ಸಂಯೋಜಿಸಬಾರದು. ಒಂದು ವೇಳೆ ಈ ಸಂಯೋಜನೆಯನ್ನು ಧರಿಸಿದರೆ ನೂರಾರು ಉಪದ್ರವಗಳು ಆವರಿಸುತ್ತವೆ ಅಲ್ಲದೇ ಅತೀವವಾದ ಅನಾರೋಗ್ಯವನ್ನೂ ಬಾಧಿಸುತ್ತದೆ.

ಬೆಲೆ ಬಾಳುವ 'ವಜ್ರ' ಅದೃಷ್ಟವೇ ಅಥವಾ ದುರಾದೃಷ್ಟವೇ?

ಗೋಮೇಧಿಕ (Hessonite)

ಗೋಮೇಧಿಕ (Hessonite)

ಈ ಹರಳಿನ ಅಧಿಪತಿ ಪ್ರಬಲನಾದ ರಾಹುವಾಗಿದ್ದಾನೆ. ರಾಹು ಪ್ರಬಲನಾಗಿರುವ ವೇಳೆಯಲ್ಲಿ (ಅಂದರೆ ರಾಹುಕಾಲದಲ್ಲಿ) ಈ ಹರಳನ್ನು ಧರಿಸಿದವರಿಗೆ ಅತಿ ಹೆಚ್ಚಿನ ಪ್ರಯೋಜನವಿದೆ. ರಾಹುವಿನ ವಿರೋಧಿಗಳೆಂದರೆ ಸೂರ್ಯ ಮತ್ತು ಚಂದ್ರರಾಗಿದ್ದಾರೆ.

ಜನ್ಮ ನಕ್ಷತ್ರಕ್ಕೆ ತಕ್ಕಂತೆ 'ಬರ್ತ್ ಸ್ಟೋನ್' ಧರಿಸಿ-ಕಷ್ಟ ದೂರವಾಗುತ್ತದೆ

ಗೋಮೇಧಿಕದೊಂದಿಗೆ ಏನನ್ನು ಧರಿಸಬಾರದು?

ಗೋಮೇಧಿಕದೊಂದಿಗೆ ಏನನ್ನು ಧರಿಸಬಾರದು?

ಸೂರ್ಯ ಮತ್ತು ಚಂದ್ರನನ್ನು ಪ್ರತಿನಿಧಿಸುವ ಹರಳುಗಳೆಂದರೆ ಕೆಂಪುಮಾಣಿಕ್ಯ ಹಾಗೂ ಮುತ್ತು. ಈ ಸಂಯೋಜನೆಯನ್ನು ಧರಿಸಿರುವವರ ಮೇಲೆ ರಾಹುವಿನ ಪ್ರಭಾವ ವ್ಯತಿರಿಕ್ತವಾಗಿದ್ದು ಈ ವ್ಯಕ್ತಿಗಳ ಮೇಲೆ ಕಪ್ಪು ಛಾಯೆಯೊಂದು ವ್ಯಾಪಿಸಿರುತ್ತದೆ. ಈ ವ್ಯಕ್ತಿಗಳು ಮುಟ್ಟಿದ್ದೆಲ್ಲಾ ಮಣ್ಣು ಎಂಬಂತಿರುತ್ತದೆ.

English summary

Wearing The Wrong Gemstones Can Land You In Trouble

Gemstones are believed to have great healing properties and they are often recommended by the astrologers to be worn to reduce the malefic affects of certain planets and to increase luck. But Wearing a combination of gemstones can only land you in more trouble. Check out the list of gemstones that should not be worn this way.
X
Desktop Bottom Promotion