Latest Updates
-
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಬೆಲೆ ಬಾಳುವ 'ವಜ್ರ' ಅದೃಷ್ಟವೇ ಅಥವಾ ದುರಾದೃಷ್ಟವೇ?
ರಾಜರ ಕಾಲದಿಂದಲೂ ಭಾರತದಲ್ಲಿ ವಜ್ರಗಳಿಗೆ ತನ್ನದೇ ಆದ ಸ್ಥಾನವಿದೆ. ಅದರಲ್ಲೂ ಕೊಯಿನೂರು ವಜ್ರವೂ ವಜ್ರಗಳಲ್ಲಿ ರಾಜನೆಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕೋಹಿನೂರ್ ವಜ್ರವು ಹಲವಾರು ರಾಜರ ಕೈಗೆ ಹೋದ ಬಳಿಕ ಈಗ ಇಂಗ್ಲೆಂಡಿನ ಮಹಾರಾಣಿಯ ಕೀರಿಟವೇರಿ ಕುಳಿತುಕೊಂಡಿದೆ. ಆದರೆ ವಜ್ರವು ಅದೃಷ್ಟವನ್ನು ತರುತ್ತದೆ ಮತ್ತು ಅದೃಷ್ಟವನ್ನು ಕೆಡಿಸುತ್ತದೆ ಎನ್ನುವ ಮಾತಿದೆ. ಇದರಿಂದಾಗಿಯೇ ಕೋಹಿನೂರ್ ವಜ್ರವು ಹಲವಾರು ಸಾಮಾಜ್ಯಗಳನ್ನು ಧ್ವಂಸ ಮಾಡಿದೆ.

ಭೂಮಿ ಮೇಲೆ ಅತ್ಯಂತ ದುಬಾರಿ ಹರಳಾಗಿರುವ ವಜ್ರದ ಬಗ್ಗೆ ಹಲವಾರು ಕಥೆಗಳು ಇವೆ. ಇದು ದೇಶ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದೆ. ಆಭರಣಗಳಲ್ಲಿ ಪೋಣಿಸಿದರೆ ತನಗೆ ಬೇರೆ ಸ್ಪರ್ಧೆಯೇ ಇಲ್ಲವೆನ್ನುವ ವಜ್ರದಿಂದ ಕೆಲವರು ನಷ್ಟ ಅನುಭವಿಸುತ್ತಾರೆ ಮತ್ತು ಕೆಲವರು ಅಭಿವೃದ್ಧಿ ಕಾಣುತ್ತಾರೆ ಎನ್ನುವ ನಂಬಿಕೆಯಿದೆ. ವಜ್ರ ಪ್ರತಿಯೊಬ್ಬರು ಹೊಂದಿಕೊಳ್ಳುತ್ತದೆಯಾ? ವಜ್ರದ ಬಗ್ಗೆ ಕೆಲವೊಂದು ಮಹತ್ವದ ಅಂಶಗಳು ಈ ಲೇಖನದಲ್ಲಿ ನೀಡಲಾಗಿದೆ. ಅದನ್ನು ತಿಳಿದುಕೊಳ್ಳುವ.
ವಜ್ರದ ಬಗ್ಗೆ ಇರುವ ನಂಬಿಕೆ
ಹಿಂದೆ ವಜ್ರವನ್ನು ಸಾಮಾನ್ಯವಾಗಿ ನಿಶ್ಚಯ ಮತ್ತು ಮದುವೆಯ ಉಂಗುರಗಳಲ್ಲಿ ಬಳಸಲಾಗುತ್ತಿತ್ತು. ಇದು ಸಂಗಾತಿಗಳ ಮಧ್ಯೆ ಸಂಪರ್ಕವನ್ನು ಸಾಧಿಸುತ್ತದೆ ಎಂದು ನಂಬಲಾಗಿದೆ. ಪುರುಷರಲ್ಲಿ ಧೈರ್ಯ ಮತ್ತು ಮಹಿಳೆಯರಲ್ಲಿ ಗೌರವವನ್ನು ಉಂಟು ಮಾಡುತ್ತದೆ. ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?
ದುರಾದೃಷ್ಟವೇ?
ವಜ್ರವು ದುರಾದೃಷ್ಟವನ್ನು ಉಂಟು ಮಾಡಲಿದೆ ಎಂದು ಹಿಂದಿನಿಂದಲೂ ನಂಬಿಕೊಂಡು ಬರಲಾಗಿದೆ. ವಜ್ರವನ್ನು ಧರಿಸುವುದರಿಂದ ವ್ಯಾಪಾರದಲ್ಲಿ ನಷ್ಟವಾಗಬಹುದು, ಅಪಘಾತವಾಗಬಹುದು ಅಥವಾ ಸಾವು ಸಂಭವಿಸಬಹುದು.
ಪ್ರತಿಫಲಿಸುವ ಹರಳನ್ನು ದೂರವಿಡಬೇಕೇ?
ವಜ್ರವನ್ನು ತುಂಬಾ ಶಕ್ತಿಶಾಲಿ ಹರಳೆಂದು ಪರಿಗಣಿಸಲಾಗಿದೆ. ಕನ್ಯಾ ರಾಶಿ ಮತ್ತು ತುಲಾ ರಾಶಿಯಲ್ಲಿ ಹುಟ್ಟಿರುವಂತವರು ವಜ್ರವನ್ನು ಧರಿಸಬಹುದು. ಅವರಿಗೆ ಇದರಿಂದ ಅದೃಷ್ಟ ಮತ್ತು ಸಮೃದ್ಧಿಯಾಗುತ್ತದೆ.
ನೀವು ವಜ್ರ ಧರಿಸಬೇಕೆಂದು ಚಿಂತಿಸುತ್ತಿದ್ದೀರಾ?
ವಜ್ರವು ನಿಮ್ಮ ರಾಶಿಗೆ ಹೊಂದಿಕೊಂಡರೆ ಆಗ ನಿಮಗೆ ಒಂದು ವಾರದೊಳಗೆ ಜೀವನದಲ್ಲಿ ಒಳ್ಳೆಯ ಹಾಗೂ ಧನಾತ್ಮಕ ಬದಲಾವಣೆ ಕಂಡುಬರುವುದು. ನಿಮಗೆ ಹೊಂದಿಕೊಳ್ಳದೆ ಇದ್ದರೆ ಆಗ ನಿಮಗೆ ಕೆಟ್ಟದಾಗುವುದು. ನೀವು ವಜ್ರವನ್ನು ಧರಿಸಬೇಕೇ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಈ ಹರಳು ನಿಮ್ಮ ಜೀವನವನ್ನು ಪರೀಕ್ಷಿಸಲಿದೆ.
ಇದರಲ್ಲಿ ಶಮನಕಾರಿ ಗುಣಗಳಿವೆಯಾ?
ಸ್ವಭಾವದಲ್ಲಿ ತುಂಬಾ ಬಲವಾಗಿರುವ ವಜ್ರವು ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡಲಿದೆ. ವಜ್ರವನ್ನು ಧರಿಸುವುದರಿಂದ ಪುರುಷರು ಮತ್ತು ಮಹಿಳೆಯರಲ್ಲಿ ಕಾಣಿಸುವಂತಹ ಫಲವತ್ತತೆ ಸಮಸ್ಯೆಯು ನಿವಾರಣೆಯಾಗುವುದು.
ಯಾವ ವಜ್ರ ಧರಿಸಬೇಕು?
ವಜ್ರದಲ್ಲಿ ಹಲವಾರು ಆಯ್ಕೆಗಳು ಇವೆಯಾದರೂ ಪಾರದರ್ಶಕವಾಗಿರುವ ವಜ್ರವನ್ನು ಧರಿಸಬೇಕು. ಇದು ತುಂಡಾಗಿರಬಾರದು ಅಥವಾ ಗೆರೆ ಬಿದ್ದಿರಬಾರದು.
ವಜ್ರ ಖರೀದಿಸಲು ಶುಭ ಸಮಯ
ಶುಕ್ಲ ಪಕ್ಷದಲ್ಲಿ ಶುಕ್ರವಾರದಂದು ವಜ್ರವನ್ನು ಖರೀದಿಸಿದರೆ ತುಂಬಾ ಒಳ್ಳೆಯದು. ಭರಣಿ, ಪೂರ್ವ, ಪಾಲ್ಗುಣಿ ಮತ್ತು ಪೂರ್ವಾಷಾಢ ನಕ್ಷತ್ರಗಳಲ್ಲಿ ವಜ್ರವನ್ನು ಖರೀದಿಸಬಹುದಾಗಿದೆ.



Click it and Unblock the Notifications



