For Quick Alerts
ALLOW NOTIFICATIONS  
For Daily Alerts

ವ್ಯಾಪಾರದಲ್ಲಿ ಲಾಭಗಳಿಸಲು ಈ ವಾಸ್ತು ಟಿಪ್ಸ್ ತಪ್ಪದೇ ಅನುಸರಿಸಿ

By Arshad
|

ಒಂದು ಹೊಸ ವಾಣಿಜ್ಯ ವಹಿವಾಟು ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಕೆಂದಿದ್ದರೆ ಇದಕ್ಕೆ ಸೂಕ್ತವಾದ ಮುಹೂರ್ತವನ್ನು ಪರಿಗಣಿಸಿಯೇ ನಾವೆಲ್ಲಾ ಮುಂದಡಿ ಇಡುತ್ತೇವೆ. ಆದರೆ ವ್ಯಾಪಾರ ಯಶಸ್ವಿಯಾಗಲು ಕೇವಲ ಮುಹೂರ್ತದ ಸಮಯ ನೋಡಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ವ್ಯಾಪಾರ ಕುದುರಲು ಹಾಗೂ ಅದೃಷ್ಟ ಖುಲಾಯಿಸಲು ಇನ್ನೂ ಕೆಲವು ವಿಷಯಗಳನ್ನು ಪರಿಗಣಿಸಬೇಕಾಗುತ್ತದೆ.

ಮನೆಯ 'ಪ್ರಧಾನ ಬಾಗಿಲ' ವಾಸ್ತು ಟಿಪ್ಸ್- ಅದೃಷ್ಟವೇ ಬದಲಾಗಬಹುದು!

ಪ್ರತಿ ವ್ಯಾಪಾರ ಅಥವಾ ಕೆಲಸದ ಸ್ಥಳಗಳಲ್ಲಿ ವಾಸ್ತುವನ್ನು ಅನುಸರಿಸುವುದು ಅಗತ್ಯವಾಗಿದ್ದು ಇವು ಧನಾತ್ಮಕ ಪರಿಣಾಮ ಬೀರುವ ಮೂಲಕ ವ್ಯಾಪಾರವನ್ನು ವೃದ್ಧಿಸುತ್ತವೆ. ಬನ್ನಿ, ಈ ಸುಲಭ ಕ್ರಮಗಳನ್ನು ಅನುಸರಿಸುವ ಮೂಲಕ ವಾಸ್ತುವನ್ನು ಉತ್ತಮಗೊಳಿಸುವುದು ಹೇಗೆ ಎಂಬುದನ್ನು ನೋಡೋಣ....

ತಡೆಗಳನ್ನು ನಿವಾರಿಸಿ

ತಡೆಗಳನ್ನು ನಿವಾರಿಸಿ

ನಿಮ್ಮ ವ್ಯಾಪಾರದ ಅಥವಾ ಕೆಲಸದ ಸ್ಥಳದ ಪ್ರವೇಶಸ್ಥಾನದಲ್ಲಿ ಯಾವುದೇ ತಡೆ ಇರದಂತೆ ನೋಡಿಕೊಳ್ಳಿ. ಬಾಗಿಲಿನ ಎದುರು ಮರ, ವಿದ್ಯುತ್ ಕಂಭ, ಮರದ ಏಣಿ ಮೊದಲಾದವು ಏನೇ ಇದ್ದರೂ ನಿಮ್ಮ ವ್ಯಾಪಾರಸ್ಥಳದೊಳಗೆ ಧನಾತ್ಮಕ ಶಕ್ತಿ ಪ್ರವೇಶವಾಗುವುದನ್ನು ತಡೆಯುತ್ತದೆ. ಇದು ವ್ಯಾಪಾರದಲ್ಲಿ ನಷ್ಟವನ್ನುಂಟು ಮಾಡಬಹುದು.

ಪೀಠೋಪಕರಣಗಳ ಸ್ಥಾನ

ಪೀಠೋಪಕರಣಗಳ ಸ್ಥಾನ

ವ್ಯಾಪಾರಕ್ಕೆ ಅಗತ್ಯವಾದ ಸೋಫಾ, ಕುರ್ಚಿ, ಮೇಜು, ಕಪಾಟು, ಪ್ರದರ್ಶನ ಕಪಾಟು, ಡ್ರೆಸ್ಸಿಂಗ್ ಟೇಬಲ್ ಇತ್ಯಾದಿಗಳೆಲ್ಲಾ ನೈಋತ್ಯ ದಿಕ್ಕಿಗೆ ಮುಖಮಾಡುವಂತೆ ಇರಿಸಬೇಕು. ಇದರಿಂದ ಅತ್ಯಧಿಕ ಪ್ರಮಾಣದ ಧನಾತ್ಮಕ ಶಕ್ತಿ ಈ ಸ್ಥಳದಲ್ಲಿ ಆಗಮಿಸಲು ಸಾಧ್ಯವಾಗುತ್ತದೆ.

ಹೆಚ್ಚುವರಿ ವಸ್ತುಗಳು

ಹೆಚ್ಚುವರಿ ವಸ್ತುಗಳು

ಕಛೇರಿ ಅಥವಾ ಮುಖ್ಯ ಸ್ಥಳದಲ್ಲಿ ಅಗತ್ಯವಿದ್ದಷ್ಟು ಮಾತ್ರವೇ ದಾಸ್ತಾನುಗಳನ್ನಿರಿಸಿ ಉಳಿದವನ್ನು ಗೋದಾಮಿನಲ್ಲಿ ನೈಋತ್ಯ ದಿಕ್ಕಿಗೆ ಮುಖಮಾಡುವಂತೆ ಇರಿಸಬೇಕು. ಸಾಮಾನ್ಯವಾಗಿ ವ್ಯಾಪಾರ ಸ್ಥಳದಲ್ಲಿ ಗಲ್ಲಾ ಪೆಟ್ಟಿಗೆಯ ಬಳಿ ಎಲ್ಲರೂ ದೇವರ ಪಟ ಅಥವಾ ಪುಟ್ಟ ವಿಗ್ರಹವನ್ನು ಇರಿಸಿ ಪೂಜೆ ಸಲ್ಲಿಸುತ್ತಾರೆ. ಈ ಪಟ ಅಥವಾ ವಿಗ್ರಹಗಳು ಉತ್ತರ ಅಥವಾ ಪೂರ್ವಾಭಿಮುಖವಾಗಿರುವಂತೆ ನೋಡಿಕೊಳ್ಳಬೇಕು.

ವ್ಯವಸ್ಥಾಪಕರ ಕುರ್ಚಿ

ವ್ಯವಸ್ಥಾಪಕರ ಕುರ್ಚಿ

ಈ ವಾಣಿಜ್ಯ ವಹಿಹಾಟುಗಳನ್ನು ನಿರ್ವಹಿಸುವ ವ್ಯವಸ್ಥಾಪಕರ ಕುರ್ಚಿ ಕೋಣೆಯಲ್ಲಿ ಪಶ್ಚಿಮಾಭಿಮುಖವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ವ್ಯಾಪಾರ ಸ್ಥಳದಲ್ಲಿ ಧನಾತ್ಮಕ ಶಕ್ತಿ ಹೆಚ್ಚುವ ಮೂಲಕ ವಹಿವಾಟು ಸಹಾ ಉತ್ತಮಗೊಳ್ಳುತ್ತದೆ ಎಂದು ನಂಬಲಾಗಿದೆ. ಒಂದು ವೇಳೆ ಹಣವನ್ನಿರಿಸಲು ತಿಜೋರಿಯನ್ನು ಬಳಸುವುದಾದರೆ ಈ ಸ್ಥಳದಲ್ಲಿ ಪ್ರಖರ ಬೆಳಕಿನ ಮೂಲವಿರಕೂಡದು. ಏಕೆಂದರೆ ಈ ಪ್ರಖರ ಬೆಳಕು ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಬಹುದು.

ಧನ ಸಂಪತ್ತು ಸದಾ ತುಂಬಿರಬೇಕೆಂದ್ರೆ, ಈ ಸಿಂಪಲ್ ಟಿಪ್ಸ್ ಅನುಸರಿಸಿ

ಕುಳಿತುಕೊಳ್ಳುವ ಭಂಗಿ

ಕುಳಿತುಕೊಳ್ಳುವ ಭಂಗಿ

ಗ್ರಾಹಕರೊಂದಿಗೆ ವ್ಯವಹರಿಸುವಾಗ ಪೂರ್ವಾಭಿಮುಖವಾಗಿ ಕುಳಿತು ಅಥವಾ ನಿಂತುಕೊಂಡಿದ್ದರೆ ವ್ಯಾಪಾರದಲ್ಲಿ ಹೆಚ್ಚಳ ಹಾಗೂ ಮನೆಗೆ ಆಗಮಿಸುವ ಸಮೃದ್ಧಿ ಹೆಚ್ಚುತ್ತದೆ ಹಾಗೂ ಮಾಲಿಕ ಹಾಗೂ ಉದ್ಯೋಗಿಗಳ ನಡುವಣ ಬಂಧನವೂ ಉತ್ತಮಗೊಳ್ಳುತ್ತದೆ.

ಪಶ್ಚಿಮಾಭಿಮುಖವಾಗಿ ಗ್ರಾಹಕರನ್ನು ಎದುರುಗೊಳ್ಳದಿರಿ

ಪಶ್ಚಿಮಾಭಿಮುಖವಾಗಿ ಗ್ರಾಹಕರನ್ನು ಎದುರುಗೊಳ್ಳದಿರಿ

ಪಶ್ಚಿಮಾಭಿಮುಖವಾಗಿ ಕುಳಿತು ಗ್ರಾಹಕರನ್ನು ಎದುರುಗೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಇದರಿಂದ ವ್ಯಾಪಾರಕ್ಕೂ ಧಕ್ಕೆಯಾಗುತ್ತದೆ ಹಾಗೂ ವ್ಯಾಪಾರಿಗೆ ಭಾರೀ ನಷ್ಟವುಂಟಾಗಬಹುದು.

ತಿಜೋರಿಯ ಸ್ಥಾನ

ತಿಜೋರಿಯ ಸ್ಥಾನ

ಒಂದು ವೇಳೆ ವ್ಯಾಪಾರ ಸ್ಥಳದಲ್ಲಿ ತಿಜೋರಿ ಇದ್ದರೆ ಇದು ಪಶ್ಚಿಮ ಅಥವಾ ದಕ್ಷಿಣಾಭಿಮುಖವಾಗಿರುವಂತೆ ನೋಡಿಕೊಳ್ಳಿ. ಅಲ್ಲದೇ ಇದು ಕನಿಷ್ಠಗಮನವನ್ನು ಸೆಳೆಯುವಂತೆ ಇರಿಸಬೇಕು. ಗ್ರಾಹಕರ ಅಥವಾ ಇತರರ ದೃಷ್ಟಿ ತಿಜೋರಿಗೆ ಮೇಲೆ ಬೀಳುವುದನ್ನು ಕನಿಷ್ಠವಾಗಿಸಿ. ಅಷ್ಟೇ ಅಲ್ಲ, ಪ್ರತಿ ದಿನವೂ ಧೂಳು ಹೊಡೆದು ತಿಜೋರಿಯನ್ನು ಒರೆಸಿ ಸ್ವಚ್ಛಗೊಳಿಸುತ್ತಿರುವುದು ಅಗತ್ಯ.

'ಯಶಸ್ಸು, ಸಮೃದ್ಧಿ, ಏಳಿಗೆಗಾಗಿ'-ಈ ಸಿಂಪಲ್ ಟಿಪ್ಸ್ ಅನುಸರಿಸಿ

English summary

Vaastu Tips On How To Get Successful In Business

When we start a new project or business, the first thing that most of us look for is the right time or the "Muhurat" and only then venture into the same. But do you realise that only knowing about the lucky time is not enough and one needs to ensure that other things should also be followed where it can bring in luck to the business? There are certain architectural/Vaastu tips that one can follow to invite luck to their workplace.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more