Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ತನ್ನ ಎರಡನೇ ವಯಸ್ಸಿನಲ್ಲಿ ಈ ಪೋರ 40 ಸಿಗರೇಟ್ ಸೇದುತ್ತಿದ್ದನಂತೆ!
ತನ್ನ ಎರಡನೇಯ ವಯಸ್ಸಿನಲ್ಲಿ ದಿನಕ್ಕೆ ನಲವತ್ತು ಸಿಗರೇಟ್ ಸೇದಿ ಸುದ್ದಿ ಮಾಡಿದ ಇಂಡೋನೇಷ್ಯಾದ ಈ ಬಾಲಕ ಬಹಳ ಚರ್ಚೆಗೆ ಗ್ರಾಸವಾಗಿದ್ದಾನೆ
ಕೆಟ್ಟ ಮಾತು ಹಾಗೂ ಚಟವನ್ನು ಮಕ್ಕಳು ಬೇಗನೆ ಸ್ವೀಕರಿಸುತ್ತಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಅಂತಹದೇ ಒಂದು ಉದಾಹರಣೆಯನ್ನು ಈ ಲೇಖನದಲ್ಲಿ ನೀಡುತ್ತಿವೆ ಅದೇ ಇಂಡೋನೇಷ್ಯಾದ ಬಾಲಕನೊಬ್ಬ ಬಿಡದೆ ಸಿಗರೇಟ್ ಸೇದುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದವು.
ಕೇವಲ 2ರ ಹರೆಯದ ಬಾಲಕ ದಿನಕ್ಕೆ 40ಕ್ಕೂ ಹೆಚ್ಚು ಸಿಗರೇಟ್ ಸೇದುತ್ತಾ ಇದ್ದ ಎಂದು ಆತನ ತಾಯಿಯೇ ಹೇಳಿದ್ದಾಳೆ. ಇದನ್ನು ನಂಬಲು ಕಷ್ಟವಾಗಿದ್ದರೂ ಕೆಲವೊಂದು ಫೋಟೋಗಳು ಸಾಕ್ಷ್ಯವನ್ನು ಒದಗಿಸುತ್ತಾ ಇದ್ದವು. ಅಚ್ಚರಿ ಜಗತ್ತು: ಒಂದು ವರ್ಷದ ಮಗುವಿಗೆ ಗಡ್ಡ ಮೀಸೆ ಎಲ್ಲಾ ಬಂದುಬಿಟ್ಟಿದೆ!
ಅರ್ದಿ ರಿಜಲ್ ಎನ್ನುವ ಬಾಲಕನಿಗೆ ಸಿಗರೇಟ್ ನೀಡದೆ ಇದ್ದರೆ ಆತ ಕೋಪಗೊಂಡು ಅಳುತ್ತಾ ಕೂರುತ್ತಾ ಇದ್ದ ಮತ್ತು ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಿದ್ದ. ಆತನಿಗೆ ನಿಶ್ಯಕ್ತಿ ಕೂಡ ಕಾಡುವುದಾಗಿ ಹೇಳುತ್ತಿದ್ದ ಎಂದು ರಿಜಲ್ ತಾಯಿ ಹೇಳುತ್ತಿದ್ದಳು. ವಿಶ್ವದೆಲ್ಲೆಡೆಯಲ್ಲಿ ಈ ವಿಡಿಯೋ ಹಾಗೂ ಫೋಟೋಗಳು ಕಾಡ್ಗಿಚ್ಚಿನಂತೆ ಹಬ್ಬಿದ ಬಳಿಕ ಕ್ರಮಕ್ಕೆ ಮುಂದಾದ ಇಂಡೋನೇಷ್ಯಾ ಸರಕಾರವು ಬಾಲಕನನ್ನು ಸಿಗರೇಟ್ ಬಿಡಿಸಲು ಪುನರ್ವಸತಿ ಕಾರ್ಯಕ್ರಮಕ್ಕೆ ಸೇರಿಸಿಕೊಂಡಿತು... ಮುಂದೆ ಓದಿ...

ಅಧ್ಯಯನ ವರದಿ
ಇಂಡೋನೇಷ್ಯಾದಲ್ಲಿ ಮಕ್ಕಳಲ್ಲಿ ಸಿಗೇಟ್ ಸೇವನೆ ಚಟವು ಅತಿಯಾಗಿದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. 10ರ ಹರೆಯದ ಒಳಗಿನ 80 ದಶಲಕ್ಷ ಮಕ್ಕಳು ಸಿಗರೇಟ್ ಸೇವನೆ ಚಟಕ್ಕೆ ಒಳಗಾಗಿದ್ದಾರೆ ಎಂದು ಸಮೀಕ್ಷೆಯೊಂದು 2008ರಲ್ಲಿ ಹೇಳಿತ್ತು.

ಅಧ್ಯಯನ ವರದಿ
ಅರ್ದಿ ಘಟನೆಯ ಬಳಿಕ ಇಂಡೋನೇಷ್ಯಾ ಸರಕಾರವು ದೇಶವ್ಯಾಪಿ ಅಭಿಯಾನವನ್ನು ಕೈಗೊಂಡು ಮಕ್ಕಳನ್ನು ಸಿಗರೇಟ್‌ನ ಚಟದಿಂದ ಮುಕ್ತಗೊಳಿಸಲು ನಿರ್ಧರಿಸಿತು.

ದಿನಕ್ಕೆ ಸುಮಾರು 40 ಸಿಗರೇಟ್ ಸೇವನೆ ಮಾಡುತ್ತಾ ಇದ್ದನಂತೆ!!
ಬರೀ ಎರಡನೇಯ ವರ್ಷದವನಾಗಿದ್ದಾಗ ಅರ್ದಿ ದಿನಕ್ಕೆ ಸುಮಾರು 40 ಸಿಗರೇಟ್ ಸೇವನೆ ಮಾಡುತ್ತಾ ಇದ್ದ. ವಿಶ್ವದೆಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅರ್ದಿಯನ್ನು ಪುನರ್ವಸತಿ ಕಾರ್ಯಕ್ರಮಕ್ಕೆ ಒಳಪಡಿಸಲಾಯಿತು ಮತ್ತು ರಾಷ್ಟ್ರವ್ಯಾಪಿ ಮಕ್ಕಳನ್ನು ಸಿಗರೇಟ್ ಚಟದಿಂದ ಮುಕ್ತಗೊಳಿಸಲು ಅಭಿಯಾನ ಆರಂಭಿಸಲಾಯಿತು. Image courtesy

ಕೌನ್ಸಿಲಿಂಗ್ ಮತ್ತು ಚಿಕಿತ್ಸೆಯಿಂದ ಸಿಗರೇಟ್ ಬಿಟ್ಟು ಬಿಟ್ಟ
ಅರ್ದಿ ಕೌನ್ಸಿಲಿಂಗ್ ಮತ್ತು ಚಿಕಿತ್ಸೆಯಿಂದ ಸಿಗರೇಟ್ ಚಟವನ್ನು ಬಿಟ್ಟುಬಿಟ್ಟಿದ್ದಾನೆ. ಆದರೆ ಆತ ಮತ್ತೊಂದು ಅಪಾಯಕಾರಿ ಚಟವನ್ನು ಅಂಟಿಸಿಕೊಂಡಿದ್ದಾನೆ.

ಜಂಕ್ ಫುಡ್‌ಗೆ ಮಾರು ಹೋಗಿದ್ದಾನಂತೆ!
ಸಿಗರೇಟ್ ಬಿಟ್ಟ ಅರ್ದಿ ಜಂಕ್ ಫುಡ್‌ಗೆ ಮಾರು ಹೋಗಿದ್ದಾನೆ. ಇದರಿಂದ ಆರು ವರ್ಷದನಿರುವಾಗಲೇ ಆತ ಬೊಜ್ಜನ್ನು ಬೆಳೆಸಿಕೊಂಡಿದ್ದಾರೆ. ಆತನ ಪೋಷಕರು ಮಗನ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಂಡು ಕಠಿಣ ಆಹಾರ ಕ್ರಮವನ್ನು ಅನುಸರಿಸಿಕೊಂಡು ಹೋಗುತ್ತಾ ಇದ್ದಾರೆ...
Image Courtesy

ಜಂಕ್ ಫುಡ್‌ಗೆ ಮಾರು ಹೋಗಿದ್ದಾನಂತೆ!
ತುಂಬಾನೇ ನೋವುಂಟು ಮಾಡುವ ಈ ಕಥೆಯು, ಕೆಲವೊಮ್ಮೆ ಸಮಯ, ಸಂದರ್ಭದಿಂದಾಗಿ ಕೂಡ ಬೇಡದ ಸಂಗತಿಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಆದರೆ ಕೆಟ್ಟ ಚಟಗಳನ್ನು ಬೆಳೆಸಿಕೊಂಡ ಪ್ರತಿಯೊಬ್ಬರು ಬದ್ಧತೆ ಹಾಗೂ ಕುಟುಂಬದವರ ಬೆಂಬಲದಿಂದ ಚಟದಿಂದ ಮುಕ್ತರಾಗಬಹುದು.



Click it and Unblock the Notifications











