ವಿಶ್ವಕ್ಕೆ ಶಾಕ್ ನೀಡುವ ಭಾರತೀಯ ಸಂಪ್ರದಾಯಗಳು!

By: Deepak
Subscribe to Boldsky

ಭಾರತ ಹೇಳಿ ಕೇಳಿ ಸಂಪ್ರದಾಯಬದ್ಧವಾದ ದೇಶ. ನಮ್ಮಲ್ಲಿ ಹಲವಾರು ಸಂಪ್ರದಾಯಗಳು ಮತ್ತು ಸಂಸ್ಕಾರಗಳು ಚಾಲ್ತಿಯಲ್ಲಿವೆ. ಅದನ್ನು ಪ್ರತಿಯೊಬ್ಬ ಭಾರತೀಯನು ಸಹ ಸುಮಾರು ಶತಮಾನಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾನೆ. ಕೆಲವೊಂದನ್ನು ಎಲ್ಲರೂ ಒಪ್ಪಿಕೊಂಡರೂ ಇನ್ನೂ ಕೆಲವನ್ನು ವಿಶ್ವದ ಇತರೆ ಜನರು ಅವಹೇಳನ ಮಾಡಿದ್ದಾರೆ. 

ಸಾಕಪ್ಪ-ಸಾಕು! ಇಂತಹ ಮೂಢನಂಬಿಕೆಗಳಿಂದ ಹೊರ ಬನ್ನಿ....

ಅರೆ ಜನ ಅವಹೇಳನ ಮಾಡುವಂತಹ ಯಾವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ಭಾರತದಲ್ಲಿ ನಡೆಯುವ ಕೆಲವೊಂದು ಆಚರಣೆಗಳು ವಿದೇಶಿಯರ ಕಣ್ಣಲ್ಲಿ ಅಸಹ್ಯಕರವಾಗಿ ಕಾಣುತ್ತಿದೆ ಅಂತಹ ವಿಚಾರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ನೀವು ಸಹ ಒಮ್ಮೆ ನೋಡಿ.... 

ವರದಕ್ಷಿಣೆ

ವರದಕ್ಷಿಣೆ

ಭಾರತದಲ್ಲಿ ಮದುವೆಯಾಗುವಾಗ ವಧುವಿನ ತಂದೆ ತಾಯಿ ವರನಿಗೆ ವರದಕ್ಷಿಣೆಯನ್ನು ಕೊಡುತ್ತಾರೆ. ಮೊದಲು ಇದು ಉಡುಗೊರೆಯ ರೂಪದಲ್ಲಿ ಆರಂಭವಾಗಿ ಈಗ ಕಡ್ಡಾಯವಾಗಿ ತೆಗೆದುಕೊಳ್ಳುವ ಮಟ್ಟಿಗೆ ಬೆಳೆದಿದೆ. ವರದಕ್ಷಿಣೆಯು ಭಾರತದಲ್ಲಿ ನಿಷೇಧಿಸಲ್ಪಟ್ಟಿದ್ದರೂ ಸಹ ಎಲ್ಲಾ ಕಡೆ ಇನ್ನೂ ಕೊಡುಕೊಳ್ಳುವಿಕೆ ನಡೆಯುತ್ತಿದೆ. ವಿದೇಶಿಯರು ಇದರ ಕುರಿತಾಗಿ ಹೆಚ್ಚಾಗಿ ಆಡಿಕೊಳ್ಳುತ್ತಾರೆ.

ಬಾಲ್ಯ ವಿವಾಹ

ಬಾಲ್ಯ ವಿವಾಹ

ಕೆಲವೊಂದು ಸಮುದಾಯಗಳಲ್ಲಿ ಬಾಲ್ಯ ವಿವಾಹ ಇನ್ನೂ ಚಾಲ್ತಿಯಲ್ಲಿದೆ. ಇದನ್ನು ಸಹ ತುಂಬಾ ಹಿಂದೆಯೇ ನಿಷೇಧಿಸಲ್ಪಟ್ಟಿದ್ದರೂ ಸಹ ಜನ ಇದನ್ನು ಇನ್ನೂ ಅನುಸರಿಸುತ್ತಿದ್ದಾರೆ. ಭಾರತದಲ್ಲಿ ಮದುವೆಯಾಗಲು ಹುಡುಗಿಗೆ 18 ವರ್ಷ ಮತ್ತು ಹುಡುಗನಿಗೆ 21 ವರ್ಷ ವಯಸ್ಸಾಗಿರಬೇಕು ಎಂಬ ಕಾನೂನೇ ಇದೆ. ಆದರೆ ಜನ ಆ ಕಾನೂನಿಗೆ ಕಣ್ಣಿಲ್ಲ ಎಂದು ಬಾಲ್ಯ ವಿವಾಹವನ್ನು ಮಾಡುತ್ತಿದ್ದಾರೆ.

ಮಕ್ಕಳನ್ನು ಎಸೆಯುವುದು!

ಮಕ್ಕಳನ್ನು ಎಸೆಯುವುದು!

ಎರಡು ವರ್ಷ ಅಥವಾ ಅದಕ್ಕಿಂತ ಚಿಕ್ಕ ಮಕ್ಕಳನ್ನು 50 ಅಡಿ ಎತ್ತರದ ಗೋಪುರದ ಮೇಲಿನಿಂದ ಎಸೆಯುವ ಪದ್ಧತಿ ಜಾರಿಯಲ್ಲಿದೆ ಎಂದರೆ ನಂಬುತ್ತೀರಾ? ಹೌದು ಗೋಪುರದ ಕೆಳಗೆ ಇರುವ ಜನರು ಆ ಮಗುವನ್ನು ಕ್ಯಾಚ್ ಹಿಡಿಯುತ್ತಾರೆ. ಹೀಗೆ ಮಾಡುವುದರಿಂದ ಕುಟುಂಬಕ್ಕೆ ಅದೃಷ್ಟ ಬರುತ್ತದೆಯಂತೆ. ಈ ಸಂಪ್ರದಾಯವು ಭಾರತದ ಕೆಲವೊಂದ ಕುಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ.

ಮಡೆಸ್ನಾನ

ಮಡೆಸ್ನಾನ

ಇದು ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ ಎಂಬುದು ನಮ್ಮ ದೌರ್ಭಾಗ್ಯ. ಬ್ರಾಹ್ಮಣರು ತಿಂದು ಬಿಟ್ಟಿರುವ ಊಟದ ಎಲೆ ಮೇಲೆ ಕೆಳ ಜಾತಿಯ ಜನರು ಉರುಳು ಸೇವೆ ಮಾಡುವ ಸಂಪ್ರದಾಯ ಇದಾಗಿದೆ. ಇದರಿಂದ ಉರುಳು ಸೇವೆ ಮಾಡುವ ಜನರಿಗೆ ಇರುವ ಕಾಯಿಲೆ ಮತ್ತು ರೋಗಗಳು ಗುಣವಾಗುತ್ತವೆಯಂತೆ.

ಅಘೋರಿಗಳು

ಅಘೋರಿಗಳು

ಬನಾರಸಿನಲ್ಲಿರುವ ಅಘೋರಿ ಸಾಧುಗಳು ದೇವರೊಂದಿಗೆ ಸಂಪರ್ಕಿಸಲು ತಮ್ಮದೇ ಆದ ಮಾರ್ಗವನ್ನು ಅನುಸರಿಸುತ್ತಾರೆ. ಇವರು ತಮ್ಮ ದೇಹಕ್ಕೆ ವಿಭೂತಿಯನ್ನು ಬಳಿದುಕೊಂಡಿರುತ್ತಾರೆ ಮತ್ತು ಗಂಟು ಗಂಟಾದ ಕೂದಲಿನ ಜಡೆಯನ್ನು ಹೊಂದಿರುತ್ತಾರೆ. ಇವರು ಸ್ಮಶಾನದಲ್ಲಿ ವಾಸಿಸುತ್ತಾರೆ. ಶವ ಸುಟ್ಟ ಬೂದಿಯನ್ನು ದೇಹಕ್ಕೆ ಬಳಿದುಕೊಳ್ಳುತ್ತಾರೆ. ಮಾನವರ ಮೂಳೆಗಳನ್ನು ತಮ್ಮ ಆಭರಣಗಳು ಮತ್ತು ಬಟ್ಟಲುಗಳಾಗಿ ಬಳಸುತ್ತಾರೆ. ಇವರು ವಾಮಾಚಾರ ಮಾಡುವುದರಲ್ಲಿ ಖ್ಯಾತಿಯನ್ನು ಪಡೆದಿರುತ್ತಾರೆ. ಇವರನ್ನು 'ತಾಂತ್ರಿಕರು' ಎಂದು ಸಹ ಕರೆಯುತ್ತಾರೆ.

ಅಘೋರಿ ಸಾಧುಗಳ ಅವತಾರ ನೋಡಲು ಗುಂಡಿಗೆ ಗಟ್ಟಿ ಇರಬೇಕು!

ಕೇಶ ಲೋಚನ

ಕೇಶ ಲೋಚನ

ಈ ಸಂಪ್ರದಾಯವು ಜೈನ ಮತ್ತು ಬೌದ್ಧರಲ್ಲಿ ಚಾಲ್ತಿಯಲ್ಲಿದೆ. ಈ ಪದ್ಧತಿಯಲ್ಲಿ ವ್ಯಕ್ತಿಯು ಕೂದಲನ್ನು ತೆಗೆಸುತ್ತಾನೆ. ಹಾಗೆಂದು ಒಂದೇ ಬಾರಿಗೆ ಶೇವ್ ಮಾಡಿಕೊಳ್ಳಲು ಹೋಗುವುದಿಲ್ಲ. ಬದಲಿಗೆ ಇವರು ಒಂದೊಂದೇ ಕೂದಲನ್ನು ಕಿತ್ತು ಹಾಕುತ್ತಾ ಬೋಳಾಗುತ್ತಾರೆ ಇಲ್ಲವೇ ಇತರರ ಸಹಾಯವನ್ನು ಪಡೆಯುತ್ತಾರೆ. ಇದರಿಂದ ಉಂಟಾಗುವ ಗಾಯವನ್ನು ಸಗಣಿಯಿಂದ ಪಡೆಯಲಾದ ಬೂದಿಯಿಂದ ಮಾಯಿಸಲಾಗುತ್ತದೆ.

ತಲೆಗಳ ಮೇಲೆ ತೆಂಗಿನಕಾಯಿಯನ್ನು ಹೊಡೆದುಕೊಳ್ಳುವುದು

ತಲೆಗಳ ಮೇಲೆ ತೆಂಗಿನಕಾಯಿಯನ್ನು ಹೊಡೆದುಕೊಳ್ಳುವುದು

ಈ ವಿಚಿತ್ರ ಸಂಪ್ರದಾಯವು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿದೆ. ತಮಿಳುನಾಡಿನ ಕರೂರು ಜಿಲ್ಲೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ಭಕ್ತರು ನೆರೆದು, ತಮ್ಮ ತಲೆಗಳ ಮೇಲೆ ತೆಂಗಿನಕಾಯಿಯನ್ನು ಹೊಡೆದುಕೊಳ್ಳುತ್ತಾರೆ. ಇದು ಅದೃಷ್ಟ ಮತ್ತು ಆರೋಗ್ಯ ಎರಡನ್ನೂ ತರುತ್ತದೆ ಎಂಬುದು ಇವರ ನಂಬಿಕೆ.

ವಿದೇಶದಲ್ಲೂ ಸದ್ದುಮಾಡುತ್ತಿದೆ, ಮೂಢನಂಬಿಕೆಗಳೆಂಬ ಪೆಡಂಭೂತ!

English summary

Traditions Of India That Can Shock The World!

Check out on some of the most interesting and bizarre rituals that are being followed in India. These traditions and cultures have been followed since years. Find out more about these shocking traditions of India.
Story first published: Saturday, May 27, 2017, 8:31 [IST]
Subscribe Newsletter