Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಇಷ್ಟೊಂದು ಮುದ್ದಾದ ಹುಡುಗಿಗೆ, ಆ ದೇವರು ಎಂತಹ ಶಿಕ್ಷೆ ಕೊಟ್ಟು ಬಿಟ್ಟ ನೋಡಿ...!
ಓರ್ವ ಹೆಣ್ಣಿನ ಹೆಣ್ತನಕ್ಕೇ ಸಾಕ್ಷಿಯಾಗಿರುವ ಜನನದ್ವಾರವೇ ಇಲ್ಲದ ಮಹಿಳೆಯ ಬಗ್ಗೆ ಕೇಳಿದ್ದೀರಾ? ಇದು ಸಾಧ್ಯವೇ ಇಲ್ಲವೆಂದು ಅನ್ನಿಸಬಹುದು. ಆದರೆ ಅತ್ಯಪರೂಪವೆನ್ನುವಂತಹ ಇಂತಹ ಒಂದು ಸ್ಥಿತಿಯನ್ನು ಜನ್ಮದಿಂದಲೇ ಪಡೆದು ಈಗ ಇಪ್ಪತ್ತೆರಡು ವರ್ಷದವಳಾಗಿರುವ ಯುವತಿಯೊಬ್ಬಳ ಸ್ಥಿತಿ ಈಗ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ಹದಿಮೂರು ಹದಿನಾಲ್ಕರಲ್ಲಿಯೇ ಮಾಸಿಕ ಋತುಚಕ್ರಕ್ಕೆ ಒಳಗಾಗುತ್ತಾರೆ. ಕೆಲವರಿಗೆ ತಡವಾಗಬಹುದು. ಆದರೆ ಈ ಮಹಿಳೆಗೆ ಹದಿನೆಂಟಾದರೂ ಮಾಸಿಕ ಚಕ್ರವೇ ಪ್ರಾರಂಭವಾಗಿರಲಿಲ್ಲ. ಇದು ಸ್ವಾಭಾವಿಕವೆಂದು ಸಮಯವನ್ನು ಮುಂದೂಡಿದ ಈ ಯುವತಿ ಹದಿನೆಂಟಾದ ಬಳಿಕವೇ ತನಗೆ ಜನನದ್ವಾರವೇ ಇಲ್ಲವೆಂದು ಕಂಡುಕೊಂಡಿದ್ದಾಳೆ.
ಈ ವಿಚಿತ್ರ ವಿದ್ಯಮಾನದ ಬಗ್ಗೆ ಹಾಗೂ ಈಕೆಯ ದುಃಖವನ್ನು ತೊಡೆಯಲು ಈಕೆಯ ಪ್ರಿಯಕರ ಹೇಗೆ ನೆರವು ನೀಡುತ್ತಿದ್ದಾನೆ ಎಂದು ಅರಿಯಲು ಹಾಗೂ ಶಸ್ತ್ರಕ್ರಿಯೆಗೆ ಬೇಕಾದ ನಿಧಿಯನ್ನು ಕ್ರೌಡ್ ಫಂಡಿಂಗ್ ಎಂಬ ಸಾರ್ವಜನಿಕ ದೇಣಿಗೆಯಿಂದ ಪಡೆಯಲು ಇವರು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಅರಿಯೋಣ. ಈಕೆಯ ಶಸ್ತ್ರಕ್ರಿಯೆ ಸಫಲವಾಗಿ ಈಕೆಯೂ ಇತರರಂತೆ ಸುಖಕರ ಜೀವನ ನಡೆಸಲು ಸಾಧ್ಯವಾಗಲಿ ಎಂದು ಹಾರೈಸೋಣ.....

ಈ ಯುವತಿಗೆ ಮಾಸಿಕ ಸ್ರಾವವೇ ಆಗುತ್ತಿರಲಿಲ್ಲ
ಹದಿನೆಂಟಾದರೂ ಮಾಸಿಕ ಚಕ್ರವೇಕೆ ಪ್ರಾರಂಭವಾಗಿಲ್ಲ ಎಂಬ ಪ್ರಶ್ನೆಯೊಂದಿಗೆ ಸ್ತ್ರೀರೋಗತಜ್ಞ ವೈದ್ಯರ ಬಳಿ ತಪಾಸಣೆಗೆ ಬಂದ ಈ ಯುವತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರಿಗೆ ಅವರ ಜೀವಮಾನದ ಆಶ್ಚರ್ಯ ಕಾದಿತ್ತು.

ಈ ಯುವತಿಗೆ ಅತ್ಯಪರೂಪದ ಕೊರತೆ ಇತ್ತು
ಅಮೇರಿಕಾದ ಅರಿಜೋನಾ ಪ್ರಾಂತದ ಗಿಲ್ಬರ್ಟ್ ನಗರದ ನಿವಾಸಿಯಾಗಿರುವ ಕೈಲೀ ಮೋವಾಟ್ಸ್ ಎಂಬ ಈ ಯುವತಿಗೆ Mayer Rokitansky Küster Hauser syndrome (MRKH) ಎಂಬ ಅತ್ಯಪರೂಪದ ಕಾಯಿಲೆ ಆವರಿಸಿತ್ತು. ಇದನ್ನು ಕಾಯಿಲೆ ಎನ್ನುವುದಕ್ಕಿಂತ ಕೊರತೆ ಎನ್ನುವುದೇ ಮೇಲು. ಈ ಕೊರತೆ ಹೊಂದಿರುವ ಮಹಿಳೆಯರಿಗೆ ಜನನದ್ವಾರ, ಗರ್ಭಕೋಶ ಅಥವಾ ಗರ್ಭನಾಳವೇ ಇರುವುದಿಲ್ಲ. ಅಂಡಾಣುಗಳೂ ಉತ್ಪತ್ತಿಯಾಗುವುದಿಲ್ಲ. ಪರಿಣಾಮವಾಗಿ ಮಾಸಿಕ ಋತುಚಕ್ರವೂ ಇಲ್ಲ!

ಈಕೆಯ ಸ್ಥಿತಿ ತಡವಾಗಿ ಬೆಳಕಿಗೆ ಬಂದಿತ್ತು
ಈ ತೊಂದರೆ ಇರುವುದುದು ತುಂಬಾ ತಡವಾಗಿ ಕಂಡುಬಂದಿತ್ತು. ಬಳಿಕವೂ ಆಕೆ ತಾನು ಋತುಮತಿಯಾಗದೇ ಇದ್ದ ದುಗುಡಕ್ಕೆ ಈ ಸ್ಥಿತಿಯೇ ಕಾರಣವೆಂದು ಗೊತ್ತಿದ್ದರೂ ಅಕ್ಕಪಕ್ಕದವರು ಏನು ಹೇಳುತ್ತಾರೋ ಎಂಬ ಆತಂಕದಿಂದ ಈಕೆ ತನ್ನ ದೇಹಸ್ಥಿತಿಯ ಬಗ್ಗೆ ಯಾರಲ್ಲಿಯೂ ಹೇಳಿಕೊಂಡೇ ಇರಲಿಲ್ಲ.

ಈಕೆಯ ಪ್ರಿಯಕಯರನೇ ಈಕೆಯ ಸರ್ವಸ್ವ
ಈಕೆ ಓದುತ್ತಿರುವ ಕಾಲೇಜಿನಲ್ಲಿಯೇ ಹಿರಿಯ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬನನ್ನು ಆಕೆ ಮೆಚ್ಚಿ ಪ್ರಿಯಕರನ ರೂಪದಲ್ಲಿ ಆರಾಧಿಸ ತೊಡಗಿದ್ದಳು. ಆದರೆ ತನಗೆ ಈ ಸ್ಥಿತಿ ಇದೆ ಎಂದು ಆತನಲ್ಲಿ ತಿಳಿಸಲು ಹೇಳಲೋ ಬೇಡವೋ ಎಂಬ ದ್ವಂದ್ವದಲ್ಲಿ ಒಂದು ತಿಂಗಳೇ ಬೇಕಾಯಿತು. ಕಡೆಗೂ ಧೈರ್ಯ ಮಾಡಿ ಈ ಸ್ಥಿತಿಯ ಬಗ್ಗೆ ಸ್ಪಷ್ಟವಾಗಿ ಹೇಳಿದಳು. ಈ ವಾಸ್ತವವನ್ನು ಅರಿತ ಬಳಿಕ ಮೊದಲಿಗೆ ಈತ ವಿಚಲಿತನಾದರೂ ತನ್ನ ಪ್ರಿಯತಮೆಗೆ ಅಗತ್ಯವಿರುವ ಎಲ್ಲಾ ಸಹಕಾರ ಬೆಂಬಲಗಳನ್ನು ನೀಡುವ ಭರವಸೆಯನ್ನು ಆತ ನೀಡಿದ. ಈ ಸ್ಥಿತಿ ಇದ್ದರೂ ಇಲ್ಲದಿದ್ದರೂ ಆಕೆಯ ಕುರಿತಾದ ತನ್ನ ಪ್ರೇಮ ಬದಲಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ.

ಈಗ ಈಕೆ ನಿಧಿಯನ್ನು ಸಂಗ್ರಹಿಸುತ್ತಿದ್ದಾಳೆ
ಈ ಸ್ಥಿತಿಗೆ ಶಸ್ತ್ರಕ್ರಿಯೆಯ ಮೂಲಕ ಪರಿಹಾರ ಒದಗಿಸಬಹುದು. ಆದರೆ ಇದು ತುಂಬಾ ದುಬಾರಿಯಾದ ಹಾಗೂ ಜಟಿಲವಾದ ಶಸ್ತ್ರಕ್ರಿಯೆಯಾಗಿದೆ. ಈ ಜೋಡಿಯ ಬಳಿ ಅಷ್ಟೊಂದು ಹಣವಿಲ್ಲದೇ ಇರುವ ಕಾರಣ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವ ಕ್ರೌಡ್ ಫಂಡಿಂಗ್ ಎಂಬ ವ್ಯವಸ್ಥೆಯ ಮೂಲಕ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದ್ದು ಸಾರ್ವಜನಿಕರಲ್ಲಿ ನೆರವನ್ನು ಯಾಚಿಸಿದ್ದಾರೆ. ಈ ಯುವತಿಗೆ ಶೀಘ್ರವೇ ಹೆಣ್ತನ ಲಭಿಸಲಿ, ಈ ಜೋಡಿ ಸುಖವಾಗಿ ನೂರ್ಕಾಲ ಬಾಳಲಿ ಎಂದು ನಾವೆಲ್ಲಾ ಹಾರೈಸೋಣ.



Click it and Unblock the Notifications