75 ವರ್ಷದ ಹಿಂದಿನ 'ದ್ವೀಪ'ದ ಭಯಾನಕ ಸಂಗತಿ!

By: manu
Subscribe to Boldsky

ಯಾವುದೇ ಊರು ಅಥವಾ ರಾಜ್ಯಕ್ಕೆ ಹೋದರೂ ಅಲ್ಲಿ ನಿಮಗೊಂದು ಭೂತ ಬಂಗಲೆ ಖಂಡಿತವಾಗಿಯೂ ಕಾಣಸಿಗುವುದು. ಇಂತಹ ಭೂತ ಬಂಗಲೆಗೆ ಹೋಗಲು ಜನರು ಹಿಂಜರಿಯುತ್ತಾರೆ ಮತ್ತು ಹೆದರುತ್ತಾರೆ. ಇಂತಹ ಕಟ್ಟಡಗಳು ಹಾಗೂ ಪ್ರದೇಶಗಳು ಹೆಚ್ಚಿನ ಕಡೆಗಳಲ್ಲಿ ಇದ್ದೇ ಇರುತ್ತದೆ. ಇದಕ್ಕೆ ತನ್ನದೇ ಆದಂತಹ ಕಥೆಗಳು ಕೂಡ ಇರುತ್ತದೆ. ಈ ದ್ವೀಪಗಳ ಹೆಸರು ಕೇಳಿದರೆಯೇ ಕೈಕಾಲು ನಡುಗುತ್ತದೆ!

ಕೆಲವೊಂದು ಪ್ರದೇಶಗಳು ಈಗಲೂ ಹೊರಜಗತ್ತಿನಿಂದ ದೂರವಾಗಿಯೇ ಇದೆ. ಕೆಲವೊಂದು ದ್ವೀಪಗಳಂತೂ ಯಾವುದೋ ಒಂದು ಲೋಕಕ್ಕೆ ಕರೆದುಕೊಂಡು ಹೋದಂತೆ ಇರುತ್ತದೆ. ಇಲ್ಲಿಗೆ ಜನರ ಪ್ರವೇಶವೇ ಆಗಿರುವುದಿಲ್ಲ.  ದ್ವೀಪಗಳ ಹಿಂದಿನ ನಿಗೂಢ ರಹಸ್ಯ-ಅನುಭವ ಮಾತ್ರ ಭಯಾನಕ!

ಆದರೆ ಕಳೆದ 75 ವರ್ಷಗಳಿಂದ ಅನಾಥವಾಗಿದ್ದ ದ್ವೀಪವೊಂದರ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದು ಅನಾಥವಾಗಲು ಕಾರಣವೇನು ಎನ್ನುವ ಬಗ್ಗೆ ಕೂದ ವಿವರ ನೀಡಲಿದೆ, ಲೇಖನವನ್ನು ಮುಂದೆ ಓದುತ್ತಾ ದ್ವೀಪದ ಬಗ್ಗೆ ತಿಳಿಯಿರಿ....  

ಇದು ಗ್ರುಯೆನಾರ್ಡ್ ದ್ವೀಪ

ಇದು ಗ್ರುಯೆನಾರ್ಡ್ ದ್ವೀಪ

ಈ ದ್ವೀಪವನ್ನು ಗ್ರುಯೆನಾರ್ಡ್ ದ್ವೀಪವೆಂದು ಕರೆಯಲಾಗುತ್ತದೆ. ಇದು ಸ್ಕಾಟ್ಲೆಂಡ್ ನಿಂದ ಸುಮಾರು 0.6 ಕಿ.ಮೀ. ವಾಯುವ್ಯದಲ್ಲಿದೆ. ಅಂಡಾಕಾರದಲ್ಲಿರುವ ಈ ದ್ವೀಪವು ಗೈರ್ಲೊಚ್ ಮತ್ತು ಉಲ್ಲಪೂಲ್ ನ ಮಧ್ಯದಲ್ಲಿರುವ ಗ್ರುಯೆನಾರ್ಡ್ ತೀರದಲ್ಲಿದೆ.

ಎರಡನೇ ಮಹಾಯುದ್ಧದ ವೇಳೆ

ಎರಡನೇ ಮಹಾಯುದ್ಧದ ವೇಳೆ

ಎರಡನೇ ಮಹಾಯುದ್ಧದ ವೇಳೆ ಈ ದ್ವೀಪವನ್ನು ಬ್ರಿಟಿಷ್ ಸೈನಿಕರು ಕೆಲವೊಂದು ಪರೀಕ್ಷೆಗಳನ್ನು ಮಾಡಲು ಬಳಸಿಕೊಳ್ಳುತ್ತಾ ಇದ್ದರು. ಶತ್ರುಗಳ ವಿರುದ್ಧ ಪ್ರಯೋಗಿಸಲು ಅಂತ್ರಾಕ್ಸ್ ಅನ್ನು ಇಲ್ಲಿಯೇ ಪರೀಕ್ಷಿಸಲಾಗಿತ್ತು. ಈ ದ್ವೀಪವು ಬ್ರಿಟನ್ ಸೇನೆಯ ಪರೀಕ್ಷೆಗಳಿಗೆ ತಾಣವಾಗಿತ್ತು.

ಅಪಾಯಕಾರಿ ಬ್ಯಾಕ್ಟೀರಿಯಾ ಪರೀಕ್ಷೆ

ಅಪಾಯಕಾರಿ ಬ್ಯಾಕ್ಟೀರಿಯಾ ಪರೀಕ್ಷೆ

1942ರಲ್ಲಿ ವಿಜ್ಞಾನಿಗಳು ಅಂತ್ರಾಕ್ಸ್ ಯಾನೆ ವೊಲ್ಲುಮ್ 14578 ಎನ್ನುವ ತುಂಬಾ ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಪರೀಕ್ಷಿಸಿದರು. ಬಾಂಬ್‌ಗಳಿಗೆ ಇದನ್ನು ತುಂಬಿಸಿಕೊಂಡು ಪರೀಕ್ಷೆ ನಡೆಸಲಾಗುತ್ತಿತ್ತು.

ಕುರಿಗಳ ಮೇಲೆ ಪ್ರಯೋಗ

ಕುರಿಗಳ ಮೇಲೆ ಪ್ರಯೋಗ

ಈ ದ್ವೀಪದಲ್ಲಿ ಬ್ಯಾಕ್ಟೀರಿಯಾದ ಫಲಿತಾಂಶವನ್ನು ಸರಿಯಾಗಿ ತಿಳಿದುಕೊಳ್ಳಲು ಸುಮಾರು 80 ಕುರಿಗಳನ್ನು ಬಳಸಿಕೊಳ್ಳಲಾಯಿತು. ಅಂತ್ರಾಕ್ಸ್ ತುಂಬಿದ್ದ ಬಾಂಬ್‌ಗಳನ್ನು ದ್ವೀಪದ ಮೇಲೆ ಹಾಕಲಾಗುತ್ತಿತ್ತು. ಈ ವೇಳೆ ಕುರಿಗಳು ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತಿದ್ದವು. ಪ್ರಾಣಿಗಳ ಮೇಲೆ ಇದರ ಪರಿಣಾಮವನ್ನು ತಿಳಿದುಕೊಳ್ಳಲು ಇದನ್ನು 16 ಎಂಎಂ ಕಲರ್ ಚಿತ್ರವನ್ನಾಗಿ ಮಾಡಲಾಗಿತ್ತು.

ಕಹಿ ಸತ್ಯ ಬಿಚ್ಚಿಟ್ಟ ಅಧ್ಯಯನ

ಕಹಿ ಸತ್ಯ ಬಿಚ್ಚಿಟ್ಟ ಅಧ್ಯಯನ

ಇಲ್ಲಿ ತಯಾರಿಸಿ ಪರೀಕ್ಷಿಸಿದಂತಹ ಅಂತ್ರಾಕ್ಸ್ ಜನರನ್ನು ಕೊಲ್ಲಲಿಲ್ಲ. ಆದರೆ ಈ ದ್ವೀಪದಲ್ಲಿ ಜನರು ವಾಸಿದಂತಹ ವಾತಾವರಣವನ್ನು ನಿರ್ಮಾಣ ಮಾಡಿದೆ.

ಯುದ್ಧದ ಬಳಿಕ ದ್ವೀಪ ಮರಳಿ ಕೇಳಿದ ಯಜಮಾನ

ಯುದ್ಧದ ಬಳಿಕ ದ್ವೀಪ ಮರಳಿ ಕೇಳಿದ ಯಜಮಾನ

ಯುದ್ಧದ ಬಳಿಕ ಈ ದ್ವೀಪವನ್ನು ಬಳಸಬೇಕೆಂದು ಅದರ ಯಜಮಾನ ಕೇಳಿದ. ಆದರೆ ಅಲ್ಲಿನ ಸರಕಾರವು ಇದನ್ನು ನಿರಾಕರಿಸಿತು. ಈ ಪ್ರದೇಶದಲ್ಲಿ ವಿಷಕಾರಿ ಅಂಶಗಳು ತುಂಬಿರುವ ಕಾರಣದಿಂದ ಇದನ್ನು ಬಳಸುವಂತಿಲ್ಲ. ಇದನ್ನು ಸ್ವಚ್ಛ ಮಾಡಿದ ಬಳಿಕ ಜೀವಿಸಲು ಯೋಗ್ಯವೆಂದು ಘೋಷಿಸಲಾಗುವುದು ಎಂದು ಸರಕಾರವು ಹೇಳಿತ್ತು. ಆದರೆ ಕಳೆದ 75 ವರ್ಷಗಳಿಂದ ಈ ದ್ವೀಪವು ಅನಾಥವಾಗಿಯೇ ಬಿದ್ದುಕೊಂಡಿದೆ.ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಾಕಲು ಮರೆಯದಿರಿ.

 
English summary

This Island Has Been Abandoned For 75 Years

Here, we are about to share the history of an island that has been abandoned for 75 long years! Once a lovely island, things back then changed the entire history of this island which made the condition worse for humans to step on it. Check out the scary history that has gone in making this island the worst place where one could survive and what made this island land a place in the list of abandoned islands.
Subscribe Newsletter