For Quick Alerts
ALLOW NOTIFICATIONS  
For Daily Alerts

ಪಾಪ ಫೇಸ್‌ಬುಕ್‌ ಜಾಹೀರಾತನ್ನು ನಂಬಿ, ಮೋಸ ಹೋಗಿ ಬಿಟ್ಟರು!

ಫೇಸ್‌ ಬುಕ್‌ನಲ್ಲಿ ನಕಲಿ ಸಂಸ್ಥೆಯೊಂದನ್ನು ನಂಬಿ ತಮ್ಮ ದುಡ್ಡನ್ನೆಲ್ಲಾ ಸುರಿದ ದಂಪತಿಗಳು ಈ ಸಂಸ್ಥೆ ಅವರಿಗೆ ಮೋಸ ಮಾಡಿ ಎಲ್ಲಾ ಹಣವನ್ನು ಗುಳುಕಾಯಿಸಿದ ಬಳಿಕ ಈಗ ಕಂಗೆಟ್ಟಿದ್ದಾರೆ.

By Manu
|

ನಾಗರೀಕತೆ ತನ್ನೊಂದಿಗೆ ಅನಾಗರೀಕತೆಯನ್ನೂ ಕರೆದೊಯ್ಯುತ್ತದೆ ಎಂಬುದು ಕನ್ನಡದ ಒಂದು ಗಾದೆ. ಇಂದಿನ ದಿನಕ್ಕೆ ಇದನ್ನು ಅನ್ವಯಿಸುವುದಾದರೆ ನಾಗರೀಕತೆಯ ಹುಮ್ಮಸ್ಸಿನಲ್ಲಿ ಎಚ್ಚರ ತಪ್ಪಿದರೆ ನಿಮ್ಮದೆಲ್ಲವನ್ನೂ ಕೊಂಡೊಯ್ಯುತ್ತದೆ ಎಂದು ಹೇಳಬಹುದು.

ಏಕೆಂದರೆ ಫೇಸ್‌ ಬುಕ್‌ನಲ್ಲಿ ನಕಲಿ ಸಂಸ್ಥೆಯೊಂದನ್ನು ನಂಬಿ ತಮ್ಮ ದುಡ್ಡನ್ನೆಲ್ಲಾ ಸುರಿದ ದಂಪತಿಗಳು ಈ ಸಂಸ್ಥೆ ಅವರಿಗೆ ಮೋಸ ಮಾಡಿ ಎಲ್ಲಾ ಹಣವನ್ನು ಗುಳುಕಾಯಿಸಿದ ಬಳಿಕ ಈಗ ಕಂಗೆಟ್ಟಿದ್ದಾರೆ. ಇಂಗ್ಲೆಂಡಿನ ಮಿಡ್ಲಾಂಡ್ ಪ್ರಾಂತದ ವಾರ್ಸಾಲ್ ಎಂಬ ನಗರದ ವಾಸಿಗಳಾಗಿರುವ ಬೆಕಿ ಶೆಂಕ್ ಮತ್ತು ಮಾರ್ಕ್ ಹಿಗ್ಗಿನ್ಸ್ ಎಂಬ ದಂಪತಿಗಳೇ ಈ ನತದೃಷ್ಟರಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿದ್ದೇನೂ ಯಾರೂ ಮಾಡಿದ್ದೇನಲ್ಲ. ಫೇಸ್‌ ಬುಕ್‌ ರಹಸ್ಯ: ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಏಕೆ?

ಬದಲಿಗೆ ಫೇಸ್‌ ಬುಕ್‌ ನಲ್ಲಿ ಬಾಡಿಗೆ ವಾಹನದ ಜಾಹೀರಾತು ನೋಡಿ ವಾಹನವನ್ನು ಬಾಡಿಗೆಗೆ ಪಡೆದುಕೊಂಡಿದ್ದಷ್ಟೇ. ಆದರೆ ಬಾಡಿಗೆ ವಾಹನ ಇವರ ಸರ್ವಸ್ವವನ್ನೂ ಹೇಗೆ ಕದ್ದೊಯ್ದಿತು ಎಂಬ ಕುತೂಹಲ ಈಗ ನಿಮಗೆ ಮೂಡಿರಬಹುದು. ಬನ್ನಿ, ಈ ಕಥೆಯನ್ನು ಈಗ ಅರಿಯೋಣ...

ಇವರು ಮನೆ ಬದಲಾಯಿಸಿದ್ದರು

ಇವರು ಮನೆ ಬದಲಾಯಿಸಿದ್ದರು

ನಮ್ಮ ಬೆಂಗಳೂರಿನಂತೆಯೇ ಈ ನಗರದಲ್ಲಿಯೂ ಬಾಡಿಗೆ ಮನೆಯ ತೊಂದರೆ ಇತ್ತೋ ಏನೋ, ತಮ್ಮ ಮನೆಯನ್ನು ಹೊಸ ಸ್ಥಳಕ್ಕೆ ಬದಲಾಯಿಸಲು ಮನೆ ಸಾಮಾನುಗಳನ್ನು ತಕ್ಷಣವೇ ಸಾಗಿಸಲು ಇವರಿಗೊಂದು ವಾಹನ ಬೇಕಾಗಿತ್ತು. ಇದಕ್ಕೆ ಫೇಸ್‌ ಬುಕ್‌ನಲ್ಲಿ ಲೆ ಗ್ರೀನ್ ಎಂಬ ಬಾಡಿಗೆ ವಾಹನದ ಜಾಹೀರಾತನ್ನು ನೋಡಿ ಬಾಡಿಗೆ ಮಾತನಾಡಿದರು.

ಬಾಡಿಗೆ ವಾಹನವೇನೋ ಬಂತು ಆದರೆ ಹೊಸ ಮನೆಗೆ ಬರಲಿಲ್ಲ!

ಬಾಡಿಗೆ ವಾಹನವೇನೋ ಬಂತು ಆದರೆ ಹೊಸ ಮನೆಗೆ ಬರಲಿಲ್ಲ!

ಫೋನಿನಲ್ಲಿ ಮಾತನಾಡಿದಂತೆ ಓರ್ವ ವ್ಯಕ್ತಿ ತಕ್ಷಣವೇ ಒಂದು ವ್ಯಾನ್‌‌ನೊಂದಿಗೆ ಬಂದು ಮನೆಯ ಎಲ್ಲಾ ಸಾಮಾನುಗಳನ್ನು ಪೇರಿಸಿದ. ಆದರೆ ಈ ದಂಪತಿಗಳಿಗೊಂದು ಏಳು ತಿಂಗಳ ಹೆಣ್ಣು ಮಗುವೂ ಇದ್ದ ಕಾರಣ ನೀವು ಕಾರಿನಲ್ಲಿ ಹೊರ ಮನೆಗೆ ಬನ್ನಿ, ನಾನು ವ್ಯಾನ್ ಚಲಾಯಿಸಿಕೊಂಡು ಬರುತ್ತೇನೆ ಎಂದು ತಿಳಿಸಿದ. ಸರ್ವೇಸಾಮಾನ್ಯವಾಗಿ ಎಲ್ಲಾ ಸರಕು ಸಾಗಾಣಿಕಾ ವಾಹನಗಳು ಹೀಗೇ ಮಾಡುವುದರಿಂದ ಇದರ ಬಗ್ಗೆ ಅನುಮಾನಗೊಳ್ಳದ ದಂಪತಿ ತಮ್ಮ ಮಗುವಿನೊಂದಿಗೆ ಹೊಸ ಮನೆಗೆ ತೆರಳಿ ಮನೆ ಬಾಗಿಲು ತೆರೆದು ವ್ಯಾನ್ ಗಾಗಿ ಕಾದರು.

ಆದರೆ ಈ ವ್ಯಾನ್ ಕಡೆಗೂ ಬರಲೇ ಇಲ್ಲ!!

ಆದರೆ ಈ ವ್ಯಾನ್ ಕಡೆಗೂ ಬರಲೇ ಇಲ್ಲ!!

ತುಂಬಾ ತಡವಾದ ಬಳಿಕವೇ ಇವರು ತಮ್ಮದೆಲ್ಲವನ್ನೂ ಕಳೆದುಕೊಂಡಿದ್ದುದ್ದನ್ನು ಅರಿತರು. ಸಾಮಾನ್ಯವಾಗಿ ಸರಕು ವಾಹನ ನಿಧಾನವಾಗಿ ಬರುವುದರಿಂದ ಈಗ ಬರುತ್ತದೆ, ಕೊಂಚ ತಡೆದು ಬರುತ್ತದೆ ಎಂದು ಕಾದೇ ಕಾದರು. ಆದರೆ ಈ ವ್ಯಾನ್ ಕಡೆಗೂ ಬರಲೇ ಇಲ್ಲ. ಈ ವಾಹನದ ಚಾಲಕನ ಮೊಬೈಲ್ ಸಂಖ್ಯೆಯೂ ಇರದ ಕಾರಣ ಸಂಪರ್ಕಿಸಲೂ ಸಾಧ್ಯವಾಗಲಿಲ್ಲ.

ಫೇಸ್‌ ಬುಕ್‌‌ನಲ್ಲಿ ಕಂಡ ಜಾಹೀರಾತಿನ ಸಂಖ್ಯೆಗೂ ಕರೆಮಾಡಿದರೆ...

ಫೇಸ್‌ ಬುಕ್‌‌ನಲ್ಲಿ ಕಂಡ ಜಾಹೀರಾತಿನ ಸಂಖ್ಯೆಗೂ ಕರೆಮಾಡಿದರೆ...

ಅದೂ ಸಹಾ ನಿಷ್ಕ್ರಿಯ. ಬಳಿಕವೇ ಇವರಿಗೆ ತಮ್ಮ ಜೀವಮಾನದ ಸುಮಾರು ಹತ್ತು ಸಾವಿರ ಪೌಂಡ್‌ಗೂ ಹೆಚ್ಚಿನ ಎಲ್ಲಾ ವಸ್ತುಗಳನ್ನು ಕಳೆದುಕೊಂಡ ಬಗ್ಗೆ ಅರಿವಾಗಿದ್ದು.

 ಫೇಸ್ ಬುಕ್ ಸಂಸ್ಥೆಯನ್ನು ಸಂಪರ್ಕಿಸಿದರು...

ಫೇಸ್ ಬುಕ್ ಸಂಸ್ಥೆಯನ್ನು ಸಂಪರ್ಕಿಸಿದರು...

ಸಾಮಾನ್ಯವಾಗಿ ಈ ಸ್ಥಿತಿಯಲ್ಲಿ ನಾವೆಲ್ಲಾ ಸಂಪರ್ಕಿಸುವುದು ಪೋಲೀಸರನ್ನು. ಆದರೆ ಈ ದಂಪತಿ ಮೊದಲು ಫೇಸ್ಬುಕ್ ಸಂಸ್ಥೆಯನ್ನು ಸಂಪರ್ಕಿಸಿದರು. ಆದರೆ ಜಾಹೀತಾರಿಗೂ ನಮಗೂ ಸಂಬಂಧವಿಲ್ಲ ಎಂದು ಫೇಸ್ ಬುಕ್ ಕೈ ತೊಳೆದುಕೊಂಡಿತು.

ಇದು ನಮ್ಮೆಲ್ಲರಿಗೂ ಒಂದು ಪಾಠ

ಇದು ನಮ್ಮೆಲ್ಲರಿಗೂ ಒಂದು ಪಾಠ

ಫೇಸ್ ಬುಕ್‌ನಿಂದ ನೆರವಿನ ಯಾವುದೇ ನಿರೀಕ್ಷೆ ಇಲ್ಲದ ಕಾರಣ ಈಗ ಮಾರ್ಕ್ ಹಿಗ್ಗಿನ್ಸ್ ಪೋಲೀಸರ ಮೊರೆ ಹೋಗಿದ್ದಾರೆ. ವೆಸ್ಟ್ ಮಿಡ್ಲಾಂಡ್ ಪೋಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಪ್ರಗತಿಯಲ್ಲಿದೆ. ಆದರೆ ಈ ಪ್ರಕರಣ ನಮ್ಮೆಲ್ಲರಿಗೂ ಒಂದು ಪಾಠವಾಗಿದ್ದು ಆನ್ಲೈನ್ ಹಾಗೂ ಸಾಮಾಜಿಕ ತಾಣದಲ್ಲಿ ಕಾಣಬರುವ ಯಾವುದೇ ಜಾಹೀರಾತುಗಳನ್ನು ಒರೆಹಚ್ಚದೇ ಒಮ್ಮೆಲೇ ನಂಬಿಬಿಡುವುದು ತರವಲ್ಲ.

English summary

This Couple Lost Everything Because Of A Single FB Post!

This is a true case that happened to a couple who lost everything they had when they trusted a fake company's ad on Facebook! The couple literally lost every single thing they had! Apparently, these poor guys named Becky Szenk and Mark Higgins had decided to hire some help to make the process smoother.
X
Desktop Bottom Promotion