For Quick Alerts
ALLOW NOTIFICATIONS  
For Daily Alerts

ಫೇಸ್‌ ಬುಕ್‌ ರಹಸ್ಯ: ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಏಕೆ?

By Super
|

ಇಂಟರ್‌ನೆಟ್ ಬರುವವರೆಗೆ ಸೋಶಿಯಲ್ ಮೀಡಿಯಾ (ಸಾಮಾಜಿಕ ಜಾಲತಾಣ) ಎಂಬ ಪದವನ್ನೇ ಯಾರೂ ಸಹ ಕೇಳಿರಲಿಲ್ಲ ಎಂದು ಅನಿಸುತ್ತೆ. ಅದರಲ್ಲೂ ಫೇಸ್‍ಬುಕ್ ಎಂಬ ಪದವು ಸಹ ಅಷ್ಟೇನು ಪರಿಚಿತವಾದ ಪದವಾಗಿರಲಿಲ್ಲ.

ಆದರೆ ಇಂಟರ್‌ನೆಟ್ ಕ್ಷೇತ್ರದಲ್ಲಾದ ಕ್ರಾಂತಿಯಲ್ಲಿ ಇಡೀ ಪ್ರಪಂಚವೇ ತಮಗೆ ಗೊತ್ತಿಲ್ಲದೆ ಒಂದು ಬದಲಾವಣೆಗೆ ಒಳಪಟ್ಟರು, ಈಗ ಅದೇ ಜನ ಇದೇ ಇಂಟರ್‌ನೆಟ್ ಮೂಲಕ ಪರಸ್ಪರ ಸಂಪರ್ಕಿತರಾಗಿದ್ದಾರೆ. ಇದಕ್ಕೆಲ್ಲ ಕಾರಣ ಸೋಶಿಯಲ್ ಮೀಡಿಯಾ ಎಂದೇ ಹೇಳಬಹುದು.

ಕಾಲಾಯ ತಸ್ಮೈ ನಮಃ ಎಂಬ ಉಕ್ತಿ ಇಂದು ಕಾಲಾಯ ಮೊಬೈಲ್ ನಮಃ ಎಂದು ಬದಲಾಗುತ್ತಿದೆ. ಇಂದು ಸಾಮಾನ್ಯರ ಕೈಗೆ ಎಟಕುವಂತಾಗಿರುವ ಸ್ಮಾರ್ಟ್ ಫೋನ್‌ಗಳ ಮೂಲಕ ಜನರು ಫೇಸ್ ಬುಕ್ ಎಂಬ ಸಾಮಾಜಿಕ ತಾಣಕ್ಕೆ ವ್ಯಸನಿಗಳಾಗುತ್ತಿದ್ದಾರೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವ ಬದಲು ಫೇಸ್ ಬುಕ್‌ನ ಪ್ರಭಾವ ವಿಶ್ವದಲ್ಲಿ ಎಷ್ಟು ಎಂಬ ಬಗ್ಗೆ ಇಪ್ಪತ್ತು ಅಚ್ಚರಿಯ ಸಂಗತಿಗಳನ್ನು ಈಗ ನೋಡೋಣ... ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಏಕೆ ಅನಗತ್ಯ ರಂಪಾಟ ಮಾಡುತ್ತಾರೆ?

ಆರಂಭದಲ್ಲಿ

ಆರಂಭದಲ್ಲಿ

ಫೇಸ್‍ಬುಕ್ ಆರಂಭಗೊಂಡ ಮೊದಲ ಬೇಸಿಗೆಯಲ್ಲಿ ಜುಕರ್‌ಬರ್ಗ್ ಕುಟುಂಬವು ಈ ಯೋಜನೆಯನ್ನು ಜೀವಂತವಾಗಿರಿಸಲು 85,000 ಡಾಲರ್‌ಗಳನ್ನು ವಿನಿಯೋಗಿಸಿದರು. ಈ ಮಹತ್ವದ ಹೂಡಿಕೆಯು ಈ ಹೊಸ ಬಗೆಯ ಉದ್ಯಮಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸಿತು. ಆದರೆ ಇಂದು ಫೇಸ್‍ಬುಕ್ ಸುಮಾರು 20 ಬಿಲಿಯನ್ ಯುಎಸ್ ಡಾಲರ್‌ಗಳ ಮೊತ್ತದ ಉದ್ಯಮವಾಗಿದೆ.

20 ನಿಮಿಷದಲ್ಲಿ ಏನಾಗುತ್ತದೆ ಎಂಬುದು ನಿಮಗೆ ಅಚ್ಚರಿಯನ್ನು ತರುತ್ತದೆ

20 ನಿಮಿಷದಲ್ಲಿ ಏನಾಗುತ್ತದೆ ಎಂಬುದು ನಿಮಗೆ ಅಚ್ಚರಿಯನ್ನು ತರುತ್ತದೆ

ಪ್ರತಿದಿನದ 20 ನಿಮಿಷದಲ್ಲಿ ಏನಾಗುತ್ತದೆ..? ನಂಬಲಸಾಧ್ಯವಾದರು ಸತ್ಯ, 2 ಮಿಲಿಯನ್ ಜನರು ಫ್ರೆಂಡ್ ರಿಕ್ವೆಸ್ (Request) ಕಳುಹಿಸುತ್ತಾರೆ, 3 ಮಿಲಿಯನ್ ಜನರು ಸಂದೇಶವನ್ನು ರವಾನಿಸುತ್ತಾರೆ ಮತ್ತು 1 ಮಿಲಿಯನ್ ಜನರು ಲಿಂಕ್‍ಗಳ ವಿನಿಮಯ ಮಾಡಿಕೊಳ್ಳುತ್ತಾರೆ.

ಚೀನಾ

ಚೀನಾ

ಚೀನಾದಲ್ಲಿ ಫೇಸ್‍ಬುಕ್‍ಗೆ ನಿಷೇಧವನ್ನು ಹೇರಲಾಗಿದೆ. ಆದರೂ ಚೀನಾದಲ್ಲಿ 95 ಮಿಲಿಯನ್ ಫೇಸ್‍ಬುಕ್ ಬಳಕೆದಾರರು ಇದ್ದಾರೆ ಎಂದರೆ, ಅಚ್ಚರಿಯಾಗದೆ ಮತ್ತೇನಾದೀತು?

500 ಡಾಲರ್ ಬಹುಮಾನ

500 ಡಾಲರ್ ಬಹುಮಾನ

ಫೇಸ್‍ಬುಕ್ ತನ್ನ ಸುರಕ್ಷತಾ ನೀತಿಯ ಭಾಗವಾಗಿ, ಬಳಕೆದಾರರಿಗೆ ಗರಿಷ್ಟ ಭದ್ರತೆಯನ್ನು ಒದಗಿಸುತ್ತದೆ. ಹೀಗಿದ್ದು ಯಾವುದಾದರು ಬಗ್‍ಗಳು ಫೇಸ್‍ಬುಕ್‍ನ ಅಸಂಖ್ಯಾತ ಫ್ರೋಗ್ರಾಮ್‍ಗಳಿಗೆ ನುಸುಳಿರುವುದನ್ನು ಕಂಡು ಹಿಡಿದು, ಅದರ ಮಾಹಿತಿಯನ್ನು ನೀಡಿದವರಿಗೆ ಫೇಸ್‍ಬುಕ್ 500 ಡಾಲರ್ ಬಹುಮಾನವನ್ನು ನೀಡುತ್ತದೆ.

ಹಲವಾರು ಭಾಷೆಗಳು

ಹಲವಾರು ಭಾಷೆಗಳು

ಇದು ಸಹ ನಂಬಲಸಾಧ್ಯ, ಫೇಸ್‍ಬುಕ್‍ ತನ್ನ ಬಳಕೆದಾರರಿಗಾಗಿ ಸುಮಾರು 70 ಭಾಷೆಗಳಲ್ಲಿ ಲಭ್ಯವಿದೆ.

ಫೇಸ್‍ಬುಕ್‍ನ ಬಳಕೆದಾರರಲ್ಲಿ ಗಣನೀಯವಾಗಿ ಏರಿಕೆ

ಫೇಸ್‍ಬುಕ್‍ನ ಬಳಕೆದಾರರಲ್ಲಿ ಗಣನೀಯವಾಗಿ ಏರಿಕೆ

2012 ರಿಂದ 2013ರ ನಡುವಿನ ಒಂದು ವರ್ಷದಲ್ಲಿ ಅವಧಿಯಲ್ಲಿ, ಫೇಸ್‍ಬುಕ್‍ನ ಬಳಕೆದಾರರ ಪ್ರಮಾಣವು ಸುಮಾರು ಶೇ.22 ರಷ್ಟು ಏರಿಕೆ ಕಂಡು ಬಂದಿತ್ತು.

ಫೇಸ್ ಬುಕ್‌ನಗಳಿಕೆ

ಫೇಸ್ ಬುಕ್‌ನಗಳಿಕೆ

ಪ್ರತಿ ಸೆಕೆಂಡಿಗೆ ಫೇಸ್ ಬುಕ್ ಗಳಿಸುವ ಲಾಭ $9,671 (ರೂ.6,00,859.23). ಅಬ್ಬಾ ಎಂದಿರಾ?

ಫೇಸ್ ಬುಕ್ ಖಾತೆ ನಿಮ್ಮಲ್ಲಿ ಇದೆ ತಾನೇ?

ಫೇಸ್ ಬುಕ್ ಖಾತೆ ನಿಮ್ಮಲ್ಲಿ ಇದೆ ತಾನೇ?

ಪ್ರತಿದಿನ ವಿಶ್ವದ ಪ್ರತಿ ಎಂಟರಲ್ಲಿ ಓರ್ವ ವ್ಯಕ್ತಿ ಫೇಸ್ ಬುಕ್‌ನಲ್ಲಿ ದಾಖಲಿಸಿಕೊಳ್ಳುತ್ತಾನೆ. ಏನು ನೀವಿನ್ನೂ ಫೇಸ್ ಬುಕ್ ಖಾತೆ ತೆರೆದೇ ಇಲ್ಲವೇ? ಸ್ವಲ್ಪ ಓಬೀರಾಯನ ಕಾಲದಿಂದ ಇಂದಿನ ದಿನಕ್ಕೆ ಬನ್ನಿ.

ಸೂಕ್ತ ನ್ಯಾಯಾ ಒದಗಿಸಲು

ಸೂಕ್ತ ನ್ಯಾಯಾ ಒದಗಿಸಲು

ವಿಶ್ವದ ಹಲವು ಕೊಲೆ ಮತ್ತು ಬಲಾತ್ಕಾರದ ಪ್ರಸಂಗಗಳಿಗೆ ಫೇಸ್ ಬುಕ್ ಮೂಲಕ ಪ್ರಬಲ ಸಾಕ್ಷಿ ದೊರಕಿದೆ. ಆದರೆ ಈ ಸಾಕ್ಷ್ಯಗಳು ವಾದಿಯ ಪರ ವಕೀಲರಿಗೆ ದೊರಕುತ್ತದೆಯೇ ಹೊರತು ಪ್ರತಿವಾದಿ ವಕೀಲರಿಗಲ್ಲ (defense lawyer). ಬದಲಿಗೆ ಸತ್ಯ ಯಾವ ಕಡೆ ಇದೆಯೋ ಆ ಕಡೆ ಸಾಕ್ಷ್ಯ ನೀಡಿ ನ್ಯಾಯ ಒದಗಿಸಲು ನೆರವಾಗಬಹುದಲ್ಲ?

ಕಳವಳಕಾರಿ ವಿಷಯಗಳು

ಕಳವಳಕಾರಿ ವಿಷಯಗಳು

2011 ರಲ್ಲಿ ಅಮೇರಿಕಾದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಮೂರರಲ್ಲಿ ಒಂದು ಪ್ರಮಾಣದಲ್ಲಿ ಫೇಸ್ ಬುಕ್ ಪದ ಬಳಕೆಯಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ವೈಯಕ್ತಿಕ ವಿವರಗಳು ಬಹಿರಂಗವಾಗಿ ಸಂಬಂಧಗಳು ಹಳಸುತ್ತಿರುವ ಸೂಚನೆ ಕಳವಳಕಾರಿಯಾಗಿದೆ. ಜಾಲತಾಣದ ಬಳಕೆ ಹೆಚ್ಚುತ್ತಿದ್ದಂತೆಯೇ ವಿಚ್ಛೇದನ ಪ್ರಕರಣಗಳ ಸಂಖ್ಯೆ ಇನ್ನಷ್ಟು ಕಳವಳಕಾರಿಯಾಗಿದೆ.

ಒಂದು ವೇಳೆ ಫೇಸ್ ಬುಕ್ ಸ್ಥಗಿತಗೊಂಡರೆ?

ಒಂದು ವೇಳೆ ಫೇಸ್ ಬುಕ್ ಸ್ಥಗಿತಗೊಂಡರೆ?

ಒಮ್ಮೆ ಹತ್ತು ನಿಮಿಷಗಳವರೆಗೆ ಫೇಸ್ ಬುಕ್ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ ಜಾಹೀರಾತು ಬರದೇ ಆದ ನಷ್ಟ $220,000 (ರೂ 13647799.00). ಮಾಲಿಕರು ಇದರ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಮಾರ್ಕ್ ಜುಕರ್ ಬರ್ಗ್

ಮಾರ್ಕ್ ಜುಕರ್ ಬರ್ಗ್

ಫೇಸ್ ಬುಕ್‌ನ ಮಾಲಿಕ ಮಾರ್ಕ್ ಜುಕರ್ ಬರ್ಗ್ ರಿಗೆ ಯಾರೂ ತಿವಿಯುವುದು (poke) ಮಾಡುವಂತಿಲ್ಲ ಹಾಗೂ ಅವರನ್ನು ಯಾವುದೇ ಕಾರಣಕ್ಕೆ ಬೇಡ ಎಂದು ಹೇಳುವಂತಿಲ್ಲ (block)

ಹ್ಯಾಕರ್ ಕ್ರಿಸ್ ಪುಟ್ನಾಂ

ಹ್ಯಾಕರ್ ಕ್ರಿಸ್ ಪುಟ್ನಾಂ

2006ರಲ್ಲಿ ಫೇಸ್ ಬುಕ್ ಖಾತೆಗೆ ಕನ್ನ ಹಾಕಿದ ಹ್ಯಾಕರ್ ಕ್ರಿಸ್ ಪುಟ್ನಾಂ ಎಂಬ ವ್ಯಕ್ತಿ ಮೈಸ್ಪೇಸ್ ನಂತಹ ಹಲವು ಗುರುತುಗಳನ್ನು ಸ್ಥಾಪಿಸಿದ. (ಉದಾಹರಣೆಗೆ ನಿಮ್ಮ ಸಂಸ್ಥೆಯ ಹೆಸರಿನ ತಾಣವನ್ನು ಮೊದಲೇ ಹಿಡಿದಿಟ್ಟುಕೊಳ್ಳುವುದು, ಬಳಿಕ ನಿಮಗೆ ಅಗತ್ಯವಿದ್ದರೆ ಅವನಿಂದ ಕೊಂಡುಕೊಳ್ಳಬೇಕು). ಫೇಸ್ ಬುಕ್ ಈ ಮೇಧಾವಿಯನ್ನು ಪೋಲೀಸರಿಗೆ ಒಪ್ಪಿಸದೇ ತನ್ನ ಬಳಗಕ್ಕೆ ಆಹ್ವಾನಿಸಿ ಈಗ ಆತ ಫೇಸ್ ಬುಕ್‌ನ ಉದ್ಯೋಗಿಯಾಗಿದ್ದಾನೆ.

ಹರಿಯುವ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಏಕೆ?

ಹರಿಯುವ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಏಕೆ?

"face", "book", "wall", "poke" ಮತ್ತು "like" ಪದಗಳನ್ನು ಬೇರೆಯವರು ಉಪಯೋಗಿಸದಂತೆ ಫೇಸ್ ಬುಕ್ ತನ್ನದಾಗಿಸಿಕೊಂಡಿದೆ. ಹರಿಯುವ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಏಕೆ? ಒಟ್ಟಾರೆ ಫೇಸ್ ಎಂದಿರುವುದನ್ನು ಅವರು ಬರೆದ ರೀತಿಯಲ್ಲಿ ಬರೆಯದಿದ್ದರೆ ಸಾಕು ಅಷ್ಟೇ. ಒಂದು ವೇಳೆ ಈ ಬರವಣಿಗೆ (font) ಅದೇ ತರಹ ಇದ್ದರೆ ನ್ಯಾಯಾಲಯಕ್ಕೂ ಫೇಸ್ ಬುಕ್ ಎಳೆಯಬಹುದು.

ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲು

ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲು

ಫೇಸ್ ಬುಕ್‌ನಲ್ಲಿ ವ್ಯಕ್ತಿ ತನ್ನನ್ನು ಪರಿಚಯಿಸಿಕೊಳ್ಳಲು ಹಾಕಿಕೊಂಡ ಭಾವಚಿತ್ರವನ್ನು ಗಮನಿಸಿಯೇ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಸರಿಸುಮಾರು ಕರಾರುವಾಕ್ಕಾಗಿ ಅಂದಾಜಿಸುವುದನ್ನು ಸಮೀಕ್ಷೆಗಳು ದೃಢಪಡಿಸಿವೆ.

ಶೇರು ಮಾರುಕಟ್ಟೆಯಲ್ಲಿ +$72

ಶೇರು ಮಾರುಕಟ್ಟೆಯಲ್ಲಿ +$72

ಪ್ರಸ್ತುತ ಫೇಸ್ ಬುಕ್‌ನ ಶೇರು ಮಾರುಕಟ್ಟೆಯಲ್ಲಿ +$72 ಬೆಲೆಬಾಳುತ್ತಿದೆ, ಹಾಗೂ ನಿಧಾನವಾಗಿ ಏರಿಕೆ ಕಾಣುತ್ತಿದೆ. ಒಮ್ಮೆ ಈ ಬೆಲೆ ಇನ್ನೂರು ದಾಟಿತೋ, ಆಗ ಮಾರ್ಕ್ ಜುಕರ್ ಬರ್ಗ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗುತ್ತಾರೆ.

ವ್ಯತ್ಯಯ ಕಂಡುಬಂದರೆ

ವ್ಯತ್ಯಯ ಕಂಡುಬಂದರೆ

ಒಂದು ವೇಳೆ ಫೇಸ್ ಬುಕ್, ಇನ್ಸ್ಟಾಗ್ರಾಂ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಕಂಡುಬಂದರೆ ಕೂಡಲೇ ನಿಮ್ಮ ಇನ್ನಿತರ ಸಾಮಾಜಿಕ ತಾಣಗಳಾದ ಟ್ವಿಟ್ಟರ್ ನಲ್ಲಿ ಆಹಾರದ ಕೆಲವು ಚಿತ್ರಗಳು ಕ್ಷಣಕಾಲ ಮೂಡಿಬರುತ್ತವೆ. ಅಂದರೆ ನಿಮ್ಮ ಗಮನವನ್ನು ಫೇಸ್ ಬುಕ್ ವ್ಯತ್ಯಯದಿಂದ ತಮ್ಮೆಡೆಗೆ ಸೆಳೆದುಕೊಳ್ಳುತ್ತವೆ. ಈ ಜಾಲತಾಣಗಳು ಒಬ್ಬರನ್ನೊಬ್ಬರು ಸಂಭಾಳಿಸಿಕೊಳ್ಳುತ್ತಿರುವುದೇ ಹೀಗೆ....

ಫೇಸ್ ಬುಕ್ ಅನ್ ಇತ್ತೀಚಿನ ಬೆಲೆ

ಫೇಸ್ ಬುಕ್ ಅನ್ ಇತ್ತೀಚಿನ ಬೆಲೆ

ಫೇಸ್ ಬುಕ್ ಅನ್ ಇತ್ತೀಚಿನ ಬೆಲೆ $192 ಬಿಲಿಯನ್ (11 937 914 880 000.00 ರೂಪಾಯಿಗಳು)! ಇದಕ್ಕೆ ನೀವೇ ಕಾರಣ? ಅರ್ಥವಾಗಲಿಲ್ಲವೇ? ನೀವು ನಿಮ್ಮ ವೈಯಕ್ತಿಕ ಚಿತ್ರ ಮತ್ತು ದಾಖಲೆಗಳನ್ನು ಪುಕ್ಕಟೆಯಾಗಿ ದಾಖಲಿಸಿದ್ದು, ಇದನ್ನು ಸಂಗ್ರಹಿಸಿದ ಫೇಸ್ ಬುಕ್ ಅಗತ್ಯವುಳ್ಳವರಿಗೆ ದೊಡ್ಡ ಬೆಲೆಗೆ ಮಾರುತ್ತದೆ. ನೀವು ಯಾವಾಗಲೋ ಒಮ್ಮೆ ಕೆಂಪು ಕೋಟು ನನಗೆ ಇಷ್ಟ ಎಂದು ಫೇಸ್ ಬುಕ್ ನಲ್ಲಿ ದಾಖಲಿಸಿದ್ದು ಕೆಲಸಮಯದ ನಂತರ ಕೆಂಪು ಕೋಟ್ ಮಾರಾಟಗಾರ ನಿಮಗೆ ಫೋನ್ ಮಾಡಿ ನನ್ನ ಬಳಿ ಕೆಂಪು ಕೋಟು ಒಂದಿದೆ ಬೇಕಾ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ ಅಲ್ಲವೇ? ಈ ಮಾರಾಟಗಾರ ನಿಮ್ಮ ವಿವರಗಳನ್ನು ಫೇಸ್ ಬುಕ್ಕಿಗೆ ಹಣ ಕೊಟ್ಟು ಕೊಂಡುಕೊಂಡಿದ್ದ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ.

ವಿಶ್ವದಾದ್ಯಂತ 829 ಮಿಲಿಯನ್ ಬಳಕೆದಾರರು

ವಿಶ್ವದಾದ್ಯಂತ 829 ಮಿಲಿಯನ್ ಬಳಕೆದಾರರು

ಕಳೆದ ಮೂರು ತಿಂಗಳುಗಳಲ್ಲಿ ವಿಶ್ವದಾದ್ಯಂತ 829 ಮಿಲಿಯನ್ ಜನರು ಫೇಸ್ ಬುಕ್ ಬಳಸಿದ್ದಾರೆ. ಅಂದರೆ ವಿಶ್ವದ ಜನಸಂಖ್ಯೆಯ ಹದಿನಾಲ್ಕು ಶೇಖಡಾ. ಆದರೆ ಯುವಜನತೆ ಫೇಸ್ ಬುಕ್ ಬಿಟ್ಟು ಟ್ವಿಟ್ಟರ್ ನತ್ತ ಹೆಚ್ಚು ವಾಲುತ್ತಿದ್ದಾರೆ.

ಫೇಸ್ ಬುಕ್ ವಿರುದ್ಧ ಚಳುವಳಿ

ಫೇಸ್ ಬುಕ್ ವಿರುದ್ಧ ಚಳುವಳಿ

೨೦೧೦ರ ಮೇ ೩೧ರಂದು 39,401 ಜನರು ಫೇಸ್ ಬುಕ್ ತ್ಯಜಿಸಿ ಎಂಬ ಚಳುವಳಿಯಲ್ಲಿ ಭಾಗವಹಿಸಿ ಫೇಸ್ ಬುಕ್ ನಿಂದ ತಮ್ಮೆಲ್ಲಾ ವೈಯಕ್ತಿಯ ವಿವರಗಳನ್ನು ತೆಗೆದಿದ್ದಾರೆ. ಆದರೆ ಈ ವಿವರಗಳನ್ನು ಪಡೆಯಲು ಎಷ್ಟು ಜನರು ಫೇಸ್ ಬುಕ್ ಗೆ ಸೇರಿದರು ಎಂಬ ಬಗ್ಗೆ ಮಾಹಿತಿ ಇಲ್ಲ.

ಫೇಸ್ ಬುಕ್ ಸಂದೇಶ

ಫೇಸ್ ಬುಕ್ ಸಂದೇಶ

ವಿಶ್ವದ ಸರಾಸರಿಯಂತೆ ಪ್ರತಿ ಸದಸ್ಯ ಒಂದು ದಿನದ ಅವಧಿಯಲ್ಲಿ ೮೨ ಸಂದೇಶಗಳನ್ನು ಫೇಸ್ ಬುಕ್ ನಲ್ಲಿ ಪಡೆಯುತ್ತಾನೆ. ಹೀಗಿದ್ದಾರೆ ಅಮ್ಮನಿಗೆ ಫೋನ್ ಮಾಡುವುದು, ಕೆಲಸಕ್ಕೆ ತೆರಳುವುದು (ಉದ್ಯೋಗದ ಸ್ಥಳದಲ್ಲಿದ್ದರೂ ನಿಜವಾಗಿ ಕೆಲಸ ಮಾಡುವುದು) ಇವೆಲ್ಲಾ ಮಾಡಲಿಕ್ಕೆ ಸಮಯ ಎಲ್ಲಿದೆ?

 “Status update”

“Status update”

ಸಾಮಾನ್ಯವಾಗಿ ಫೇಸ್ ಬುಕ್ ಬಳಕೆದಾರರು "Status update" ಎಂಬ ಪುಟವನ್ನು ಉಪಯೋಗಿಸಲು ಹಿಂದೇಟು ಹಾಕುತ್ತಾರೆ. ಕಾರಣ, ಯಾರಿಗೂ ಗೊತ್ತಿಲ್ಲ. ಆದರೆ ಹೆಚ್ಚಿನವರು ಬಳಸುವುದೇ ಇಲ್ಲ.

ಖಿನ್ನತೆ ಆವರಿಸುತ್ತದೆಯೇ?

ಖಿನ್ನತೆ ಆವರಿಸುತ್ತದೆಯೇ?

ಫೇಸ್ ಬುಕ್ ನಲ್ಲಿ ಸಂದೇಶಗಳ ಮೂಲಕ ಇತರರ ಬಗ್ಗೆ ಹೆಚ್ಚು ಹೆಚ್ಚು ತಿಳಿಯುತ್ತಾ ಹೋದಂತೆ ಅನ್ಯಮನಸ್ಕತೆ, ಖಿನ್ನತೆ ಆವರಿಸುತ್ತಿರುವುದು ಗಮನಕ್ಕೆ ಬಂದಿದೆ. ಆಂಗ್ಲ ಉಕ್ತಿಯಾದ 'the grass is greener on the other side' ಎಂಬಂತೆ ಎಲ್ಲರಿಗೂ ತಮ್ಮನ್ನು ಬಿಟ್ಟು ಉಳಿದವರೆಲ್ಲಾ ಜೀವನವನ್ನು ಅತ್ಯಂತ ಸಂತೋಷದಿಂದ ಅನುಭವಿಸುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರಿಂದ ಹೊರಬರಲು ಸುಳ್ಳಿನ ಮತ್ತು ಕಲ್ಪನೆಯ ಮೊರೆಹೋಗುವ ಜನತೆ ತಮ್ಮನ್ನು ತಾವೇ ಆತ್ಮವಂಚನೆಯ ಸುಳಿಯಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದಾರೆ.

ಫೇಸ್ ಬುಕ್ ಸ್ನೇಹ ಶಾಶ್ವತವಾಗಿರುತ್ತದೆಯೇ?

ಫೇಸ್ ಬುಕ್ ಸ್ನೇಹ ಶಾಶ್ವತವಾಗಿರುತ್ತದೆಯೇ?

ಫೇಸ್ ಬುಕ್ ಮೂಲಕ ಪ್ರಾರಂಭವಾದ ಸ್ನೇಹವನ್ನು ಕಳೆದುಕೊಳ್ಳುವುದರಿಂದ ಏನೂ ನಷ್ಟವಿಲ್ಲ ಎಂದು ಭಾವಿಸುವವರು ಶೇ 22 ಮಾತ್ರ. ಉಳಿದ ಅರವತ್ತೆಂಟು ಶೇಖಡಾ ಜನರು ಈ ಸ್ನೇಹ ಶಾಶ್ವತವಾಗಿರಲಿ ಎಂದು ಭಾವಿಸುತ್ತಾರೆ.

ಖಾಸಗಿ ವಿವರಗ ಬಗ್ಗೆ

ಖಾಸಗಿ ವಿವರಗ ಬಗ್ಗೆ

"Privacy Notice" ಎಂಬ ಷರತ್ತಿನ ಪ್ರಕಾರ ನಿಮ್ಮ ಖಾಸಗಿ ವಿವರಗಳು ಬೇರೆಯವರ ಕೈಗೆ ಸಿಗಬಾರದು. ಆದರೆ ಇದನ್ನು ರಕ್ಷಿಸಲು ಫೇಸ್ ಬುಕ್ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನ ಮೂಡಿಸುತ್ತಿದೆ.

ಸಮೀಕ್ಷೆಯ ಪ್ರಕಾರ

ಸಮೀಕ್ಷೆಯ ಪ್ರಕಾರ

ಒಂದು ಸಮೀಕ್ಷೆಯ ಪ್ರಕಾರ ಸುಮ್ಮನೇ ಫೇಸ್ ಬುಕ್ ನಲ್ಲಿ ಜಾಲಾಡುವ ಜನರು ಅಸುಖಿಗಳೂ ಒಂಟಿಜೀವಿಗಳೂ ಆಗಿರುತ್ತಾರೆ. ಅದೇ ಸ್ನೇಹಿತರ ಮತ್ತು ಸಮಾಜದ ಒಡನಾಟದಲ್ಲಿರುವವರು ಸುಖಿಗಳೂ ಆಗಿರುತ್ತಾರೆ ಮತ್ತು ಸಂತೋಷದಿಂದಲೂ ಇರುತ್ತಾರೆ. ನೀವು ಯಾವ ಪೈಕಿ?

English summary

Top Mindblowing Facts About Facebook

For everyone who does not divide friendship into virtual and real one and happily makes lots of friends online here we present 20 almost unbelievable facts about Facebook! hav a look
X
Desktop Bottom Promotion