ಕೆಲವು ರಾಶಿಗಳಿಗೆ ಸೇರಿದ ವ್ಯಕ್ತಿಗಳಿಗೆ ಸಮಾನವಾದ ಕೆಲವು ಅಭ್ಯಾಸಗಳನ್ನು ಅವರಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲದಷ್ಟು ಬೇರೂರಿವುದು ನಿಮಗೆ ಅಚ್ಚರಿ ಮೂಡಿಸಬಹುದು. ನಾವೆಲ್ಲರೂ ಒಂದಲ್ಲಾ ಒಂದು ರಾಶಿಗೆ ಸೇರಿದವರೇ ಆಗಿದ್ದು ಪ್ರತಿ ರಾಶಿಗೂ ಪ್ರತ್ಯೇಕವಾಗಿರುವ ಕೆಲವು ದುರಭ್ಯಾಸಗಳಿಗೆ ನಮಗರಿವಿಲ್ಲದಂತೆಯೇ ದಾಸರಾಗಿರುತ್ತೇವೆ.
ಈ ಅಭ್ಯಾಸಗಳು ನಮಗೆ ಜನ್ಮತಃ ಬಂದಿದ್ದರೂ ಇವು ಇತರರಿಗೆ ಇರಿಸು ಮುರಿಸು ಉಂಟುಮಾಡುವ ಸಂಭವವಿರುವ ಕಾರಣ ಈ ಅಭ್ಯಾಸಗಳಿಂದ ಬಲವಂತವಗಿಯಾದರೂ ಸರಿ, ಹೊರಬರುವುದೇ ಉತ್ತಮ. ಇದರಿಂದ ಸಮಾಜದಲ್ಲಿ ಉತ್ತಮ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆಯಲು ಸಾಧ್ಯ. ಆದರೂ, ಒಂದು ಪ್ರತ್ಯೇಕ ರಾಶಿಗೆ ಸೇರಿದ ಅಷ್ಟೂ ವ್ಯಕ್ತಿಗಳಿಗೆ ಕೆಲವು ಅಭ್ಯಾಸಗಳು ಸಮಾನವಾಗಿರುವುದು ಅಚ್ಚರಿಯಲ್ಲವೇ? ಬನ್ನಿ, ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ...
ಮೇಷ
ಈ ರಾಶಿಯ ವ್ಯಕ್ತಿಗಳು ಇತರರೊಂದಿಗೆ ಮುಖಾಮುಖಿಯಾಗಿ ಎದುರುಗೊಳ್ಳಲು ಇಚ್ಛಿಸುತ್ತಾರೆ ಹಾಗೂ ಇವರು ಕಷ್ಟದಲ್ಲಿದ್ದಾಗಲೂ ಮುಖಾಮುಖಿ ಸ್ಪರ್ಧಿಸಲು ಇಷ್ಟಪಡುತ್ತಾರೆ. ಇದಕ್ಕೆ ಈ ವ್ಯಕ್ತಿಗಳ ಪ್ರೇರೇಪಿಸುವ ಗುಣವೇ ಕಾರಣ. ಈ ವ್ಯಕ್ತಿಗಳು ಹಠಮಾರಿಗಳೂ ಹೌದು. ವಾಗ್ವಾದ ಅಥವಾ ಚರ್ಚೆಯ ಸಮಯದಲ್ಲಿ ಇವರ ಮನವೊಲಿಸುವುದು ಕಷ್ಟಕರ ಎಂದು ಇರವನ್ನು ಬಲ್ಲವರು ಸುಲಭವಾಗಿ ಊಹಿಸಬಲ್ಲರು.
ವೃಷಭ
ಈ ರಾಶಿಗೆ ಸೇರಿದ ವ್ಯಕ್ತಿಗಳು ಅತ್ಯಂತ ಹಠಮಾರಿಗಳು ಎಂದೇ ಪ್ರಸಿದ್ಧರಾಗಿದ್ದಾರೆ. ಇವರಿಗೆ ತಮ್ಮ ಜೀವನದಲ್ಲಿ ಏನಾಗಬೇಕು ಎಂಬುದು ಸ್ಪಷ್ಟವಾಗಿ ಗೊತ್ತಿರುತ್ತದೆ ಹಾಗೂ ಇವರ ಜೀವನವನ್ನು ಉತ್ತಮಗೊಳಿಸಲು ಇತರರು ನೀಡುವ ಸಲಹೆಗಳನ್ನು ಇವರು ಇಷ್ಟಪಡುವುದಿಲ್ಲ. ಇವರು ಕೆಲವು ಸಂದರ್ಭಗಳಲ್ಲಿ ಪ್ರಾಪಂಚಿಕರಾಗಿದ್ದರೂ ಇದಕ್ಕೆ ಕಾರಣ ಭವಿಷ್ಯಕ್ಕೆ ಬೇಕಾದುದನ್ನು ಇಂದೇ ತಯಾರಿಸಿಡುವ ಗುಣವೇ ಆಗಿದೆ.
ಮಿಥುನ
ಈ ರಾಶಿಯವರು ಅತಿ ಕುತೂಹಲಿಗಳಾಗಿದ್ದು ಸಧ್ಯಕ್ಕೆ ಮಾಡುತ್ತಿರುವ ಕೆಲಸವನ್ನು ಯಾವಾಗ ನಿಲ್ಲಿಸಬೇಕೆಂದೇ ಇವರಿಗೆ ತಿಳಿದಿರುವುದಿಲ್ಲ. ಇದೇ ಗುಣದ ಕಾರಣ ಇವರು ಕೈಗೆತ್ತಿಕೊಂಡಿರುವ ಕೆಲಸಗಳನ್ನು ನಡುವಿನಲ್ಲಿ ಬಿಡುವುದೂ, ಇನ್ನೊಬ್ಬರ ಗಮನವನ್ನು ಸೆಳೆಯಲು ಅಸಾಧ್ಯವಾದ ಕಾರ್ಯಗಳಲ್ಲಿ ಸಮಯ ವ್ಯರ್ಥ ಮಾಡುವುದೂ ಆಗುತ್ತಿರುತ್ತದೆ. ಇವರಿಗೆ ತಮ್ಮದೇ ಸ್ವಂತ ಗುರಿಯನ್ನು ಅರಿಯಲು ಕಷ್ಟಕರವಾಗಿರುತ್ತದೆ ಅಲ್ಲದೇ ಯಾವುದೇ ಹೊಸ ಸಾಹಸಕಾರ್ಯ ಎಸಗುವ ಬಗ್ಗೆ ಇವರು ಅರಿವಿಲ್ಲದವರಾಗಿರುತ್ತಾರೆ.
ಕಟಕ
ಈ ರಾಶಿಗೆ ಸೇರಿದ ವ್ಯಕ್ತಿಗಳಿಗೆ ತಮ್ಮ ಭಾವನೆಯ ಮೇಲೆ ನಿಯಂತ್ರಣವಿರಿಸಿ ಕೊಳ್ಳಲು ಬಹಳ ಕಷ್ಟಕರವಾಗಿರುತ್ತದೆ. ಇವರು ಯಾವುದೇ ರಾಶಿಯ ವ್ಯಕ್ತಿಗಳಲ್ಲಿ ಅತಿ ಹೆಚ್ಚಿನ ನಿರಾಶಾವಾದಿಗಳಾಗಿರುತ್ತಾರೆ. ಇದೇ ಕಾರಣಕ್ಕೆ ಇವರ ಮನೋಭಾವ ಶೀಘ್ರವಾಗಿ ಬದಲಾಗುತ್ತಿರುತ್ತದೆ. ಇವರ ಅಂಟಿಕೊಳ್ಳುವ ಸ್ವಭಾವದ ಕಾರಣ ಇವರೊಂದಿಗೆ ಸಂಗ ಬೆಳೆಸಿದರೆ ಕಳಚಿಕೊಳ್ಳಲು ಕಷ್ಟಕರವಾಗುತ್ತದೆ. ಇದರ ಹೊರತಾಗಿ ಈ ವ್ಯಕ್ತಿಗಳು ಅತಿ ಹೆಚ್ಚು ಸಂವೇದನಾಶೀಲರಾಗಿದ್ದು ತಮ್ಮ ಅತ್ಮೀಯರು ಕೇಳಿಕೊಳ್ಳುವ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿಕೊಡುವವರಾಗಿರುತ್ತಾರೆ.
ಸಿಂಹ
ಈ ರಾಶಿಗೆ ಸೇರಿದ ಜನರಿಗೆ ಅತಿ ಹೆಚ್ಚಿನ ಅಹಮ್ಮಿಗೆ ಇರುತ್ತದೆ ಹಾಗೂ ತಮ್ಮ ಹಠಮಾರಿತನ, ಅಸಹನೆ, ಇತರರ ಬಗ್ಗೆ ಅಸೂಯೆ, ಇತರರಲ್ಲಿಲ್ಲದ ವಸ್ತು ತಮ್ಮಲಿರುವ ಬಗ್ಗೆ ಬೊಗಳೆ ಮೊದಲಾದವುಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುವವರಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳ ಹಠಮಾರಿತನದ ಕಾರಣದಿಂದ ಇವರನ್ನು ಒಲಿಸುವುದು ಇತರರಿಗೆ ಕಷ್ಟಕರವಾಗಿದ್ದು ಇವರಿಂದ ಕೊಂಚ ಭಿನ್ನವಾದ ಕೆಲಸವನ್ನು ಮಾಡಿಸಿಕೊಳ್ಳಲು ಬಹಳ ಕಷ್ಟಪಡಬೇಕಾಗುತ್ತದೆ.
ಕನ್ಯಾ
ಈ ರಾಶಿಯ ಜನರು ಅಂತರಾಳದಲ್ಲಿ ಕಪಟಿಗಳಾಗಿರುತ್ತಾರೆ. ಇವರು ಎಲ್ಲವೂ ದೋಶರಹಿತವೇ ಆಗಿರಬೇಕು ಎಂದು ಬಯಸುವವರಾಗಿದ್ದು ಇವರ ದೃಷ್ಟಿಕೋನದಿಂದ ನೋಡದ ವ್ಯಕ್ತಿಗಳನ್ನು ಇವರು ಶೀಘ್ರವೇ ನಿರ್ಣಯಿಸಿ ಬಿಡುತ್ತಾರೆ. ಪರಿಣಾಮವಾಗಿ ಇವರ ಜೀವನ ಅಥವಾ ಇವರ ಯೋಜನೆಗಳಲ್ಲಿ ಬೇರೆಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ಇವರು ಇಷ್ಟಪಡುವುದಿಲ್ಲ.
ತುಲಾ
ಈ ರಾಶಿಗೆ ಸೇರಿದ ವ್ಯಕ್ತಿಗಳು ತಾವಿಚ್ಛಿಸಿದ ಕೆಲಸವನ್ನು ಪೂರೈಸಲು ಹೆಚ್ಚು ಕಷ್ಟಪಡುತ್ತಾರೆ, ಆದರೆ ಇದೇ ಸಮಯದಲ್ಲಿ ಈ ಕೆಲಸದಲ್ಲಿ ಇವರ ಪಾತ್ರವನ್ನು ಸರಿಯಾಗಿ ನಿರ್ವಹಿಸಲಾಗದೇ ಎಲ್ಲರನ್ನೂ ಮುಜುಗರಕ್ಕೆ ಒಳಪಡಿಸುತ್ತಾರೆ. ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ವಿರಾಮಜೀವಿಗಳಾಗಿದ್ದು ನಿರ್ಧಾರಿತ ಗುರಿ ಇಲ್ಲದಿದ್ದರೆ ಸೋಮಾರಿಗಳಾಗಿ ಕಾಳ ಕಳೆಯಲು ಇಚ್ಛಿಸುತ್ತಾರೆ.
ವೃಶ್ಚಿಕ
ಈ ರಾಶಿಯ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಇವರ ಕೆಟ್ಟ ಅಭ್ಯಾಸಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ವ್ಯಕ್ತಿಗಳು ಹೆಚ್ಚು ಹೊಟ್ಟೆ-ಕಿಚ್ಚು ಪಡುವವರಾಗಿರುತ್ತಾರೆ. ಒಂದು ವೇಳೆ ಇವರೊಂದಿಗೆ ಆತ್ಮೀಯ ಸಮಯ ಕಳೆಯಬೇಕಾಗಿ ಬಂದಾಗ ಈ ಗುಣ ನಿಮ್ಮನ್ನು ಕುಟುಕಬಹುದು. ಇವರು ತಮ್ಮ ಜೀವನದ ಬಗ್ಗೆ ತೀರಾ ಹೆಚ್ಚಿನ ಗೋಪ್ಯತೆಯನ್ನು ಕಾಪಾಡುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಅನುಕೂಲಕ್ಕಾಗಿ ಇತರರನ್ನು ಕಪಟತನದಿಂದ ಬಳಸಿಕೊಳ್ಳುವವರೂ ಆಗಿರುತ್ತಾರೆ.
ಧನು
ಈ ರಾಶಿಗೆ ಸೇರಿದ ವ್ಯಕ್ತಿಗಳು ತಾವು ಮಾಡುವ ಕೆಲಸಗಳಲ್ಲಿ ಅತಿ ಹೆಚ್ಚಿನ ವಿಶ್ವಾಸವುಳ್ಳವರಾಗಿದ್ದು ಇದಕ್ಕಾಗಿ ಇತರರನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾರೆ. ಆದರೆ ತಮ್ಮ ಕೆಲಸಕ್ಕೆ ಬಂದವರಲ್ಲಿ ಯಾವುದೇ ಕೃತಜ್ಞತೆ ತೋರದೆ ಸ್ವಾರ್ಥವನ್ನು ಪ್ರಕಟಿಸುತ್ತಾರೆ.
ಮಕರ
ಈ ರಾಶಿಗೆ ಸೇರಿದ ವ್ಯಕ್ತಿಗಳು ಸಾಮಾನ್ಯವಾಗಿ ಸಂಕೋಚದ ಸ್ವಭಾವ ಹೊಂದಿದ್ದು ತಮಗೆ ಪರಿಚಯವಿರುವ ವ್ಯಕ್ತಿಗಳೊಂದಿಗೇ ಹೆಚ್ಚಿನ ಸಮಯ ಕಳೆಯಲಿಚ್ಛಿಸುತ್ತಾರೆ. ಈ ವ್ಯಕ್ತಿಗಳು ಅತೀವ ಹಠಮಾರಿ ಹಾಗೂ ತಮ್ಮ ಸುತ್ತ ಇರುವ ಎಲ್ಲಾ ವಿಷಯಗಳ ಕುರಿತು ನಿರಾಶಾವಾದ ಭಾವನೆಯನ್ನೇ ಮೂಡಿಸಿರುತ್ತಾರೆ.
ಕುಂಭ
ಈ ರಾಶಿಗೆ ಸೇರಿದ ವ್ಯಕ್ತಿಗಳು ತಮ್ಮ ಗರಿಷ್ಟ ಸಾಮರ್ಥ್ಯವನ್ನು ಬಳಸಿಕೊಳ್ಳುವವರಾಗಿರುತ್ತಾರೆ. ಯಾವುದೇ ಕ್ಷಣದಲ್ಲಿ ಇವರು ಆ ಪರಿಸ್ಥಿತಿಯ ವಿಪರೀತವನ್ನೇ ಯೋಚಿಸಬಲ್ಲರು. ಇದು ಇವರೆಷ್ಟು ಹಠಮಾರಿಗಳಾಗಬಲ್ಲದು ಎಂದು ತೋರಬಲ್ಲುದು. ಇವರ ಸ್ವಭಾವವನ್ನು ಅರಿಯಬಯಸುವವರಿಗೆ ಇವರ ಸತತ ಬದಲಾಗುವ ಚರ್ಯೆ ಇವರನ್ನು ಅರ್ಥಮಾಡಿಕೊಳ್ಳಲು ವಿಪರೀತ ಕಷ್ಟವಾಗಿಸುತ್ತದೆ.
ಮೀನ
ಈ ರಾಶಿಗೆ ಸೇರಿದ ವ್ಯಕ್ತಿಗಳು ಆದರ್ಶಪ್ರಾಯರಾಗಿದ್ದರೂ ತಮ್ಮದೇ ಜವಾಬ್ದಾರಿಗಳಿಂದ ನುಣುಚಿಕೊಳ್ಳುವವರಾಗಿರುತ್ತಾರೆ. ವಿಶೇಷವಾಗಿ ತಮ್ಮ ಜೀವನದಲ್ಲಿ ಏನಾದರೂ ತೊಂದರೆ ಎದುರಾಗುವಂತಿದ್ದರೆ ಇವರ ಅತಿ ಸೂಕ್ಷ್ಮ ಮನೋಭಾವದ ಕಾರಣ ಪಲಾಯನವಾದವನ್ನು ನೆಚ್ಚಿಕೊಳ್ಳುವವರಾಗಿರುತ್ತಾರೆ.
Boldsky ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿ | Subscribe to Kannada Boldsky.
Related Articles
ಗುರು ಶಂಕರಾಚಾರ್ಯರ ಬಗ್ಗೆ ಕೆಲವು ಅಗತ್ಯ ಮಾಹಿತಿಗಳು
ನೀವು ಖುಷಿಯಾಗಿಲ್ಲದೇ ಇರಲು ಕಾರಣವನ್ನು ನಿಮ್ಮ ರಾಶಿಯೇ ತಿಳಿಸುತ್ತೆ
ಲೈಫ್ನಲ್ಲಿ ಸೆಕೆಂಡ್ ಚಾನ್ಸ್ ಪಡೆಯಲು ಅರ್ಹರಾಗಿರುವ ರಾಶಿಯವರಿವರು
ಯಾವ ರಾಶಿಗಳ ಜೋಡಿಗಳ ಸಂಬಂಧ ದೀರ್ಘಕಾಲ ಉಳಿಯಲಾರದು
ರಾಶಿಫಲಕ್ಕನುಗುಣವಾಗಿ ನಿಮ್ಮಲ್ಲಿರುವ ಯಾವ ಗುಣ ಸಂಗಾತಿಯನ್ನು ಆಕರ್ಷಿಸುತ್ತದೆ ತಿಳಿಯಿರಿ
ಇಲ್ಲಿರುವ ಪುರಾತನ ಚಿಹ್ನೆಯೊಂದನ್ನು ಆರಿಸಿ... ಇದರ ಹಿಂದಿದೆ ನಿಮ್ಮ ಸದ್ಯದ ಪರಿಸ್ಥಿತಿಗೆ ಪರಿಹಾರ
ರಾಶಿ ಭವಿಷ್ಯ: ಇದೇ ಕಾರಣಕ್ಕೆ ಸಂಗಾತಿ ನಿಮ್ಮೆಡೆಗೆ ಆಕರ್ಷಣೆಗೆ ಒಳಗಾಗುವುದು!
ಏಪ್ರಿಲ್ 14: ಗುರುವಾರದ ದಿನ ಭವಿಷ್ಯ
ಏಪ್ರಿಲ್: ಮುಂದಿನ ಎರಡು ವಾರಗಳಲ್ಲಿ ರಾಶಿ ಭವಿಷ್ಯ ಹೇಗಿದೆ ನೋಡಿ...
ರಾಶಿ ಭವಿಷ್ಯ: ಬೇಸರದಿಂದ ಇರಲು ರಾಶಿಚಕ್ರಗಳೇ ಕಾರಣ!
ರಾಶಿ ಭವಿಷ್ಯ: ಅಕ್ಷಯ ತೃತೀಯದಂದು ಪಠಿಸಬೇಕಾದ ಮಂತ್ರ
ರಾಶಿ ಭವಿಷ್ಯ: ಎಲ್ಲಾ ರಾಶಿಯವರಲ್ಲೂ ಇಂತಹ ಗುಣಗಳು ಇದ್ದೇ ಇರುತ್ತದೆ!
ಈ ಐದು ರಾಶಿಯವರು ತುಂಬಾ ಬೇಗನೇ ವಂಚನೆಗೆ ಒಳಗಾಗುತ್ತಾರೆ!
-
ಕರ್ನಾಟಕ ವಿಧಾನಸಭೆ ಚುನಾವಣೆ 2018
ಬೆಳ್ತಂಗಡಿಗೆ ಸೋಮವಾರ ಕೇಂದ್ರ ಗೃಹ ಸಚಿವ ರಾಜನಾಥ್ ಭೇಟಿ
ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ, ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧೆ
ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಬೇಕಾದ 11 ಕ್ಷೇತ್ರಗಳು