ಮಂಗಗಳೊಂದಿಗೆ ಬೆರೆತು, ಮಂಗಗಳಂತೆ ವರ್ತಿಸುವ ಬಾಲಕಿ!!

By: manu
Subscribe to Boldsky

ಟಿವಿ ನೋಡುವ ಹುಚ್ಚು ಇರುವವರಿಗೆ ಹಲವಾರು ವರ್ಷಗಳ ಹಿಂದೆ ದೂರದರ್ಶನದಲ್ಲಿ ಬರುತ್ತಿದ್ದ ಮೊಗ್ಲಿ ಪಾತ್ರದ ಬಗ್ಗೆ ತಿಳಿದಿರಬಹುದು. ಕಾಡಿನಲ್ಲಿ ಪ್ರಾಣಿಳೊಂದಿಗೆ ಬದುಕುವ ಹುಡಗನೊಬ್ಬನ ಕಥೆಯಿದು. ಯಾವುದೇ ಸಾಹಸವನ್ನು ಮಾಡುತ್ತಿದ್ದ ಮೊಗ್ಲಿ ಪ್ರಾಣಿಗಳ ರಕ್ಷಣೆ ಕೂಡ ಮಾಡುತ್ತಾ ಇದ್ದ. ಅದೇ ರೀತಿ ಪ್ರಾಣಿಗಳು ಕೂಡ ಕಷ್ಟದ ಸಮಯದಲ್ಲಿ ಮೊಗ್ಲಿಯನ್ನು ರಕ್ಷಿಸುತ್ತಿದ್ದವು.

ಈ ಧಾರವಾಹಿನಲ್ಲಿ ಪ್ರಾಣಿಗಳು ಮತ್ತು ಮೊಗ್ಲಿ ಸಂಬಂಧ ತುಂಬಾ ಗಾಢವಾಗಿತ್ತು...ಅಲ್ಲದೆ ಪ್ರಾಣಿಗಳು ಮತ್ತು ಕಾಡಿನಲ್ಲಿ ವಾಸಿಸುವ ಮಾನವನ ಬಗ್ಗೆ ಹಲವಾರು ಸಿನಿಮಾಗಳು ಕೂಡ ಬಂದಿದೆ. ಆದರೆ ನಿಜ ಜೀವನದಲ್ಲೂ ಇಂತಹದೇ ಘಟನೆ ನಡೆದರೆ! ಊಹಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಎಲ್ಲರಿಗೂ ಅಚ್ಚರಿಗೊಳಿಸುವ ಘಟನೆ ಉತ್ತರ ಪ್ರದೇಶದ ಅಭಯಾರಣ್ಯವೊಂದರಲ್ಲಿ ನಡೆದಿದೆ!

ಉತ್ತರ ಪ್ರದೇಶದ ಅಭಯಾರಣ್ಯವೊಂದರಲ್ಲಿ 8ರ ಹರೆಯದ ಹುಡುಗಿಯೊಬ್ಬಳು ಮಂಗಗಳೊಂದಿಗೆ ವಾಸಿಸುತ್ತಿರುವ ಕಥೆಯಿದು! ಬಾಲಕಿಯನ್ನು ಕಾಡಿನಿಂದ ರಕ್ಷಿಸಿ ನಾಡಿಗೆ ತರಲಾಗಿದೆ. ಆದರೆ ಆಕೆ ಕಾಡಿನೊಳಗೆ ಹೇಗೆ ಬಂದಳು? ಆ ಬಾಲಕಿಯನ್ನು ಬಿಟ್ಟು ಹೋದವರು ಯಾರು? ಪ್ರಾಣಿಗಳು ಯಾಕೆ ಆಕೆಯನ್ನು ತಿನ್ನಲಿಲ್ಲ ಎನ್ನುವ ಬಗ್ಗೆ ಹಲವಾರು ಪ್ರಶ್ನೆಗಳು ಈಗಲೂ ಹಾಗೆ ಉಳಿದುಕೊಂಡಿದೆ...  

ಮನುಷ್ಯರಂತೆ ಮಾತನಾಡಲು ನಡೆಯಲು ಆಕೆಗೆ ಸಾಧ್ಯವಾಗುತ್ತಿಲ್ಲ

ಮನುಷ್ಯರಂತೆ ಮಾತನಾಡಲು ನಡೆಯಲು ಆಕೆಗೆ ಸಾಧ್ಯವಾಗುತ್ತಿಲ್ಲ

ಪೊಲೀಸರು ಅಭಯಾರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಈ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿ ಪತ್ತೆಯಾದಾಗ ಮನುಷ್ಯರಂತೆ ಮಾತನಾಡಲು ಸಾಧ್ಯವಾಗುತ್ತಾ ಇರಲಿಲ್ಲ ಮತ್ತು ಪ್ರಾಣಿಗಳಂತೆ ಆಕೆ ನಡೆಯುತ್ತಾ ಇದ್ದಳು.

ಮಂಗಗಳೊಂದಿಗೆ ಚೆನ್ನಾಗಿ ಬೆರೆತಿದ್ದಳು

ಮಂಗಗಳೊಂದಿಗೆ ಚೆನ್ನಾಗಿ ಬೆರೆತಿದ್ದಳು

ನೇಪಾಳದ ಗಡಿ ಪ್ರದೇಶಕ್ಕೆ ಹತ್ತಿರವಾಗಿರುವ ಕತರಿಂಘಾಟ್ ಅಭಯಾರಣ್ಯದಲ್ಲಿ ಈ ಬಾಲಕಿ ಮಂಗಗಳೊಂದಿಗೆ ಪತ್ತೆಯಾಗಿದ್ದಾಳೆ.

ಯಾವುದೇ ಸುಧಾರಣೆ ಆಗಿಲ್ಲ!

ಯಾವುದೇ ಸುಧಾರಣೆ ಆಗಿಲ್ಲ!

ಈ ಬಾಲಕಿ ಪತ್ತೆಯಾಗಿ ಎರಡು ತಿಂಗಳು ಕಳೆದರೂ ಇದುವರೆಗೆ ಆಕೆಯ ನಡವಳಿಕೆ ಮತ್ತು ಮಾತಿನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕೇವಲ ಕಾಲಿನಲ್ಲಿ ಮಾತ್ರ ನಡೆಯಬೇಕೆಂದು ಆಕೆಗೆ ತಿಳಿಸಿದರೂ ಆಕೆ ಮಾತ್ರ ಕೈ ಹಾಗೂ ಕಾಲುಗಳನ್ನು ಬಳಸಿಯೇ ನಡೆಯುತ್ತಿದ್ದಾಳೆ. ಮಾತನಾಡಬೇಕಾದರೆ ಮಂಗಗಳು ಕಿರುಚಿದಂತೆ ಕಿರುಚುತ್ತಾಳೆ.

ಭಾರತದ ಮೊಗ್ಲಿ ಬಾಲಕಿಯ ವೀಡಿಯೋ ವೀಕ್ಷಿಸಿ

ಇದರ ಬಗ್ಗೆ ನಿಮ್ಮ ಅನಿಸಿಕೆಗಳು ಏನಾದರೂ ಇದ್ದರೆ ಕಮೆಂಟ್ ಬಾಕ್ಸ್ ನೊಳಗೆ ಹಾಕಿಬಿಡಿ.

 
English summary

The Story Of The Girl Who Lived With Monkeys!

She is an 8-year-old girl who was found in a jungle. Her rescuers claim that she has been living with monkeys and apes. Nobody is sure as to how long it has been since she is living there.
Story first published: Monday, April 10, 2017, 23:31 [IST]
Please Wait while comments are loading...
Subscribe Newsletter